Kantara Chapter 1 ಸಕ್ಸಸ್​ ಬೆನ್ನಲ್ಲೇ ಸೌಂಡ್​ ಮಾಡ್ತಿದೆ ರಿಷಬ್​ ಶೆಟ್ಟಿ ಮದ್ವೆ ವಿಡಿಯೋ: ರಕ್ಷಿತ್​- ರಶ್ಮಿಕಾ ಫುಲ್ ಮಿಂಚಿಂಗ್​

Published : Oct 13, 2025, 09:25 PM IST

'ಕಾಂತಾರ' ಚಿತ್ರದ ಯಶಸ್ಸಿನ ನಡುವೆ, ರಿಷಬ್ ಶೆಟ್ಟಿ ಮತ್ತು ಅವರ ಪತ್ನಿ ಪ್ರಗತಿ ಶೆಟ್ಟಿ ಅವರ 2017ರ ಮದುವೆ ವಿಡಿಯೋ ವೈರಲ್ ಆಗಿದೆ. ಫೇಸ್‌ಬುಕ್‌ನಲ್ಲಿ ಶುರುವಾದ ಇವರ ಪ್ರೇಮಕಥೆ, ಮದುವೆ ಹಾಗೂ 'ಕಾಂತಾರ' ಚಿತ್ರದ ಯಶಸ್ಸಿನಲ್ಲಿ ಪ್ರಗತಿಯವರ ಪಾತ್ರದ ಕುರಿತು ಈ ಲೇಖನ ಬೆಳಕು ಚೆಲ್ಲುತ್ತದೆ.

PREV
18
ಕಾಂತಾರ ಹವಾ

ಈಗ ಎಲ್ಲೆಲ್ಲೂ ಕಾಂತಾರ-1 (Kantara-1) ಹವಾ. ಕೆಲವರು ಯಾವ್ಯಾವುದೋ ಕಾರಣಕ್ಕೆ ಈ ಚಿತ್ರವನ್ನು ಟೀಕಿಸಿ ತಮ್ಮ ಸೋಷಿಯಲ್​ ಮೀಡಿಯಾದಲ್ಲಿ ಸಂಭ್ರಮಿಸುತ್ತಿದ್ದರೂ, ಬೇರೆ ಬೇರೆ ಭಾಷೆಗಳ ಖ್ಯಾತನಾಮರಿಂದ ಈ ಚಿತ್ರಕ್ಕೆ ಶ್ಲಾಘನೆಗಳ ಮಹಾಪೂರವೇ ಹರಿದು ಬಂದಿದೆ. ಘಟಾನುಘಟಿ ಸ್ಟಾರ್​ಗಳು ರಿಷಬ್​ ಶೆಟ್ಟಿ (Rishab Shetty) ಅವರನ್ನು ಹಾಡಿ ಹೊಗಳುತ್ತಿದ್ದಾರೆ. ನ್ಯಾಷನಲ್​ ಮೀಡಿಯಾಗಳಲ್ಲಿ ಅವರ ಮತ್ತು ಇದೇ ಸಿನಿಮಾದಲ್ಲಿ ಕಾಸ್ಟ್ಯೂಮ್​ ಡಿಸೈನರ್​ ಆಗಿ ಕೆಲಸ ಮಾಡಿರುವ ರಿಷಬ್​ ಪತ್ನಿ ಪ್ರಗತಿ ಶೆಟ್ಟಿ (Pragati Shetty) ಚರ್ಚೆಯಾಗುತ್ತಿದೆ.

28
ಸೋಷಿಯಲ್​ ಮೀಡಿಯಾದಲ್ಲಿ ಮದ್ವೆ ವಿಡಿಯೋ

ಇದರ ನಡುವೆಯೇ 2017ರಲ್ಲಿ ರಿಷಬ್​ ಮತ್ತು ಪ್ರಗತಿ ಅವರ ಮದುವೆಯ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಕತ್​ ಸೌಂಡ್​ ಮಾಡುತ್ತಿದೆ. ಅದರಲ್ಲಿ ಹೈಲೈಟ್​ ಆಗಿರುವುದು ರಿಷಬ್ ಆತ್ಮೀಯ ಗೆಳೆಯ ರಕ್ಷಿತ್ ಶೆಟ್ಟಿ ಮತ್ತು ನ್ಯಾಷನಲ್​ ಕ್ರಷ್​ ರಶ್ಮಿಕಾ ಮಂದಣ್ಣ (Rashmika Mandanna). ಜೊತೆಗೆ ತಾರೆಯರಾದ ಯಜ್ಞಾ ಶೆಟ್ಟಿ, ಶೀತಲ್ ಶೆಟ್ಟಿ ಸೇರಿದಂತೆ ಆಗ ತಾನೇ ಬಿಡುಗಡೆಯಾಗಿದ್ದ ಕಿರಿಕ್ ಪಾರ್ಟಿ ತಂಡ ಮದುವೆಯಲ್ಲಿ ಹಾಜರಿತ್ತು.

38
ಇಂಟರೆಸ್ಟಿಂಗ್​ ಲವ್​ ಸ್ಟೋರಿ

ಅಷ್ಟಕ್ಕೂ ರಿಷಬ್​ ಮತ್ತು ಪ್ರಗತಿ ಅವರ ಲವ್​ಸ್ಟೋರಿಯೂ ಚೆನ್ನಾಗಿದೆ. ಆಗ ಪ್ರಗತಿ ಶೆಟ್ಟಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದರು. ರಕ್ಷಿತ್ ಶೆಟ್ಟಿ ಅಭಿಮಾನಿ ಆಗಿದ್ದರು. 'ರಿಕ್ಕಿ' ಸಿನಿಮಾ ನೋಡಲು ಪ್ರಗತಿಯವರು ಫ್ರೆಂಡ್ಸ್​ ಜೊತೆ ಹೋದಾಗ, ಚಿತ್ರತಂಡ ಕೂಡ ಅಲ್ಲಿತ್ತು. ಅಲ್ಲಿಯವರೆಗೆ ಪ್ರಗತಿ ಅವರಿಗೆ ರಿಷಬ್​ ಯಾರು ಎಂದೇ ಗೊತ್ತಿರಲಿಲ್ಲ. ಸಿನಿಮಾ ಮುಗಿದ ಬಳಿಕ ಅಲ್ಲೇ ಇದ್ದ ರಿಷಬ್ ಶೆಟ್ಟಿಯವರ ಪರಿಚಯವನ್ನು ಸ್ನೇಹಿತೆಯರು ಮಾಡಿಸಿದಾಗ ಫೋಟೋ ಹೊಡೆಸಿಕೊಂಡು ಬಂದಿದ್ದರು.

48
ಕರಾವಳಿ ಮೂಲ- ಶುರುವಾಯ್ತು ಲವ್​

ಇಬ್ಬರೂ ಕರಾವಳಿಯವರು ಎಂದು ಗೊತ್ತಾದದ್ದೇ ತಡ, ಬಳಿಕ ಫೇಸ್‌ಬುಕ್‌ನಲ್ಲಿ ಪ್ರಗತಿಯವರನ್ನು ಹುಡುಕಿ ರಿಷಬ್ ಶೆಟ್ಟಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದರಂತೆ. ಅಲ್ಲಿಂದಲೇ ಲವ್​ ಶುರುವಾದದ್ದು. ಒಂದು ವರ್ಷದಲ್ಲಿಯೇ ಪ್ರೀತಿ, ಪ್ರಪೋಸ್​, ಮನೆಯಲ್ಲಿ ಎಲ್ಲರನ್ನೂ ಒಪ್ಪಿಸಿ ಮದುವೆಯೂ ಆಗಿದೆ. ಇದೀಗ ಮಗ ರಣ್ವಿತ್ ಶೆಟ್ಟಿ ಹಾಗೂ ಮಗಳು ರಾಧ್ಯ ಶೆಟ್ಟಿ ಮಕ್ಕಳಿದ್ದಾರೆ. ಪತ್ನಿಯ ಸಹಕಾರವನ್ನು ರಿಷಬ್​ ಸದಾ ಬಣ್ಣಿಸುತ್ತಲೇ ಇರುತ್ತಾರೆ.

58
ಸಂಪೂರ್ಣ ಯಶಸ್ಸು ಪತ್ನಿಗೆ

ಇನ್ನು ಕಾಂತಾರಾ-1ರ ಸಂಪೂರ್ಣ ಯಶಸ್ಸನ್ನು ರಿಷಬ್​ ಶೆಟ್ಟಿ ಪತ್ನಿಗೆ ಸಲ್ಲಿಸುತ್ತಾರೆ. ನಾಲ್ಕೈದು ವರ್ಷಗಳಿಂದ ಈ ಚಿತ್ರಕ್ಕಾಗಿ ಅವರು ತ್ಯಾಗ ಮಾಡಿದ್ದನ್ನು ನೆನಪಿಸಿಕೊಳ್ಳುತ್ತಾರೆ ರಿಷಬ್​. ಹೇಗೆ ಮಕ್ಕಳು, ಮನೆಯ ಜವಾಬ್ದಾರಿಯನ್ನು ಸಂಪೂರ್ಣ ವಹಿಸಿಕೊಂಡು, ಜೊತೆಗೆ ಚಿತ್ರಕ್ಕಾಗಿ ಕಾಸ್ಟ್ಯೂಮ್​ ಡಿಸೈನ್​ ಮಾಡಿಕೊಟ್ಟರು ಎನ್ನುವುದನ್ನೂ ಹೇಳುತ್ತಾರೆ.

68
ಪ್ಯಾನ್​ ಇಂಡಿಯಾ ಸ್ಟಾರ್​

ಇನ್ನು ರಿಷಬ್​ ಅವರ ಬಗ್ಗೆ ಹೇಳುವಂತೆಯೇ ಇಲ್ಲ. ರಿಕ್ಕಿ, ಕಿರಿಕ್ ಪಾರ್ಟಿ, ಸೇರಿದಂತೆ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದಾರೆ. ‘ಬೆಲ್ ಬಾಟಂ’ ಚಿತ್ರದ ನಾಯಕ ನಟನಾಗಿ ನಟಿಸಿದ್ದಾರೆ. ಇವೆಲ್ಲಾ ಸಾಕಷ್ಟು ಹೆಸರು ತಂದುಕೊಟ್ಟರೂ, ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಇವರು ಸ್ಟಾರ್​ ಆಗಿ ಗುರುತಿಸಿದ್ದು ಕಾಂತಾರಾ.

78
ಕಡಿಮೆ ಬಜೆಟ್​ ಚಿತ್ರ

ನೂರಾರು ಕೋಟಿ ರೂಪಾಯಿಗಳ ಬಿಗ್​ ಬಜೆಟ್​ ಚಿತ್ರ ನಿರ್ಮಿಸಿ, ವಾಸ್ತವಕ್ಕೆ ದೂರವಾಗಿರುವ ಅಂಶಗಳನ್ನು, ಕಲ್ಪನೆಗಳ ಪಾತ್ರಗಳನ್ನು ಸೃಷ್ಟಿಸಿ ಬಾಲಿವುಡ್​​ ಸಿನಿಮಾಗಳು ವಿಜೃಂಭಿಸುತ್ತಿರುವ ನಡುವೆಯೇ, ಅತ್ಯಂತ ಕಡಿಮೆ ಬಜೆಟ್​ನಲ್ಲಿ ಒಂದು ಚಿತ್ರ ಹೇಗೆ ಸಪ್ತದಾಗರದಾಚೆಯೂ ಸದ್ದು ಮಾಡಬಹುದು ಎಂಬುದನ್ನು ತೋರಿಸಿಕೊಟ್ಟವರು ರಿಷಬ್​ ಶೆಟ್ಟಿ.

88
ಇವರ ಮದುವೆಯ ವಿಡಿಯೋ ಇಲ್ಲಿದೆ.

Read more Photos on
click me!

Recommended Stories