ಸಚಿವ ಜಮೀರ್ ಮಗನಿಗೆ ಲವ್ ಬ್ರೇಕಪ್‌... 'ನಿನ್ನಲ್ಲೇ ನಾನಿರೇ' ಅಂತ ಟ್ರೆಂಡಿಂಗ್‌ ಸಾಂಗ್‌ ಹಾಡಿದ ಝೈದ್ ಖಾನ್

Published : Dec 04, 2025, 05:15 PM IST

ಝೈದ್ ಖಾನ್, ರಚಿತಾ ರಾಮ್ ಹಾಗೂ ಮಲೈಕಾ ವಸುಪಾಲ್ ನಟನೆಯ ‘ಕಲ್ಟ್’ ಚಿತ್ರದ ಬ್ರೇಕಪ್‌ ಸಾಂಗ್‌ ‘ನಿನ್ನಲ್ಲೇ ನಾನಿರೇ’ ಜನಮೆಚ್ಚುಗೆ ಗಳಿಸಿದೆ. ಅನಿಲ್‌ ಕುಮಾರ್‌ನಿರ್ದೇಶನದ ‘ಕಲ್ಟ್‌’ ಸಿನಿಮಾ ಜ.23ರಂದು ಬಿಡುಗಡೆಯಾಗಲಿದೆ.

PREV
15
ಜನಮೆಚ್ಚುಗೆ ಗಳಿಸಿದ ನಿನ್ನಲ್ಲೇ ನಾನಿರೇ

ಝೈದ್ ಖಾನ್, ರಚಿತಾ ರಾಮ್ ಹಾಗೂ ಮಲೈಕಾ ವಸುಪಾಲ್ ನಟನೆಯ ‘ಕಲ್ಟ್’ ಚಿತ್ರದ ಬ್ರೇಕಪ್‌ ಸಾಂಗ್‌ ‘ನಿನ್ನಲ್ಲೇ ನಾನಿರೇ’ ಜನಮೆಚ್ಚುಗೆ ಗಳಿಸಿದೆ. ಅನಿಲ್‌ ಕುಮಾರ್‌ನಿರ್ದೇಶನದ ‘ಕಲ್ಟ್‌’ ಸಿನಿಮಾ ಜ.23ರಂದು ಬಿಡುಗಡೆಯಾಗಲಿದೆ.

25
ಅರ್ಜುನ್ ಜನ್ಯಾ ಸಂಗೀತ

‘ನಿನ್ನಲ್ಲೇ ನಾನಿರೇ...’ ಬಿಡುಗಡೆಯಾಗಿರುವ ಸಿನಿಮಾದ ಮೂರನೇ ಹಾಡಾಗಿದ್ದು, ಅನಿಲ್ ಕುಮಾರ್ ಹಾಗೂ ನಿಶಾನ್ ರೈ ಸಾಹಿತ್ಯ ಬರೆದಿದ್ದಾರೆ. ಅರ್ಜುನ್ ಜನ್ಯಾ ಸಂಗೀತದಲ್ಲಿ ಮೂಡಿ ಬಂದಿರುವ ಈ ಹಾಡನ್ನು ನಿಶಾನ್ ರೈ ಹಾಡಿದ್ದಾರೆ.

35
ಬ್ಲಡಿ ಲವ್‌ಗೆ ಸಾಕಷ್ಟು ಮೆಚ್ಚುಗೆ

ಜಸ್ಕರಣ್ ಸಿಂಗ್ ಹಾಗೂ ಪೃಥ್ವಿ ಭಟ್ ಹಾಡಿರುವ ‘ಅಯ್ಯೋ ಶಿವನೇ...’ ಹಾಡು ಈಗಾಗಲೇ ಮಿಲಿಯನ್ ಹಿಟ್ಸ್ ಗಳಿಸಿದೆ. ‘ಬ್ಲಡಿ ಲವ್’ ಹಾಡಿಗೂ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದ್ದು, ಆನಂದ್‌ ಆಡಿಯೋ ದೊಡ್ಡ ಮೊತ್ತ ನೀಡಿ ಈ ಸಿನಿಮಾದ ಆಡಿಯೋ ಹಕ್ಕು ಪಡೆದಿದೆ. ಲೋಕಿ ಸಿನಿಮಾಸ್ ಲಾಂಛನದಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ.

45
ಸಾಮಾಜಿಕ ಜಾಲತಾಣದಲ್ಲಿ ಹಾಡಿನ ಹವಾ

ಝೈದ್ ಲುಕ್, ಮ್ಯಾನರಿಸಂ ಸಿನಿಪ್ರಿಯರಲ್ಲಿ ಕಲ್ಟ್ ಚಿತ್ರದ ಮೇಲಿನ ನಿರೀಕ್ಷೆ ಡಬಲ್ ಆಗುವಂತೆ ಮಾಡಿದೆ ಎಂದು ಸಿನಿಪ್ರಿಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಗೊಂಡಿರುವ ಹಾಡುಗಳು ಒಂದಕ್ಕಿಂತ ಒಂದು ಹೆಚ್ಚು ನಿರೀಕ್ಷೆಗಳನ್ನು ಹುಟ್ಟುಹಾಕಿವೆ.

55
ಅನಿಲ್ ಕುಮಾರ್ ನಿರ್ದೇಶನ

ಕೆವಿಎನ್ ಪ್ರೊಡಕ್ಷನ್ಸ್‌ ಅರ್ಪಿಸುವ, ಲೋಕಿ ಸಿನಿಮಾಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಬಹು ನಿರೀಕ್ಷಿತ 'ಕಲ್ಟ್' ಚಿತ್ರದ ರಚನೆ ಹಾಗೂ ನಿರ್ದೇಶನ ಅನಿಲ್ ಕುಮಾರ್ ಅವರದು. ರವಿವರ್ಮ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

Read more Photos on
click me!

Recommended Stories