ಟ್ರಾವೆಲ್ ಮಾಡೋದಕ್ಕೆ ಇಷ್ಟಪಡುವವರು ಸುಂದರವಾದ, ನೇಚರನ್ನು ಎಂಜಾಯ್ ಮಾಡಿಕೊಳ್ಳಲು ಸಾಧ್ಯವಾಗುವಂತಹ, ಕಡಿಮೆ ಖರ್ಚಿನಲ್ಲಿ ದೇಶ ಸುತ್ತೋಕೆ ಖಂಡಿತವಾಗಿಯೂ ಇಷ್ಟ ಪಡ್ತಾರೆ ಅಲ್ವಾ? ನೀವು ಕೂಡ ಅಂತದ್ದೇ ಜಾಗ ಹುಡುಕುತ್ತಿದ್ರೆ ವಿಯೆಟ್ನಾಂ (Vietnam) ನಿಮಗೆ ಬೆಸ್ಟ್ ಆಯ್ಕೆ. ಇಲ್ಲಿಗೆ ನೀವು ಕಡಿಮೆ ಬಜೆಟ್‌ನಲ್ಲಿ ಇಂಟರ್‌ನ್ಯಾಷನಲ್ ಟ್ರಿಪ್ ಮಾಡಬಹುದು.
ವಿಯೆಟ್ನಾಂ ದೇಶದಲ್ಲಿ ಭಾರತೀಯ ರೂಪಾಯಿಯ (value of Indian Ruoees) ಮೌಲ್ಯವು ತುಂಬಾ ಹೆಚ್ಚಾಗಿದೆ. ಹಾಗಾಗಿ ಇಲ್ಲಿ ನೀವು ಕಡಿಮೆ ದರದಲ್ಲಿ ದೇಶದ ಮೂಲೆ ಮೂಲೆ ಸುತ್ತಬಹುದು. ಅಷ್ಟೇ ಅಲ್ಲ ಒಂದೆರಡು ಸಾವಿರ ಕೈಯಲ್ಲಿದ್ರೆ ಸಾಕು ನೀವೇ ಶ್ರೀಮಂತರು ಎನ್ನುವ ಅನುಭವ ಕೂಡ ಪಡೆಯಬಹುದು. ಯಾಕಂದ್ರೆ ವಿಯೆಟ್ನಾಂನಲ್ಲಿ, ನೀವು ಭಾರತದ 1000 ರೂಪಾಯಿಗಳನ್ನು ಹೊಂದಿದ್ದರೆ, ಅದರ ಬೆಲೆ ತುಂಬಾ ಹೆಚ್ಚಾಗಿರುತ್ತದೆ.
ವಿಯೆಟ್ನಾಂ ತನ್ನ ರುಚಿಕರವಾದ ಬೀದಿ ಆಹಾರ (street food), ಆಸಕ್ತಿದಾಯಕ ಸಂಸ್ಕೃತಿ ಮತ್ತು ಸುಂದರ ಪ್ರಕೃತಿಗೆ ಹೆಸರುವಾಸಿ. ಆದ್ದರಿಂದ, ಸಾಕಷ್ಟು ಹಣವಿಲ್ಲದಿದ್ದರೂ, ಕೆಲವು ಸಾವಿರ ರೂಪಾಯಿಗಳೊಂದಿಗೆ ವಿಯೆಟ್ನಾಂನಲ್ಲಿ ತಿರುಗಾಡಬಹುದು. ಹೊಸ ವರ್ಷವನ್ನು ಸೆಲೆಬ್ರೇಟ್ ಮಾಡೋದಕ್ಕೆ ಅನೇಕ ಜನರು ಡಿಸೆಂಬರ್ ಮತ್ತು ಜನವರಿಯಲ್ಲಿ ಅಲ್ಲಿಗೆ ಹೋಗಲು ಬಯಸುತ್ತಾರೆ. ವಿಯೆಟ್ನಾಂನಲ್ಲಿ ಹೊಸ ವರ್ಷವನ್ನು ಆಚರಿಸುವುದು ಇತರ ದೇಶಗಳಿಗಿಂತ ತುಂಬಾನೆ ಚೀಪ್ ಆಗಿದೆ.
ವಿಯೇಟ್ನಾಂನಲ್ಲಿ ಭಾರತದ 1 ರೂಪಾಯಿಯ ಮೌಲ್ಯ ಎಷ್ಟು ಗೊತ್ತಾ?
ಸಮುದ್ರದಿಂದ ಸುತ್ತುವರೆದಿರುವ ಈ ಸಣ್ಣ ದೇಶವು ಆಗ್ನೇಯ ಏಷ್ಯಾದಲ್ಲಿದೆ. ಟ್ರಾವೆಲ್ ಮಾಡೋದಾದ್ರೆ, ಬೀಚ್, ಸರೋವರ ಮತ್ತು ಜಂಗಲ್ ಸಫಾರಿ ಈ ಮೂರನ್ನು ನೀವಿಲ್ಲಿ ಎಂಜಾಯ್ ಮಾಡಬಹುದು. ಕರೆನ್ಸಿಯ ಬಗ್ಗೆ ಹೇಳೋದಾದ್ರೆ ಇಲ್ಲಿನ ಹಣವನ್ನ ವಿಯೆಟ್ನಾಮೀಸ್ ಡಾಂಗ್ ಎನ್ನುತ್ತಾರೆ. 1 ರೂಪಾಯಿ ಭಾರತೀಯ ರೂಪಾಯಿಗಳ ಬದಲಿಗೆ 300 ವಿಯೆಟ್ನಾಮೀಸ್ ಡಾಂಗ್ (Vietnamies Dong) ಇಲ್ಲಿ ಸಿಗಲಿದೆ.
ವಿಯೆಟ್ನಾಂನಲ್ಲಿ ಭೇಟಿ ನೀಡಬಹುದಾದ ಸ್ಥಳಗಳು
ಹನೋಯಿ, ಹೋ ಚಿ ಮಿನ್ಹ್, ಸಪಾ, ಹಾ ಲಾಂಗ್ ಬೇ, ನಹಾ ತರಂಗ್, ಮೆಕಾಂಗ್ ಡೆಲ್ಟಾ, ಯುದ್ಧ ಸ್ಮಾರಕಗಳು ಇಲ್ಲಿ ಭೇಟಿ ನೀಡಬಹುದಾದ ಸ್ಥಳಗಳಾಗಿವೆ. ವಿಯೆಟ್ನಾಂನಲ್ಲಿ ಹ್ಯಾಲೋಂಗ್ ಕೊಲ್ಲಿ ಎಂದು ಕರೆಯಲ್ಪಡುವ ಸುಂದರ ಪ್ರವಾಸಿ ಸ್ಥಳವಿದೆ. ಇದು ನಿಜವಾಗಿಯೂ ಪ್ರವಾಸಿಗರಿಗೆ ಜನಪ್ರಿಯ ಸ್ಥಳವಾಗಿದೆ ಮತ್ತು 'ಬೇ ಆಫ್ ಡಿಸ್ಕವರಿ ಡ್ರ್ಯಾಗನ್‌ಗಳು' ಎಂಬ ವಿಶೇಷ ಹೆಸರನ್ನು ಸಹ ಹೊಂದಿದೆ.
ವಿಯೆಟ್ನಾಂನ ಮತ್ತೊಂದು ಸುಂದರ ಸ್ಥಳವೆಂದರೆ ರಾಜಧಾನಿ ಹನೋಯ್. ಇದು ಬಹಳ ಹಳೆಯ ಇತಿಹಾಸವನ್ನು ಹೊಂದಿದೆ ಮತ್ತು ಜನರು ನಿಜವಾಗಿಯೂ ಇಷ್ಟಪಡುವ ಸ್ಥಳ. ವಿಯೆಟ್ನಾಂನ ಉತ್ತರ ಭಾಗದಲ್ಲಿ, ಹುವಾ ಗಿಯಾಂಗ್ ಎಂಬ ಪಟ್ಟಣವಿದೆ, ಅಲ್ಲಿಗೆ ಹೆಚ್ಚಾಗಿ ಪ್ರವಾಸಿಗರು ಹೋಗೋದಕ್ಕೆ ಇಷ್ಟಪಡ್ತಾರೆ.
ವಿಯೆಟ್ನಾಂ ತಲುಪುವುದು ಹೇಗೆ?
ವಿಯೆಟ್ನಾಂಗೆ ಅನೇಕ ನೇರ ವಿಮಾನಗಳು ಲಭ್ಯವಿದೆ. ದೆಹಲಿಯಿಂದ ವಿಯೆಟ್ನಾಂಗೆ ಕನಿಷ್ಠ ಶುಲ್ಕವು ಪ್ರಸ್ತುತ 8,466 ರೂ. ದೆಹಲಿಯಿಂದ ವಿಯೆಟ್ನಾಂ ತಲುಪಲು 11 ಗಂಟೆ 20 ನಿಮಿಷಗಳು ಬೇಕಾಗುತ್ತದೆ. ಇದು ನಿಮ್ಮನ್ನು ಹೋ ಚಿ ಮಿನ್ಹ್ ನಗರದಲ್ಲಿ ಇಳಿಸುತ್ತದೆ. ಇಲ್ಲಿಂದ ನೀವು ಹತ್ತಿರದ ಹೋಟೆಲ್ ಅನ್ನು ಬುಕ್ ಮಾಡಬಹುದು. ಇಲ್ಲಿ ಜೀವನ ವೆಚ್ಚವು ದಿನಕ್ಕೆ ಕನಿಷ್ಠ 1000 ಆಗಿದೆ. ಇಲ್ಲಿ ನೀವು ಪ್ರವಾಸಿ ಹಾಸ್ಟೆಲಿನಲ್ಲಿ ಉಳಿಯಬಹುದು. ದಿನಕ್ಕೆ ಮೂರು ಬಾರಿ ತಿನ್ನುವ ಸಂಪೂರ್ಣ ವೆಚ್ಚ ಎಲ್ಲಾ ಸೇರಿ ಸುಮಾರು 800 ರೂಪಾಯಿಗಳಾಗಬಹುದು.