ಕಿರಾತಕ ಸಿನಿಮಾದಲ್ಲಿಯೇ ಫಿಕ್ಸ್ ಆಗಿತ್ತು ಟಾಕ್ಸಿಕ್ ರಿಲೀಸ್ ಡೇಟ್; ತಾರಾ ಹೇಳಿದ್ದ ಭವಿಷ್ಯನುಡಿ

Published : Jun 21, 2026, 04:56 PM IST

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ ಬಿಡುಗಡೆ ದಿನಾಂಕ ಅಂತಿಮಗೊಂಡಿದೆ. ಈ ದಿನಾಂಕಕ್ಕೂ 2011ರ 'ಕಿರಾತಕ' ಸಿನಿಮಾದ ಸಂಭಾಷಣೆಗೂ ಇರುವ ಅಚ್ಚರಿಯ ನಂಟನ್ನು ಈ ಲೇಖನದಲ್ಲಿ ವಿವರಿಸಲಾಗಿದೆ. ಶ್ರಾವಣ ಮಾಸದಲ್ಲಿ ಚಿತ್ರ ಬಿಡುಗಡೆಯಾಗುತ್ತಿರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

PREV
15
ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾ ಬಿಡುಗಡೆ ದಿನಾಂಕ ಮತ್ತು ಕಿರಾತಕ

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಈ ಹಿಂದೆ ಎರಡು ಬಾರಿ ಸಿನಿಮಾ ಬಿಡುಗಡೆ ದಿನಾಂಕ ಮುಂದೂಡಿಕೆಯಾಗಿತ್ತು. ಮೂರನೇ ಬಾರಿ ಚಿತ್ರತಂಡ ಬಿಡಗಡೆ ದಿನಾಂಕವನ್ನು ಅಂತಿಮಗೊಳಿಸಿದೆ. ಡೇಟ್ ಅನೌನ್ಸ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಕಿರಾತಕ ಸಿನಿಮಾದ ತುಣುಕು ಮುನ್ನಲೆಗೆ ಬಂದಿದೆ.

25
ಕಿರಾತಕ ಸಿನಿಮಾದಲ್ಲಿಯೇ ಮುಹೂರ್ತ

2011ರಲ್ಲಿ ಬಿಡುಗಡೆಗೊಂಡಿದ್ದ ಕಿರಾತಕ ಸಿನಿಮಾದಲ್ಲಿ ಪಕ್ಕಾ ಹಳ್ಳಿ ಹೈದನಾಗಿ ಯಶ್ ನಟಿಸಿದ್ದರು. ಗೂಳಿ ಹೆಸರಿನ ಪಾತ್ರ ಕೊಂಚ ಟಪೋರಿಯಾಗಿತ್ತು. ಅಪ್ಪ-ಅಮ್ಮನ ಮಾತು ಕೇಳದ, ಊರಿನಲ್ಲಿ ನಡೆಯೋ ಎಲ್ಲಾ ಗಲಾಟೆ ಘಟನೆಗಳಿಗೂ ಕಾರಣವಾಗುವ ಯುವಕನ ಪಾತ್ರದಲ್ಲಿ ಯಶ್ ಕಾಣಿಸಿಕೊಂಡಿದ್ದರು. ಗೂಳಿ ತಾಯಿ ಪಾತ್ರದಲ್ಲಿ ತಾರಾ ಅನುರಾಧ ಮತ್ತು ತಂದೆಯಾಗಿ ಟಿ.ಎಸ್.ನಾಗಾಭರಣ ನಟಿಸಿದ್ದರು.

35
ಗೂಳಿ ಪಾತ್ರದಲ್ಲಿ ನಟ ಯಶ್, ತಾಯಿಯಾಗಿ ತಾರಾ ಅನುರಾಧ

ಊರಿನಲ್ಲಿ ಯಾರೇ ಮಗ ಗೂಳಿ ಬಗ್ಗೆ ಕೆಟ್ಟದಾಗಿ ಹೇಳಿದ್ರೆ ತಾಯಿ ತಾರಾ, ಇವನಿಗೆ ಗ್ರಹಗತಿ ಚೆನ್ನಾಗಿಲ್ವಂತೆ. ಈ ಜೇಷ್ಠ ಮತ್ತು ಆಷಾಢ ಹೋಗಿ ಶ್ರಾವಣ ಬಂದ್ರೆ ಅವನು ಟಾಪ್ ಆಗಿ ಬರ್ತಾನೆ ಎಂದು ಜ್ಯೋತಿಷಿಗಳು ಹೇಳವ್ರೆ ಎಂದು ಹೇಳುತ್ತಿರುತ್ತಾರೆ. ಈ ಡೈಲಾಗ್‌ನಂತೆ ಟಾಕ್ಸಿಕ್ ಸಿನಿಮಾ ಶ್ರಾವಣ ಮಾಸದಲ್ಲಿಯೇ ಬಿಡುಗಡೆಯಾಗುತ್ತಿದೆ. ಈ ವರ್ಷ ಶ್ರಾವಣ ಮಾಸ ಆಗಸ್ಟ್ 13, 2026 ರಿಂದ ಆರಂಭವಾಗಿ ಸೆಪ್ಟೆಂಬರ್ 11, 2026 ರಂದು ಮುಕ್ತಾಯಗೊಳ್ಳಲಿದೆ.

45
ಶ್ರಾವಣದಲ್ಲಿ ಟಾಪ್‌ನಲ್ಲಿ ಬರ್ತಾರಂತೆ ರಾಕಿಂಗ್ ಸ್ಟಾರ್‌

ಟಾಕ್ಸಿಕ್ ಸಿನಿಮಾ ಆಗಸ್ಟ್ 26ರಂದು ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಸಾಮಾನ್ಯವಾಗಿ ಸಿನಿಮಾಗಳು ಶುಕ್ರವಾರ ಬಿಡುಗಡೆ ಆಗುತ್ತವೆ. ಆದ್ರೆ ಟಾಕ್ಸಿಕ್ ಬುಧವಾರದಂದು ಪ್ರಪಂಚದಾದ್ಯಂತ ತೆರೆ ಕಾಣಲಿದೆ. ಶ್ರಾವಣ ತಿಂಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿರೋದರಿಂದ ಟಾಕ್ಸಿಕ್ ಚಿತ್ರ ಬ್ಲಾಕ್‌ಬಸ್ಟರ್ ಆಗಲಿದೆ ಅನ್ನೋದು ಯಶ್ ಅಭಿಮಾನಿಗಳ ಮಾತು.

ಇದನ್ನೂ ಓದಿ: ಜನ್ಮದಿನದಂದೇ ಹೊಸ ಸಿನಿಮಾ ಮುಹೂರ್ತ; ಕಾವ್ಯ ಶೈವ ಹೀರೋಯಿನ್‌ ಅಂತ ಕೇಳಿದ್ರೆ ಮಾತೇ ಆಡ್ಲಿಲ್ಲ ಗಿಲ್ಲಿ ನಟ

55
ಮಾರ್ಚ್ 19, ಜೂನ್ 4, ಈಗ ಆಗಸ್ಟ್ 26

ಟಾಕ್ಸಿಕ್ ಮಾರ್ಚ್ 19ರಂದು ಸಿನಿಮಾ ಬಿಡುಗಡೆ ಆಗಲಿದೆ ಎಂದು ಅಧಿಕೃತಗೊಂಡಿತ್ತು. ಮಧ್ಯಪ್ರಾಚ್ಯದ ದೇಶಗಳಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗಿರೋದರಿಂದ ಸಿನಿಮಾ ಬಿಡುಗಡೆ ದಿನಾಂಕವನ್ನು ಜೂನ್ 4ಕ್ಕೆ ಮುಂದೂಡಲಾಗಿತ್ತು. ಆದ್ರೆ ಕೆಲವೇ ದಿನಗಳಲ್ಲಿ ಚಿತ್ರತಂಡ ತಾಂತ್ರಿಕ ಕಾರಣಗಳನ್ನು ನೀಡಿ ಜೂನ್ 4ರ ಬಿಡುಗಡೆ ದಿನಾಂಕ ರದ್ದುಗೊಳಿಸಿತ್ತು. ಇದೀಗ ಶ್ರಾವಣದಲ್ಲಿ ಚಿತ್ರ ಬಿಡುಗಡೆಗೆ ಮುಹೂರ್ತ ನಿಗದಿಯಾಗಿದೆ.

ಇದನ್ನೂ ಓದಿ: Bigg Boss ಶೋಗೆ ಹೋಗಿದ್ದು ತಂಗಿ, ಲವ್‌ ಆಗಿದ್ದು ಅಕ್ಕಂಗೆ; Bhavya Gowda ಮನೇಲಿ ಮದುವೆ ಸಂಭ್ರಮ! PHOTOS

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories