ಮಾಲ್ಡೀವ್ಸ್, ಸ್ವಿಡ್ಜರ್‌ಲ್ಯಾಂಡ್ ಬಿಡಿ… ಭಾರತದ ಈ ತಾಣಗಳು ನಿಮಗೆ ಫಾರಿನ್ ಟ್ರಿಪ್ ಅನುಭವ ನೀಡೋದು ಗ್ಯಾರಂಟಿ

First Published | Jul 27, 2024, 2:04 PM IST

ಹೆಚ್ಚಿನ ಜನರು ಮಾಲ್ಡೀವ್ಸ್, ಸ್ವಿಡ್ಜರ್ ಲ್ಯಾಂಡ್ ಮೊದಲಾದ ವಿದೇಶ ತಾಣಗಳಿಗೆ ಟ್ರಾವೆಲ್ ಮಾಡೋದಕ್ಕೆ ಇಷ್ಟಪಡ್ತಾರೆ. ಆದ್ರೆ ಅದಕ್ಕಿಂತಲೂ ಸುಂದರವಾದ ತಾಣಗಳು ನಮ್ಮ ದೇಶದಲ್ಲೇ ಇವೆ. 
 

ಟ್ರಿಪ್ ಹೆಸರಲ್ಲಿ, ವಿದೇಶಗಳನ್ನೇ ಸುತ್ತಿ ಬರೋ ಭಾರತೀಯರಿಗೆ ನಮ್ಮ ದೇಶದಲ್ಲಿ ಅಡಗಿರೋ ಸುಂದರ ತಾಣಗಳ ಬಗ್ಗೆ ಗೊತ್ತಿಲ್ಲ ಅನ್ಸತ್ತೆ. ಯಾಕಂದ್ರೆ ಭಾರತ ಈ ಸುಂದರ ತಾಣಗಳು ಯಾವ ವಿದೇಶಿ ತಾಣಗಳಿಗೂ ಕಮ್ಮಿ ಇಲ್ಲ. ಇವೇ ನೋಡಿ ಇಂಟರ್ ನ್ಯಾಷನಲ್ ಫೀಲ್ ಕೊಡುವ ಭಾರತೀಯ ತಾಣಗಳು. 
 

ಮನಾಲಿಯ ಮಂಜಿನಲ್ಲಿ ಎಂಜಾಯ್ ಮಾಡಿದ್ರೆ ಅಲಸ್ಕಾ ಮರೆತು ಬಿಡುತ್ತೀರಿ
ಅಲಸ್ಕಾದಲ್ಲಿ (Alaska) ಹಿಮ ಪರ್ವತದಲ್ಲಿ ಮೋಜು ಮಸ್ತಿ ಮಾಡೊ ಸುಖಾನೆ ಬೇರೆ ನಿಜ. ಆದರೆ ಅದಕ್ಕಿಂತಲೂ ಡಬಲ್ ಖುಷಿ ನೀಡುತ್ತೆ, ಮನಾಲಿಯ (Manali) ಹಿಮ ಪರ್ವತಗಳು, ಅಲ್ಲಿನ ಪ್ರಕೃತಿ ಸೌಂದರ್ಯ ಇತ್ಯಾದಿ.

Latest Videos


ಗೋವಾ ಬೀಚ್ ನಲ್ಲೆ ಸಖತ್ ಎಂಜಾಯ್ ಮಾಡೋವಾಗ ಪೋರ್ಚುಗಲ್ ಯಾಕೆ
ಪೋರ್ಚುಗಲ್ ಗೆ (Portugal) ತೆರಳಿ ನೈಟ್ ಲೈಫ್, ಬೀಜ್ ಎಂಜಾಯ್ ಮಾಡೊ ಬದಲು ಗೋವಾಗೆ ಹೋದ್ರೆ ಅಲ್ಲಿನ ಹಳೆಯ ಚರ್ಚುಗಳು, ಹಳೆ ಸಿಟಿ, ಬೀಚ್, ನೈಟ್ ಲೈಫ್ ಎಲ್ಲವನ್ನೂ ಎಂಜಾಯ್ ಮಾಡಬಹುದು. 
 

ರಾಜಸ್ಥಾನದ ಬ್ಲೂ ವಿಲೇಜ್ ಮೊರಾಕೋ ಫೀಲ್ ನೀಡುತ್ತೆ
ಬ್ಲೂ ಸಿಟಿ ನೋಡೋದಕ್ಕೆ ಎಲ್ಲರೂ ಮೊರಾಕೋ (Morocco) ಹೋಗ್ತಾರೆ, ಆದ್ರೆ ರಾಜಸ್ಥಾನದಲ್ಲೇ (Rajasthan) ನೀವು ಬ್ಲೂ ವಿಲೇಜ್ ನೋಡಬಹುದು. ಸೂರ್ಯಸ್ತಮಾನದಲ್ಲಿ ಇಲ್ಲಿನ ಸುಂದರ ದೃಶ್ಯಗಳು ಕಣ್ಮನ ಸೆಳೆಯುತ್ತೆ. 

ಮಾಲ್ಡೀವ್ಸ್ ಅನುಭವವನ್ನು ಗೋಕರ್ಣದಲ್ಲೇ ಪಡೆಯಬಹುದು
ಮಾಲ್ಡೀವ್ಸ್ (Maldives) ಬಗ್ಗೆ ಹೇಳೊದಕ್ಕೆ ಎರಡು ಮಾತಿಲ್ಲ. ಇದು ನಿಜಕ್ಕೂ ಸುಂದರವಾದ ತಾಣ. ಆದ್ರೆ ಆ ಅನುಭವವನ್ನು ನೀವು ಕರಾವಳಿ ತೀರವಾದ ಗೋಕರ್ಣದಲ್ಲಿ ಪಡೆಯಬಹುದು. 
 

ಸ್ಕಾಟ್’ಲ್ಯಾಂಡ್ ಬದಲು ಮುನ್ನಾರ್ ನೋಡಿ 
ಹಚ್ಚ ಹಸಿರಾಗಿರುವ ಯಾವಾಗಲೂ ಕೂಲ್ ಆಗಿರುವಂತಹ ಸ್ಕಾಟ್ ಲ್ಯಾಂಡ್ (Scotland) ನೋಡೋಕೆ ಎರಡು ಕಣ್ಣು ಸಾಲೋದಿಲ್ಲ. ಆದರೆ ನೀವು ಭಾರತದಲ್ಲಿ ಆ ಅನುಭವ ಪಡೆಯಲು ಬಯಸಿದ್ರೆ ಕೇರಳದ ಮುನ್ನಾರ್ ಗೆ ಹೋಗಿ ಬನ್ನಿ. 

ಸ್ವಿಡ್ಜರ್ ಲ್ಯಾಂಡ್’ನಷ್ಟೇ ಅದ್ಭುತ ಸೌಂದರ್ಯ ಹೊಂದಿದೆ ಖಜ್ಜಿಯಾರ್
ಸುಂದರವಾದ ಗ್ರಾಮಗಳು, ಬೆಟ್ಟ ಗುಡ್ಡಗಳು ಮತ್ತು ಸರೋವರಗಳಿಂದ ಆವೃತವಾದ ಪ್ರಕೃತಿಯ ಸೌಂದರ್ಯ ಮೇಳೈಸಿರುವ ತಾಣ ಸ್ವಿಡ್ಜರ್ ಲ್ಯಾಂಡ್ (Switzerland) ಹೌದು. ಆದ್ರೆ ಹಿಮಾಚಲಪ್ರದೇಶದ ಖಜ್ಜಿಯಾರ್ (Khajjiar) ತಾಣವು ಸ್ವಿಡ್ಜರ್ ಲ್ಯಾಂಡ್ ಗಿಂತ ಕಡಿಮೆ ಏನಿಲ್ಲ. 

ವೆನಿಸ್ ಬೇಡ… ಉದಯಪುರಕ್ಕೆ ಹೋಗಿ ಬನ್ನಿ
ವೆನಿಸ್ ಇಟಲಿಯ ಸುಂದರವಾದ ದ್ವೀಪ ರಾಷ್ಟ್ರ.ನೀರಾರು ದ್ವೀಪಗಳ ಮೇಲೆ ಈ ದೇಶ ನಿರ್ಮಾಣವಾಗಿದೆ. ಹಾಗಾಗಿ ಇದನ್ನ ನೋಡೋದಕ್ಕೆ ದೇಶದಿಂದ ಹೆಚ್ಚಿನ ಜನ ಹೋಗ್ತಾರೆ. ಆದ್ರೆ ಉದಯಪುರದ ಸೌಂದರ್ಯ ವೆನಿಸ್ ಗಿಂತಲೂ ಅದ್ಭುತವಾಗಿದೆ. ಲೇಕ್ ಗಳಿಂದಲೇ ಸುತ್ತುವರೆದಿರುವ ಈ ಊರನ್ನ ನೋಡೋದೆ ಚೆಂದ. 

(ಫೋಟೋ ಕೃಪೆ : The Hosteller Instagram Page)

click me!