ಟಿಕೆಟ್‌ ಖರೀದಿ ಮಾಡೋ ಮುನ್ನ ಎಚ್ಚರ, ಇವು ಭಾರತದ ಅತ್ಯಂತ ಕೊಳಕು ಟ್ರೇನ್‌ಗಳು!

First Published | Aug 23, 2024, 8:18 PM IST

ಭಾರತೀಯ ರೈಲ್ವೇಯ ಅತ್ಯಂತ ಕೊಳಕು ರೈಲು ಇದು. ಒಮ್ಮೆ ಪ್ರಯಾಣಿಸಿದರೆ ಮತ್ತೆ ಎಂದಿಗೂ ಪ್ರಯಾಣಿಸಲು ನೀವು ಇಷ್ಟಪಡೋದೇ ಇಲ್ಲ. ಈ ರೈಲುಗಳ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.

ಭಾರತೀಯ ರೈಲು

ಇಂಡಿಯನ್‌ ರೈಲ್ವೇಸ್‌ ಪ್ರತಿ ಬಾರಿಯೂ ತನ್ನ ಟ್ರೇನ್‌ಗಳು ಹಾಗೂ ಟ್ರೇನ್‌ ಸ್ಪೇಷನ್‌ಗಳನ್ನು ಸ್ವಚ್ಛವಾಗಿರಿಸಿಕೊಳ್ಳುವಲ್ಲಿ ಮಹತ್ವ ನೀಡುತ್ತದೆ. ಆದರೆ, ಅತಿಯಾದ ಜನಸಂದಣಿಯ ಕಾರಣಕ್ಕೆ ಇದು ಕೆಲವೊಮ್ಮೆ ಸಾಧ್ಯವಾಗೋದಿಲ್ಲ.  ಇತ್ತೀಚೆಗೆ ಕೊಳಕು ರೈಲು ಮತ್ತು ನಿಲ್ದಾಣಗಳ ಕುರಿತು ಹಲವಾರು ದೂರುಗಳು ಬಂದಿವೆ.

ಕೊಳಕು ರೈಲು

ಇದು ಭಾರತೀಯ ರೈಲ್ವೇಯ ಅತ್ಯಂತ ಕೊಳಕು ರೈಲುಗಳು ಒಮ್ಮೆ ಪ್ರಯಾಣಿಸಿದರೆ ಮತ್ತೆ ಎಂದಿಗೂ ಪ್ರಯಾಣಿಸಲು ಇಷ್ಟಪಡೋದೇ ಇಲ್ಲ. ರೈಲಿನ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ. ಇಷ್ಟೇ ಅಲ್ಲ. ಈ ರೈಲಿನಲ್ಲಿನ ಪ್ರಯಾಣ ನರಕಯಾತನೆ ಎಂದು ಪ್ರಯಾಣಿಕರೇ ಹೇಳಿದ್ದಾರೆ.

Tap to resize

ರೈಲಿನ ಕುರಿತು ದೂರುಗಳು

ರೈಲುಗಳ ಕುರಿತು ಪ್ರಯಾಣಿಕರಿಂದ ಹಲವಾರು ದೂರುಗಳು ಬಂದಿವೆ. ಕೊಳಕು ಮತ್ತು ದುರ್ವಾಸನೆಯಿಂದ ಪ್ರಯಾಣಿಕರು ಬೇಸತ್ತಿದ್ದಾರೆ. ಪದೇ ಪದೇ ದೂರು ನೀಡಿದರೂ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ.

ರೈಲುಗಳ ಪಟ್ಟಿ

ಕೆಲವು ಕೊಳಕು ರೈಲುಗಳ ಪಟ್ಟಿ ಇಲ್ಲಿದೆ. ಇದರಲ್ಲಿ ದೇಶಾದ್ಯಂತ ವಿವಿಧ ಮಾರ್ಗಗಳಲ್ಲಿ ತಿರುಗಾಡುವ ರೈಲುಗಳ ಪಟ್ಟಿಯೇ ಇದೆ. ಪ್ರಯಾಣಿಕರ ಅನುಭವದ ಮೇಲೆ ಇದನ್ನು ನಿರ್ಧರಿಸಲಾಗಿದೆ.

ಸಹರ್ಸಾ-ಅಮೃತಸರ ಗರೀಬ್ ರಥ

ಸಹರ್ಸಾ-ಅಮೃತಸರ ಗರೀಬ್ ರಥ ರೈಲು - ಬಿಹಾರ ಮತ್ತು ಪಂಜಾಬ್ ನಡುವೆ ಸಂಪರ್ಕ ಕಲ್ಪಿಸುವ ಪ್ರಮುಖ ರೈಲು. ಇದರ ಸ್ವಚ್ಛತೆಯ ಬಗ್ಗೆ ಆಗಾಗ್ಗೆ ಪ್ರಶ್ನೆಗಳು ಏಳುತ್ತನೇ ಇರುತ್ತದೆ. ಈ ರೈಲನ್ನು ದೇಶದ ಅತ್ಯಂತ ಕೊಳಕು ರೈಲುಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.

ಸೀಮಾಂಚಲ್ ಎಕ್ಸ್‌ಪ್ರೆಸ್

ಈ ರೈಲು ದೆಹಲಿಯ ಆನಂದ್ ವಿಹಾರ್ ನಿಂದ ಜೋಗ್ಬಾನಿಗೆ ಸಂಚರಿಸುತ್ತದೆ. ಈ ರೈಲಿನ ಪ್ರಯಾಣಿಕರಿಂದ ಹೆಚ್ಚಿನ ದೂರುಗಳು ರೈಲ್ವೆಗೆ ಬರುತ್ತವೆ. ಆದರೆ ರೈಲ್ವೆ ಇಲಾಖೆ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ.

ವೈಷ್ಣೋದೇವಿ - ಬಂದ್ರಾ ಸ್ವರಾಜ್ ಎಕ್ಸ್‌ಪ್ರೆಸ್

ಈ ರೈಲು ಕೂಡ ಕೊಳಕು ರೈಲುಗಳ ಪಟ್ಟಿಯಲ್ಲಿದೆ. ಏಕೆಂದರೆ ಅನೇಕ ಜನರು ಈ ರೈಲಿನಲ್ಲಿ ಸ್ವಚ್ಛತೆಯ ಬಗ್ಗೆ ಹಲವಾರು ದೂರುಗಳನ್ನು ನೀಡಿದ್ದಾರೆ. 2023 ರಲ್ಲಿ, ರೈಲ್ವೆ ಈ ರೈಲಿನ ಬಗ್ಗೆ 61 ದೂರುಗಳನ್ನು ಸ್ವೀಕರಿಸಿದೆ.

ಫಿರೋಜ್‌ಪುರ-ಅಗರ್ತಲಾ-ತ್ರಿಪುರಾ ಸುಂದರಿ ಎಕ್ಸ್‌ಪ್ರೆಸ್

ಕೊಳಕು ರೈಲುಗಳಲ್ಲಿ ಈ ರೈಲು ಕೂಡ ಒಂದು. ಇದರ ಪ್ರಯಾಣಿಕರ ಸೇವೆಯ ಬಗ್ಗೆಯೂ ಹಲವಾರು ದೂರುಗಳಿವೆ. ಹೆಸರಿಗೆ ಮಾತ್ರವೇ ಇದು ಸುಂದರಿ ಎಕ್ಸ್‌ಪ್ರೆಸ್‌.

ಅಜ್ಮೀರ್-ಜಮ್ಮು ತಾವಿ ಪೂಜಾ ಎಕ್ಸ್‌ಪ್ರೆಸ್

ಈ ರೈಲು ಕೂಡ ಒಂದು ಕೊಳಕು ರೈಲು. ಪ್ರಯಾಣಿಕರು ಬೇರೆ ದಾರಿ ಇಲ್ಲದಿದ್ದರೆ ಈ ರೈಲಿನಲ್ಲಿ ಪ್ರಯಾಣ ಮಾಡುತ್ತಾರೆ. ಟಾಯ್ಲೆಟ್‌ನ ಮಾಸನೆ ಇಡೀ ಕೋಚ್‌ನಲ್ಲಿರುತ್ತದೆ.

Latest Videos

click me!