ಇದು ಚಿನ್ನದ ಕಾಫಿ, ಟೀ! ಒಂದು ಕಪ್​ಗೆ ಒಂದು ಲಕ್ಷ: ಡಾ. ಬ್ರೋ ಕುಡಿದ 5 ಸಾವಿರ ರೂ. ಕಾಫಿ ಕಥೆ ಕೇಳಿ

Published : Jul 20, 2026, 08:48 PM IST

ದುಬೈನಲ್ಲಿ ಡಾ.ಬ್ರೋ ಕುಡಿದ 5 ಸಾವಿರ ರೂಪಾಯಿ ಬಂಗಾರದ ಕಾಫಿ ಹಾಗೂ ಭಾರತೀಯ ಮಹಿಳೆ ನಡೆಸುತ್ತಿರುವ ಕೆಫೆಯಲ್ಲಿ ಸಿಗುವ ಒಂದು ಲಕ್ಷ ರೂಪಾಯಿ ಮೌಲ್ಯದ 24 ಕ್ಯಾರೆಟ್ ಚಿನ್ನ ಲೇಪಿತ ಚಹಾದ ಬಗ್ಗೆ ಈ ಲೇಖನ ವಿವರಿಸುತ್ತದೆ. ಈ ದುಬಾರಿ ಪಾನೀಯಗಳನ್ನು ಬೆಳ್ಳಿಯ ಲೋಟದಲ್ಲಿ ನೀಡಲಾಗುತ್ತದೆ.

PREV
16
10 ರೂಪಾಯಿ ಬೆಲೆ

ಸಾಮಾನ್ಯವಾಗಿ ಒಂದು ಕಪ್, ಟೀ​ ಕಾಫಿಯ ಬೆಲೆ 10 ರೂಪಾಯಿಯಿಂದ ಸ್ಟಾರ್​ ಹೋಟೆಲ್​ಗಳಲ್ಲಿ 200-300 ರೂಪಾಯಿಗೂ ಸಿಗಬಹುದು. ಆದರೆ ಒಂದು ಕಪ್​ ಚಹಾ ಮತ್ತು ಕಾಫಿದ ಬೆಲೆ ಒಂದು ಲಕ್ಷ ರೂಪಾಯಿ ಎಂದರೆ ನಂಬ್ತೀರಾ?

26
5 ಸಾವಿರ ರೂ.ಕಾಫಿ

ಒಂದು ಲಕ್ಷ ರೂಪಾಯಿ ಚಹಾ, ಕಾಫಿ ಕಥೆ ಕೇಳುವ ಮೊದಲು ಡಾ.ಬ್ರೋ ಅರ್ಥಾತ್​ ಗಗನ್​ ಅವರ ಐದು ಸಾವಿರ ರೂಪಾಯಿ ಕಾಫಿಯ ಸ್ಟೋರಿ ಕೇಳಿ. ಡಾ.ಬ್ರೋ ದುಬೈ ಪ್ರಯಾಣದಲ್ಲಿದ್ದು, ಅಲ್ಲಿ ತಾವು ಕುಡಿದ 5 ಸಾವಿರ ರೂಪಾಯಿ ಬಂಗಾರದ ಕಾಫಿಯ ಸ್ಟೋರಿ ಹೇಳಿದ್ದಾರೆ.

36
ಡಾ.ಬ್ರೋ ಹೇಳಿದ್ದೇನು?

ಈ ಕಾಫಿಯನ್ನು ಕುಡಿಯುತ್ತಲೇ, ನನಗೇನೂ ಅಷ್ಟೊಂದು ಚೆನ್ನಾಗಿಲ್ಲ ಅನಿಸ್ತಿದೆ. ಬಂಗಾರ ಹಾಕಿದ್ದಾರಂತೆ. ಹಾಲೇ ಹಾಕಿದಂತೆ ಕಾಣಿಸ್ತಿಲ್ಲ. ಹಾಲಿನ ಪೌಡರ್​ ಹಾಕಿ ಮಾಡಿರುವ ಹಾಗಿದೆ ಎಂದು ತಮ್ಮ ಅನಿಸಿಕೆ ಶೇರ್​ಮಾಡಿಕೊಂಡಿದ್ದಾರೆ. ಮತ್ತೆ ಲೈಫ್​ನಲ್ಲಿ ಇದನ್ನು ಕುಡಿಯಲ್ಲ. ಇದೇಮೊದಲು, ಇದೇ ಕೊನೆ ಎಂದಿದ್ದಾರೆ. ಈ ಕಾಫಿಯನ್ನು ಕುಡಿಯುವುದ ಮಾತ್ರವಲ್ಲದೇ ತಿನ್ನಲೂಬಹುದು ಎನ್ನುವುದನ್ನು ಅವರು ತೋರಿಸಿದ್ದಾರೆ!

46
1 ಲಕ್ಷ ರೂ. ದರ!

ಈಗ ದುಬೈನ ಒಂದು ಲಕ್ಷ ರೂಪಾಯಿ ಟೀ ಮತ್ತು ಕಾಫಿ ಸುದ್ದಿಗೆ ಬರೋಣ. ಇಲ್ಲಿ ಸುಚೇತಾ ಶರ್ಮಾ ಎನ್ನುವ ಭಾರತೀಯ ಮಹಿಳೆ ಬೊಹೊ ಕೆಫೆ ಅನ್ನೋ ರೆಸ್ಟೋರೆಂಟ್ ನಡೆಸುತ್ತಿದ್ದಾರೆ. ಆದರೆ ಒಂದು ಕಪ್​ ಕಾಫಿ ಮತ್ತು ಚಹಾದ ಬೆಲೆ ಒಂದು ಲಕ್ಷ ರೂಪಾಯಿ! ಇದು ಚಿನ್ನ ಲೇಪಿತ ಚಹ ಅಂತೆ!

56
24 ಕ್ಯಾರೆಟ್ ಗೋಲ್ಡ್

ಈ ಚಹಾ ಮತ್ತು ಕಾಫಿ ಮೇಲೆ 24 ಕ್ಯಾರೆಟ್ ಗೋಲ್ಡ್ ತೆಳು ಪದರವನ್ನು ಸೇರಿಸಲಾಗುತ್ತದೆ. ಹೀಗಾಗಿ ಚಿನ್ನ ಲೇಪಿತ ಕಾಫಿ ಇದು. ಇಲ್ಲಿ ಗೋಲ್ಡ್ ಚಾಯ್ ಆರ್ಡರಿ ಮಾಡಿದರೆ ಹಲವು ವಿಶೇಷತೆಗಳಿವೆ. ಗೋಲ್ಡ್ ಚಾಯ್‌ನ್ನು ಸಂಪೂರ್ಣ ಶುದ್ಧ ಬೆಳ್ಳಿ ಲೋಟದಲ್ಲಿ ನೀಡಲಾಗುತ್ತದೆ. ಇದರ ಜೊತೆಗೆ ಕ್ರೊಯಿಸ್ಯಾಂಟ್ ತಿನಿಸನ್ನು ನೀಡಲಾಗುತ್ತದೆ. ಟೀ ಮತ್ತು ಚಹಾ ಎರಡಕ್ಕೂ ಇದು ಅನ್ವಯ.

66
ಎಲ್ಲಿದೆ ಇದು?

ದುಬೈನ DIFC ಎಮಿರೇಟ್ಸ್ ಫಿನಾನ್ಶಿಯಲ್ ಟವರ್‌ನಲ್ಲಿ ಈ ಬೊಹೋ ಕೆಫೆ ಇದೆ. ಜಗತ್ತಿನ ದುಬಾರಿ ಚಹಾಗಳಲ್ಲಿ ಬೊಹೊ ಕೆಫೆಯ ಗೋಲ್ಡ್ ಚಾಯ್ ಮುಂಚೂಣಿಯಲ್ಲಿದೆ. ಭಾರತದಲ್ಲಿ ಈ ರೀತಿ ದುಬಾರಿ ಚಹಾ,ಕಾಫಿ ಪರಿಸ್ಥಿತಿ ಬರದೇ ಇರಲಿ ಎಂದು ಹಲವರು ಪ್ರಾರ್ಥಿಸಿದ್ದಾರೆ. ನಿಜಕ್ಕೂ ಈ ಚಹಾಗೆ 1 ಲಕ್ಷ ರೂಪಾಯಿ ಕೊಡಬಹುದಾ? ಜನರಲ್ಲಿ ದುಡ್ಡಿದ ಎಂದ ಮಾತ್ರಕ್ಕೆ ಈ ರೀತಿ ಹೈಟೆಕ್ ಮೋಸ ಮಾಡುವುದು ಸರಿಯೆ ಅನ್ನೋ ಪ್ರಶ್ನೆಗಳನ್ನು ಕೇಳಿದ್ದಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories