ಈ ವೇಗದ ಜಗತ್ತಿನಲ್ಲಿ, ಅನೇಕ ಜನರು ಶಾಂತಿಯುತ ಜೀವನ ನಡೆಸೋದನ್ನು ಇಷ್ಟಪಡ್ತಾರೆ. ಇದಕ್ಕಾಗಿ ಅನೇಕರು ದೀರ್ಘ ರಜೆಗಳನ್ನು ತೆಗೆದುಕೊಳ್ಳುತ್ತಾರೆ. ಜನವೇ ಇಲ್ಲದ ಪ್ರದೇಶಕ್ಕೆ ಹೋಗಿ ಜೀವನ ಕಳೆಯುತ್ತಾರೆ. ಆದರೆ ಶಾಂತಿ ಜೀವನ (peaceful life) ಬಯಸಿದ ದಂಪತಿ ಒಂದು ವಿಶಿಷ್ಟ ಮಾರ್ಗವನ್ನು ಕಂಡುಕೊಂಡಿದ್ದಾರೆ. ಅವರು ಒತ್ತಡದಿಂದ ಎಷ್ಟು ಬೇಸತ್ತಿದ್ದರೆಂದರೆ ಅವರು ವಿಶ್ವದ ಅತ್ಯಂತ ಶಾಂತವಾದ ಮನೆಯನ್ನು ಖರೀದಿಸಿದ್ದಾರೆ.
ಈ ದಂಪತಿ ಖರೀದಿಸಿದ ಮನೆಯನ್ನು ನೋಡಿದ್ರೆ, ಒಂದು ಸಲ ಭಯ ಹುಟ್ಟೋದು ಖಚಿತ. ಇಷ್ಟೊಂದು ಶಾಂತಿಯ ಅಗತ್ಯ ಇತ್ತಾ ಎಂದು ಸಹ ಅನಿಸಬಹುದು. ಈ ಜಾಗದಲ್ಲಿ ಶಬ್ದ ಬಿಡಿ, ಯಾರೂ ಸುಲಭವಾಗಿ ಬರೋದಕ್ಕೂ ಸಾಧ್ಯವಿಲ್ಲದ ಸ್ಥಳವಿದು. ಐಲ್ಯಾಂಡ್ ನ (Ice Land) ದಕ್ಷಿಣದಲ್ಲಿರುವ ದೂರದ ದ್ವೀಪವಾದ ಎಲಿಡಿಯಲ್ಲಿ ನಿರ್ಮಿಸಲಾದ ಮನೆ ಬಹಳಷ್ಟು ಕುತೂಹಲ ಸೃಷ್ಟಿಸಿದೆ.
ನಾರ್ವೆ ಮೂಲದ ಆಂಡ್ರಿಯಾಸ್ ಬಜ್ರಾಯ್ ಮತ್ತು ಅವರ ಪತ್ನಿ ಮೋನಾ ಕ್ರೌಸ್ ಬಜ್ರಾಯ್ ಇತ್ತೀಚೆಗೆ ಸ್ಕಲ್ಮನ್ ದ್ವೀಪದಲ್ಲಿ 89,000 ಪೌಂಡ್ಸ್‌ಗೆ ಮನೆ ಖರೀದಿಸಿದ್ದಾರೆ ಎಂದು ಮೆಟ್ರೋ ವರದಿ ಮಾಡಿದೆ. ಇದು ಲೈಟ್ ಹೌಸ್ (light house) ಆಗಿದ್ದು, ನೋಡಲು ತುಂಬಾ ಅದ್ಭುತವಾಗಿದೆ. ಈ ದ್ವೀಪವು ಎಷ್ಟು ಏಕಾಂತವಾಗಿದೆ. ಆದರೆ ಈಗ ಇಲ್ಲಿ ಪ್ರವಾಸಿಗರು ಮೇ ಮತ್ತು ಜುಲೈ ನಡುವೆ ಇಲ್ಲಿಗೆ ಬರುವುದನ್ನು ನಿಷೇಧಿಸಲಾಗಿದೆ. ಇದು ಪಕ್ಷಿ ಮೀಸಲು ಪ್ರದೇಶ. ನೀವು ಇಲ್ಲಿಗೆ ಹೋಗಬೇಕು ಅಂದ್ರೆ ಸಾಕಷ್ಟು ಧೈರ್ಯ ಬೇಕು. ಪ್ರವಾಸಿಗರು ಎರಡು ವಿಭಿನ್ನ ಘಟ್ಟಗಳ ಮೂಲಕ ಹೋಗಬೇಕಾಗುತ್ತದೆ. ನಂತರ ದೋಣಿಯಲ್ಲಿ 4 ಮೈಲಿ ಪ್ರಯಾಣಿಸಬೇಕು. ಆವಾಗ ಈ ತಾಣಕ್ಕೆ ತಲುಪಬಹುದು.
ಎರಡೂವರೆ ಪಟ್ಟು ಹಣ ಪಾವತಿಸಿ ಖರೀದಿಸಿದ ಮನೆ
ತುಂಬಾ ಹಳೆಯದಾದ ಈ ಲೈಟ್ ಹೌಸ್ ನಿರ್ಮಾಣವಾಗಿದ್ದು 1907ರಲ್ಲಿ. ಸ್ವಲ್ಪ ಸಮಯದ ಹಿಂದೆ ಇದನ್ನು ಮಾರುವ ಬಗ್ಗೆ ಸುದ್ದಿಯಾಗಿತ್ತು, ಆವಾಗ ಅದರ ಬೆಲೆ 36,000 ಪೌಂಡ್ಸ್ ಎಂದಿದ್ದರು. ಆದರೆ ದಂಪತಿ ಸುಮಾರು ಎರಡೂವರೆ ಪಟ್ಟು ಹೆಚ್ಚು ಹಣ ಪಾವತಿಸಿ ಅದನ್ನು ಖರೀದಿಸಿದರು. ಆರಂಭದಲ್ಲಿ ಕೇವಲ 5 ಮಂದಿ ಮಾತ್ರ ಬಿಡ್ ಮಾಡಿದ್ದರು. ಆದರೆ ಕೇವಲ 2 ಜನರು ಮಾತ್ರ ಕೊನೆಯ ಹಂತ ತಪುಪಿದ್ದರು.
ಈ ಮನೆಯನ್ನು ಖರೀದಿಸಿದ ಬಗ್ಗೆ ಹೇಳಿದ ಆಂಡ್ರಿಯಾಸ್ ಇದೇ ತಾಣದಲ್ಲಿ ಸಾಕಷ್ಟು ವರ್ಷಗಳಿಂದ ರಜೆಯನ್ನು ಎಂಜಾಯ್ ಮಾಡ್ತಿದ್ದರಂತೆ. ಈ ಜಾಗ ದಂಪತಿಗೆ ತುಂಬಾನೆ ಇಷ್ಟವಾಗಿತ್ತಂತೆ. ಒತ್ತಡದ ಜೀವನದಿಂದ ತುಂಬಾ ಬೇಸತ್ತಿದ್ದ ಆಂಡ್ರಿಯಾಸ್ ದಂಪತಿ, ಶಾಂತತೆಯನ್ನು ಹುಡುಕಿ ಇವರು ಅನೇಕ ಬಾರಿ ವಿವಿಧ ದ್ವೀಪಗಳಲ್ಲಿ ಗಂಟೆಗಟ್ಟಲೆ ಕಳೆಯುತ್ತಿದ್ದರು. ಕೊನೆಗೆ ಜನರಿಂದ, ಶಬ್ಧದಿಂದ ದೂರವಿರುವ ನೆಮ್ಮದಿ ಮತ್ತು ವಿಶ್ರಾಂತಿ ನೀಡುವ ಈ ಮನೆಯನ್ನು ಖರೀದಿಸಿದರಂತೆ.
ಅಂತೆಯೇ, ಐಸ್ಲ್ಯಾಂಡ್ ಎಲಿಡಿಯ ದಕ್ಷಿಣದಲ್ಲಿರುವ ದೂರದ ದ್ವೀಪದಲ್ಲಿರುವ ಮತ್ತೊಂದು ಮನೆ ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಆಗುತ್ತಿದೆ. ಈ ಸಣ್ಣ ದ್ವೀಪವು 15 ರಿಂದ 18 ದ್ವೀಪಸಮೂಹದ (group of Island) ಭಾಗ: ದ್ವೀಪ ನಿರ್ಜನವಾಗಿದೆ, ಆದರೆ ಒಂದು ಕಾಲದಲ್ಲಿ ಐದು ಕುಟುಂಬಗಳು ವಾಸಿಸುತ್ತಿದ್ದವು. ಈ ಕುಟುಂಬಗಳಲ್ಲಿ ಕೊನೆಯ ಫ್ಯಾಮಿಲಿ 1930 ರ ದಶಕದಲ್ಲಿ ಸ್ಥಳಾಂತರಗೊಂಡಿದೆ.
ಈ ದ್ವೀಪದ ಬಗ್ಗೆ ಹಲವು ಕಥೆಗಳನ್ನು ಸಹ ಕೇಳಲಾಗುತ್ತದೆ. ಈ ದ್ವೀಪದಲ್ಲಿನ ಮನೆಗಳನ್ನು ಬಿಲಿಯನೇರ್ ನಿರ್ಮಿಸಿದ್ದಾರೆ ಎಂದು ಹೇಳಲಾಗುತ್ತದೆ, ಅವರು ಇದನ್ನು ಏನೂ ಇಲ್ಲದ ಸಂದರ್ಭದಲ್ಲಿ ಬಳಸಲು ಯೋಜಿಸಿದ್ದಾರಂತೆ ಎಂದು ಒಂದು ಕಥೆ ಹೇಳುತ್ತೆ. ಈ ಮನೆ ಪ್ರಸಿದ್ಧ ಐಸ್ಲ್ಯಾಂಡ್ ಗಾಯಕ ಜಾರ್ಕ್ ಅಥವಾ ಧಾರ್ಮಿಕ ಸನ್ಯಾಸಿಗೆ ಸೇರಿದೆ ಎಂದು ಮತ್ತೊಂದು ಹೇಳಿಕೆ ಹೇಳಿದೆ. ಇನ್ನು ಕೆಲವರು ಈ ಮನೆ ಅಸ್ತಿತ್ವದಲ್ಲಿಲ್ಲ ಮತ್ತು ಫೋಟೋಗಳನ್ನು ಫೋಟೋಶಾಪ್ ಮಾಡಲಾಗಿದೆ ಎಂದು ಸಹ ಹೇಳುತ್ತಿದ್ದಾರೆ.