ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ ಕ್ರಿಕೇಟರ್ ಶ್ರೇಯಾಂಕ ಪಾಟೀಲ್ ಕೈಹಿಡಿಯಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗುತ್ತಿದೆ. ಇದೀಗ ಅದಕ್ಕೆ ನಟ ನಿರಂಜನ್ ಸರಿಯಾಗಿ ತಿರುಗೇಟು ನೀಡಿದ್ದಾರೆ. ನಿರಂಜನ್ ಏನಂದ್ರು ನೋಡಿ.
ಇತ್ತೀಚೀನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಹಾವಳಿ ಎಷ್ಟು ಹೆಚ್ಚಾಗಿದೆ ಅಂದ್ರೆ, ಯಾರ್ಯಾರಿಗೋ ಸಂಬಂಧ ಕಟ್ಟಿ, ಮದುವೇನೂ ಮಾಡಿಸುತ್ತಾರೆ. ಅದರಲ್ಲೂ ನಟ-ನಟಿಯರನ್ನು ಎಷ್ಟೋ ಸಲ ಎಷ್ಟೋ ಜನರ ಜೊತೆ ಮಾತಲ್ಲೇ, ತಮ್ಮ ಗಾಸಿಪ್ ಮೂಲಕವೇ ಮದುವೆ ಮಾಡಿಸಿ ಬಿಡುತ್ತಾರೆ. ಇದೀಗ ಉಪೇಂದ್ರ ಅಣ್ಣನ ಮಗನ ಕುರಿತು ಕೂಡ ಇಂತದ್ದೊಂದು ಸುದ್ದಿ ಕೇಳಿ ಬರುತ್ತಿದೆ.
26
ಉಪೇಂದ್ರ ಮನೆ ಸೊಸೆ ಆಗ್ತಿದ್ದಾರೆ ಶ್ರೇಯಾಂಕ
ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ನಟ ನಿರ್ದೇಶಕ ಉಪೇಂದ್ರ ಅವರ ಅಣ್ಣ ಸುಧೀಂದ್ರ ಅವರ ಹಿರಿಯ ಪುತ್ರ ಹಾಗೂ ನಟನಾಗಿರುವ ನಿರಂಜನ್ ಜೊತೆ, ಕ್ರಿಕೇಟರ್, ಆರ್ ಸಿಬಿ ಗರ್ಲ್ ನಮ್ಮ ಕನ್ನಡತಿ ಶ್ರೇಯಾಂಕ ಪಾಟೀಲ್ ವಿವಾಹ ನಡೆಯಲಿದೆ, ಶೀಘ್ರದಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಅನ್ನುವ ಸುದ್ದಿ ಕೂಡ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
36
ವೈರಲ್ ಪೋಸ್ಟ್ ನಲ್ಲಿ ಏನಿತ್ತು?
ಸೋಶಿಯಲ್ ಮೀಡಿಯಾದ ಪೇಜ್ ಒಂದು ಈ ರೀತಿಯಾಗಿ ಪೋಸ್ಟ್ ಹಾಕಿತ್ತು… ‘ಉಪೇಂದ್ರ ಅವರ ಕುಟುಂಬದ ಸೊಸೆಯಾಗಲಿದ್ದಾರೆ ಶ್ರೇಯಾಂಕ ಪಾಟೀಲ್, IPL ನಲ್ಲಿ ಮಿಂಚಿದ ಕರ್ನಾಟಕದ ಪುಟ್ಟಿ ಇದೀಗ ಉಪ್ಪಿ ಅಣ್ಣನ ಮಗ ನಿರಂಜನ್ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂಬ ವರದಿಯಾಗಿದೆ, ಖುದ್ದು ಉಪೇಂದ್ರ ಅವರ ಮೂಲಕ ನಿರಂಜನ್ ಹಾಗೂ ಶ್ರೇಯಾಂಕ ಪಾಟೀಲ್ ಲವ್ ಸ್ಟೋರಿ ರಿವೀಲ್ ಆಗಿದ್ದು, ಇದೀಗ ಈ ಜೋಡಿ ಇದೇ ವರ್ಷ ಸಿಹಿಸುದ್ದಿ ಕೊಡುವ ಸಾಧ್ಯತೆ ಇದೆ.’ ಎಂದು ಪೋಸ್ಟ್ ಮಾಡಲಾಗಿತ್ತು.
ಈ ಪೋಸ್ಟ್ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ನಟ ನಿರಂಜನ್ ಸುಧೀಂದ್ರ ಇದಕ್ಕೆ ರಿಪ್ಲೈ ಮಾಡಿ ತಿರುಗೇಟು ಕೊಟ್ಟಿದ್ದಾರೆ. ‘ಅಡ್ಮಿನ್ ಇನ್ವಿಟೇಶನ್ ಬಂದ್ರೆ ನಮಗೂ ಕಳುಹಿಸಿ ಕೊಡು ಗುರು. ಮೊದಲಿಗೆ ಫಾಕ್ಟ್ ಚೆಕ್ ಮಾಡಿ, ನಂತರ ಪೋಸ್ಟ್ ಮಾಡಿ. ಈ ರೀತಿಯಾಗಿ ಸುಳ್ಳು ಸುದ್ದಿ ಹರಡುವುದನ್ನು ನಿಲ್ಲಿಸಿ. Thank you for your attention to this matter! ಎಂದು ನಿರಂಜನ್ ಬರೆದುಕೊಂಡಿದ್ದಾರೆ.
56
ಟ್ರೋಲ್ ಪೇಜ್ ಗಳ ಹಾವಳಿ
ಸುದ್ದಿ ಎಲ್ಲಿಂದ ವೈರಲ್ ಆಗಿದೆ ಅನ್ನೋದು ಗೊತ್ತಿಲ್ಲ. ಆದರೆ, ಸೋಶಿಯಲ್ ಮೀಡಿಯಾದ ಕೆಲವೊಂದು ಟ್ರೋಲ್ ಪೇಜ್ ಗಳು, ಮೀಮ್ಸ್ ಪೇಜ್ ಗಳು, ಎಲ್ಲಾದರೂ ಯಾರೋ ಕಂಟೆಂಟ್ ಹಾಕಿದ್ದರೆ ಸಾಕು, ಅದನ್ನೆ ಕಾಪಿ ಮಾಡಿ ಪೋಸ್ಟ್ ಮಾಡುತ್ತಾರೆ. ಅದು ನಿಜವೇ ಸುಳ್ಳೇ ಅನ್ನೋದನ್ನು ಚೆಕ್ ಮಾಡೊದಕ್ಕೂ ಹೋಗುವುದಿಲ್ಲ. ಕೆಲವು ದಿನಗಳ ಹಿಂದೆ ಇದೇ ರೀತಿ ಟ್ರೋಲ್ ಪೇಜ್ ಗಳು ನಿರೂಪಕಿ ಅನುಪಮಾ ಗೌಡ ಅವರ ನಿಶ್ಚಿತಾರ್ಥ ಕೂಡ ಮಾಡಿ ಮುಗಿಸಿದ್ದರು.
66
ನಿರಂಜನ್ ಸಿನಿಮಾ
ಅಂದ ಹಾಗೇ ನಿರಂಜನ್, ಈಗಷ್ಟೇ ಚಂದನವನಕ್ಕೆ ಕಾಲಿಟ್ಟಿದ್ದಾರೆ. ಇತ್ತೀಚೆಗೆ ನಿರಂಜನ್ ಹಾಗೂ ಐಶ್ವರ್ಯ ಅರ್ಜುನ್ ನಟಿಸಿರುವ ‘ಸೀತಾ ಪಯಣ’ ಸಿನಿಮಾ ರಿಲೀಸ್ ಆಗಿತ್ತು. ಆದರೆ ಸಿನಿಮಾ ಜನರಿಗೆ ರೀಚ್ ಆಗಿದ್ದು ಕಡಿಮೆ. ಆದರೆ ನಿರಂಜನ್ ಪರ್ಸನಾಲಿಟಿ ಜೋಡಿ, ಇವರು ಹೀರೋ ಮೆಟೀರಿಯಲ್ ಎನ್ನುತ್ತಿದ್ದಾರೆ ಅಭಿಮಾನಿಗಳು. ಸ್ಪಾರ್ಕ್ ಸಿನಿಮಾದಲ್ಲೂ ಸಹ ನಿರಂಜನ್ ನಟಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.