ರಾಕಿಂಗ್ ಸ್ಟಾರ್ ಯಶ್ ಅವರ ಬಹುನಿರೀಕ್ಷಿತ 'ಟಾಕ್ಸಿಕ್' ಚಿತ್ರದ ಶೂಟಿಂಗ್ ಸೆಟ್‌ನಿಂದ ವಿಡಿಯೋವೊಂದು ಲೀಕ್ ಆಗಿದೆ. ಇದರಲ್ಲಿ ಯಶ್ ಅವರ ಸಿಕ್ಸ್ ಪ್ಯಾಕ್ ಹಾಗೂ ಧೂಮಪಾನ ಮಾಡುವ ಲುಕ್ ವೈರಲ್ ಆಗಿದ್ದು, ಅಭಿಮಾನಿಗಳಲ್ಲಿ ನಿರೀಕ್ಷೆ ಮೂಡಿಸಿದೆ.
ಈಗ ಒಂದು ಚಿತ್ರದ ಸಂಪೂರ್ಣ ಶೂಟಿಂಗ್ ಮುಗಿಯುವವರೆಗೆ ಕಾಪಾಡಿಕೊಂಡು ಬರುವುದು ದೊಡ್ಡ ಸಮಸ್ಯೆಯಾಗಿದೆ. ನಟಿ ಯಶ್ ಅವರ ಟಾಕ್ಸಿಕ್ (Toxic) ಸಿನಿಮಾ ಅಂತೂ ಕಳೆದೊಂದು ವರ್ಷದಿಂದ ಸದ್ದು ಮಾಡುತ್ತಲೇ ಇದೆ. ಈ ಚಿತ್ರ ಯಾವಾಗ ರಿಲೀಸ್ ಆಗುತ್ತದೆ ಎಂದು ಫ್ಯಾನ್ಸ್ ಕಾತರದಿಂದ ಕಾಯುತ್ತಲೇ ಇದ್ದಾರೆ.
27
ಪ್ಯಾನ್ ಇಂಡಿಯಾ ಗೆದ್ದ ನಟ
ರಾಕಿಂಗ್ ಸ್ಟಾರ್ ಯಶ್ ಪ್ಯಾನ್ ಇಂಡಿಯಾ ಗೆದ್ದಾಗಿದೆ. ಯಶ್ ಈಗ ಗುರಿ ಇಟ್ಟಿರೋದು ಪ್ಯಾನ್ ವರ್ಲ್ಡ್ ಜಗತ್ತು ಗಲ್ಲೋಕೆ. ಅದಕ್ಕಾಗೆ ಯಶ್ ಟಾಕ್ಸಿಕ್ ಕೆಲಸವನನ್ನ ಸಿಕ್ಕಾಪಟ್ಟೆ ಕಟ್ಟು ನಿಟ್ಟಾಗಿ ಶುರು ಮಾಡಿದ್ದಾರೆ. ಆದ್ರೆ ಈ ಮಧ್ಯೆ ರಾಕಿಗೆ ದೊಡ್ಡ ಟೆನ್ಷನ್ ಒಂದು ಶುರುವಾಗಿದೆ. ಪ್ಯಾನ್ ವರ್ಲ್ಡ್ ನಲ್ಲಿ ಬರೊ ಟಾಕ್ಸಿಕ್ ಗೆ ಕಿಡಿಗೇಡಿಗಳ ಕಾಟ ಶುರುವಾಗಿದೆ. ಕೆಲ ತಿಂಗಳ ಹಿಂದೆ, ಕೆಲವು ಕಿಡಿಗೇಡಿಗಳು ಟಾಕ್ಸಿಕ್ನ ಸೆಟ್ ವಿಡಿಯೋ ಮಾಡಿ ಅದನ್ನು ಲೀಕ್ ಮಾಡಿದ್ದರು.
37
ಧೂಮಪಾನ ಮಾಡ್ತಿರೋ ಸಿಕ್ಸ್ ಪ್ಯಾಕ್ ಯಶ್
ಇದೀಗ ವಿಡಿಯೋ ಒಂದು ಲೀಕ್ ಆಗಿದೆ. ಇದು ಅದೇ ಚಿತ್ರದ ವಿಡಿಯೋ ಎನ್ನಲಾಗುತ್ತಿದೆ. ಅದರಲ್ಲಿ ಯಶ್ ಅವರು ಧೂಮಪಾನ ಮಾಡುತ್ತಿರುವುದನ್ನು ಕಾಣಬಹುದು. ಒಟ್ಟಿನಲ್ಲಿ, ಈಗಿನ ಬಹುತೇಕ ನಟರು ಲಾಂಗು, ಮಚ್ಚು ಹಿಡಿದು ರಕ್ತಪಾತ ಸುರಿಸುವ ಮೂಲಕ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಿರುವಂತೆಯೇ, ಈ ಚಿತ್ರವೂ ಆ ಸಾಲಿಗೆ ಸೇರಿದೆ ಎಂದು ಬಹುತೇಕ ಮಂದಿ ಅಂದುಕೊಳ್ಳುತ್ತಿದ್ದಾರೆ. ಅದೇನೇ ಇದ್ರೂ ಯಶ್ ಫ್ಯಾನ್ಸ್ ಮಾತ್ರ ಈ ವಿಡಿಯೋ ನೋಡಿ ಫುಲ್ ಖುಷ್ ಆಗಿದ್ದಾರೆ. ಇದರ ವಿಡಿಯೋ ಯಾವಾಗ ವೈರಲ್ ಆಯಿತೋ ಎಕ್ಸ್ ಖಾತೆಯಿಂದ ಡಿಲೀಟ್ ಮಾಡಲಾಗಿದೆ. ಆದರೆ ಫೋಟೋ ಮಾತ್ರ ಸದ್ಯ ವೈರಲ್ ಆಗುತ್ತಿದೆ.
ಅಂದಹಾಗೆ ಈ ಚಿತ್ರವು 2026ರ ಮಾರ್ಚ್ 19ರಂದು ಬಿಡುಗಡೆಗೆ ಸಿದ್ಧವಾಗಿದೆ. ಅದಕ್ಕೂ ಮುನ್ನವೇ ಯಶ್ ಬಾಲ್ಕನಿಯಲ್ಲಿ ಸಿಗರೇಟ್ ಸೇದುತ್ತಿರುವುದನ್ನು ಕಾಣಬಹುದು. ಯಶ್ ನೀಲಿ ಜೀನ್ಸ್ ಧರಿಸಿ, ಶರ್ಟ್‌ಲೆಸ್ ಆಗಿ, ಗಡ್ಡದ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸಿಕ್ಸ್ ಪ್ಯಾಕ್ ರೂಪದಲ್ಲಿ ಯಶ್ ನೋಡಿ, ಸ್ಮೋಕ್ ಮಾಡುತ್ತಾ ಹೊಗೆ ಬಿಡುವುದನ್ನು ನೋಡಿ, ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ.
57
ಆ್ಯಕ್ಷನ್ ಧಮಾಕಾ
ಇನ್ನು ಟಾಕ್ಸಿಕ್ ಕೆಜಿಎಫ್ ರೀತಿಯೆ ಆಕ್ಷನ್ ಧಮಾಕ ಇರೋ ಸಿನಿಮಾ ಆಗಿರೋದ್ರಿಂದ ಹಾಲಿವುಡ್ ಟಾಪ್ ಟೆಕ್ನೀಶಿಯನ್ಸ್ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಇದೀಗ ಟಾಕ್ಸಿನ್ ಶೂಟಿಂಗ್ ಅಂಗಳಕ್ಕೆ ಹಾಲಿವುಡ್ ನ ಫೇಮಸ್ ಸ್ಟಂಟ್ ಮಾಸ್ಟರ್ ಜೆ ಜೆ ಪೆರ್ರಿ ಎಂಟ್ರಿ ಕೊಟ್ಟಿದ್ದಾರೆ. ಜೆ ಜೆ ಪೆರಿ ಶೂಟಿಂಗ್ ಸೆಟ್ ನಲ್ಲಿರೋ ಫೋಟೋಗಳು ವೈರಲ್ ಆಗುತ್ತಿವೆ. ಟಾಕ್ಸಿಕ್ ಗೀತು ಮೋಹನ್ ದಾಸ್ ಡೈರೆಕ್ಷನ್ ಸಿನಿಮಾ. ಕೆವಿಎನ್ ಪ್ರೊಡಕ್ಷನ್ ಹಾಗೂ ಯಶ್ ಜಂಟಿಯಾಗಿ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.
67
ಗ್ಯಾಂಗ್ ಸ್ಟರ್ ಕಥಾಹಂದರ
"ಟಾಕ್ಸಿಕ್" ಚಿತ್ರವು ಒಂದು ಅವಧಿಯ ಗ್ಯಾಂಗ್ ಸ್ಟರ್ ಕಥಾಹಂದರವನ್ನು ಹೊಂದಿರುವುದಾಗಿ ಹೇಳಲಾಗಿದೆ. " ಚಿತ್ರವನ್ನು ಗೀತು ಮೋಹನ್‌ದಾಸ್ ನಿರ್ದೇಶಿಸಿದ್ದಾರೆ. ಗೋವಾದಲ್ಲಿ ನಡೆಯುವ ಈ ಕಥೆಯು ಡ್ರಗ್ ಮಾಫಿಯಾ, ಅಧಿಕಾರ, ಪ್ರೀತಿ ಮತ್ತು ದ್ರೋಹದ ಪ್ರಪಂಚದ ಸುತ್ತ ಸುತ್ತುತ್ತದೆ. ಸದ್ಯ ಬಂದಿರುವ ಮಾಹಿತಿಯ ಪ್ರಕಾರ, ಯಶ್ ಜೊತೆಗೆ ನಯನತಾರಾ, ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ಹುಮಾ ಖುರೇಷಿ, ರುಕ್ಮಿಣಿ ವಸಂತ್, ಅಕ್ಷಯ್ ಒಬೆರಾಯ್ ಮತ್ತು ಸುದೇವ್ ನಾಯರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
77
ಯಾರ್ಯಾರು ಇದ್ದಾರೆ ಚಿತ್ರದಲ್ಲಿ?
"ಟಾಕ್ಸಿಕ್" ಚಿತ್ರವನ್ನು ಯಶ್ ಮತ್ತು ವೆಂಕಟ್ ಕೆ. ನಾರಾಯಣ್ ಅವರು ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಅಡಿಯಲ್ಲಿ ನಿರ್ಮಿಸುತ್ತಿದ್ದಾರೆ. ಈ ಚಿತ್ರವು ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಸೇರಿದಂತೆ ಬಹು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. "ಟಾಕ್ಸಿಕ್" ಜೊತೆಗೆ, ನಿತೀಶ್ ತಿವಾರಿ ಅವರ "ರಾಮಾಯಣ" ಚಿತ್ರದಲ್ಲಿ ಯಶ್ ರಾವಣನ ಪಾತ್ರವನ್ನು ನಿರ್ವಹಿಸಲಿದ್ದಾರೆ. ರಣಬೀರ್ ಕಪೂರ್ ರಾಮನ ಪಾತ್ರದಲ್ಲಿ, ಸಾಯಿ ಪಲ್ಲವಿ ಸೀತೆಯ ಪಾತ್ರದಲ್ಲಿ, ಸನ್ನಿ ಡಿಯೋಲ್ ಹನುಮನ ಪಾತ್ರದಲ್ಲಿ ಮತ್ತು ರವಿ ದುಬೆ ಲಕ್ಷ್ಮಣನ ಪಾತ್ರದಲ್ಲಿ ನಟಿಸಲಿದ್ದಾರೆ.