ಬುಲೆಟ್ ರೈಲು ಯೋಜನೆ 360 ಕಿಮೀ ಪೂರ್ಣ; ಸಮುದ್ರದೊಳಗೆ 2 ಕಿಮೀ ಉದ್ದದ ಸುರಂಗ

Published : Mar 02, 2025, 08:42 AM ISTUpdated : Mar 02, 2025, 08:56 AM IST

ಅಹಮದಾಬಾದ್-ಮುಂಬೈ ಬುಲೆಟ್ ರೈಲು ಯೋಜನೆಯ 360 ಕಿ.ಮೀ. ಪೂರ್ಣಗೊಂಡಿದೆ. ಮಹಾರಾಷ್ಟ್ರ ವಿಭಾಗದಲ್ಲಿ ಗಮನಾರ್ಹ ಪ್ರಗತಿ ಸಾಧಿಸಲಾಗುತ್ತಿದೆ ಮತ್ತು ಸಮುದ್ರದೊಳಗಿನ ಸುರಂಗದ ಸುಮಾರು 2 ಕಿ.ಮೀ. ಮಾರ್ಗ ಪೂರ್ಣಗೊಂಡಿದೆ.

PREV
16
ಬುಲೆಟ್ ರೈಲು ಯೋಜನೆ 360 ಕಿಮೀ ಪೂರ್ಣ; ಸಮುದ್ರದೊಳಗೆ 2 ಕಿಮೀ ಉದ್ದದ ಸುರಂಗ

ಅಹಮದಾಬಾದ್-ಮುಂಬೈ ಬುಲೆಟ್ ರೈಲು ಯೋಜನೆಯ 360 ಕಿ.ಮೀ. ಪೂರ್ಣಗೊಂಡಿದ್ದು, ಮಹಾರಾಷ್ಟ್ರ ವಿಭಾಗದಲ್ಲಿ ಗಮನಾರ್ಹ ಪ್ರಗತಿ ಸಾಧಿಸಲಾಗುತ್ತಿದೆ. ಸಮುದ್ರದೊಳಗಿನ ಸುರಂಗದ ಸುಮಾರು 2 ಕಿ.ಮೀ. ಮಾರ್ಗ ಪೂರ್ಣಗೊಂಡಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಹೇಳಿದ್ದಾರೆ. ವೈಷ್ಣವ್‌ ಶನಿವಾರ ಗುಜರಾತ್‌ನ ಅಹಮದಾಬಾದ್ ರೈಲು ನಿಲ್ದಾಣದ ಪುನರಾಭಿವೃದ್ಧಿ ಯೋಜನೆಯ ಕಾಮಗಾರಿಯನ್ನು ಪರಿಶೀಲಿಸಿ ನಂತರ ಮಾತನಾಡಿದರು.

26

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಅವಧಿಯಲ್ಲಿ ಅನುಮತಿ ನಿರಾಕರಿಸಿದ್ದರಿಂದ ಯೋಜನೆಗೆ ಎರಡೂವರೆ ವರ್ಷಗಳ ವಿಳಂಬವಾಯಿತು. ಅದನ್ನು ಈಗ ಸರಿದೂಗಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು. ಈ ಬುಲೆಟ್‌ ಮಾರ್ಗವು ಪ್ರಮುಖ ವಾಣಿಜ್ಯ ನಗರಗಳಾದ ಮುಂಬೈ, ಸೂರತ್‌, ವಡೋದರಾ, ಅಹಮದಾಬಾದ್‌ ನಡುವೆ ಸಂಪರ್ಕ ಕಲ್ಪಿಸಲಿದೆ.

36

ಒಟ್ಟು 508 ಕಿ.ಮೀ. ಬುಲೆಟ್‌ ರೈಲು ಮಾರ್ಗ ಇದಾಗಲಿದೆ. ಗಂಟೆಗೆ ಸರಾಸರಿ 170 ಕಿ.ಮೀ. ವೇಗದಲ್ಲಿ ರೈಲು ಸಂಚರಿಸಲಿದ್ದು, 3 ತಾಸಿನ ಯಾನ ಇದಾಗಲಿದೆ. 1.08 ಲಕ್ಷ ಕೋಟಿ ರು. ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ.

46

ಬುಲೆಟ್‌ ರೈಲು ಮಾರ್ಗವಾಗಿರುವ ಮುಂಬೈ-ಅಹಮದಾಬಾದ್‌ ಕಾರಿಡಾರ್‌  ವಿದ್ಯುತೀಕರಣಕ್ಕಾಗಿ ಗುಜರಾತ್‌ನ ಸೂರತ್ ಮತ್ತು ಬಿಲಿಮೋರಾ ರೈಲು ನಿಲ್ದಾಣಗಳ ನಡುವೆ 14 ಮೀ. ಎತ್ತರದಲ್ಲಿ 2 ಉಕ್ಕಿನ ಸ್ತಂಭಗಳನ್ನು ನಿರ್ಮಿಸಲಾಗಿದೆ.

56

ಈ ಕಾರಿಡಾರ್‌ನ ಉದ್ದಕ್ಕೂ 20,000ಕ್ಕೂ ಅಧಿಕ 9.5 ಮೀ.ನಿಂದ 14.5 ಮೀ. ವರೆಗಿನ ಕಂಬಗಳನ್ನು ನಿಲ್ಲಿಸಲಾಗುವುದು. ಇವುಗಳು ವೈಯರ್‌, ಅರ್ಥಿಂಗ್‌, ಫಿಟ್ಟಿಂಗ್‌ ಹಾಗೂ ಅನ್ಯ ಸಲಕರಣೆಗಳಿಗೆ ಆಧಾರವಾಗಿರಲಿವೆ. ಮೇಕ್‌ ಇನ್‌ ಇಂಡಿಯಾ ನೀತಿಯಡಿ ಈ ಸ್ತಂಭಗಳನ್ನು ಜಪಾನಿನ ಮಾದರಿಯಲ್ಲಿ ಭಾರತದಲ್ಲಿಯೇ ತಯಾರಿಸಲಾಗಿದೆ. 

66

ಈಗಾಗಲೇ ಗುಜರಾತ್‌ನ ಖೇಡಾ ಜಿಲ್ಲೆಯ ನಾದಿಯಾದ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ-48ರ ಮೇಲೆ 210 ಮೀ.ನ ಸೇತುವೆ ನಿರ್ಮಾಣ ಪೂರ್ಣಗೊಂಡಿದೆ. ಇದನ್ನು ಆನಂದ್‌ ಹಾಗೂ ಅಹಮದಾಬಾದ್‌ ಬುಲೆಟ್‌ ರೈಲು ನಿಲ್ದಾಣಗಳ ನಡುವೆ ನಿರ್ಮಿಸಲಾಗಿದೆ. 253 ಕಿ.ಮೀ. ಕಮಾನುಗಳು, 13 ನದಿಗಳ ಮೇಲೆ ಸೇತುವೆ ಹಾಗೂ 5 ಸ್ಟೀಲ್‌ ಸೇತುವೆ, 112 ಕಿ,ಮೀ. ಉದ್ದ ಶಬ್ದ ತಡೆಯುವ ಗೋಡೆಗಳ ನಿರ್ಮಾಣ ಪೂರ್ಣಗೊಂಡಿದೆ. 21 ಕಿ.ಮೀ. ಸುರಂಗ ನಿರ್ಮಾಣವಾಗುತ್ತಿದೆ. ಮಹಾರಾಷ್ಟ್ರದ ಪಾಲ್ಘರ್‌ ಜಿಲ್ಲೆಯಲ್ಲಿ 7 ಪರ್ವತಗಳನ್ನು ಹಾದು ಹೋಗುವ ಸುರಂಗಗಳನ್ನೂ ನಿರ್ಮಿಸಲಾಗುತ್ತಿದೆ. 

Read more Photos on
click me!

Recommended Stories