ಶೈನ್ ಶೆಟ್ಟಿ ಸಿನಿಮಾ ಶೂಟಿಂಗ್ ವೇಳೆ ನಡೆಯಿತಾ ರಾಜು ತಾಳಿಕೋಟೆ ಎದೆನೋವಿನ ದುರಂತ?

Published : Oct 13, 2025, 07:44 PM IST

ಸಿನಿಮಾ ಶೂಟಿಂಗ್ ವೇಳೆ ಕಾಣಿಸಿಕೊಂಡಿದ್ದ ಎದೆನೋವು, ರಾಜು ತಾಳಿಕೋಟೆ ಅಂತಿಮ ಕ್ಷಣ ಮಾಹಿತಿ ಬಹಿರಂಗವಾಗಿದೆ. ಎಲ್ಲರ ನಗಿಸುತ್ತಿದ್ದ ರಾಜು ತಾಳಿಕೋಟೆ ಮನಸ್ಸಿನಲ್ಲಿ ನೋವೇ ತುಂಬಿಕೊಂಡಿತ್ತು. ಉಡುಪಿಯಲ್ಲಿ ಶೂಟಿಂಗ್ ಪ್ರಕ್ರಿಯೆಯಲ್ಲಿದ್ದ ರಾಜು ತಾಳಿಕೋಟೆ ಅಂತಿಮ ಕ್ಷಣದಲ್ಲಿ ಏನಾಯ್ತು?

PREV
15
ಶೂಟಿಂಗ್‌ನಲ್ಲಿ ಲವಲವಿಕೆಯಿಂದ ಇದ್ದ ರಾಜು ತಾಳಿಕೋಟೆ

ಶೂಟಿಂಗ್‌ನಲ್ಲಿ ಲವಲವಿಕೆಯಿಂದ ಇದ್ದ ರಾಜು ತಾಳಿಕೋಟೆ

ಎಲ್ಲರ ನಕ್ಕು ನಗಿಸುತ್ತಿದ್ದ ರಂಗಭೂಮಿ ಕಲಾವಿದ, ಹಾಸ್ಯ ನಟ ರಾಜು ತಾಳಿಕೋಟೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಚಟಪಟ ಮಾತು, ಉತ್ತರ ಕರ್ನಾಟಕ ಸೊಗಡಿನ ಭಾಷೆ, ವಿಶೇಷ ಹಾಗೂ ಭಿನ್ನ ಶೈಲಿಯಲ್ಲಿ ಹಾಸ್ಯದ ಮೂಲಕ ನಗಿಸುತ್ತಿದ್ದ ರಾಜು ತಾಳಿಕೋಟೆ ನಿಧನದಿಂದ ಕನ್ನಡ ಸಿನಿಮಾ ಲೋಕ ಪ್ರತಿಭಾವಂತ ನಟನ ಕಳೆದುಕೊಂಡಿದೆ. ಶೂಟಿಂಗ್‌ನಲ್ಲಿ ಲವಲವಿಕೆಯಿಂದ ಪಾಲ್ಗೊಂಡಿದ್ದ ರಾಜು ತಾಳಿಕೋಟೆಗೆ ದಿಢೀರ್ ಏನಾಯ್ತು?

25
ಉಡುಪಿಯಲ್ಲಿ ಸಿನಿಮಾ ಶೂಟಿಂಗ್‌ನಲ್ಲಿದ್ದ ರಾಜು ತಾಳಿಕೋಟೆ

ಉಡುಪಿಯಲ್ಲಿ ಸಿನಿಮಾ ಶೂಟಿಂಗ್‌ನಲ್ಲಿದ್ದ ರಾಜು ತಾಳಿಕೋಟೆ

ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ ನಾಯಕನಾಗಿ ಕಾಣಿಸಿಕೊಂಡಿರುವ ಸಿನಿಮಾದಲ್ಲಿ ರಾಜು ತಾಳಿಕೋಟೆ ಹಾಸ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಶೂಟಿಂಗ್ ಉಡುಪಿ ಸೇರಿದಂತೆ ಕರಾವಳಿ ಭಾಗದಲ್ಲಿ ನಡೆಯತ್ತಿದೆ. ಈ ಸಿನಿಮಾ ಶೂಟಿಂಗ್‌ಗಾಗಿ ಉಡುಪಿಯಲ್ಲಿ ಬೀಡುಬಟ್ಟಿದ್ದ ರಾಜು ತಾಳಿಕೋಟೆಗೆ ಎದೆನೋವು ಕಾಣಿಸಿಕೊಂಡ ಹೃದಯಾಘಾತ ಸಂಭವಿಸಿದೆ.

35
ಭಾನುವಾರ ಚಿತ್ರೀಕರಣ ಮುಗಿಸಿ ವಿಶ್ರಾಂತಿಯಲ್ಲಿದ್ದ ರಾಜು ತಾಳಿಕೋಟೆ

ಭಾನುವಾರ ಚಿತ್ರೀಕರಣ ಮುಗಿಸಿ ವಿಶ್ರಾಂತಿಯಲ್ಲಿದ್ದ ರಾಜು ತಾಳಿಕೋಟೆ

ಭಾನುವಾರ ಬೆಳಗ್ಗಿನಿಂದ ಸಂಜೆವರೆಗೂ ಸಿನಿಮಾ ಶೂಟಿಂಗ್‌ನಲ್ಲಿ ರಾಜು ತಾಳಿಕೋಟೆ ಪಾಲ್ಗೊಂಡಿದ್ದರು. ರಾತ್ರಿಯಾಗುತ್ತಿದ್ದಂತೆ ವಿಶ್ರಾಂತಿಗೆ ಜಾರಿದ್ದರು. ಈ ವೇಳೆ ರಾಜು ತಾಳಿಕೋಟೆಗೆ ಎದೆನೋವು ಕಾಣಿಸಿಕೊಂಡಿದೆ. ತಡರಾತ್ರಿ ಆರೋಗ್ಯದಲ್ಲಿ ಏರುಪೇರಾಗಿದೆ. ಹೀಗಾಗಿ ಮುಂಜಾನೆ 2.30ರ ಸುಮಾರಿಗೆ ಉಡುಪಿಯ ಕೆಂಎಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

45
ಫಲಕಾರಿಯಾಗಲಿಲ್ಲ ಚಿಕಿತ್ಸೆ

ಫಲಕಾರಿಯಾಗಲಿಲ್ಲ ಚಿಕಿತ್ಸೆ

ಮುಂಜಾನೆಯಿಂದ ಆಸ್ಪತ್ರೆ ತೀವ್ರ ನಿಘಾ ಘಚಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಜು ತಾಳಿಕೋಟೆ ಸಂಜೆಯಾಗುತ್ತಿದ್ದಂತೆ ಮತ್ತೆ ಹದಗೆಟ್ಟಿದೆ. ವೆಂಟಿಲೇಟರ್ ಮೂಲಕ ಚಿಕಿತ್ಸೆ ಪಡೆಯುತ್ತಿದ್ದ ತಾಳಿಕೋಟೆ ಸಂಜೆ 5.30ರ ಸುಮಾರಿಗೆ ನಿಧನರಾಗಿದ್ದಾರೆ. 59 ವರ್ಷದ ರಾಜು ತಾಳಿಕೋಟೆ ನಿಧನಕ್ಕೆ ಹಲವು ಸಂತಾಪ ಸೂಚಿಸಿದ್ದಾರೆ.

55
ಮನಸ್ಸಿನ ನೋವು ಎದೆಯೊಳಕ್ಕೆ ಇಳಿದಾಗ

ಮನಸ್ಸಿನ ನೋವು ಎದೆಯೊಳಕ್ಕೆ ಇಳಿದಾಗ

ರಾಜು ತಾಳಿಕೋಟೆ ಎಲ್ಲರ ನಕ್ಕು ನಗಿಸುತ್ತಿದ್ದ ಕಲಾವಿದ. ಆದರೆ ರಾಜು ತಾಳಿಕೋಟೆ ವೈಯುಕ್ತಿಕ ಬದುಕು ಹಸನಾಗಿರಲಿಲ್ಲ. ಇಬ್ಬರ ಹೆಂಡಿರ ಮುದ್ದಿನ ಗಂಡನಾಗಿದ್ದರೂ, ಮಗು, ಕುಟುಂಬ ಸೇರಿದಂತೆ ಎಲ್ಲವೂ ಅಸ್ತವ್ಯಸ್ತಗೊಂಡು ತೀವ್ರ ನೊಂದಿದ್ದರು. ಇದಕ್ಕೂ ಮೊದಲು ಹೃದಯಾಘಾತವಾಗಿ ಸ್ಟಂಟ್ ಅಳವಡಿಸಲಾಗಿತ್ತು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories