Published : Apr 30, 2025, 06:12 PM ISTUpdated : May 02, 2025, 03:55 PM IST
ಭೂತ ಪ್ರೇತಗಳ ಬಗ್ಗೆ ಸಾಕಷ್ಟು ಕಥೆ ನೀವು ಕೇಳಿರಬಹುದು. ಆದ್ರೆ ಕೆಲವು ನಂಬರ್ ಗಳನ್ನು ಡಯಲ್ ಮಾಡಿದ್ರೆ, ಭೂತಕ್ಕೆ ಕನೆಕ್ಟ್ ಆಗುತ್ತೆ ಅನ್ನೋದು ಗೊತ್ತಾ? ಈ ನಿಗೂಢ ಸಂಖ್ಯೆಗಳ ಭಯಾನಕ ಕಥೆಗಳನ್ನು ತಿಳಿದುಕೊಳ್ಳೋಣ.
ಇಂದಿನ ಕಾಲದಲ್ಲಿ ಮೊಬೈಲ್ ಫೋನ್ (Mobile Phones) ನಮ್ಮ ಜೀವನದ ಪ್ರಮುಖ ಭಾಗವಾಗಿದೆ. ಕಚೇರಿ ಕೆಲಸದಿಂದ ಹಿಡಿದು ಗೃಹೋಪಯೋಗಿ ವಸ್ತುಗಳ ಖರೀದಿಯವರೆಗೆ ಎಲ್ಲವೂ ಮೊಬೈಲ್ ಮೂಲಕವೇ ನಡೆಯುತ್ತಿದೆ. ಮೊಬೈಲ್ ಇಲ್ಲದೇ ಜನರು ಇರೋದಕ್ಕೆ ಸಾಧ್ಯವೇ ಆಗೋದಿಲ್ಲ ಎನ್ನುವಂತಿದೆ ಪ್ರಸ್ತುತ ಪರಿಸ್ಥಿತಿ.
27
ನಿಮಗೆ ಗೊತ್ತಾ ಜಗತ್ತಿನಲ್ಲಿ ಕೆಲವು ಮೊಬೈಲ್ ಸಂಖ್ಯೆಗಳನ್ನು ನಿರ್ಬಂಧಿಸಲಾಗಿದೆ ಎಂದು. ಈ ಎಲ್ಲಾ ಸಂಖ್ಯೆಗಳು ಶಾಪಗ್ರಸ್ತವಾಗಿವೆ. ನೀವು ಅವುಗಳನ್ನು ಅಪ್ಪಿತಪ್ಪಿಯೂ ಡಯಲ್ ಮಾಡಿದ್ರೆ, ಭೂತದ ಜೊತೆ ಮಾತನಾಡಬೇಕಾಗುತ್ತೆ. ಹಾಗಂತ ಬೇರೆ ಬೇರೆ ದೇಶಗಳ ನಂಬಿಕೆ. ಇದು ಎಷ್ಟು ನಿಜಾನೋ ಸುಳ್ಳೋ ಅನ್ನೋದು ಗೊತ್ತಿಲ್ಲ. ಆದರೆ ಅವರ ನಂಬಿಕೆ ಇದ್ದದ್ದಂತೂ ನಿಜಾ.
37
"12074042604" ಈ ಸಂಖ್ಯೆಗೆ ಡಯಲ್ ಮಾಡುವವರಿಗೆ ದೆವ್ವಗಳು (ghosts) ಕಾಣಲು ಪ್ರಾರಂಭಿಸುತ್ತವೆ ಎಂದು ಹೇಳಲಾಗುತ್ತದೆ. ಇದು ನಮ್ ದೇಶದಲ್ಲಂತೂ ಅಲ್ಲ, ಯಾವ ದೇಶದಲ್ಲಿ ಅನ್ನೋ ಮಾಹಿತಿ ಇಲ್ಲ.
"09044444444" ಜಪಾನ್‌ನಲ್ಲಿ ಈ ಸಂಖ್ಯೆಯು ದುಷ್ಟ ಶಕ್ತಿಗಳೊಂದಿಗೆ (negative energy) ಸಂಬಂಧ ಹೊಂದಿದೆ ಎನ್ನುವ ನಂಬಿಕೆ ಇದೆ. ಇದನ್ನು ಡಯಲ್ ಮಾಡಿದಾಗ, ವಿಚಿತ್ರ ಶಬ್ದಗಳು ಕೇಳಿಬರುತ್ತಂತೆ. ಇದು ದೆವ್ವದ್ದೆ ಸೌಂಡ್ ಎನ್ನಲಾಗುತ್ತಿದೆ.
57
1970 ರ ದಶಕದಲ್ಲಿ, "20202020" ಈ ಸಂಖ್ಯೆ ಯುಕೆಯ ಫೋನ್ ಬೂತ್‌ಗಳಿಂದ ಉಚಿತವಾಗಿ ಲಭ್ಯವಿತ್ತು. ಕರೆ ಮಾಡಿದಾಗ, ಮಹಿಳೆಯೊಬ್ಬಳ ಭಯಾನಕ ಕಿರುಚಾಟ ಕೇಳಿಸುತ್ತಿತ್ತು ಎನ್ನುವ ಸುದ್ದಿ ಹರಡಿತ್ತು.
67
ಥೈಲ್ಯಾಂಡ್‌ನಲ್ಲಿ (Thailand) "999-9999" ಈ ಸಂಖ್ಯೆಯನ್ನು ಸಹ ಶಾಪಗ್ರಸ್ತ ಸಂಖ್ಯೆ ಎನ್ನಲಾಗುತ್ತೆ. ನೀವು ಮಧ್ಯರಾತ್ರಿ ಈ ಸಂಖ್ಯೆಯನ್ನು ಡಯಲ್ ಮಾಡಿದರೆ, ನಿಮ್ಮ ಆಸೆ ಈಡೇರುತ್ತೆ, ಆದ್ರೆ ಕಾಲ್ ಮಾಡಿದ ಜನ ಸಾವನ್ನಪ್ಪುತ್ತಾರೆ ಎನ್ನುವ ನಂಬಿಕೆ ಇದೆ.
77
"0888-888-888" ಬಲ್ಗೇರಿಯಾದಲ್ಲಿ (Bulgeria) ಈ ಸಂಖ್ಯೆಯು ಅನೇಕ ಸಾವುಗಳಿಗೆ ಸಂಬಂಧಿಸಿದೆ. ಜನರು ಇದನ್ನು ಡಯಲ್ ಮಾಡಿದ ನಂತರ ಅಥವಾ ಅದರಿಂದ ಕರೆ ಸ್ವೀಕರಿಸಿದ ನಂತರ ನಿಗೂಢವಾಗಿ ಸಾವನ್ನಪ್ಪುತ್ತಿದ್ದರಂತೆ, ಈ ಸಂಖ್ಯೆ ಜನರಲ್ಲಿ ಭಯ ಹುಟ್ಟಿಸಿತ್ತು.