1 ಕಿಲೋಮೀಟರ್ ಚಲಿಸಲು ರೈಲಿಗೆ ಎಷ್ಟು ಲೀಟರ್ ಇಂಧನ ಬೇಕು?

First Published Oct 27, 2024, 1:23 PM IST

ರೈಲುಗಳ ಡೀಸೆಲ್ ಇಂಜಿನ್‌ಗಳನ್ನು ಕಾರ್ಯಕ್ಷಮತೆ ಆಧರಿಸಿ ವಿಂಗಡಿಸಲಾಗಿದೆ. ಡೀಸೆಲ್ ಟ್ಯಾಂಕ್‌ಗಳು 5000, 5,500 ಮತ್ತು 6,000 ಲೀಟರ್ ಸಾಮರ್ಥ್ಯದವು. ರೈಲಿನ ಮೈಲೇಜ್ ಹೊರೆ ಮತ್ತು ಕೋಚ್‌ಗಳ ಸಂಖ್ಯೆಯನ್ನು ಅವಲಂಬಿಸಿರುತ್ತದೆ.

ಈಗಾಗಲೇ ಹಲವು ಭಾಗದಲ್ಲಿ ರೈಲುಗಳ ವಿದ್ಯುದೀಕರಣ ಪೂರ್ಣಗೊಂಡಿದೆ. ವಿದ್ಯತ್ ಸಂಪರ್ಕ ಇಲ್ಲದ ಭಾಗದಲ್ಲಿ ರೈಲುಗಳು ಡೀಸೆಲ್ ಬಳಸಿ ಚಲಿಸುತ್ತವೆ. ಇಂದಿಗೂ ಹಲವು ಭಾಗಗಳಲ್ಲಿ ಡೀಸೆಲ್ ಇಂಜಿನ್‌ಗಳು ಚಾಲ್ತಿಯಲ್ಲಿವೆ. ಇಂದು ಈ ಡೀಸೆಲ್ ಇಂಜಿನ್‌ಗಳ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ರೈಲುಗಳ ಡೀಸೆಲ್ ಇಂಜಿನ್‌ಗಳ ಟ್ಯಾಂಕ್ ತುಂಬಾನೇ ದೊಡ್ಡದಾಗಿರುತ್ತವೆ. ಡೀಸೆಲ್ ಇಂಜಿನ್‌ಗಳನ್ನು ಅವುಗಳ ಕಾರ್ಯಕ್ಷಮತೆ ಆಧಾರದ ಮೇಲೆ ಮೂರು ವಿಧಗಳಾಗಿ ವಿಂಗಡಿಸಲಾಗುತ್ತದೆ. ಹಾಗೆಯೇ ಡೀಸೆಲ್ ಟ್ಯಾಂಕ್‌ಗಳು 5000, 5,500 ಮತ್ತು 6,000 ಲೀಟರ್ ಸಾಮಾರ್ಥ್ಯದ ಮೂರು ವಿಧಗಳಿವೆ. ದೀರ್ಘ ಪ್ರಯಾಣ ಹೊಂದಿರುವ ಕಾರಣ ಡೀಸೆಲ್ ಟ್ಯಾಂಕ್‌ ಸಾಮರ್ಥ್ಯವೂ ಅಧಿಕವಾಗಿರುತ್ತದೆ.

ರೈಲಿನಲ್ಲಿ ತುಪ್ಪ ತೆಗೆದುಕೊಂಡು ಹೋಗಬಹುದಾ? ನಿಯಮಗಳೇನು?

Latest Videos


ರೈಲಿನ ಡೀಸೆಲ್ ಎಂಜಿನ್ ಮೈಲೇಜ್ ಅದರ ಮೇಲಿನ ಹೊರೆ ಮತ್ತು ರೈಲಿನಲ್ಲಿರುವ ಕೋಚ್‌ಗಳ ಸಂಖ್ಯೆಯನ್ನು ಅವಲಂಬಿಸಿರುತ್ತದೆ. ಸಾಮಾನ್ಯ 12 ಕೋಚ್ ಪ್ಯಾಸೆಂಜರ್ ರೈಲನ್ನು ಎಳೆಯುವ ಎಂಜಿನ್ 6 ಲೀಟರ್ ಡೀಸೆಲ್‌ನಲ್ಲಿ 1 ಕಿಲೋಮೀಟರ್ ದೂರವನ್ನು ಕ್ರಮಿಸುತ್ತದೆ. ಎಕ್ಸ್‌ಪ್ರೆಸ್ ರೈಲುಗಳ ಮೈಲೇಜ್ ಕೂಡ ಹೆಚ್ಚು ವ್ಯತ್ಯಾಸವಾಗಿರಲ್ಲ.

12 ಕೋಚ್ ಹೊಂದಿರುವ ಪ್ಯಾಸೆಂಜರ್ ರೈಲು 1 ಕಿಮೀ ಚಲಿಸಲು 6 ಲೀಟರ್ ಡೀಸೆಲ್ ಬೇಕಾಗುತ್ತದೆ. ಅಂದ್ರೆ 100 ಕಿ.ಮೀ. ಚಲಿಸಲು ಬರೋಬ್ಬರಿ 600 ಲೀಟರ್ ಇಂಧನ ಬೇಕಾಗುತ್ತದೆ. ದೈನಂದಿನ ಪ್ರಯಾಣದಲ್ಲಿ ಇಂಧನ ಬಳಕೆ ಹೆಚ್ಚಾಗಿರುತ್ತದೆ.

ಇನ್ನು 24 ಕೋಚ್‌ಗಳನ್ನು ಹೊಂದಿರುವ ಎಕ್ಸ್‌ಪ್ರೆಸ್ ರೈಲು  6 ಲೀಟರ್ ಡೀಸೆಲ್‌ನಲ್ಲಿ 1 ಕಿಲೋಮೀಟರ್ ದೂರ ಕ್ರಮಿಸುತ್ತದೆ. ಒಂದು 12 ಕೋಚ್‌ಗಳನ್ನು ಹೊಂದಿದ್ದರೆ ಪ್ರತಿ ಕಿಲೋಮೀಟರ್‌ಗೆ 4.5 ಲೀಟರ್‌ ಬಳಕೆಯಾಗುತ್ತದೆ. ರೈಲಿನ ಲೋಡ್ ಸಾಮಾರ್ಥ್ಯ ಕಡಿಮೆಯಾದಂತೆ ಮೈಲೇಜ್ ಹೆಚ್ಚಾಗುತ್ತದೆ. ಕೋಚ್‌ಗಳ ಸಂಖ್ಯೆ ಮೇಲೆ ರೈಲುಗಳ ಮೈಲೇಜ್ ನಿರ್ಧಾರವಾಗುತ್ತದೆ. 

ಕಗ್ಗತ್ತಲಿನ ಸುರಂಗದೊಳಗೆ ಹೋಗ್ತಿದ್ದಂತೆ ಕಾಣಿಸಿದ್ದೇನು? ನಡುಗಲು ಶುರು ಮಾಡಿದ ಚಾಲಕ 

click me!