ತಾಜ್ ಮಹಲ್ ಮ್ಯಾಜಿಕಲ್ ಸೌಂದರ್ಯ ಕಣ್ತುಂಬಿಕೊಳ್ಳಲು ಮೆಹತಾಬ್ ಬಾಗ್‌ಗೆ ಭೇಟಿ ನೀಡಿ

First Published Feb 24, 2023, 5:40 PM IST

ಜಗತ್ತಿನ ಅದ್ಬುತಗಳಲ್ಲಿ ಒಂದು ಎಂಬ ಹೆಮ್ಮೆಗೆ ಪಾತ್ರವಾಗಿದೆ ತಾಜ್ ಮಹಲ್. ಪ್ರೇಮಿಗಳು ಇದನ್ನು ಪ್ರೇಮ ಸೌಧ ಎನ್ನುತ್ತಾರೆ. ತಾಜ್ ಮಹಲ್ ಸೌಂದರ್ಯ ನೋಡಲು ವಿಶ್ವದ ಮೂಲೆ, ಮೂಲೆಗಳಿಂದ ಜನ ಬರುತ್ತಾರೆ. ಆದ್ರೆ ನಿಮಗೊಂದು ವಿಷ್ಯ ಗೊತ್ತಾ? ಯಮುನಾ ನದಿಯ ದಡದಲ್ಲಿರುವ ದಂತ-ಬಿಳಿ ಅಮೃತಶಿಲೆಯ ಸಮಾಧಿಯನ್ನು ವೀಕ್ಷಿಸಲು ನೀವು ತಾಜ್ ಮಹಲ್ ಒಳಗೆ ಹೋಗಬೇಕಾಗಿಲ್ಲ.

ಯಮುನಾ ನದಿಯ (Yamuna River) ದಡದಲ್ಲಿರುವ ದಂತ-ಬಿಳಿ ಅಮೃತಶಿಲೆಯ ಸಮಾಧಿ ವೀಕ್ಷಿಸಲು ನೀವು ತಾಜ್ ಮಹಲ್ ಒಳಗೆ ಹೋಗಬೇಕಾಗಿಲ್ಲ. ಹಾಗಿದ್ರೆ ಈ ಪ್ರೇಮ ಸೌಧದ ಸೌಂದರ್ಯ ಸವಿಯೋಕೆ ಏನು ಮಾಡೋದು ಎಂದು ಪ್ರಶ್ನೆ ಮೂಡುತ್ತಿದೆಯೇ? ಹಾಗಿದ್ರೆ ತಾಜ್ ಮಹಲ್ ಗೆ (Taj Mahal) ಭೇಟಿ ನೀಡದೆ, ತಾಜ್ ಸೌಂದರ್ಯ ಸವಿಯೋದು ಹೇಗೆ ಅನ್ನೋದನ್ನು ನೋಡೋಣ.

ನೀವು ಆಗ್ರಾಗೆ ಭೇಟಿ ನೀಡುತ್ತಿದ್ದರೆ, ನಿಮ್ಮ ಪ್ರಯಾಣದಲ್ಲಿ ತಾಜ್ ಮಹಲ್ (Taj Mahal) ನೋಡಲೇಬೇಕಾದ ಒಂದು ಸ್ಥಳವಾಗಿದೆ. ತಾಜ್ ಮಹಲ್ ಅನ್ನು ಮೊಘಲ್ ಚಕ್ರವರ್ತಿ ಷಹಜಹಾನ್ ಅವರ ಪ್ರೀತಿಯ ಪತ್ನಿ ಮುಮ್ತಾಜ್ ಮಹಲ್ ಸ್ಮರಣಾರ್ಥ ನಿರ್ಮಿಸಲಾಗಿದೆ.

ತಾಜ್ ಮಹಲ್ ಅನ್ನು 1631 ರಲ್ಲಿ ನಿರ್ಮಾಣ ಮಾಡಲು ಆರಂಭಿಸಿದರು. ಇದರ ನಿರ್ಮಾಣವು 1632 ರಲ್ಲಿ ಪ್ರಾರಂಭವಾಗಿದ್ದರೂ, ಇದು 1653 ರಲ್ಲಿ ಸಂಪೂರ್ಣವಾಗಿ ಪೂರ್ಣಗೊಂಡಿದೆ ಎಂದು ನಂಬಲಾಗಿದೆ. ಇದನ್ನು 1983 ರಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಘೋಷಿಸಲಾಯಿತು, ಏಕೆಂದರೆ 'ಭಾರತದ ಮುಸ್ಲಿಂ ಕಲೆಯ ರತ್ನ ಮತ್ತು ವಿಶ್ವದ ಪರಂಪರೆಯ ಸಾರ್ವತ್ರಿಕವಾಗಿ ಮೆಚ್ಚುಗೆ ಪಡೆದ ಮೇರುಕೃತಿಗಳಲ್ಲಿ ಒಂದಾಗಿದೆ. ಇದರ ಅದ್ಭುತ ಸೌಂದರ್ಯಕ್ಕೆ ಮನಸೋಲದವರೇ ಇಲ್ಲ.

ವಿಶ್ವದ ಏಳು ಅದ್ಭುತಗಳಲ್ಲಿ (seven wonders of world) ಒಂದಾದ ತಾಜ್ ಮಹಲ್ ನೀವು ಆಗ್ರಾದಲ್ಲಿದ್ದರೆ ನೋಡಲೇಬೇಕಾದ ಸ್ಥಳವಾಗಿದೆ ನಿಜಾ. ಆದರೆ ಈ ಸುಂದರ ಅಮೃತ ಶಿಲೆಯ ಸೌಧವನ್ನು ನೋಡಲು ಅದು ಇದ್ದಲ್ಲಿಗೆ ಹೋಗಬೇಕಾಗಿಲ್ಲ.ಶಹಜಹಾನ್ ನ ಪ್ರೀತಿಯ ಸಂಕೇತವಾದ ತಾಜ್ ಮಹಲ್ ನೋಡಲು ಉತ್ತಮ ಸ್ಥಳವೆಂದರೆ ಮೆಹ್ತಾಬ್ ಬಾಗ್.

ಮೂನ್ಲೈಟ್ ಗಾರ್ಡನ್  (moonlight garden) ಎಂದು ಹೇಳಲಾಗುವ ಈ ಮೆಹ್ತಾಬ್ ಬಾಗ್ ಒಂದು ಚಾರ್ಬಾಗ್ ಕಟ್ಟಡವಾಗಿದ್ದು, ಇದು ತಾಜ್ ಮಹಲ್ ಸಂಕೀರ್ಣ ಮತ್ತು ಯಮುನಾದ ವಿರುದ್ಧ ಬದಿಯಲ್ಲಿ  ಅಂದರೆ ಆಗ್ರಾ ಕೋಟೆಯ ಉತ್ತರದಲ್ಲಿದೆ. ಇಲ್ಲಿಂದ ನೀವು ಪ್ರೇಮ ಸೌಧದ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು.

ತಾಜ್ ಮಹಲ್ ವೀಕ್ಷಿಸಲು ಸುಂದರವಾದ ಉದ್ಯಾನವನ್ನು ಬಯಸಿದ ಚಕ್ರವರ್ತಿ ಷಹಜಹಾನ್ ಗಾಗಿ ಮೆಹ್ತಾಬ್ ಬಾಗ್ ಅನ್ನು ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಮಹ್ತಾಬ್ ಭಾಗ್ ಎಂಬುದು ಪರ್ಷಿಯನ್ ಶೈಲಿಯ ಕಟ್ಟಡವಾಗಿದ್ದು, ಕುರಾನ್ ನಲ್ಲಿರುವ ಸ್ವರ್ಗದ ನಾಲ್ಕು ಉದ್ಯಾನಗಳಿಂದ ಪ್ರೇರಿತವಾಗಿದೆ. 

ಮೆಹತಾಬ್ ಬಾಗ್ ನ (Mehatab Bagh) ನಾಲ್ಕು ಉದ್ಯಾನಗಳನ್ನು ತಾಜ್ ಮಹಲ್ ನಲ್ಲಿರುವ ಉದ್ಯಾನಗಳಿಗೆ ಹೊಂದಿಕೆಯಾಗುವಂತೆ ವಿನ್ಯಾಸಗೊಳಿಸಲಾಗಿದೆ. ಮೆಹತಾಬ್ ಬಾಗ್ ಪ್ರತಿದಿನ ಬೆಳಿಗ್ಗೆ 12 ಗಂಟೆಯವರೆಗೆ ತೆರೆದಿರುತ್ತದೆ. ಮೆಹತಾಬ್ ಬಾಗ್‌ನಲ್ಲಿ ಭಾರತೀಯರಿಗೆ ಪ್ರವೇಶ ಶುಲ್ಕ 25 ರೂ. ವಿದೇಶಿಯರು ಮತ್ತು ಅನಿವಾಸಿ ಭಾರತೀಯರಿಗೆ ಇದು 300 ರೂ. ಈ ಬಾರಿ ನೀವು ತಾಜ್ ಮಹಲ್ ಸೌಂದರ್ಯವನ್ನು ಮೆಹತಾಬ್ ಬಾಗ್ ನಲ್ಲೇ ನೋಡಿ. 
 

click me!