ಬಿಗ್ಬಾಸ್ ವಿನ್ನರ್ ಗಿಲ್ಲಿ ನಟ ಅವರ ಹುಟ್ಟುಹಬ್ಬದ ದಿನದಂದು ಅವರ ಚೊಚ್ಚಲ ನಾಯಕ ನಟನೆಯ ಚಿತ್ರದ ಶೀರ್ಷಿಕೆ ಅನಾವರಣಗೊಂಡಿದೆ. ಬಿಗ್ ಬಾಸ್ ಮನೆಯಲ್ಲಿ ತಮಗೆ ತಾವೇ ಇಟ್ಟುಕೊಂಡಿದ್ದ 'ಪಳಾರ್' ಹೆಸರನ್ನೇ ತಮ್ಮ ಹೊಸ ಸಿನಿಮಾಗೆ ಇಡಲಾಗಿದ್ದು, ನಟ ರವಿಚಂದ್ರನ್ ಚಿತ್ರಕ್ಕೆ ಚಾಲನೆ ನೀಡಿದ್ದಾರೆ.
ಇಂದು ಅರ್ಥಾತ್ ಜೂನ್ 21 ಬಿಗ್ಬಾಸ್ 12ರ ವಿನ್ನರ್, ಬಿಗ್ಬಾಸ್ ಮೂಲಕ ದಾಖಲೆ ಬರೆದ ಗಿಲ್ಲಿ ನಟ (Gilli Nata) ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಗೂಗಲ್ ದಾಖಲೆಯ ಪ್ರಕಾರ, ಗಿಲ್ಲಿ ನಟ (ಮಳವಳ್ಳಿ ನಟರಾಜ್) ಅವರು ಹುಟ್ಟಿದ್ದು 1998ರ ಜೂನ್ 21ರಂದು. ಅಲ್ಲಿಗೆ ಇಂದು 28 ವರ್ಷ ಮುಗಿಸಿ 29ನೇ ವಯಸ್ಸಿಗೆ ಕಾಲಿಡುತ್ತಿದ್ದಾರೆ.
26
ಹೊಸ ಚಿತ್ರದ ಟೈಟಲ್
ಇದೇ ವೇಳೆ ಅವರ ಹೊಸ ಚಿತ್ರದ ಟೈಟಲ್ ರಿವೀಲ್ ಆಗಿದೆ. ನಾಯಕನಾಗಿ ನಟಿಸ್ತಿರೋ ಮೊದಲ ಸಿನಿಮಾದ ಟೈಟಲ್ ಏನಿರುತ್ತೆ ಎನ್ನುವ ಕುತೂಹಲ ಅಭಿಮಾನಿಗಳಿಗೆ ಇತ್ತು. ಅದಕ್ಕೆ ಈಗ ತೆರೆ ಬಿದ್ದಿದೆ. ಕುತೂಹಲ ಎಂದರೆ, ಈ ಚಿತ್ರದ ಹೆಸರಿಗೂ, ಬಿಗ್ಬಾಸ್ಗೂ ಭಾರಿ ನಂಟಿದೆ.
36
ಬಿಗ್ಬಾಸ್ಗೆ ಲಿಂಕ್
ಅದೇನೆಂದರೆ, ಬಿಗ್ ಬಾಸ್ ಮನೆಯಲ್ಲಿ ಟಾಪ್ ಫೈನಲಿಸ್ಟ್‌ಗೆ ತಮ್ಮನ್ನ ತಾವು ವರ್ಣಿಸುವಂತೆ ಟಾಸ್ಕ್ ನೀಡಲಾಗಿತ್ತು. ಆಗ ತನಗೆ ತಾನೇ ಗಿಲ್ಲಿ ನಟ ಅವರು ‘ಪಳಾರ್ ಗಿಲ್ಲಿ’ ಎಂದು ತಮ್ಮ ವ್ಯಕ್ತಿತ್ವಕ್ಕೆ ನಾಮಕರಣ ಮಾಡಿಕೊಂಡಿದ್ದರು. ಸದ್ಯ ಅದೇ ಹೆಸರಿನಲ್ಲಿ ಸಿನಿಮಾ ಸೆಟ್ಟೇರುತ್ತಿದೆ. ಅವರ ಹೊಸ ಸಿನಿಮಾದ ಹೆಸರು ‘ಪಳಾರ್’.
ಇಂದು ಬೆಂಗಳೂರಿನ ಬಂಡೆ ಮಹಾಕಾಳಿ ಅಮ್ಮನವರ ದೇವಸ್ಥಾನದಲ್ಲಿ ನಟ ರವಿಚಂದ್ರನ್ ಅವರು ಗಿಲ್ಲಿ ನಟನಿಗೆ ಕ್ಲ್ಯಾಪ್ ಮಾಡಿ ‘ಪಳಾರ್’ ಸಿನಿಮಾದ ಟೈಟಲ್ ಕೂಡ ಅನೌನ್ಸ್ ಮಾಡಿದರು.
56
ಬಂಡವಾಳ ಯಾರದ್ದು?
ಕೆವಿನ್ ಪ್ರೋಡಕ್ಷನ್ಸ್ ನಿರ್ಮಾಣ ಸಂಸ್ಥೆಯ ಬೆಂಬಲದೊಂದಿಗೆ ರಾಶಿ ಫಿಲ್ಮ್ಸ್ ನಿರ್ಮಾಣ ಸಂಸ್ಥೆಯಡಿ ಹರೀಶ್ ಮತ್ತು ನವೀನ್ ಅವರು ‘ಪಳಾರ್’ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ನಿರ್ದೇಶಕ ಚಂದ್ರ ಮೋಹನ್ ಅವರು ಗಿಲ್ಲಿ ನಟನಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸಂಗೀತ ಸಂಸ್ಥೆ ಆನಂದ್ ಆಡಿಯೋ, ಗಾಯಕ ವಾಸುಕಿ ವೈಭವ್ ಅವರು ಸಿನಿಮಾಗೆ ಕೈಜೋಡಿಸಿದ್ದಾರೆ.
66
ನಾಯಕಿ ಯಾರು?
ಅಂದಹಾಗೆ, ಇದುವರೆಗೆ ಸಿನಿಮಾದ ನಾಯಕಿ ಯಾರು ಎನ್ನುವುದು ಕುತೂಹಲವಾಗಿಯೇ ಉಳಿದಿದೆ. ಬಿಗ್ಬಾಸ್ನ ಫೇಮಸ್ ಜೋಡಿ ಕಾವ್ಯಾ ಶೈವ ಇರಬಹುದೇ ಎನ್ನುವ ಕುತೂಹಲ ಹಲವರನ್ನು ಕಾಡುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.