ದಾಂಡೇಲಿ (Dandeli) : ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಕಾಳಿ ನದಿ ತೀರದಲ್ಲಿರುವ ಸುಂದರ ತಾಣ ದಾಂಡೇಲಿ. ಈ ತಾಣವು ವಾಟರ್ ಸ್ಪೋರ್ಟ್ಸ್ (Water Sports) ಗಳಿಗೆ, ಅಡ್ವೆಂಚರ್ ಗಳಿಗೆ ಸಿಕ್ಕಾಪಟ್ಟೆ ಫೇಮಸ್. ಪ್ರತಿವರ್ಷ ತುಂಬಾನೆ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ.
ಗೋಕರ್ಣ (Gokarna): ಗೋಕರ್ಣ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಕಡಲತೀರದ (Sea Shore) ಒಂದು ಊರು. ಭೂಕೈಲಾಸ; ಪರಶುರಾಮ ಭೂಮಿ ಎಂದು ಇದನ್ನು ಕರೆಯಲಾಗುತ್ತೆ. ಈ ಸ್ಥಳವು ಸಮುದ್ರ ತೀರಕ್ಕೆ ಹಾಗೂ ದೇಗುಲಗಳಿಂದ ತುಂಬಾನೆ ಜನಪ್ರಿಯತೆ ಪಡೆದಿದೆ.
ಮುರುಡೇಶ್ವರ (Murudeshwar) : ಮುರುಡೇಶ್ವರ ಎಂದ ಕೂಡಲೇ ಬೃಹತ್ ಶಿವನ ಮೂರ್ತಿ, ಎತ್ತರವಾದ ಗೋಪುರ ಮತ್ತು ಸಮುದ್ರದ ಅಲೆಗಳಿಗೆ ತಾಗಿ ನಿಂತಿರುವ ದೇವಾಲಯ ನೆನಪಾಗುತ್ತೆ. ಇದು ಧಾರ್ಮಿಕ ಕ್ಷೇತ್ರದ ಜೊತೆಗೆ ಪ್ರವಾಸಿ ತಾಣವೂ ಹೌದು. ಇದು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿದೆ.
ಉಡುಪಿ (Udupi) : ಈ ಕರಾವಳಿಯ ಜಿಲ್ಲೆ ದೇಗುಲಗಳಿಗೆ ಮತ್ತು ಸುಂದರವಾದ ಕರಾವಳಿ ತೀರಕ್ಕೆ ಹೆಸರುವಾಸಿಯಾಗಿದೆ. ಇಲ್ಲಿನ ಸುಂದರವಾದ ಬೀಚ್ ಗಳು, ಶ್ರೀಕೃಷ್ಣ ಮಠ ಸೇರಿ ಪ್ರಮುಖ ಇತಿಹಾಸ ಪ್ರಸಿದ್ಧ ದೇಗುಲಗಳನ್ನು ನೋಡುವುದೇ ಚೆಂದ.
ಜೋಗ್ ಫಾಲ್ಸ್ (Jog Falls) : ಜೋಗ್ ಫಾಲ್ಸ್ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿರುವ ಶರಾವತಿ ನದಿಯ ಮೇಲಿರುವ ಜಲಪಾತವಾಗಿದೆ. ಇಲ್ಲಿ ನಾಲ್ಕು ಕವಲುಗಳಾಗಿ ಹರಿಯುವ ರಾಜ, ರಾಣಿ, ರೋರರ್ , ರಾಕೆಟ್ ನೊಡುವುದೇ ಕಣ್ಣಿಗೆ ಹಬ್ಬ. ಮಳೆಗಾಲದಲ್ಲಿ ಇಲ್ಲಿಗೆ ಭೇಟಿ ನೀಡೋದು ಬೆಸ್ಟ್.
ಚಿಕ್ಕಮಗಳೂರು (Chikamagaluru): ಪ್ರಕೃತಿ ಪ್ರೇಮಿಗಳ ನೆಚ್ಚಿನ ತಾಣ ಚಿಕ್ಕಮಗಳೂರು. ಇದನ್ನು ಕಾಫಿ ನಾಡು ಎಂದು ಸಹ ಕರೆಯಲಾಗುತ್ತದೆ. ಇಲ್ಲಿನ ರಮಣೀಯ ಪ್ರಕೃತಿ, ಬಾಬ ಬುಡನ್ ಗಿರಿ, ಚಂದ್ರದ್ರೋಣ ಪರ್ವತ, ಮುಳ್ಳಯ್ಯನಗಿರಿ, ಮೊದಲಾದ ಪರ್ವತಗಳನ್ನು, ಧುಮ್ಮಿಕ್ಕಿ ಹರಿಯುವ ಜಲಧಾರೆಗಳನ್ನು, ಕಾಫಿ ಪ್ಲಾಂಟೇಶನ್ ನ ಸೌಂದರ್ಯವನ್ನು ಎಂಜಾಯ್ ಮಾಡಬಹುದು.
ಕೂರ್ಗ್ (Coorg) : ದಕ್ಷಿಣದ ಕಾಶ್ಮೀರ ಎಂದೇ ಪ್ರಸಿದ್ಧವಾಗಿರುವ ಕೂರ್ಗ್ ಹಲವಾರು ಪ್ರವಾಸಿ ತಾಣಗಳನ್ನು ಹೊಂದಿದೆ.. ಅಬ್ಬಿ ಫಾಲ್ಸ್, ಗೋಲ್ಡನ್ ಟೆಂಪಲ್, ನಿಸರ್ಗಧಾಮ, ಮಾಂದಲ್ ಪಟ್ಟಿ, ರಾಜಾ ಸೀಟ್ ಇಲ್ಲಿನ ಪ್ರಮುಖ ಆಕರ್ಷಣೆಯ ತಾಣವಾಗಿದೆ.
ಬಂಡೀಪುರ (Bandipura) : ಬಂಡೀಪುರ ರಾಷ್ಟ್ರೀಯ ಉದ್ಯಾನವನ ಕರ್ನಾಟಕದ ಚಾಮರಾಜನಗರ ಜಿಲ್ಲೆಯಲ್ಲಿ ಇರುವ ಒಂದು ರಾಷ್ಟ್ರೀಯ ಉದ್ಯಾನವನ. ತಮಿಳುನಾಡಿನ ಮದುಮಲೈ ರಾಷ್ಟ್ರೀಯ ಉದ್ಯಾನವನ ಮತ್ತು ಕೇರಳದ ವಾಯ್ನಾಡ್ ವನ್ಯಜೀವಿ ಅಭಯಾರಣ್ಯ ಇದಕ್ಕೆ ಹೊಂದಿಕೊಂಡಿದೆ. ಹುಲಿ, ಆನೆ, ಚಿರತೆ ಇತ್ಯಾದಿ ಪ್ರಾಣಿಗಳು ಇಲ್ಲಿ ವಾಸಿಸುತ್ತವೆ.
ಮೈಸೂರು (Mysore): ಅರಮನೆ ನಗರಿ ಮೈಸೂರಿನಲ್ಲಿ ಕಾಲಿಟ್ಟಲ್ಲೆಲ್ಲಾ ನೀವು ಪ್ರವಾಸಿ ತಾಣಗಳನ್ನು ನೋಡಬಹುದು. ಮೈಸೂರು ಅರಮನೆ, ಚಾಮುಂಡಿ ಬೆಟ್ಟ, ಲಲಿತ ಮಹಲ್ ಪ್ಯಾಲೆಸ್, ಹೀಗೆ ಹಲವಾರು ಪ್ರವಾಸಿ ತಾಣಗಳು ಇಲ್ಲಿವೆ.
ಹಂಪಿ (Hampi): ವಿಜಯನಗರದ ಅಳಿದು ಹೋದ ಸಾಮ್ರಾಜ್ಯದ ಶ್ರೀಮಂತಿಕೆಯನ್ನು ಸಾರುವ ಹಂಪಿಯ ವೈಭೋಗ ನೋಡುವುದೇ ಕಣ್ಣಿಗೆ ಹಬ್ಬ. ಇಲ್ಲಿನ ಒಂದೊಂದು ಕಥೆಗಳನ್ನು ಕೇಳುತ್ತಿದ್ದಂತೆ ಕೃಷ್ಣದೇವರಾಯನ ಆಡಳಿತದ ವೈಭೋಗ ಹೇಗಿದ್ದಿರಬಹುದು ಅನ್ನೋದು ಕಾಣಿಸುತ್ತೆ.