ಈ ದೇಶದಲ್ಲಿ ಮೃತ ದೇಹಗಳನ್ನು ಪರ್ವತದ ತುದಿಗಳಲ್ಲಿ ನೇತು ಹಾಕ್ತಾರೆ! ಕಾರಣವಿದು

First Published | Mar 28, 2024, 3:56 PM IST

ಭಾರತದಲ್ಲಿ ಸಾಮಾನ್ಯವಾಗಿ ಮೃತ ದೇಹವನ್ನು ಬೆಂಕಿಯಿಂದ ಸುಡುವ ಅಥವಾ ನೆಲದಲ್ಲಿ ಹೂಳುವ ಪದ್ಧತಿ ಇದೆ. ಆದರೆ ವಿಶ್ವದ ಒಂದು ದೇಶದಲ್ಲಿ ಪರ್ವತ ಶಿಖರಗಳಲ್ಲಿ ಮೃತ ದೇಹವನ್ನು ನೇತು ಹಾಕುತ್ತಾರೆ. ಇದೇನು ಸಂಪ್ರದಾಯ ಯಾಕೆ ಹೀಗೆ ಮಾಡಲಾಗುತ್ತೆ ನೋಡೋಣ.
 

ಪ್ರಪಂಚದ ಪ್ರತಿಯೊಂದು ಮೂಲೆಯೂ ಕೆಲವು ರಹಸ್ಯ ಮತ್ತು ಆಶ್ಚರ್ಯಕರ ಸ್ಥಳಗಳಿಂದ (mysterious places) ತುಂಬಿದೆ. ಪೂರ್ವದಿಂದ ಪಶ್ಚಿಮಕ್ಕೆ ಮತ್ತು ಉತ್ತರದಿಂದ ದಕ್ಷಿಣಕ್ಕೆ ಇಂತಹ ಲಕ್ಷಾಂತರ ನಿಗೂಢ ಸ್ಥಳಗಳಿವೆ, ಕೆಲವು ಸ್ಥಳಗಳ ಬಗ್ಗೆ ಕೇಳಿದ್ರೆ ನಮಗೂ ಭಯ ಆಗೋದು ಖಚಿತ. 
 

ಜಗತ್ತಿನಲ್ಲಿ ಅಂತಹ ಒಂದು ದೇಶವಿದೆ, ಅದು ಸೌಂದರ್ಯದ ವಿಷಯದಲ್ಲಿ ತುಂಬಾನೆ ಹೆಸರು ಮಾಡಿದೆ, ಆದರೆ ಆ ದೇಶದ ಬಗ್ಗೆ ಅನೇಕ ಭಯಾನಕ ಕಥೆಗಳೂ (horror story) ಇವೆ, ಇಲ್ಲಿ ಮೃತ ದೇಹವನ್ನು ಶವಪೆಟ್ಟಿಗೆಯಲ್ಲಿ ಇರಿಸಿ ಪರ್ವತ ಶಿಖರಗಳಲ್ಲಿ ನೇತುಹಾಕಲಾಗುತ್ತದೆ. ಈ ಲೇಖನದಲ್ಲಿ, ಮೃತ ದೇಹವನ್ನು ಶವಪೆಟ್ಟಿಗೆಯಲ್ಲಿ ಏಕೆ ನೇತುಹಾಕಲಾಗುವುದು ಮತ್ತು ಅದನ್ನು ಯಾವ ದೇಶಗಳಲ್ಲಿ ಮಾಡಲಾಗುತ್ತೆ ಅನ್ನೋದನ್ನು ತಿಳಿಯೋಣ. 
 

Tap to resize

ಶವವನ್ನು ಶವಪೆಟ್ಟಿಗೆಯಲ್ಲಿ ನೇತುಹಾಕುವ ದೇಶ ಯಾವುದು?
ಮೊದಲನೆಯದಾಗಿ, ಯಾವ ದೇಶದಲ್ಲಿ ಮೃತ ದೇಹವನ್ನು ಶವಪೆಟ್ಟಿಗೆಯಲ್ಲಿ ಲಾಕ್ ಮಾಡಿ ಪರ್ವತ ಶಿಖರಗಳಲ್ಲಿ ನೇತುಹಾಕಲಾಗಿದೆ ಎಂದು ತಿಳಿಯೋಣ. ವಾಸ್ತವವಾಗಿ, ನೇತಾಡುವ ಶವಪೆಟ್ಟಿಗೆಯ (hanging coffins) ಕಥೆ ಕೇವಲ ಒಂದು ದೇಶದಲ್ಲಿಲ್ಲ, ಬದಲಾಗಿ ಮೂರು ದೇಶಗಳಲ್ಲಿದೆ.

ಹೌದು, ವಿಶ್ವದ ಮೂರು ದೇಶಗಳಲ್ಲಿ ಶವಪೆಟ್ಟಿಗೆಗಳನ್ನು ಪರ್ವತಗಳ ಮೇಲೆ ನೇತುಹಾಕಿರುವ ಪುರಾವೆಗಳು ಕಂಡುಬಂದಿವೆ ಎಂದು ಹೇಳಲಾಗುತ್ತದೆ - ಚೀನಾ, ಇಂಡೋನೇಷ್ಯಾ ಮತ್ತು ಫಿಲಿಪೈನ್ಸ್ ಈ ಮೂರು ದೇಶಗಳಲ್ಲಿ, ಮೃತ ದೇಹವನ್ನು ಒಂದೇ ರೀತಿಯ ಶವಪೆಟ್ಟಿಗೆಯಲ್ಲಿ ಲಾಕ್ ಮಾಡಿ ಪರ್ವತ ಶಿಖರಗಳಲ್ಲಿ ತೂಗಿಸಿ ಹಾಕಲಾಗುತ್ತದೆ. 

ನೇತಾಡುತ್ತಿರುವ ಶವಪೆಟ್ಟಿಗೆಯ ಇತಿಹಾಸ
ನೇತಾಡುವ ಶವಪೆಟ್ಟಿಗೆಯ ಇತಿಹಾಸವು ಸಾಕಷ್ಟು ಪ್ರಾಚೀನವಾಗಿದೆ. ಇದರ ಇತಿಹಾಸವು 3 ಸಾವಿರಕ್ಕೂ ಹೆಚ್ಚು ಪ್ರಾಚೀನವಾಗಿದೆ ಎಂದು ಹೇಳಲಾಗುತ್ತದೆ. ಚೀನಾದ ಯಾಂಗ್ಟ್ಸೆ ನದಿಯ ಸುತ್ತಲಿನ ಪರ್ವತಗಳು ಶವಪೆಟ್ಟಿಗೆಗಳಲ್ಲಿ ಲಾಕ್ ಮಾಡಲಾದ ಮೃತ ದೇಹಗಳನ್ನು ಹೊಂದಿದ್ದವು ಎನ್ನಲಾಗುತ್ತದೆ. ಹಿಂದೆ ಈ ರೀತಿಯಾಗಿ ನೇತಾಡುತ್ತಿದ್ದ ಶವಪೆಟ್ಟಿಗೆಗಳ ಸಂಖ್ಯೆ ತುಂಬಾ ಹೆಚ್ಚಾಗಿತ್ತು ಎಂದು ಹೇಳಲಾಗುತ್ತದೆ, ಜನರು ಅವುಗಳನ್ನು ನೋಡಿ ಭಯಭೀತರಾಗುತ್ತಿದ್ದರಂತೆ. ಈ, ಶವಪೆಟ್ಟಿಗೆಯಲ್ಲಿ (coffins)ಇರಿಸಲಾದ ಮೃತ ದೇಹವನ್ನು ಸಾಕಷ್ಟು ಸುರಕ್ಷಿತವಾಗಿಡಲಾಗಿದೆ ಮತ್ತು ವರ್ಷಗಳವರೆಗೆ ಅವುಗಳಿಗೆ ಯಾವುದೇ ಹಾನಿಯಾಗೋದಿಲ್ಲ ಅನ್ನೋದು ತಿಳಿದು ಬಂದಿದೆ. 

ನೇತಾಡುತ್ತಿರುವ ಶವಪೆಟ್ಟಿಗೆಯ ಹಿಂದಿನ ಕಥೆಗಳು
ನೇತಾಡುತ್ತಿರುವ ಶವಪೆಟ್ಟಿಗೆಯ ಹಿಂದಿನ ಕಥೆಗಳು ತುಂಬಾನೆ ಇಂಟ್ರೆಸ್ಟಿಂಗ್ ಆಗಿದೆ. ಚೀನಾದಲ್ಲಿ ಈ ಅಭ್ಯಾಸವನ್ನು ಮುಂದುವರಿಸಿದ ರಾಜವಂಶವನ್ನು ಹೊಂದಿತ್ತು ಎಂದು ಹೇಳಲಾಗುತ್ತದೆ. ಇದನ್ನು ಮಾಡುವುದರಿಂದ, ಮೃತ ಪೂರ್ವಜರು ಸುಲಭವಾಗಿ ಪ್ರಕೃತಿಗೆ ಮರಳುತ್ತಾರೆ ಮತ್ತು ಸ್ವರ್ಗದ ಬಾಗಿಲು ಅವರಿಗಾಗಿ ತೆರೆಯುತ್ತದೆ ಎಂದು ನಂಬಲಾಗಿದೆ.

ಮೃತ ದೇಹವನ್ನು ಪರ್ವತದ ತುದಿಗಳಲ್ಲಿ (Top of the mountain)ಶವಪೆಟ್ಟಿಗೆಯಲ್ಲಿ ನೇತುಹಾಕುವ ಅಭ್ಯಾಸವು ಚೀನಾದಲ್ಲಿ ಮಾತ್ರವಲ್ಲ, ಇಂಡೋನೇಷ್ಯಾ ಮತ್ತು ಫಿಲಿಪೈನ್ಸ್‌ನಲ್ಲಿಯೂ ಇತ್ತು, ಮತ್ತು ಹಾಗೆ ಮಾಡುವುದರಿಂದ ಸಾವನ್ನಪಿದ ವ್ಯಕ್ತಿಗೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂದು ಅಲ್ಲಿನ ಜನರು ನಂಬಿದ್ದರು.ಆದರೆ ಈಗ ಈ ಆಚರಣೆ ಇಲ್ಲ.  
 

ನೇತಾಡುತ್ತಿರುವ ಶವಪೆಟ್ಟಿಗೆಗಳ ನಿಗೂಢ ಕಥೆಗಳು
ನೇತಾಡುತ್ತಿರುವ ಶವಪೆಟ್ಟಿಗೆಯ ನಿಗೂಢ ಕಥೆಗಳು ಸಾಕಷ್ಟು ಭಯಾನಕವಾಗಿವೆ. ಆರಂಭದಲ್ಲಿ, ಮೃತ ದೇಹವನ್ನು ಪರ್ವತ ಶಿಖರಗಳಲ್ಲಿ ನೇತು ಹಾಕಿದಾಗ, ಭಯದಿಂದ ಯಾರೂ ಆ ಕಡೆಗಳಲ್ಲಿ ನಡೆದಾಡಲು ಭಯಪಡುತ್ತಿದ್ದರಂತೆ. ಸೂರ್ಯ ಮುಳುಗುತ್ತಿದ್ದಂತೆ ಇಂದಿಗೂ ಅನೇಕ ಜನರು ನೇತಾಡುತ್ತಿರುವ ಶವಪೆಟ್ಟಿಗೆಯ ಸುತ್ತಲೂ ಅಲೆದಾಡಲು ಭಯ ಪಡ್ಟಾರೆ. ರಾತ್ರಿಯಲ್ಲಿ ಇಲ್ಲಿಂದ ವಿಚಿತ್ರ ಶಬ್ದಗಳು ಬರುತ್ತಲೇ ಇರುತ್ತವೆ. ಮೃತ ದೇಹಗಳು ಮಧ್ಯರಾತ್ರಿಯಲ್ಲಿ ಶವಪೆಟ್ಟಿಗೆಯಿಂದ ಹೊರಬರುತ್ತವೆ ಮತ್ತು ನೃತ್ಯ ಮಾಡುತ್ತವೆ ಎಂದು ಅನೇಕ ಜನರು ನಂಬುತ್ತಾರೆ.
 

Latest Videos

click me!