ಈ ಕುಬೇರ ಮಂದಿರಗಳಿಗೆ ಭೇಟಿ ನೀಡಿ ಒಂದೇ ಒಂದು ಸಲ ದರ್ಶನ ಪಡೆದ್ರೆ ಸಾಕು ಜೀವನಪರ್ಯಂತ ಹಣವೋ ಹಣ!

First Published Oct 26, 2024, 6:22 PM IST

ಭಾರತದಲ್ಲಿ ಕುಬೇರ ದೇವಾಲಯ ಎಲ್ಲಿದೆ? ಈ ಪ್ರಶ್ನೆ ಹೆಚ್ಚಾಗಿ ಜನ ಕೇಳ್ತಾನೆ ಇರ್ತಾರೆ, ನಿಮಗಾಗಿ ಈ ದೇಗುಲಗಳ ಮಾಹಿತಿ ಇಲ್ಲಿದೆ. ದೀಪಾವಳಿ ಮತ್ತು ಧಂತೇರಸ್ ದಿನ ಈ ದೇಗುಲಗಳಿಗೆ ಭೇಟಿ ನೀಡಿದ್ರೆ ನಿಮ್ಮ ಮೇಲೆ ಹಣದ ಮಳೆ ಸುರಿಯೋದು ಖಚಿತ. 
 

ಭಾರತ ದೇಗುಲಗಳ ತವರೂರು, ಇಲ್ಲಿ ಲಕ್ಷಾಂತರ ಸಂಖ್ಯೆಗಳಲ್ಲಿ ದೇಗುವಲಗಳಿವೆ. ಇದನ್ನು ದೇವಾಲಯಗಳ ಮನೆ ಅಂತಾನೂ ಕರೆಯಲಾಗುತ್ತದೆ. ಇಲ್ಲಿ ಉತ್ತರದಿಂದ ದಕ್ಷಿಣಕ್ಕೆ ಮತ್ತು ಪೂರ್ವದಿಂದ ಪಶ್ಚಿಮಕ್ಕೆ ಎಲ್ಲಾ ಧರ್ಮದ ಸಾವಿರಾರು ದೇವಾಲಯಗಳನ್ನು ಕಾಣಬಹುದು. ಇವುಗಳಲ್ಲಿ, ನೀವು ದುರ್ಗಾ ದೇವಿ, ಶಿವ, ವಿಷ್ಣು, ಗಣೇಶ, ಲಕ್ಷ್ಮೀ, ಆಂಜನೇಯ ಹೀಗೆ ಹಲವಾರು ದೇವರುಗಳ ದೇವಾಲಯಗಳಿಗೆ ಭೇಟಿ ನೀಡಿರಬಹುದು, ಆದರೆ ಭಕ್ತರಿಗೆ ವಿಶೇಷ ನಂಬಿಕೆಯ ಕೇಂದ್ರವಾಗಿ ಉಳಿದಿರುವ, ಧನದ ದೇವರಾಗಿರುವ ಕುಬೇರ ದೇವರ (God Kubera) ದೇವಾಲಯವನ್ನು ನೀವು ಎಂದಾದರೂ ನೋಡಿದ್ದೀರಾ.
 

ಕುಬೇರನನ್ನು ಸಂಪತ್ತಿನ (God of wealth) ದೇವರು ಎನ್ನುತ್ತಾರೆ. ಕುಬೇರನ ಪೂಜೆ ಮಾಡಿದ್ರೆ, ಆರ್ಥಿಕ ಸಮಸ್ಯೆಗಳು ನಿವಾರಣೆಯಾಗಿ, ಜೀವನದಲ್ಲಿ ಹಣದ ಮಳೆಯಾಗುತ್ತೆ ಎನ್ನುವ ನಂಬಿಕೆ ಕೂಡ ಇದೆ. ಅದರಲ್ಲೂ ಕುಬೇರ ದೇವರ ದೇವಾಲಯಗಳಿಗೆ ಭೇಟಿ ನೀಡುವ ಮೂಲಕ, ವ್ಯಕ್ತಿಯು ಸಂಪತ್ತನ್ನು ಪಡೆಯುತ್ತಾನೆ ಎನ್ನುವ ನಂಬಿಕೆ ಇದೆ. ಅದರಲ್ಲೂ ದೀಪಾವಳಿಯ ಮೊದಲು ಬರುವ ಧಂತೆರಾಸ್ ದಿನ ಭಕ್ತರು ಕುಬೇರ ದೇವಾಲಯಕ್ಕೆ ಭೇಟಿ ನೀಡುತ್ತಾರೆ ಮತ್ತು ಸಂತೋಷ ಮತ್ತು ಸಮೃದ್ಧಿಗಾಗಿ ಕುಬೇರ ದೇವನನ್ನು ಪ್ರಾರ್ಥಿಸುತ್ತಾರೆ. ನೀವು ಭಾರಿ ಸಾಲದ ಸಮಸ್ಯೆಯಲ್ಲಿದ್ದರೆ,  ಈ ದೇಗುಲಕ್ಕೆ ಒಮ್ಮೆ ಹೋಗಿ ಬೇಡಿಕೋಬೇಕು, ನಿಮ್ಮ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತೆ, ಧನಲಾಭವಾಗುತ್ತೆ. ದೇಶದಲ್ಲಿರುವ ಪ್ರಮುಖ ಕುಬೇರನ ದೇಗುಲಗಳು ಯಾವುವು ನೋಡೋಣ. 
 

Latest Videos


ಉತ್ತರಾಖಂಡದ ಕುಬೇರ ದೇವಾಲಯ
ಮೊದಲನೆಯದಾಗಿ, ಭಾರತದಲ್ಲಿ ಇರುವ ಅತ್ಯಂತ ಜನಪ್ರಿಯ ಕುಬೇರ ದೇವಾಲಯದ ಬಗ್ಗೆ ಮಾತನಾಡೋಣ. ಈ ದೇವಾಲಯವು ಉತ್ತರಾಖಂಡದ ಅಲ್ಮೋರಾದಿಂದ ಸುಮಾರು 40 ಕಿ.ಮೀ ದೂರದಲ್ಲಿದೆ. ಅಲ್ಮೋರಾದಲ್ಲಿರುವ ಕುಬೇರ ದೇವಾಲಯವು ಜಾಗೇಶ್ವರ ಧಾಮ್ ಅಡಿಯಲ್ಲಿ ಬರುತ್ತದೆ. ಪ್ರತಿ ವರ್ಷ ಧಂತೇರಸ್ ಮತ್ತು ದೀಪಾವಳಿಯ ದಿನದಂದು, ಭಕ್ತರು ತಮ್ಮ ಬೇಡಿಕೆಯೊಂದಿಗೆ ಇಲ್ಲಿಗೆ ಬರುತ್ತಾರೆ. ಧಂತೇರಸ್ ಮತ್ತು ದೀಪಾವಳಿಯ ದಿನದಂದು ಇಲ್ಲಿಗೆ ಬರುವವರು ಎಂದಿಗೂ ಬರಿಗೈಯಲ್ಲಿ ಹಿಂತಿರುಗುವುದಿಲ್ಲ ಎಂದು ಹೇಳಲಾಗುತ್ತೆ. ಈ ಪವಿತ್ರ ದೇವಾಲಯವು ಪರ್ವತದ ತುದಿಯಲ್ಲಿದೆ, ಆದ್ದರಿಂದ ಇಲ್ಲಿನ ಸೌಂದರ್ಯ ಕೂಡ ವಿಹಂಗಮವಾಗಿದೆ.

ತಲುಪುವುದು ಹೇಗೆ?:

ಸ್ಥಳೀಯ ಬಸ್, ಟ್ಯಾಕ್ಸಿ ಅಥವಾ ಕ್ಯಾಬ್ ಮೂಲಕ ನೀವು ನೈನಿತಾಲ್ ಅಥವಾ ಅಲ್ಮೋರಾವನ್ನು ಸುಲಭವಾಗಿ ತಲುಪಬಹುದು. ನೀವು ನೈನಿತಾಲ್ ಗೆ ಹತ್ತಿರದಲ್ಲಿರುವ ಕಥ್ಗೊಡಮ್ ರೈಲ್ವೆ ನಿಲ್ದಾಣದಲ್ಲಿ ಇಳಿಯಬೇಕು. ನೀವು ದೆಹಲಿಯಿಂದ ನೈನಿತಾಲ್ ಗೆ ಬಸ್ ಮೂಲಕವೂ ಹೋಗಬಹುದು. 
 

ಗುಜರಾತ್ ನ ಕುಬೇರ ದೇವಾಲಯ
ಕುಬೇರ ಭಂಡಾರಿ ದೇವಾಲಯವು ದೇಶದ ಪವಿತ್ರ ಮತ್ತು ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ. ಈ ಪ್ರಸಿದ್ಧ ದೇವಾಲಯವು ಗುಜರಾತ್ ನ ವಡೋದರಾ ನಗರದಲ್ಲಿದೆ. ಈ ಪ್ರಸಿದ್ಧ ದೇವಾಲಯದ ಇತಿಹಾಸವು 2500 ವರ್ಷಗಳಿಗಿಂತಲೂ ಹಳೆಯದು. ಇದು ನರ್ಮದಾ ನದಿಯ ದಡದಲ್ಲಿಯೂ ಇದೆ. ದಂತಕಥೆಯ ಪ್ರಕಾರ, ಭಂಡಾರಿ ದೇವಾಲಯವನ್ನು ಶಿವನು ನಿರ್ಮಿಸಿದನು. ಧಂತೇರಸ್ ಮತ್ತು ದೀಪಾವಳಿಯಂದು ಇಲ್ಲಿಗೆ ಭೇಟಿ ನೀಡಲು ಯಾರೇ ಬಂದರೂ, ಅವರಿಗೆ ಎಂದಿಗೂ ಹಣದ ಕೊರತೆ ಇರೋದಿಲ್ಲವಂತೆ. ಆದ್ದರಿಂದ, ಧಂತೇರಸ್ ಮತ್ತು ದೀಪಾವಳಿಗೆ ಇಲ್ಲಿ ಹೆಚ್ಚಿನ ಭಕ್ತಾಧಿಗಳು ಬರುತ್ತಾರೆ. ದೀಪಾವಳಿಯ ದಿನದಂದು, ದೇವಾಲಯವನ್ನು ದೀಪಗಳಿಂದ ಅಲಂಕರಿಸಲಾಗುತ್ತದೆ.

ಇಲ್ಲಿಗೆ ತಲುಪೋದು ಹೇಗೆ?
ಈ ದೇವಾಲಯವು ವಡೋದರಾದಿಂದ ಸುಮಾರು 60 ಕಿ.ಮೀ ದೂರದಲ್ಲಿದೆ, ನೀವು ವಡೋದರಾದಿಂದ ಟ್ಯಾಕ್ಸಿ ಅಥವಾ ಕ್ಯಾಬ್ ತೆಗೆದುಕೊಳ್ಳುವ ಮೂಲಕ ಇಲ್ಲಿಗೆ ತಲುಪಬಹುದು. ಗುಜರಾತ್ ನ ಬಹುತೇಕ ಎಲ್ಲಾ ನಗರಗಳಿಂದ ವಡೋದರಾಗೆ ರೈಲುಗಳ ವ್ಯವಸ್ಥೆ ಇದೆ.

ಮಧ್ಯಪ್ರದೇಶದ ಕುಬೇರ ದೇವಾಲಯ 
ಮಧ್ಯಪ್ರದೇಶದಲ್ಲಿ ಮೂರು ಕುಬೇರ ದೇವಾಲಯಗಳಿವೆ.  ಮಂದಸೌರ್ ನಲ್ಲಿ ಒಂದು, ನಂತರ ಉಜ್ಜಯಿನಿಯಲ್ಲಿ ಒಂದು ದೇವಾಲಯವಿದೆ ಮತ್ತು ಖಾಂಡ್ವಾದ ಓಂಕಾರೇಶ್ವರದಲ್ಲಿಯೂ ಕುಬೇರ ಮಂದಿರ ಕಾಣಬಹುದು.  ಈ ಎಲ್ಲಾ ದೇವಾಲಯಗಳಲ್ಲಿ, ಖಾಂಡ್ವಾದ ಕುಬೇರ ದೇವಾಲಯವು (Khandwa Kuber Temple) ಹೆಚ್ಚು ಪ್ರಸಿದ್ಧಿಯನ್ನು ಪಡೆದಿದೆ.ಇಲ್ಲಿಗೆ ಭೇಟಿ ನೀಡಿದರೆ ಸಾಕು ನಿಮ್ಮೆಲ್ಲ ಹಣದ ಸಮಸ್ಯೆ ನಿವಾರಣೆಯಾಗುತ್ತಂತೆ. ಅಷ್ಟೇ ಅಲ್ಲ ಇಲ್ಲಿ ಒಂದು ಶಿವಲಿಂಗವೂ ಇದೆ. ಕುಬೇರ ದೇವನು ಕಠಿಣ ತಪಸ್ಸು ಮಾಡಿ ಇಲ್ಲಿ ಶಿವಲಿಂಗವನ್ನು ಸ್ಥಾಪಿಸಿದನೆಂದು ಹೇಳಲಾಗುತ್ತದೆ.
 

ಇಲ್ಲಿಗೆ ತಲುಪುವುದು ಹೇಗೆ?
ಮಧ್ಯಪ್ರದೇಶದ ಯಾವುದೇ ನಗರದಿಂದ ಓಂಕಾರೇಶ್ವರವನ್ನು ಸುಲಭವಾಗಿ ತಲುಪಬಹುದು. ಇದು ರಾಜಧಾನಿಯಿಂದ ಸುಮಾರು 257 ಕಿ.ಮೀ ದೂರದಲ್ಲಿದೆ. ಭೋಪಾಲ್ ನಿಂದ ಓಂಕಾರೇಶ್ವರಕ್ಕೆ ರೈಲುಗಳು ಚಲಿಸುತ್ತವೆ. ಅಷ್ಟೇ ಅಲ್ಲ, ಖಾಂಡ್ವಾ ಕುಬೇರ ದೇವಾಲಯವು ಇಂದೋರ್ ನಗರದಿಂದ ಕೇವಲ 78 ಕಿ.ಮೀ ದೂರದಲ್ಲಿದೆ.
 

click me!