ಸಿಂಹಾದ್ರಿಯ ಸಿಂಹ ಪಾರ್ಟ್​-2ನಲ್ಲಿ ಡಾ.ಬ್ರೋ! ಅವಮಾನ ಮಾಡಿದವರ ಮೇಲೆ ಸೇಡು ತೀರಿಸಿಕೊಂಡ ಗಗನ್

Published : Dec 01, 2025, 09:53 PM IST

ಕೆಲಕಾಲ ಯೂಟ್ಯೂಬ್‌ನಿಂದ ದೂರವಿದ್ದ ಖ್ಯಾತ ಟ್ರಾವೆಲ್ ಬ್ಲಾಗರ್ ಡಾ. ಬ್ರೋ ಮತ್ತೆ ಕಮ್‌ಬ್ಯಾಕ್ ಮಾಡಿದ್ದಾರೆ. ಹಿಂದೆ ತನಗೆ ತಮಾಷೆ ಮಾಡಿದ್ದ ಸಿಂಹದ ಮೇಲೆ ಸೇಡು ತೀರಿಸಿಕೊಳ್ಳುವುದಾಗಿ ಹೇಳಿ, ಸಿಂಹಗಳ ಜೊತೆ ವಾಕಿಂಗ್ ಮಾಡಿ, ಅವುಗಳ ಮರಿಗಳೊಂದಿಗೆ ಆಟವಾಡಿರುವ ವಿಡಿಯೋ ಹಂಚಿಕೊಂಡಿದ್ದಾರೆ.

PREV
17
ನಮಸ್ಕಾರ ದೇವ್ರು

ನಮಸ್ಕಾರ ದೇವ್ರು ಎನ್ನುವ ಮೂಲಕ ವೀಕ್ಷಕರಿಗೆ ಸ್ವಾಗತ ಕೋರಿ ವಿಡಿಯೋ ಮಾಡುತ್ತಿದ್ದ ಕನ್ನಡದ ಖ್ಯಾತ ಟ್ರಾವೆಲ್ ಬ್ಲಾಗರ್, ಯೂಟ್ಯೂಬರ್ ಡಾ. ಬ್ರೋ ಖ್ಯಾತಿಯ ಗಗನ್ ಶ್ರೀನಿವಾಸ್ (Gagan Srinivas). ಇವರ ಅಚ್ಚಕನ್ನಡದ ಸ್ವಚ್ಚ ಮಾಹಿತಿಗಳನ್ನು ಕೇಳೊದೇ ಜನರಿಗೆ ಇಷ್ಟ. ದೇಶ ವಿದೇಶಗಳನ್ನು ಸುತ್ತಿ, ಮಾಹಿತಿ ನೀಡುತ್ತಿದ್ದ ಡಾ. ಬ್ರೋ ಅಂದ್ರೆ ಜನರಿಗೆ ಸಿಕ್ಕಾಪಟ್ಟೆ ಇಷ್ಟ.

27
ಕನ್ನಡದ ಮೂಲಕ ಪರಿಚಯ

ಪ್ರತಿ ಬಾರಿಯೂ ಒಂದೊಂದು ದೇಶದ ಮೂಲೆ ಮೂಲೆಗೆ ಭೇಟಿ ನೀಡಿ, ಅಲ್ಲಿ ಯಾರೂ ಹೋಗದ ಜಾಗಕ್ಕೆ ಹೋಗಿ, ಅವರೊಂದಿಗೆ ಬೆರೆತು ಕಲೆತು, ಅವರ ಸಂಸ್ಕೃತಿ, ಆಚರಣೆ ವಿಚಾರಗಳನ್ನು ಕನ್ನಡಿಗರಿಗೆ ಕನ್ನಡದಲ್ಲೇ ಪರಿಚಯಿಸುತ್ತಿದ್ದ ಹುಡುಗ ಡಾ. ಬ್ರೋ. (Dr. Bro) ಆದರೆ ಇವರು ಕೆಲವು ದಿನಗಳಿಂದ ಪತ್ತೆಯೇ ಇರಲಿಲ್ಲ.

37
ಕಮ್​ಬ್ಯಾಕ್​

ಆದರೆ ಈಗ ಡಾ.ಬ್ರೋ ಮತ್ತೆ ಅದೇ ಜೋಶ್​ನಲ್ಲಿ ಕಮ್​ಬ್ಯಾಕ್​ ಆಗಿದ್ದಾರೆ. ಸ್ವಂತ ಪ್ರವಾಸದ ಉದ್ಯಮ ಶುರು ಮಾಡಿದ ಬಳಿಕ ದೇಶ-ವಿದೇಶಗಳ ಪ್ರವಾಸ ಮಾಡಿ ಯುಟ್ಯೂಬ್​ನಲ್ಲಿ ಅಪ್​ಲೋಡ್​ ಮಾಡದೇ ಕಣ್ಮರೆಯಾಗಿದ್ದ ಗಗನ್​ ಅವರು ಮತ್ತೆ ಕಾಣಿಸಿಕೊಂಡಿದ್ದಾರೆ.

47
ಸೂಸೂ ಮಾಡಿದ್ದ ಸಿಂಹ

ಇದೀಗ ಅದೇ ಜೋಶ್​ನಲ್ಲಿ, ತಮ್ಮದೇ ಆದ ರೀತಿಯ ಹಾಸ್ಯದ ಮೂಲಕ ಜನರನ್ನು ರಂಜಿಸುತ್ತಿದ್ದಾರೆ. ಹಿಂದೊಮ್ಮೆ ಜೂ ಒಂದಕ್ಕೆ ಹೋದ ಸಂದರ್ಭದಲ್ಲಿ ಡಾ.ಬ್ರೋ ವಿಡಿಯೋ ಮಾಡುತ್ತಿದ್ದಾಗ, ಹಿಂದಿನಿಂದ ಸಿಂಹವೊಂದು ಅವರ ಮೈಮೇಲೆ ಸೂಸೂ ಮಾಡಿದಂತೆ ತೋರಿಸಿ ತಮಾಷೆ ಮಾಡಿದ್ದರು. ಇದೀಗ ಸಿಂಹಗಳ ಮೇಲೆ ಸೇಡು ತೀರಿಸಿಕೊಂಡಿರುವುದಾಗಿ ಮತ್ತೊಂದು ವಿಡಿಯೋ ಮಾಡಿದ್ದಾರೆ.

57
ಸೇಡು ತೀರಿಸಿಕೊಂಡೆ

ಅದೇ ಸಿಂಹವನ್ನು ನಾಯಿ ರೀತಿಯಲ್ಲಿ ವಾಕಿಂಗ್​ ಮಾಡಿಸುವುದಾಗಿ ಹೇಳಿ ಸಿಂಹಗಳ ಜೊತೆ ವಾಕಿಂಗ್​ ಮಾಡಿದ್ದಾರೆ, ಅದರ ಜೊತೆ ಒಂದಿಷ್ಟು ಮೋಜು ಮಸ್ತಿಯನ್ನೂ ಮಾಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಸಿಂಹಾದ್ರಿಯ ಸಿಂಹ ಪಾರ್ಟ್​-2 ಎಂದು ತಮಾಷೆ ಮಾಡುತ್ತಿದ್ದಾರೆ.

67
ಸಿಂಹ ಪಳಗಿಸುವೆ

ಆನೆ ಪಳಗಿಸಲು ಮಾವುತ ಬರಬೇಕು, ಈ ರೀತಿಯ ಸಿಂಹ ಪಳಗಿಸಲು ನಾನೇ ಬರಬೇಕು ಎಂದು ಸಿಂಹಗಳ ಮರಿಯನ್ನು ಹಿಡಿದುಕೊಂಡು ಅವುಗಳ ಜೊತೆ ಆಟವಾಡಿದ್ದಾರೆ.

77
ಸಿಂಹದ ಮರಿಗಳ ಮುದ್ದು

ಇದರ ಮುಖ ನೋಡಿದ್ರೆ ದ್ವೇಷ ಮಾಡಲು ಮನಸೇ ಬರುವುದಿಲ್ಲ. ಇನ್ಮುಂದಿದ ನಾನು ಮತ್ತು ಇವೆಲ್ಲಾ ಫ್ರೆಂಡ್ಸು ಎಂದು ಮರಿಗಳನ್ನು ಹಿಡಿದುಕೊಂಡು ಮುದ್ದು ಮಾಡಿದ್ದಾರೆ.

Read more Photos on
click me!

Recommended Stories