ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಅವರ ಪುತ್ರಿ ಆಯ್ರಾಳ 7ನೇ ವರ್ಷದ ಹುಟ್ಟುಹಬ್ಬವನ್ನು ಬೆಂಗಳೂರಿನ ಐಷಾರಾಮಿ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು. ರಾಜಕುಮಾರಿಯಂತೆ ಕಂಗೊಳಿಸಿದ ಆಯ್ರಾ ಕೇಕ್ ಕತ್ತರಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಾಕಿಂಗ್ ಸ್ಟಾರ್ ಯಶ್ ಮತ್ತು ಸ್ಯಾಂಡಲ್ವುಡ್ ಸಿಂಡ್ರೆಲ್ಲಾ ಎಂದೇ ಫೇಮಸ್ ಆಗಿರೋ ನಟಿ ರಾಧಿಕಾ ಪಂಡಿತ್ ಅವರ ಹಿರಿಯ ಪುತ್ರಿ ಆಯ್ರಾಗೆ ಇದೇ 2ರಂದು ಏಳು ವರ್ಷಗಳು ತುಂಬಿವೆ. 2018ರ ಡಿಸೆಂಬರ್ 2ರಂದು ಜನಿಸಿರೋ ಆಯ್ರಾ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಮಾಡಲಾಗಿದೆ.
26
ಪಾಪು ಫೋಟೋ ಶೇರ್
ಮೊನ್ನೆ (ಡಿ.2) ನಡೆದ ಈ ಹುಟ್ಟುಹಬ್ಬದ ವಿಡಿಯೋ ಈಗ ವೈರಲ್ ಆಗಿದೆ. ಯಶ್ ಮತ್ತು ರಾಧಿಕಾ ಇಬ್ಬರೂ ಆಯ್ರಾ ಚಿಕ್ಕಪಾಪು ಆಗಿದ್ದಾಗಿನ ಫೋಟೋಗಳನ್ನು ಹುಟ್ಟುಹಬ್ಬದ ದಿನ ಶೇರ್ ಮಾಡಿಕೊಂಡು ಬರ್ತ್ಡೇ ವಿಷಸ್ ತಿಳಿಸಿದ್ದಾರೆ. ಆದರೆ ಹುಟ್ಟುಹಬ್ಬದ ಫೋಟೋಗಳನ್ನು ಅವರು ಶೇರ್ ಮಾಡಲಿಲ್ಲ.
36
ಐಷಾರಾಮಿ ಹೋಟೆಲ್‌ನಲ್ಲಿ ಸಂಭ್ರಮ
ಆದರೆ ಬೆಂಗಳೂರಿನ ಐಷಾರಾಮಿ ಹೋಟೆಲ್ ಒಂದರಲ್ಲಿ ಹುಟ್ಟುಹಬ್ಬವನ್ನು ಆಯೋಜಿಸಲಾಗಿದ್ದು, ಅದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಆಗುತ್ತಿದೆ.
ಚಿತ್ರಸಂತೆ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಆಯ್ರಾ ಹುಟ್ಟುಹಬ್ಬದ ಸೆಲೆಬ್ರೇಷನ್ನ ಕ್ಯೂಟ್ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳಲಾಗಿದೆ. ಇದರಲ್ಲಿ ಯಶ್ ಮತ್ತು ರಾಧಿಕಾ ಕುಟುಂಬಸ್ಥರು ಹಾಗೂ ಆತ್ಮೀಯರಿಗೆ ಆಹ್ವಾನ ನೀಡಿರುವುದನ್ನು ನೋಡಬಹುದು.
56
ರಾಜಕುಮಾರಿಯಂತೆ ಅಲಂಕಾರ
ಆಯ್ರಾ ರಾಜಕುಮಾರಿಯಂತೆ ಕಂಗೊಳಿಸುತ್ತಿದ್ದಾಳೆ. ಕೇಕ್ ಕಟ್ ಮಾಡುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಾಗಿದೆ.ಈ ಸಂದರ್ಭದಲ್ಲಿ ಯಶ್ ಅವರ ಸಹೋದರಿ ನಂದಿನಿ ಕೂಡ ಹಾಜರು ಇರುವುದನ್ನು ನೋಡಬಹುದು.
66
ಇಬ್ಬರು ಮಕ್ಕಳು
ಅಂದಹಾಗೆ ಯಶ್ ಅವರಿಗೆ ಇಬ್ಬರು ಮಕ್ಕಳು. ಆಯ್ರಾಗೆ ಈಗ ಏಳು ವರ್ಷವಾಗಿದ್ದರೆ ಚಿಕ್ಕವ ಯಥರ್ವ್ಗೆ ಈಗ ಆರು ವರ್ಷ. ಈಚೆಗಷ್ಟೇ ಆತನ ಹುಟ್ಟುಹಬ್ಬ ಕೂಡ ನಡೆದಿತ್ತು.