'ಪ್ರಳಯಾಂತಕ' ರವಿಚಂದ್ರನ್ ಮಗ ಮನೋರಂಜನ್ ಈ ಲುಕ್‌ 'ಶಾಂತಿ'ಯಲ್ಲ ಕ್ರಾಂತಿಯೇ' ಅಂತೀರಾ?

Published : Dec 04, 2025, 04:51 PM IST

ರವಿಚಂದ್ರನ್‌ ಪುತ್ರ ಮನೋರಂಜನ್‌ ಮೊದಲ ಬಾರಿ ನೆಗೆಟಿವ್‌ ಶೇಡ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಿ.ಕೆ.ಚಂದ್ರಹಾಸ ನಿರ್ದೇಶನದ ‘ಕೌಂತೇಯ’ ಎಂಬ ಮರ್ಡರ್‌ ಮಿಸ್ಟ್ರಿಯಲ್ಲಿ ವಿಶಿಷ್ಟ ಪಾತ್ರದಲ್ಲಿ ನಟಿಸುತ್ತಿದ್ದಾರೆ.

PREV
16
ಮರ್ಡರ್ ಮಿಸ್ಟ್ರಿ ಕಥಾಹಂದರ

ಇತ್ತೀಚೆಗಷ್ಟೇ ಮುಹೂರ್ತ ಆಚರಿಸಿಕೊಂಡಿದ್ದ ಮನೋರಂಜನ್ ಹಾಗೂ ಅಚ್ಯುತ್ ಕುಮಾರ್ ಪ್ರಮುಖ ಭೂಮಿಕೆಯಲ್ಲಿರುವ ಕೌಂತೇಯ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಮರ್ಡರ್ ಮಿಸ್ಟ್ರಿ ಕಥಾಹಂದರವಿರುವ ಈ ಸಿನಿಮಾದಲ್ಲಿ ಅಚ್ಯುತ್ ಕುಮಾರ್ ಪಾಸಿಟಿವ್ ಕ್ಯಾರೆಕ್ಟರ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

26
ನೆಗೆಟಿವ್‌ ಶೇಡ್‌ನಲ್ಲಿ ಮನೋರಂಜನ್

ಇದೇ ಮೊದಲ ಬಾರಿಗೆ ರವಿಚಂದ್ರನ್ ಪುತ್ರ ಮನೋರಂಜನ್ ನೆಗೆಟಿವ್‌ ಶೇಡ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಗೆಟಪ್ ಸಹ ಭಿನ್ನವಾಗಿದ್ದು, ಯಾಕಾಗಿ ಅವರು ನೆಗೆಟಿವ್ ಪಾತ್ರ ನಿಭಾಯಿಸುತ್ತಿದ್ದಾರೆ ಎಂಬುದು ಸದ್ಯಕ್ಕೆ ಗೌಪ್ಯವಾಗಿರಿಸಿದೆ ‘ಕೌಂತೇಯ’ ತಂಡ.

36
ಎಸಿಪಿಯಾಗಿ ಪ್ರಿಯಾಂಕಾ ತಿಮ್ಮೇಶ್

ಮನೋರಂಜನ್‌ಗೆ ಜೋಡಿಯಾಗಿ ಅನನ್ಯ ರಾಜಶೇಖರ್ ನಟಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಪ್ರಮುಖ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವ ಅನನ್ಯ, ಆರಂಭದಲ್ಲೇ ಮುಖ್ಯ ಪಾತ್ರ ದೊರೆತ ಖುಷಿಯಲ್ಲಿದ್ದಾರೆ. ಇನ್ನು ಎಸಿಪಿಯಾಗಿ ಪ್ರಿಯಾಂಕಾ ತಿಮ್ಮೇಶ್ ಇದ್ದಾರೆ. ಇದೇ ಮೊದಲ ಬಾರಿಗೆ ಪ್ರಿಯಾಂಕಾ ಖಾಕಿ ತೊಟ್ಟು ಕಂಗೊಳಿಸುತ್ತಿದ್ದಾರೆ.

46
ಅಚ್ಯುತ್ ಕುಮಾರ್ ಮಗಳಾದ ಶರಣ್ಯ

ಶರಣ್ಯ ಶೆಟ್ಟಿ ಚಿತ್ರದ ನಾಯಕಿ. ಅಚ್ಯುತ್ ಕುಮಾರ್ ಮಗಳ ಪಾತ್ರದಲ್ಲಿ ಶರಣ್ಯ ಕಾಣಿಸಿಕೊಂಡಿದ್ದಾರೆ. ಶ್ರೀ ಮಾಂಕಾಳಿ ಪಿಕ್ಚರ್ಸ್‌ ಬ್ಯಾನರ್ ಅಡಿಯಲ್ಲಿ ತಯಾರಾಗಿರುವ ಈ ಸಿನಿಮಾಕ್ಕೆ ಸುರೇಶ್ ಕುಮಾರ್ ಬಂಡವಾಳ ಹೂಡಿದ್ದಾರೆ.

56
ಮೈಸೂರಿನ ಸುತ್ತಮುತ್ತ ಶೂಟಿಂಗ್

ಬಿ.ಕೆ.ಚಂದ್ರಹಾಸ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಇವರ ಜತೆ ಚಿತ್ರಕಥೆಗೆ ಸಾಥ್ ನೀಡುವುದರ ಜತೆಗೆ ಸಂಭಾಷಣೆಗೆ ಪೆನ್ನು ಹಿಡಿದಿದ್ದಾರೆ ಹರಿ. ಪಿ.ಎಲ್.ರವಿ ಛಾಯಾಗ್ರಹಣ ಈ ಚಿತ್ರಕ್ಕಿದೆ. ಬಹುತೇಕ ಮೈಸೂರಿನ ಸುತ್ತಮುತ್ತ ಶೂಟಿಂಗ್ ನಡೆಸಿರುವ ಚಿತ್ರತಂಡ, ಈಗಾಗಲೇ ಶೇ.70ರಷ್ಟು ಮುಗಿಸಿದೆ.

66
ಕೌಂತೇಯ ಯಾರು?

ಕೌಂತೇಯ ಅಂದರೆ ಕುಂತಿಪುತ್ರ ಎಂದರ್ಥ. ಈ ಚಿತ್ರದಲ್ಲಿ ಕೌಂತೇಯ ಯಾರು ಎಂಬುದು ಒಂದೆಡೆಯಾದರೆ, ಮತ್ತೊಂದೆಡೆ ಮರ್ಡರ್ ಮಿಸ್ಟ್ರಿ ಕಥೆಯನ್ನು ಕೌತುಕವಾಗಿ ತೆಗೆದುಕೊಂಡು ಹೋಗಿರುವುದೇ ಈ ಚಿತ್ರದ ವಿಶೇಷ ಎಂದರು ನಿರ್ದೇಶಕ ಚಂದ್ರಹಾಸ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories