2025ರಲ್ಲಿ ನಾನು ಬ್ಲಾಸ್ಟ್ ಆಗುತ್ತೇನೆ ಎಂದು ಹೇಳುವ ಮೂಲಕ ಎಲ್ಲರಲ್ಲಿಯೂ ಕೌತುಕ ಹುಟ್ಟುಹಾಕಿದ್ದರು ಡಾ.ಬ್ರೊ. ಇಲ್ಲಿ ವರ್ಷದ ಬಹುತೇಕ ದಿನಗಳನ್ನು ತಮ್ಮ ವಿಶ್ವ ಪ್ರವಾಸದಲ್ಲಿಯೇ ಕಳೆಯಲು ನಿರ್ಧರಿಸಿದ್ದಾರಾ? ಅವರು ಮದುವೆ ಮಾಡಿಕೊಳ್ಳುತ್ತಾರಾ ಅಥವಾ ಹೊಸದೊಂದು ಉದ್ಯಮವನ್ನು ಆರಂಭಿಸುವ ದೊಡ್ಡ ಗುರಿಯನ್ನು ಇಟ್ಟುಕೊಂಡಿದ್ದಾರಾ? ಎಂಬ ಪ್ರಶ್ನೆಗಳನ್ನು ಅವರ ಅಭಿಮಾನಿಗಳು ಕೇಳಿದ್ದರು. ಯಾವುದೇ ಕಾರ್ಯಕ್ಕೂ ಕೈ ಹಾಕಿದರೂ ಅವರಿಗೆ ಯಶಸ್ಸು ಸಿಗಲಿ ಎಂದು ಹಾರೈಸಿದ್ದರು.
27
ನಾಲ್ಕೈದು ತಿಂಗಳು ನಾಪತ್ತೆ
ಅದರಂತೆಯೇ ಡಾ.ಬ್ರೋ ನಾಲ್ಕೈದು ತಿಂಗಳುಗಳಿಂದ ನಾಪತ್ತೆಯಾಗಿದ್ದಾರೆ. ಡಾ. ಬ್ರೋ ಕೊನೆಯದಾಗಿ ಯೂಟ್ಯೂಬಲ್ಲಿ ವಿಡಿಯೋ ಬಿಟ್ಟಿದ್ದು, ಮಾರ್ಚ್ ತಿಂಗಳಲ್ಲಿ. ಚೀನಾದ ನಡೆದಾಡುವ ದೇವತೆ ಬಗ್ಗೆ ವಿಡಿಯೋ ಮಾಡಿದ್ದರು, ಅಲ್ಲದೇ ತಮ್ಮ ಇನ್’ಸ್ಟಾಗ್ರಾಂನಲ್ಲಿ ಟಿಬೆಟ್ ನ ಸುಂದರವಾದ ಮಾರ್ಫಾ ಗ್ರಾಮಕ್ಕೆ ಭೇಟಿ ನೀಡಿ, ಅಲ್ಲಿನ ಸುಂದರವಾದ ಪರಿಸರ, ಅಲ್ಲಿ ನಿಶ್ಯಬ್ಧತೆಯ ಕುರಿತಾಗಿ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದರು.
37
ವಿಡಿಯೋಗಾಗಿ ಅಭಿಮಾನಿಗಳ ಕಾತರ...
ಅದಾಗಿ ನಾಲ್ಕು ತಿಂಗಳು ಕಳೆದರೂ ಡಾ. ಬ್ರೋ ಯಾವುದೇ ವಿಡಿಯೋ ಬಿಡುಗಡೆ ಮಾಡಿಲ್ಲ. ಅತಿ ಹೆಚ್ಚು ಫಾಲೋವರ್ಸ್ ಗಳನ್ನು ಹೊಂದಿರುವ ಹಾಗೂ ಅಪಾರ ಅಭಿಮಾನಿಗಳನ್ನು ಹೊಂದಿರುವ ಡಾ. ಬ್ರೋ ವಿಡಿಯೋ ಮಾಡದೇ ಇರೋದು ಈಗ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಒಂದೆರಡು ಬಾರಿ ತಮ್ಮ ಇನ್’ಸ್ಟಾಗ್ರಾಂನಲ್ಲಿ (Instagram)ಯಾವುದೋ ಪ್ರೊಮೋಷನ್ ವಿಡಿಯೋಗಳಲ್ಲಿ ಕಾಣಿಸಿಕೊಂಡಿದ್ದನ್ನು ಬಿಟ್ಟರೆ, ಯಾವುದೇ ದೇಶದ ವಿಡಿಯೋ ಮಾಡಿಲ್ಲ. ಹಾಗಾಗಿ ಡಾ, ಬ್ರೋ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಎಲ್ಲಿದ್ಯಪ್ಪಾ ದೇವ್ರು ಎನ್ನುತ್ತಾ ಚರ್ಚೆ ಮಾಡ್ತಿದ್ದಾರೆ.
ಇದೀಗ ಡಾ.ಬ್ರೋ ಅವರ ಇಂಡೋನೆಷ್ಯಾದ ವಿಡಿಯೋ ಒಂದು ವೈರಲ್ ಆಗ್ತಿದೆ. ಇಂಡೋನೇಷ್ಯಾದ ಬಾಲಿ ಜನಪ್ರಿಯ ವಿಶ್ವದ ಅತ್ಯಂತ ಎತ್ತರದಲ್ಲಿ ಒಂದು ಎನಿಸಿರುವ ಜೋಕಾಲಿಯ ಮೇಲೆ ಕುಳಿತು ವಿಡಿಯೋ ಮಾಡುತ್ತಿದ್ದಾರೆ. ಇದರಲ್ಲಿ ಅವರು ಎಂದಿನಂತೆ ಚಟಾಕಿ ಹಾರಿಸುವುದನ್ನು ಮರೆಯಲಿಲ್ಲ. ತುಂಬಾ ಭಯವಾಗುತ್ತಿದೆ ಎಂದಿದ್ದಾರೆ ಗಗನ್.
57
ಪ್ರಾಣ ಭಯ ಎಂದ ಡಾ.ಬ್ರೋ
ಈ ರೀತಿಯ ಸಾಹಸ ಹಲವು ಬಾರಿ ಮಾಡಿದ್ರೂ, ಯಾಕೋ ಇತ್ತೀಚಿನ ದಿನಗಳಲ್ಲಿ ಪ್ರಾಣ ಭಯ ತುಂಬಾ ಕಾಡ್ತಿದೆ. ಆದ್ದರಿಂದ ಇದನ್ನು ನೋಡಿದರೇನೇ ಭಯವಾಗ್ತಿದೆ ಎಂದಿದ್ದಾರೆ. ಕೊನೆಗೆ ಜೈ ಹನುಮಾನ್ ಎಂದಿದ್ದಾರೆ. ಅಲ್ಲಿಗೆ ಅವರ ವೈಯರ್ ತುಂಡಾಗಿ ಡಾ.ಬ್ರೋ ಜೋರಾಗಿ ಚೀರಿಕೊಂಡಿದ್ದಾರೆ!
67
ಈ ಸಾಹಸದ ಪರಿಯೇ ಹಾಗೆ
ಅಷ್ಟಕ್ಕೂ ಈ ಸಾಹಸದ ಪರಿಯೇ ಹಾಗೆ. ಅಲ್ಲಿ ಇರುವವರು ಮೊದಲಿಗೆ ವೈಯರ್ ಕಟ್ ಮಾಡುತ್ತಾರೆ. ಬಳಿಕ ಪ್ಯಾರಾಚೂಟ್ ಮೂಲಕ, ಸಾಹಸಿಗಳು ಮೇಲಕ್ಕೆ ಬರುತ್ತಾರೆ. ಆದರೆ ಇದಿಷ್ಟೇ ವಿಡಿಯೋ ನೋಡಿದರೆ ಅಭಿಮಾನಿಗಳು ಗಾಬರಿಯಾಗೋದಂತೂ ಗ್ಯಾರೆಂಟಿ. ಅದಕ್ಕೆ ತಕ್ಕಂತೆ ಡಾ.ಬ್ರೋ ಕೂಡ ಭಯ ಬೀಳುವಂತೆ ನಾಟಕ ಮಾಡಿದ್ದು ನೋಡಿದ್ರೆ ಅವರ ಫ್ಯಾನ್ಸ್ ಕೂಡ ಗಾಬರಿಯಾಗಿದ್ದಾರೆ.
77
ಉದ್ಯಮಿಯಾದ ಡಾ.ಬ್ರೋ
ಸದ್ಯ ತಮ್ಮ ಯೂಟ್ಯೂಬ್ ಜೊತೆಗೆ ಉದ್ಯಮಿಯೂ ಆಗಿರುವ ಗಗನ್ ಕೆಲವು ತಿಂಗಳ ಹಿಂದೆ ಗೋ ಪ್ರವಾಸ (gopravasa)ಎಂಬ ಕಂಪನಿಯನ್ನು ಆರಂಭಿಸಿದ್ದು, ಈ ಕಂಪೆನಿಯ ಮೂಲಕ ವಿದೇಶಿ ಪ್ರವಾಸ ಪ್ಲ್ಯಾನ್ ಮಾಡುತ್ತಿದ್ದರು. ಈ ಕಂಪನಿಯು ಪ್ಯಾಕೇಜ್‌ಗಳ ಮೂಲಕ ವಿದೇಶಿ ಪ್ರಯಾಣವನ್ನು ಒದಗಿಸುತ್ತಿದೆ. ಹಾಗಾಗಿ ಡಾ. ಬ್ರೋ ಖ್ಯಾತಿಯ ಗಗನ್ ಸದ್ಯ ತಮ್ಮ ಬ್ಯುಸಿನೆಸ್ ನಲ್ಲಿ ಬ್ಯುಸಿಯಾಗಿರೋದರಿಂದ, ಬೇರೆ ದೇಶಗಳಿಗೆ ಹೋಗಿಲ್ಲ. ಹಾಗಾಗಿ ಕಳೆದ 4 ತಿಂಗಳಿಂದ ಯಾವುದೇ ವಿಡಿಯೋ ಅಪ್ ಲೋಡ್ ಆಗಿಲ್ಲ ಎನ್ನಲಾಗುತ್ತಿದೆ.