ಪ್ಲಾಸ್ಟಿಕ್ ಮ್ಯಾಗ್ನೆಟ್ (Plastic Magnet): ಆರ್ಗನಿಕ್ ಕೆಮಿಸ್ಟ್ ಮತ್ತು ಪಾಲಿಮರ್ ವಿಜ್ಞಾನಿಯಾದ ನವೀದ್ ಝೈದಿ ಪ್ರಪಂಚದ ಮೊದಲ ಪ್ಲಾಸ್ಟಿಕ್ ಮ್ಯಾಗ್ನೆಟನ್ನು ಸೃಷ್ಟಿ ಮಾಡಿದರು. ಇದು ರೂಮ್ ಟೆಂಪ್ರೇಚರ್ ನಲ್ಲಿ ಕೆಲಸ ಮಾಡುತ್ತೆ.
ಒಮ್ಮಾಯ ರಿಸರ್ವಿಯರ್ (Ommaya Reservior) : ಇದನ್ನು 1963 ರಲ್ಲಿ ಕಂಡು ಹಿಡಿಯಲಾಯಿತು. ಇದು ಸಿಲಿಕಾನ್ ಬಳಕೆ ಮಾಡಿ ಮಾಡಿದಂತಹ ಒಂದು ರಿಸರ್ವಿಯರ್ ಆಗಿದೆ. ಇದು ಬಯೋಲಾಜಿಕಲಿ ಇನ್ ಆಕ್ಟೀವ್ ಆಗಿದ್ದು, ಸೆಲ್ಫ್ ಹೀಲಿಂಗ್ ಮಾಡುತ್ತೆ.
ಸಿಮ್ಯುಲೇಶನ್ ಸಾಫ್ಟ್ ವೇರ್ (Simulation Software) : ಕಂಪ್ಯೂಟರ್ ವಿಜ್ಞಾನಿ ಜೀಶಾನ್-ಉಲ್-ಹಸನ್ ಉಸ್ಮಾನಿ ಸ್ಫೋಟ ವಿಧಿವಿಜ್ಞಾನದ ಆಧಾರದ ಮೇಲೆ ಸಿಮ್ಯುಲೇಶನ್ ಸಾಫ್ಟ್ವೇರ್ ಅಭಿವೃದ್ಧಿಪಡಿಸಿದ್ದಾರೆ. ನಿರೀಕ್ಷಿತ ಆತ್ಮಹತ್ಯಾ ಬಾಂಬರ್ ಬಳಿ ಜನರ ಗುಂಪು ನಿಲ್ಲುವ ವಿಧಾನವನ್ನು ಬದಲಾಯಿಸುವ ಮೂಲಕ ಸಾವುಗಳನ್ನು (ಸರಾಸರಿ) 12% ಮತ್ತು ಗಾಯಗಳನ್ನು 7% ರಷ್ಟು ಕಡಿಮೆ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.
ಸಾಗರ್ ವೀಣಾ (Sagar Veena): ಲಾಹೋರ್ ನ ಸಂಜನ್ನಗರ ಇನ್ಸ್ಟಿಟ್ಯೂಟ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ರಝಾ ಕಾಜಿಮ್ ಅವರು ಕಳೆದ 40 ವರ್ಷಗಳಲ್ಲಿ ಸಾಗರ್ ವೀಣೆಯನ್ನು ಸಂಪೂರ್ಣವಾಗಿ ಪಾಕಿಸ್ತಾನದಲ್ಲಿ ಅಭಿವೃದ್ಧಿಪಡಿಸಿದ್ದಾರೆ
ಮಾನವ ಅಭಿವೃದ್ಧಿ ಸೂಚ್ಯಂಕ (Human Development Index): ಪಾಕಿಸ್ತಾನದ ಅರ್ಥಶಾಸ್ತ್ರಜ್ಞ ಮೆಹಬೂಬ್ ಉಲ್ ಹಕ್ 1990 ರಲ್ಲಿ ಅಭಿವೃದ್ಧಿ ಅರ್ಥಶಾಸ್ತ್ರದ ಗಮನವನ್ನು ರಾಷ್ಟ್ರೀಯ ಆದಾಯ ಲೆಕ್ಕಪರಿಶೋಧನೆಯಿಂದ ಜನ ಕೇಂದ್ರಿತ ನೀತಿಗಳತ್ತ ತಿರುಗಿಸುವ ಸಲುವಾಗಿ ಮಾನವ ಅಭಿವೃದ್ಧಿ ಸೂಚ್ಯಂಕವನ್ನು ರೂಪಿಸಿದರು.
ಸ್ಫೋಟಕವಲ್ಲದ ವಸ್ತುಗಳಿಂದ ರಸಗೊಬ್ಬರಗಳು: ಪಾಕಿಸ್ತಾನದ ರಸಗೊಬ್ಬರ ಕಂಪನಿಯೊಂದು ಬಾಂಬ್ (bomb making)ತಯಾರಿಸುವ ವಸ್ತುಗಳಾಗಿ ಪರಿವರ್ತಿಸಲಾಗದ ರಸಗೊಬ್ಬರಗಳನ್ನು (fertilizer) ತಯಾರಿಸಲು ಹೊಸ ಸೂತ್ರವನ್ನು ಕಂಡುಹಿಡಿದಿದೆ.
ಬ್ರೈನ್ -ಸಿಲಿಕಾನ್ ಚಿಪ್ ಕನೆಕ್ಟ್ (brain silicon chip connection): ಡಾ.ನವೀದ್ ಸೈಯದ್ ಮೆದುಳಿನ ಕೋಶಗಳನ್ನು ಸಿಲಿಕಾನ್ ಚಿಪ್ ಗೆ ಯಶಸ್ವಿಯಾಗಿ ಸಂಪರ್ಕಿಸಿದರು ಮತ್ತು ಇದು ಮಾನವ ಮಿದುಳಿನೊಂದಿಗೆ ಕಂಪ್ಯೂಟರ್ ಏಕೀಕರಣವನ್ನು ಮುನ್ನಡೆಸಲು, ಜೀವಾಧಾರ ಚಿಹ್ನೆಗಳನ್ನು ಮೇಲ್ವಿಚಾರಣೆ ಮಾಡಲು, ಕೃತಕ ಕಾಲುಗಳನ್ನು ನಿಯಂತ್ರಿಸಲು ಮತ್ತು ಸ್ಮರಣೆ ನಷ್ಟ ಅಥವಾ ದೃಷ್ಟಿ ದೌರ್ಬಲ್ಯವನ್ನು ಪರಿಹರಿಸುವಂತಹ ಅಪ್ಲಿಕೇಶನ್ ಗಳನ್ನು ಸುಗಮಗೊಳಿಸಲು ಅಪಾರ ಸಾಮರ್ಥ್ಯವನ್ನು ಹೊಂದಿದೆ.
ಪ್ಲೂರೋಪೆರಿಟೋನಿಯಲ್ ಶಂಟ್, ಎಂಡೋಟ್ರಾಚಿಯಲ್ ಟ್ಯೂಬ್: ಪಾಕಿಸ್ತಾನದ ವೈದ್ಯರೊಬ್ಬರು ಎಚ್ಚರವಾಗಿರುವ ರೋಗಿಗಳಲ್ಲಿ ಫೈಬರ್-ಆಪ್ಟಿಕ್ ಬ್ರಾಂಕೋಸ್ಕೋಪಿ ಸಮಯದಲ್ಲಿ ಆಮ್ಲಜನಕವನ್ನು ಪೂರೈಸಲು ಪ್ಲೋಯುರೋಪೆರಿಟೋನಿಯಲ್ ಶಂಟ್ ಮತ್ತು ವಿಶೇಷ ಎಂಡೋಟ್ರಾಚಿಯಲ್ ಟ್ಯೂಬ್ ಕಂಡುಹಿಡಿದಿದ್ದಾರೆ.