Paragliding in India: ಸಾಹಸ ಮಾಡಲು ನೀವು ರೆಡಿ ಇದ್ರೆ ಈ ತಾಣಗಳಿಗೆ ಭೇಟಿ ನೀಡಿ

First Published Jan 25, 2023, 1:33 PM IST

Paragliding destinations in India: ನೀವು ಸಾಹಸ ಪ್ರಿಯರಾಗಿದ್ದರೆ, ಸ್ಕೈ ಡೈವಿಂಗ್, ಪ್ಯಾರಾಗ್ಲೈಡಿಂಗ್ ಮಾಡೋ ಕ್ರೇಜ್ ಕೂಡ ನಿಮಗಿರಬಹುದು ಅಲ್ವಾ? ನಿಮಗೂ ಪ್ಯಾರಾಗ್ಲೈಡಿಂಗ್ , ಸ್ಕೈ ಡೈವಿಂಗ್ ಇಷ್ಟ ಇದ್ರೆ ಭಾರತದಲ್ಲಿ ಈ ಸಾಹಸ ಮಾಡುವಂತಹ ಅದೆಷ್ಟೋ ತಾಣಗಳಿವೆ. ಅವು ಯಾವುವು ಅನ್ನೋದನ್ನು ನೋಡೋಣ. 

ವಸಂತ ಋತು ಪರಿಸರವನ್ನು, ಸಾಹಸವನ್ನು ಎಂಜಾಯ್ ಮಾಡಲು ಸರಿಯಾದ ಋತು ಎನ್ನಲಾಗುತ್ತೆ. ಈ ಋತುಮಾನವು ತುಂಬಾ ತಂಪಾಗಿರುವುದಿಲ್ಲ ಅಥವಾ ತುಂಬಾ ಬಿಸಿಯಾಗಿರುವುದಿಲ್ಲ. ಇದಕ್ಕಾಗಿ, ಜನರು ವಾಕಿಂಗ್ ಹೋಗುತ್ತಾರೆ. ಅದೇ ಸಮಯದಲ್ಲಿ, ಕೆಲವರು ಸಾಹಸ ಪ್ರವಾಸಗಳಿಗೆ ಹೋಗಲು ಇಷ್ಟಪಡುತ್ತಾರೆ. ಮುಂಬರುವ ದಿನಗಳಲ್ಲಿ ನೀವು ಸಾಹಸ ಪ್ರವಾಸಕ್ಕೆ (Adventurous Travel) ಹೋಗಲು ಪ್ಲ್ಯಾನ್ ಮಾಡುತ್ತಿದ್ದರೆ, ಪ್ಯಾರಾಗ್ಲೈಡಿಂಗ್ , ಸ್ಕೈ ಡೈವಿಂಗ್ಗಾಗಿ ನೀವು ದೇಶದ ಈ ಸುಂದರ ಸ್ಥಳಗಳಿಗೆ ಭೇಟಿ ನೀಡಬಹುದು. ಆ ತಾಣಗಳ ಬಗ್ಗೆ ತಿಳಿಯೋಣ :

ಬಿರ್-ಬಿಲ್ಲಿಂಗ್: ಬಿರ್-ಬಿಲ್ಲಿಂಗ್ ಪ್ಯಾರಾಗ್ಲೈಡಿಂಗ್ ಗೆ (paragliding) ಹೆಸರುವಾಸಿಯಾಗಿದೆ. ಇಲ್ಲಿ ನೀವು ನಿಮ್ಮ ಸ್ನೇಹಿತರೊಂದಿಗೆ ಸ್ಕೈ ಡೈವಿಂಗ್ ಎಂಜಾಯ್ ಮಾಡಬಹುದು. ಪ್ಯಾರಾಗ್ಲೈಡಿಂಗ್ ಒಲಿಂಪಿಕ್ಸ್ ಅನ್ನು ಬಿರ್-ಬಿಲ್ಲಿಂಗ್ನಲ್ಲಿ ಆಯೋಜಿಸಲಾಗಿದೆ. ಇದಕ್ಕಾಗಿ, ಈ ಸ್ಥಳವು ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. 
 

ಸೋಲಾಂಗ್ ಕಣಿವೆ: ಪ್ಯಾರಾಗ್ಲೈಡಿಂಗ್  ಗಾಗಿ ನೀವು ಸೋಲಾಂಗ್ ಕಣಿವೆಗೆ ಹೋಗಬಹುದು. ಈ ಸುಂದರವಾದ ಕಣಿವೆಯು ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯಲ್ಲಿದೆ. ಸೋಲಾಂಗ್ ಗ್ರಾಮಕ್ಕೆ ಹತ್ತಿರದಲ್ಲಿರುವುದರಿಂದ ಈ ಕಣಿವೆಯ ಹೆಸರು ಸೋಲಾಂಗ್ ಆಗಿದೆ. ಮನಾಲಿಯಿಂದ ಸೋಲಾಂಗ್ ಕಣಿವೆಗೆ ಕೇವಲ 14 ಕಿ.ಮೀ ದೂರದಲ್ಲಿದೆ. ಪ್ಯಾರಾಗ್ಲೈಡಿಂಗ್ , ಸ್ಕೀಯಿಂಗ್, ಸ್ಕೈ ಡೈವಿಂಗ್ (Skydiving) ಮತ್ತು ಪ್ಯಾರಾಚೂಟ್ಗಾಗಿ ಪ್ರವಾಸಿಗರು ಸೋಲಾಂಗ್ ಕಣಿವೆಗೆ ಬರುತ್ತಾರೆ.

ಶ್ರೀನಗರ: ಕಾಶ್ಮೀರವನ್ನು ಭೂಮಿಯ ಮೇಲಿನ ಸ್ವರ್ಗ (heaven on earth) ಎಂದು ಕರೆಯಲಾಗುತ್ತದೆ. ಈ ಸ್ವರ್ಗಕ್ಕೆ ಭೇಟಿ ನೀಡಲು ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಶ್ರೀನಗರಕ್ಕೆ ಬರುತ್ತಾರೆ. ಇಲ್ಲಿ ನೀವು ಪ್ಯಾರಾಗ್ಲೈಡಿಂಗ್ ಅನ್ನು ಸಹ ಆನಂದಿಸಬಹುದು. ವಿಶೇಷವಾಗಿ, ದಾಲ್ ಸರೋವರದ ಮೇಲೆ ಪ್ಯಾರಾಗ್ಲೈಡಿಂಗ್ ಅನ್ನು ಆನಂದಿಸುವ ಮಜಾನೇ ಬೇರೆ. 

ಕಾಮ್ಶೆಟ್: ನೀವು ಮುಂಬೈ ಸುತ್ತಲೂ ಪ್ಯಾರಾಗ್ಲೈಡಿಂಗ್ ಮಾಡಲು ಬಯಸಿದರೆ, ಖಂಡಿತವಾಗಿಯೂ ಕಾಮ್ಶೆಟ್ ಗೆ ಹೋಗಿ. ಕಾಮ್ಶೆಟ್ ಬಗ್ಗೆ ಕೆಲವೇ ಜನರಿಗೆ ತಿಳಿದಿದೆ. ಮುಂಬೈನಿಂದ ಕಾಮ್ಶೆಟ್ ಕೇವಲ 100 ಕಿ.ಮೀ ದೂರದಲ್ಲಿದೆ. ಈ ಸುಂದರ ನಗರದಲ್ಲಿ ಪವನ ಸರೋವರ, ಶಿಂಧೆ ವಾಡಿ ಬೆಟ್ಟಗಳು, ಭೈರಿ ಮತ್ತು ಬೆಡ್ಸಾ ಗುಹೆಗಳಿಗೆ ಭೇಟಿ ನೀಡಬಹುದು. ನಿಮ್ಮ ಸ್ನೇಹಿತರೊಂದಿಗೆ ಪ್ಯಾರಾಗ್ಲೈಡಿಂಗ್  ಗಾಗಿ ನೀವು ಕಾಮ್ಶೆಟ್ ಗೆ ಹೋಗಬಹುದು.

ಆಂಬಿ ವ್ಯಾಲಿ: ನೀವು ಪ್ಯಾರಾಗ್ಲೈಡಿಂಗ್ ಆನಂದಿಸಲು ಬಯಸಿದರೆ, ನೀವು ಸ್ನೇಹಿತರೊಂದಿಗೆ ಆಂಬಿ ಕಣಿವೆಗೆ ಹೋಗಬಹುದು. ಈ ಸುಂದರ ತಾಣವು ದೇಶಾದ್ಯಂತ ಪ್ರಸಿದ್ಧವಾಗಿದೆ. ಆಂಬಿ ಕಣಿವೆಗೆ ಭೇಟಿ ನೀಡಲು ಹೆಚ್ಚಿನ ಸಂಖ್ಯೆಯ ಪ್ರವಾಸಿಗರು (traveller) ಬರುತ್ತಾರೆ. ಮು೦ಬಯಿಯಿ೦ದ ಆ೦ಬಿ ಕಣಿವೆಗೆ ಇರುವ ದೂರವು 120 ಕಿ.ಮೀ. ಅದೇ ಸಮಯದಲ್ಲಿ, ಇದು ಪುಣೆಯಿಂದ 90 ಕಿ.ಮೀ ಮತ್ತು ಲೋನಾವಾಲಾದಿಂದ 25 ಕಿ.ಮೀ ದೂರದಲ್ಲಿದೆ.

ಮಸ್ಸೂರಿ: ನೀವು ದೆಹಲಿಯ ಬಳಿ ಭಾರತದಲ್ಲಿ ಪ್ಯಾರಾಗ್ಲೈಡಿಂಗ್ಗಾಗಿ ಸ್ಥಳಗಳನ್ನು ಹುಡುಕುತ್ತಿದ್ದರೆ ಇದು ಒಂದು ಉತ್ತಮ ಆಯ್ಕೆಯಾಗಿದೆ. ಭಾರತದ ಈ ಸುಂದರ ತಾಣವಾದ ಮಸ್ಸೂರಿಯು ಇತರ ಗಿರಿಧಾಮಗಳಂತೆ ಪ್ಯಾರಾಗ್ಲೈಡಿಂಗ್ ಅನ್ನು ಸಹ ಆಯೋಜಿಸುತ್ತದೆ. ಮಸ್ಸೂರಿ ಸರೋವರದ ಬಳಿಯ ಟೇಕ್ ಆಫ್ ಪಾಯಿಂಟ್ (take off point) ನಿಂದ, ಸಮುದ್ರ ಮಟ್ಟದಿಂದ 2300 ಮೀಟರ್ ಎತ್ತರದವರೆಗೆ ದೀರ್ಘ ಹಾರಾಟದಲ್ಲಿ ಡೆಹ್ರಾಡೂನ್ ವರೆಗೆ ಹಾರಬಹುದು.

ಬೆಂಗಳೂರು: ಗೇಮಿಂಗ್ ಕೆಫೆಗಳಿಂದ ತುಂಬಿದ ಬೀದಿಗಳ ಹೊರತಾಗಿ, ಸಿಲಿಕಾನ್ ವ್ಯಾಲಿ ಇತ್ತೀಚೆಗೆ ಈ ಸಾಹಸ ಕ್ರೀಡೆಯನ್ನು ಸಹ ಪ್ರೋತ್ಸಾಹಿಸುತ್ತಿದೆ. ಮುಖ್ಯ ನಗರದಿಂದ 20 ಕಿ.ಮೀ ದೂರದಲ್ಲಿರುವ ಹೊಸಕೋಟೆ ಸರೋವರವು ಬೆಂಗಳೂರಿನಲ್ಲಿ ಪ್ಯಾರಾಗ್ಲೈಡಿಂಗ್ ತರಬೇತಿ ನೀಡುವ ಕೆಲವು ತಾಣಗಳನ್ನು ಹೊಂದಿದೆ. ಪಟ್ಟಣದಿಂದ 65 ಕಿ.ಮೀ ದೂರದಲ್ಲಿರುವ ನಂದಿ ಬೆಟ್ಟವು ಸಮುದ್ರ ಮಟ್ಟದಿಂದ 1478 ಮೀಟರ್ ಎತ್ತರದಲ್ಲಿರುವ ಪ್ಯಾರಾಗ್ಲೈಡಿಂಗ್ನ ಮತ್ತೊಂದು ಕೇಂದ್ರವಾಗಿದೆ. ನಂದಿ ಬೆಟ್ಟಗಳಲ್ಲಿ ಪ್ಯಾರಾಗ್ಲೈಡಿಂಗ್ ಮಾಡಲು ಬಹಳಷ್ಟು ಜನರು ಬಯಸುತ್ತಾರೆ.  

click me!