ಭಾರತದ ಈ ಸ್ಥಳಗಳ Christmas celebration ಪ್ರಪಂಚದಾದ್ಯಂತ ಫೇಮಸ್

First Published Dec 16, 2022, 3:23 PM IST

ಕ್ರಿಸ್ ಮಸ್ ನಿಂದ ಹೊಸ ವರ್ಷದವರೆಗಿನ ಅವಧಿಯನ್ನು ಸೆಲೆಬ್ರೇಷನ್ ವೀಕ್ ಎಂದು ಕರೆಯಲಾಗುತ್ತದೆ. ಕ್ರಿಸ್ ಮಸ್ ಭಾರತದಲ್ಲಿಯೂ ಸಹ ಆಚರಿಸಲಾಗುತ್ತೆ. ಭಾರತದಲ್ಲಿ ಕ್ರಿಸ್ಮಸ್ ನ್ನು ಸಂಭ್ರಮದಿಂದ ಆಚರಿಸುವಂತಹ ಹಲವಾರು ತಾಣಗಳಿವೆ, ಅವುಗಳ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಯೋಣ.
 

ಡಿಸೆಂಬರ್ ಈಗಾಗಲೇ ನಮ್ಮೆಲ್ಲರಿಗೂ ಸಂತೋಷ, ಉಲ್ಲಾಸ ಮತ್ತು ವಿನೋದ ತರಲು ಪ್ರಾರಂಭಿಸಿದೆ. ಹೊಸ ಆರಂಭಗಳು ಮತ್ತು ಹೊಸ ವರ್ಷವನ್ನು ಎಣಿಸುತ್ತಾ, ಕ್ರಿಸ್ ಮಸ್ ಅನ್ನು (Christmas) ಎಂಜಾಯ್ ಮಾಡಲು ನೀವು ಸಹ ಕಾದಿದ್ದೀರಿ ಅಲ್ವಾ? ಭಾರತದ ಅನೇಕ ರಾಜ್ಯಗಳಲ್ಲಿ ಅನೇಕ ತಾಣಗಳಲ್ಲಿ ಕ್ರಿಸ್ಮಸ್ ಅನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತೆ. ನೀವು ಸಹ ಈ ಹಬ್ಬವನ್ನು ಎಂಜಾಯ್ ಮಾಡಲು ಬಯಸಿದರೆ ಭಾರತದ ಈ ತಾಣಗಳಿಗೆ ಟ್ರಿಪ್ ಪ್ಲ್ಯಾನ್ ಮಾಡಬಹುದು. ಖಂಡಿತವಾಗಿಯೂ ನೀವಿದನ್ನು ಇಷ್ಟಪಡುತ್ತೀರಿ.

ಕ್ರಿಸ್ ಮಸ್ ದಿನದಂದು ಕುಕೀಗಳು ಮತ್ತು ಕೇಕ್‌ಗಳನ್ನು (cookies and cakes) ತಯಾರಿಸುವುದು, ಕ್ರಿಸ್ ಮಸ್ ಮರವನ್ನು ಅಲಂಕರಿಸುವುದು ಈ ಹಬ್ಬವನ್ನು ಆಚರಿಸಲು ಉತ್ತಮ ಮಾರ್ಗ. ಅಂದಹಾಗೆ, ಭಾರತದ ಅನೇಕ ಭಾಗಗಳಲ್ಲಿ, ಈ ಹಬ್ಬವು ವಿಭಿನ್ನವಾದ ಆಚರಣೆಯನ್ನು ಹೊಂದಿದೆ. ಈ ಸ್ಥಳಗಳ ಬಗ್ಗೆ ಇಲ್ಲಿದೆ ಒಂದಷ್ಟು ಮಾಹಿತಿ… 

ಗೋವಾ

ಕ್ರಿಸ್ ಮಸ್ ಮತ್ತು ಹೊಸ ವರ್ಷವನ್ನು (new year) ಕೂಲ್ ಆಗಿ ಆಚರಿಸಲು ಹೆಸರುವಾಸಿಯಾದ ಭಾರತದ ರಾಜ್ಯ ಎಂದರೆ ಗೋವಾ. ಗೋವಾದ ರಾತ್ರಿ ಸಂಸ್ಕೃತಿಯನ್ನು (Night Culture) ಪ್ರವಾಸಿಗರು ತುಂಬಾ ಇಷ್ಟಪಡುತ್ತಾರೆ. ಏಕೆಂದರೆ ಹಬ್ಬದ ಋತುವಿನಲ್ಲಿ, ಇಲ್ಲಿನ ಬೀದಿಗಳನ್ನು ಸಹ ದೀಪಗಳಿಂದ ಅಲಂಕರಿಸಲಾಗುತ್ತದೆ. ಇದಲ್ಲದೆ, ಗೋವಾವು ಕ್ಲಬ್ ಗಳ ಮೋಜಿಗಾಗಿ ವಿಶ್ವದಾದ್ಯಂತ ಹೆಸರುವಾಸಿಯಾಗಿದೆ.

ಶಿಮ್ಲಾ

ಭಾರತದ ಸಾರ್ವಕಾಲಿಕ ನೆಚ್ಚಿನ ಪ್ರವಾಸಿ ತಾಣ ಶಿಮ್ಲಾದ ಕ್ರಿಸ್ ಮಸ್ ಆಚರಣೆಯು ಖಂಡಿತವಾಗಿಯೂ ನಿಮ್ಮ ಹೃದಯವನ್ನು ಗೆಲ್ಲದೇ ಇರಲಾರದು. ಸ್ನೋ ಫಾಲ್ ನಡುವೆ ಕುಟುಂಬ ಅಥವಾ ಸ್ನೇಹಿತರೊಂದಿಗೆ ಇಲ್ಲಿ ನೀವು ಎಂಜಾಯ್ ಮಾಡಬಹುದು. ಕ್ರಿಸ್ ಮಸ್ ಸಮಯದಲ್ಲಿ ಈ ಊರು ಪೂರ್ತಿಯಾಗಿ ವಿದ್ಯುತ್ ಅಲಂಕಾರದಿಂದ ತುಂಬಿರುತ್ತೆ.

ಕೇರಳ

ದೇವರ ನಾಡು ಎಂದು ಕರೆಯಲ್ಪಡುವ ದೇಶದ ಈ ರಾಜ್ಯದಲ್ಲಿ ಕ್ರಿಶ್ಚಿಯನ್ ಸಮುದಾಯದ (christian community) ಹೆಚ್ಚಿನ ಸಂಖ್ಯೆಯ ಜನರು ಇದ್ದಾರೆ. ಅನೇಕ ಹಳೆಯ ಚರ್ಚುಗಳು ಸಹ ಇಲ್ಲಿವೆ. ಇಲ್ಲಿಯೂ ಸಹ, ಕ್ರಿಸ್ ಮಸ್ ಆಚರಣೆಯ ವಿನೋದವು ವಿಭಿನ್ನವಾಗಿದೆ, ಇದನ್ನು ಹೊರತುಪಡಿಸಿ, ಇಲ್ಲಿ ಅನೇಕ ಸುಂದರ ತಾಣಗಳಿವೆ, ಅಲ್ಲಿ ನೀವು ನಿಮ್ಮ ರಜೆಯನ್ನು ಎಂಜಾಯ್ ಮಾಡಬಹುದು..

ಪುದುಚೇರಿ

ಕ್ರಿಸ್ ಮಸ್ ಆಚರಣೆಯನ್ನು ಹೆಚ್ಚು ಇಂಟ್ರೆಸ್ಟಿಂಗ್ ಆಗಿಸಲು ನೀವು ಬಯಸಿದರೆ, ನೀವು ಪುದುಚೇರಿಗೆ ಹೋಗಬೇಕು. ಫ್ರೆಂಚ್ ವಾಸ್ತುಶಿಲ್ಪ, ಕೆಫೆಗಳು ಮತ್ತು ಕಡಲತೀರಗಳ ಕಾರಣದಿಂದಾಗಿ ಇದನ್ನು ಇಂದಿಗೂ ಫ್ರೆಂಚ್ ಕಾಲನಿ ಎಂದು ಕರೆಯಲಾಗುತ್ತದೆ. ಇಲ್ಲಿ ಅನೇಕ ಹಳೆಯ ಚರ್ಚುಗಳೂ ಇವೆ. ಇಲ್ಲಿ ನೀವು ಕ್ರಿಸ್ಮಸ್ ನ್ನು ನಿಜವಾಗಿಯೂ ಎಂಜಾಯ್ ಮಾಡಬಹುದು.

ದಮನ್ ಮತ್ತು ದಿಯು

ಪೋರ್ಚುಗೀಸರ ಸಂಪರ್ಕದಿಂದಾಗಿ, ಭಾರತದ ಈ ಕೇಂದ್ರಾಡಳಿತ ಪ್ರದೇಶವು ಕ್ರಿಸ್ ಮಸ್ ಅದ್ದೂರಿಯಾಗಿ ಆಚರಿಸುತ್ತೆ. ಗುಜರಾತಿನ ಕರಾವಳಿಯಿಂದ ದೂರದಲ್ಲಿರುವ ದಮನ್ ಮತ್ತು ದಿಯು ಕ್ರಿಸ್ ಮಸ್ ಸೀಸನ್ ನಲ್ಲಿ ಸಂಭ್ರಮದಿಂದ ಕೂಡಿರುತ್ತೆ. ಹಲವಾರು ಸಾಂಸ್ಕೃತಿಕ ಪ್ರದರ್ಶನಗಳನ್ನು ಆಯೋಜಿಸಲಾಗುತ್ತದೆ, ಕೊರಿಂಡಿನ್ಹೋದಂತಹ ಪೋರ್ಚುಗೀಸ್ ನೃತ್ಯ ಪ್ರಕಾರಗಳನ್ನು ಸಹ ಇಲ್ಲಿ ನೋಡಬಹುದು.

ಶಿಲ್ಲಾಂಗ್

ಭಾರತದ ಈಶಾನ್ಯ ಭಾಗದಲ್ಲಿ ಒಂದು ಸುಂದರವಾದ ಕ್ರಿಸ್ಮಸ್ ಆಚರಣೆಯು ನಿಮಗಾಗಿ ಕಾಯುತ್ತಿರುತ್ತೆ. ಚಳಿಗಾಲದಲ್ಲಿ ಶಿಲ್ಲಾಂಗ್ ಗೆ ಹೆಚ್ಚಿನ ಜನರು ಭೇಟಿ ನೀಡದ ಕಾರಣ, ನೀವು ಇಲ್ಲಿ ಶಾಂತಿಯುತ ಆದರೆ ಸಂತೋಷವಾಗಿ ಕ್ರಿಸ್ಮಸ್ ಸೆಲೆಬ್ರೇಟ್ (christmas celbrate) ಮಾಡಬಹುದು. ರಾಜ್ಯದಲ್ಲಿ ಕ್ರಿಶ್ಚಿಯನ್ನರ ಸಂಖ್ಯೆ ಹೆಚ್ಚಾಗಿರೋದರಿಂದ ಕ್ರಿಸ್ ಮಸ್ ಅನ್ನು ಹೆಚ್ಚಿನ ಉತ್ಸಾಹ ಮತ್ತು ಉಲ್ಲಾಸದಿಂದ ಆಚರಿಸಲಾಗುತ್ತದೆ. ಬೀದಿಗಳು, ಮನೆಗಳು ಮತ್ತು ಚರ್ಚ್ ಗಳನ್ನು ಮಿನುಗುವ ದೀಪಗಳಿಂದ ಅಲಂಕರಿಸಲಾಗುತ್ತೆ, ರುಚಿ ರುಚಿಯಾದ ತಿನಿಸುಗಳು ಸಹ ತಯಾರಾಗುತ್ತೆ. 

ಬೆಂಗಳೂರು :

ಕ್ರಿಸ್ ಮಸ್ ಅನ್ನು ಬೆಂಗಳೂರಿನಲ್ಲಿ ಉತ್ಸಾಹದಿಂದ ಆಚರಿಸಲಾಗುತ್ತದೆ. ಈ ಸಮಯದಲ್ಲಿ ಇಡಿ ನಗರವೇ ಅಲಂಕೃತಗೊಂಡಿರುತ್ತೆ. ಮಾಲ್ ಗಳು, ಮಾರುಕಟ್ಟೆಗಳು ಮತ್ತು ರೆಸ್ಟೋರೆಂಟ್ ಗಳಂತಹ ಸ್ಥಳಗಳಲ್ಲಿ ರಿಯಾಯಿತಿಗಳು ಮತ್ತು ವಿಶೇಷ ಮೆನುಗಳನ್ನು ನೀಡುತ್ತವೆ. ಕ್ರಿಶ್ಚಿಯನ್ನರು ಪ್ರಧಾನವಾಗಿರುವ ಪ್ರದೇಶಗಳು ಚೆನ್ನಾಗಿ ಅಲಂಕರಿಸಲ್ಪಟ್ಟಿರುತ್ತೆ. ಜೊತೆಗೆ ಹಲವಾರು ಕಾರ್ಯಕ್ರಮಗಳು ಸಹ ನಡೆಯುತ್ತವೆ. ಸೇಂಟ್ ಮೇರಿಸ್ ಬೆಸಿಲಿಕಾ, ಕ್ರಿಶ್ಚಿಯನ್ ಫೆಲೋಶಿಪ್ ಚರ್ಚ್ ಮತ್ತು ಸಿಟಿ ಹಾರ್ವೆಸ್ಟ್ ಎಜಿ ಚರ್ಚ್ ನಂತಹ ಚರ್ಚುಗಳಲ್ಲಿ ಮಧ್ಯರಾತ್ರಿಯ ಸಾಮೂಹಿಕ ಪ್ರಾರ್ಥನೆಯಲ್ಲಿ ಜನ ಭಾಗವಹಿಸುತ್ತಾರೆ.

ಕೋಲ್ಕತ್ತಾ

ಕ್ರಿಸ್ಮಸ್ ಸಮಯದಲ್ಲಿ 'ಸಿಟಿ ಆಫ್ ಜಾಯ್'  (city of Joy) ಕೋಲ್ಕತ್ತಾದಲ್ಲಿ ಇನ್ನೂ ಹೆಚ್ಚು ಸಂತೋಷ ಮತ್ತು ಉತ್ಸಾಹ ತುಂಬಿರುತ್ತೆ. ಕ್ರಿಸ್ ಮಸ್ ಕೋಲ್ಕತ್ತಾದ ಪ್ರಮುಖ ಆಚರಣೆಗಳಲ್ಲಿ ಒಂದಾಗಿಲ್ಲವಾದರೂ, ಈ ನಗರವೂ ಈ ಹಬ್ಬವನ್ನೂ ಸಹ ಸೆಲೆಬ್ರೇಟ್ ಮಾಡುತ್ತೆ. ಊರಿನ ತುಂಬೆಲ್ಲಾ ಫ್ರುಟ್ ಕೇಕ್ ಮತ್ತು ಪೇಸ್ಟ್ರಿಗಳ ಸುವಾಸನೆ ತುಂಬಿರುತ್ತೆ. ಕ್ರಿಶ್ಚಿಯನ್ನರಲ್ಲದೆ, ಇತರೆ ಸಮುದಾಯಗಳ ಜನರು ಚರ್ಚ್‌ಗಳಲ್ಲಿ ಮಧ್ಯರಾತ್ರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಾರೆ ಮತ್ತು ಕರೋಲ್ ಗಳನ್ನು ಹಾಡುತ್ತಾರೆ. ಸಿಟಿ ಪೂರ್ತಿಯಾಗಿ ಬೆಳಕು ಮತ್ತು ಧ್ವನಿ ಪ್ರದರ್ಶನ, ರಾಕ್ ಮ್ಯೂಸಿಕ್, ಮಿನುಗುವ ದೀಪಗಳು ಮತ್ತು ರುಚಿಕರವಾದ ಆಹಾರಗಳಿಂದ ತುಂಬಿರುತ್ತೆ. 

click me!