ಗೋಸ್ಟ್ ರೈಲಿನ ರಹಸ್ಯ: ಸುರಂಗ ಪ್ರವೇಶಿಸುತ್ತಿದ್ದಂತೆ ಮಾಯ 106 ಜನರಿದ್ದ ರೈಲು!

Published : Feb 22, 2023, 05:19 PM IST

ಕೆಲವು ಘಟನೆಗಳನ್ನು ನೋಡಿದಾಗ ಮೈ ಜುಮ್ ಎನಿಸುತ್ತದೆ. ಅವು ಎಷ್ಟೊಂದು ಭಯಾನಕವಾಗಿರುತ್ತೆ ಎಂದರೆ, ಆ ಘಟನೆಯನ್ನು ನೆನೆದರೆ ಚಳಿಯಲ್ಲೂ ಮೈ ನಡುಗುವುದು. ಅಂತಹುದೇ ಒಂದು ಘಟನೆಯ ಬಗ್ಗೆ ಇಲ್ಲಿ ಹೇಳುತ್ತಿದ್ದೇವೆ. 106 ಪ್ರಯಾಣಿಕರನ್ನು ಹೊತ್ತ ರೈಲೊಂದು, ಸುರಂಗವನ್ನು ಪ್ರವೇಶಿಸಿದ ಕೆಲವೇ ಕ್ಷಣದಲ್ಲಿ ಕಣ್ಮರೆಯಾಗಿತ್ತು. ಸುರಂಗದ ಒಳಗೆ ರೈಲಿಗೆ ಏನಾಯಿತು ಎಂಬುದರ ಬಗ್ಗೆ ಇಲ್ಲಿಯವರೆಗೆ ಯಾರಿಗೂ ತಿಳಿದಿಲ್ಲ. ಈ ರೈಲಿನ ಬಗ್ಗೆ ನಿಮಗೆ ಗೊತ್ತಾ? 

PREV
111
ಗೋಸ್ಟ್ ರೈಲಿನ ರಹಸ್ಯ:  ಸುರಂಗ ಪ್ರವೇಶಿಸುತ್ತಿದ್ದಂತೆ ಮಾಯ  106 ಜನರಿದ್ದ ರೈಲು!

ರೈಲು ಪ್ರಯಾಣವನ್ನು (travel by train) ನೀವು ಸಹ ಇಷ್ಟಪಡುತ್ತೀರಾ? ದಾರಿಯಲ್ಲಿ ಬರುವ ಸುಂದರ ದೃಶ್ಯಗಳನ್ನು ಕಿಟಕಿಯಿಂದ ನೋಡುತ್ತಿದ್ದರೆ, ಆಹಾ ಎನ್ನುವ ಭಾವನೆ ಮೂಡುವುದು. ಭಾರತೀಯ ರೈಲ್ವೆಯ ಬಗ್ಗೆ ಮಾತನಾಡುವುದಾದರೆ, ಇಲ್ಲಿ ನೀವು ರೈಲುಗಳ ಮೂಲಕ ಎಲ್ಲಾ ರೀತಿಯ ಅನುಭವಗಳನ್ನು ಪಡೆಯುತ್ತೀರಿ. ರೈಲಿನ ಸ್ಲೀಪರ್ ಕ್ಲಾಸ್ ಯಾವಾಗಲೂ ಒಂದು ಕುಟುಂಬದಂತೆ ಭಾಸವಾಗುತ್ತದೆ. ಸುರಂಗ ಮಾರ್ಗದಲ್ಲಿ (railway tunnel) ರೈಲು ಪ್ರಯಾಣಿಸುತ್ತಿದ್ದರೆ, ಬೇರೆನೋ ಅನುಭವ ಸಿಗುತ್ತೆ ಅಲ್ವಾ? ಇದೇ ನೀವು ಹೋಗುತ್ತಿರುವ ರೈಲು ಸುರಂಗ ಮಾರ್ಗ ಪ್ರವೇಶಿಸಿ ಆಮೇಲೆ ನಿಗೂಢವಾಗಿ ಕಣ್ಮರೆಯಾದರೆ ಏನು ಮಾಡುತ್ತೀರಿ? ಊಹಿಸೋದು ಕಷ್ಟ ಅಲ್ವಾ?

211

ನಿಮ್ಮ ಸಾಮಾನುಗಳೊಂದಿಗೆ ನೀವು ನಿಲ್ದಾಣದಿಂದ ರೈಲು ಹತ್ತುತ್ತೀರಿ, ಆದರೆ ಸುರಂಗ ಮಾರ್ಗ ಪ್ರವೇಶಿಸಿದ ಆ ರೈಲು ಇದ್ದಕ್ಕಿದ್ದಂತೆ ಕಣ್ಮರೆಯಾದರೆ ಏನಾಗುತ್ತೆ? ಊಹಿಸಿ ನೋಡಿ. ಇದು ಚಲನಚಿತ್ರದ ಕಥೆಯಲ್ಲ, ನೈಜ್ಯ ಘಟನೆ. 106 ಜನ ಪ್ರಯಾಣಿಕರನ್ನೊಳಗೊಂಡ ರೈಲೊಂದು ರೋಮ್ ನಿಲ್ದಾಣದಿಂದ ಹೊರಟಿತು, ಆಮೇಲೆ ಏನಾಯ್ತು ಅನ್ನೋದರ ಕುರುಹು ಸಹ 100 ವರ್ಷಗಳ ನಂತರವೂ ತಿಳಿದು ಬಂದಿಲ್ಲ.. ಇದು ಮಲೇಷ್ಯಾದಿಂದ ಹಾರಿದ ಅದೇ ಎಂಎಚ್ 370 (MH 370) ವಿಮಾನದ ಘಟನೆಯನ್ನು ಹೋಲುತ್ತದೆ, ಇಲ್ಲಿಯವರೆಗೆ ವಿಮಾನದ ಬಗ್ಗೆಯೂ ಯಾವುದೇ ಸುಳಿವು ಸಿಕ್ಕಿಲ್ಲ. ಎಂದಿಗೂ ಸಿಗದ ಅದೇ ರೈಲಿನ ಬಗ್ಗೆ ಇಂದು ನಾವು ನಿಮಗೆ ಮಾಹಿತಿಯನ್ನು ನೀಡಲಿದ್ದೇವೆ. 

311

ಜೆನೆಟ್ ಘೋಸ್ಟ್ ಟ್ರೈನ್ (zanetti ghost train) ಎಂದರೇನು?
ಕಣ್ಮರೆಯಾದ ರೈಲನ್ನು ವಿನ್ಯಾಸಗೊಳಿಸಿದ ರೈಲು ಕಂಪನಿಯ ಹೆಸರು zanetti ಮತ್ತು ಇಂದಿಗೂ ನೀವು ಗೂಗಲ್ನಲ್ಲಿ zanetti ಎಂಬ ಪದವನ್ನು ಹಾಕಿದರೆ, ಅದಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿ ನಿಮ್ಮ ಮುಂದೆ ಬರುತ್ತದೆ. ಇದು 1911 ರ ಕಥೆ, ಆ ರೈಲು ಗಾಳಿಯಲ್ಲಿ ಕಣ್ಮರೆಯಾಯಿತು ಮತ್ತು ಅದರ ಬಗ್ಗೆ ಇನ್ನೂ ಯಾವುದೇ ಕುರುಹು ಕಂಡುಬಂದಿಲ್ಲ. ರೈಲಿನ ಯಾವುದೇ ಬೋಗಿ ಅಥವಾ ಅದರ ಯಾವುದೇ ಭಾಗಗಳು ಇನ್ನೂ ಕಂಡುಬಂದಿಲ್ಲ. ಅದರಲ್ಲಿದ್ದ ಪ್ರಯಾಣಿಕರು ಏನಾದರೂ ಅನ್ನೋದು ಸಹ ತಿಳಿದಿಲ್ಲ.

411

ಈ ರೈಲು ಎಲ್ಲಿಂದ ಬಂತು ಮತ್ತು ಅದರ ಹಿಂದಿನ ರಹಸ್ಯವೇನು?
ಈ ರೈಲು 1911 ರಲ್ಲಿ ರೋಮ್ ನ ಮಿಲನ್ ನಿಂದ ಎಮಿಲಿಯಾ-ರೊಮಾಗ್ನಾ ನಿಲ್ದಾಣದ ಮೂಲಕ ಲೊಂಬಾರ್ಡಿಗೆ ಹೋಗಲು ಹೊರಟಿತು. ಆ ಸಮಯದಲ್ಲಿ ಜೆನೆಟ್ ರೈಲ್ವೆ ಕಂಪನಿಯು ವಿಶೇಷ ಜಾಹೀರಾತು ಅಭಿಯಾನವನ್ನು ಕೈಗೊಂಡಿತ್ತು. ಅವರು ಪ್ರವಾಸಿ ರೈಲಿಗಾಗಿ ಹೊಸ ಐಷಾರಾಮಿ ಬೋಗಿಗಳನ್ನು (luxury coaches) ನಿರ್ಮಿಸಿದ್ದರು. ಈ ರೈಲು ಮಿಲನ್ ಸೇರಿದಂತೆ ಲಾಜಿಯೊ, ಉಂಬ್ರಿಯಾ, ಟಸ್ಕನಿ ಮುಂತಾದ ನಿಲ್ದಾಣಗಳಿಗೆ ಹೋಗುತ್ತಿತ್ತು.  

511

ಕಂಪನಿಯು ಹೊಸ ಜಾಹೀರಾತನ್ನು ಹೊರತಂದಿತ್ತು ಮತ್ತು ಈ ರೈಲಿನಲ್ಲಿ ಪ್ರಯಾಣಿಸಲು ಜನರನ್ನು ಆಹ್ವಾನಿಸಿತ್ತು. ಐಷಾರಾಮಿ ಪ್ರಯಾಣವನ್ನು ಆನಂದಿಸಲು ಕಂಪನಿಯು ಪ್ರಯಾಣಿಕರಿಗೆ ಅವಕಾಶ ನೀಡಿತ್ತು.  ಅಂದು ಎಮಿಲಿಯಾ ಮತ್ತು ಲೊಂಬಾರ್ಡಿ ನಡುವೆ ಒಂದು ಕಿಲೋಮೀಟರ್ ಗಿಂತಲೂ ಹೆಚ್ಚು ಉದ್ದದ ಸುರಂಗವಿತ್ತು. ಆ ಸಮಯದಲ್ಲಿ ಇದು ವಿಶ್ವದ ಅತಿ ಉದ್ದದ ಸುರಂಗಗಳಲ್ಲಿ (longest railway tunnel) ಒಂದಾಗಿತ್ತು, ಇದನ್ನು ಪರ್ವತಗಳನ್ನು ಕತ್ತರಿಸುವ ಮೂಲಕ ನಿರ್ಮಿಸಲಾಯಿತು. 

611

ಜನೆಟ್ಟಿ ಸ್ಥಳೀಯ ಮೇಲ್ವರ್ಗದ ಕುಟುಂಬಗಳಿಂದ 100 ಪ್ರಯಾಣಿಕರನ್ನು (100 passangers) ಮತ್ತು ರೈಲಿನಲ್ಲಿ ಉಳಿದುಕೊಂಡ ಇತರ ಆರು ಜನರನ್ನು ಸಿಬ್ಬಂದಿಯಾಗಿ ಆಯ್ಕೆ ಮಾಡಿದರು. ಮಿಲನ್ ನಿಂದ ರೈಲು ಪ್ರಯಾಣವನ್ನು ಪ್ರಾರಂಭಿಸಿತು ಮತ್ತು ಜನರು ಇಟಲಿಯ ಸುಂದರ ದೃಶ್ಯಾವಳಿಗಳ ನಡುವೆ ಶಾಂಪೇನ್ ನೊಂದಿಗೆ ತಮ್ಮ ಪ್ರಯಾಣವನ್ನು ಆನಂದಿಸಲು ಪ್ರಾರಂಭಿಸಿದರು.  

711

ಎಲ್ಲವೂ ಸರಿಯಾಗಿಯೇ ಇತ್ತು. ಆದರೆ ಸುರಂಗಕ್ಕೆ ಪ್ರವೇಶಿಸುತ್ತಿದ್ದಂತೆ ಎಲ್ಲವೂ ಬದಲಾಯಿತು. ರೈಲು ಸುರಂಗವನ್ನು ಪ್ರವೇಶಿಸಲು ಹೊರಟಾಗ, ಆ ರೈಲನ್ನು ನೋಡಲು ಬಂದ ಕೆಲವು ಜನರು ಅಲ್ಲಿದ್ದರು. ಸುರಂಗದ ಎರಡೂ ತುದಿಗಳಲ್ಲಿ ಜನರು ಇದ್ದರು, ಆದರೆ ಆ ದಿನ ಏನಾಯಿತು ಎಂಬುದು ಇನ್ನೂ ಯಾರಿಗೂ ಅರ್ಥವಾಗದ ಪ್ರಶ್ನೆಯಾಗಿ ಉಳಿದಿದೆ. 

811

ರೈಲು ಸುರಂಗವನ್ನು ಪ್ರವೇಶಿಸಿತು, ಅದನ್ನು ಸುರಂಗದ ಒಂದೆಡೆ ಇದ್ದ ಜನ ನೋಡಿದ್ದಾರೆ, ಆದರೆ ಮತ್ತೊಂದೆಡೆಯಿಂದಲೂ ಜನರು ಆ ರೈಲು ಸುರಂಗದಿಂದ ಹೊರ ಬರಲು ಕಾಯುತ್ತಿದ್ದರು. ಆದರೆ ಎಷ್ಟೇ ಹೊತ್ತಾದರೂ ರೈಲು ಹೊರಗೆ ಬರಲೇ ಇಲ್ಲ. ಸ್ವಲ್ಪ ಸಮಯದ ನಂತರ, ಜನರು ಪೊಲೀಸರಿಗೆ ಕರೆ ಮಾಡಿದರು. ಅಲ್ಲಿ ಹೊರಗೆ ನಿಂತಿದ್ದ ಜನರು ಸುರಂಗದ ಒಳಗೆ ಹೋದಾಗ, ಅಲ್ಲಿ ಯಾವ ರೈಲು ಕೂಡ ಇರಲಿಲ್ಲ. ಕೇವಲ ಇಬ್ಬರು ಪ್ರಯಾಣಿಕರು ಮಾತ್ರ ಹಳಿ ಮೇಲೆ ಬಿದ್ದಿದ್ದರು, ಅವರ ಮಾನಸಿಕ ಸ್ಥಿತಿ (mentally ill) ಉತ್ತಮವಾಗಿರಲಿಲ್ಲ.  

911

ಬದುಕುಳಿದ ಆ ಇಬ್ಬರಿಗೆ ಏನಾಯಿತು? 
ಆ ದಿನ ರೈಲಿನಲ್ಲಿ ಬದುಕುಳಿದ ಇಬ್ಬರು ಪ್ರಯಾಣಿಕರಲ್ಲಿ ಒಬ್ಬರು ಏನನ್ನೂ ಮಾತನಾಡುವ ಸ್ಥಿತಿಯಲ್ಲೂ ಇರಲಿಲ್ಲ, ಅಲ್ಲದೇ ಕೆಲವೇ ಸಮಯದಲ್ಲಿ ಅವರು ನಿಧನರಾದರು.ಈ ಬಗ್ಗೆ ಮಾತನಾಡಿದ ಇನ್ನೊಬ್ಬ ವ್ಯಕ್ತಿ ರೈಲು ಸುರಂಗವನ್ನು ಪ್ರವೇಶಿಸಿದ ಕೂಡಲೇ ವಿಚಿತ್ರ ಶಬ್ದವನ್ನು ಕೇಳಿಸಿಕೊಂಡಿದ್ದೇನೆ ಮತ್ತು ನಂತರ ಬಿಳಿ ಮಬ್ಬು ಆವರಿಸಿತ್ತು, ಗಾಳಿಯು ರೈಲನ್ನು ತನ್ನೊಳಗೆ ಆವರಿಸಿದಂತೆ ಭಾಸವಾಯಿತು. ಪ್ರಯಾಣಿಕ ಹೇಗೋ ಇನ್ನೊಬ್ಬ ವ್ಯಕ್ತಿಯೊಂದಿಗೆ ರೈಲಿನಿಂದ ಜಿಗಿಯುವಲ್ಲಿ ಯಶಸ್ವಿಯಾದನು ಮತ್ತು ಅವನು ಜಿಗಿದ ನಂತರ ಪ್ರಜ್ಞೆ ತಪ್ಪಿದನು. 
 

1011

ಇದರ ನಂತರ, ರೈಲಿನ ಬಗ್ಗೆ ಯಾವ ಸುಳಿವೂ ಸಹ ಸಿಕ್ಕಿಲ್ಲ , ಈ ಘಟನೆ ನಂತರ ರೈಲ್ವೆ ಆ ಸುರಂಗವನ್ನು ಮುಚ್ಚಲಾಯಿತು. ಅದರ ಬಗ್ಗೆ ಅನೇಕ ವರ್ಷಗಳವರೆಗೆ ಸಂಶೋಧನೆ ಮುಂದುವರಿಯಿತು, ಆದರೆ ಏನೂ ಕಂಡುಬಂದಿಲ್ಲ. ಅನೇಕ ಜನರು ಸಮಯ ಪ್ರಯಾಣ ಮತ್ತು ಅಜ್ಞಾತ ಸಿದ್ಧಾಂತಗಳನ್ನು ಮಾಡುತ್ತಲೇ ಇದ್ದರು, ಆದರೆ ಬಹಳ ವಿಚಿತ್ರವಾದ ವಿಷಯವೆಂದರೆ ಮೆಕ್ಸಿಕೊದ ಮನೋವೈದ್ಯರೊಬ್ಬರು ಕೆಲವು ದಾಖಲೆಗಳನ್ನು ಓದಿದ ನಂತರ, ಮೆಕ್ಸಿಕೊದ ಕ್ಯಾಪ್ಟೈಲ್ನ ಆಸ್ಪತ್ರೆಯಲ್ಲಿ 104 ಇಟಲಿಯನ್ನರು ವಿಚಿತ್ರ ಮನಸ್ಥಿತಿಯಲ್ಲಿ ಕಂಡುಬಂದರು ಎಂದು ಹೇಳಿದರು. ಅವರು ರೋಮ್ ನಿಂದ ರೈಲು ಹತ್ತಿದವರು ಎನ್ನಲಾಗಿದ್ದು, ಅವರೆಲ್ಲಾ ಮೆಕ್ಸಿಕೊವನ್ನು ಹೇಗೆ ತಲುಪಿದರು ಎಂದು ತಿಳಿದಿರಲಿಲ್ಲ ಎಂದು ಅವರು ಹೇಳಿದ್ದಾರೆ.  

1111

ಈ ಸಂಗತಿಯು ಟೈಮ್ ಟ್ರಾವೆಲ್ ನ (time travel) ಕಥೆಯನ್ನು ಇನ್ನಷ್ಟು ಪ್ರಸಿದ್ಧಗೊಳಿಸಿತು, ಆದರೆ ನಿಜವಾಗಿ ಏನಾಯಿತು ಎಂದು ಯಾರಿಗೂ ತಿಳಿದಿಲ್ಲ. ಈ ರೈಲು ಇನ್ನೂ ರಹಸ್ಯವಾಗಿದೆ, ಅದರ ಬಗ್ಗೆ ಏನೂ ತಿಳಿದಿಲ್ಲ. ಈ ಕತೆ ಕೇಳಿದ್ರೆ, ರೈಲು ಹತ್ತೋಕು ಭಯ ಆಗುತ್ತೆ ಅಲ್ವಾ?

Read more Photos on
click me!

Recommended Stories