ಕಾಂಟ್ರವರ್ಸಿ ಮಾಡೋರ ವಿರುದ್ಧ ನಾನು ಯುದ್ಧಕ್ಕೆ ನಿಂತ್ರೆ ಆಗೋದೇ ಬೇರೆ- ಗುಡುಗಿದ ನಟಿ ಸಪ್ತಮಿ ಗೌಡ

Published : Apr 03, 2026, 04:53 PM IST

ನಟಿ ಸಪ್ತಮಿ ಗೌಡ ಅವರು, ನಟಿಯರ ಫೋಟೊ ಮತ್ತು ವಿಡಿಯೋಗಳನ್ನು ಅಸಭ್ಯವಾಗಿ ಚಿತ್ರೀಕರಿಸುವವರ ವಿರುದ್ಧ ಗರಂ ಆಗಿದ್ದಾರೆ. ಕಾಂಟ್ರವರ್ಸಿ ಮಾಡುವವರ ವಿರುದ್ಧ ಯುದ್ಧಕ್ಕೆ ನಿಂತರೆ ಅವರಿಗೆ ನರಕ ತೋರಿಸುವುದಾಗಿ ಸಂದರ್ಶನವೊಂದರಲ್ಲಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

PREV
16
ಗರಂ ಮೂಡ್​ನಲ್ಲಿ ಸಪ್ತಮಿ ಗೌಡ

ಸದ್ಯ ನಟಿ ಸಪ್ತಮಿ ಗೌಡ ಗರಂ ಮೂಡ್​ನಲ್ಲಿ ಇದ್ದಾರೆ. ಈಚೆಗಷ್ಟೇ ನಟಿಯರ ಫೋಟೊ ಮತ್ತು ವಿಡಿಯೋಗಳನ್ನು ಅಸಭ್ಯವಾಗಿ ಚಿತ್ರೀಕರಿಸಿ ಅವುಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವ ಪರಿಪಾಠದ ವಿರುದ್ಧ ದೊಡ್ಡ ಸಮರವನ್ನೇ ಸಾರಿದ್ದ ನಟಿಗೆ ಇದಾಗಲೇ ಹಲವರು ಬೆಂಬಲ ನೀಡಿದ್ದಾರೆ. ಲೈಕ್ಸ್​, ವ್ಯೂವ್ಸ್​ಗಾಗಿ ಒಂದಷ್ಟು ಮಂದಿ ನಡೆದುಕೊಳ್ಳುತ್ತಿರುವುದು ಸೆಲೆಬ್ರಿಟಿಗಳಿಗೆ ಭಾರಿ ಮುಜುಗರ ತರುತ್ತಿದೆಯಾದರೂ, ಅದರ ವಿರುದ್ಧ ದನಿ ಎತ್ತಿದವರು ಕಡಿಮೆಯೇ. ಇದೀಗ ನಟಿ ಸಪ್ತಮಿ ಅವರು ಎತ್ತಿದ ದನಿಗೆ ಹಲವಾರು ಮಂದಿ ಕೈಜೋಡಿಸಿದ್ದಾರೆ.

26
ಗುಡುಗಿದ ನಟಿ

ಇದರ ಬೆನ್ನಲ್ಲೇ ನಟಿ ಕಾಂಟ್ರವರ್ಸಿ ಕ್ರಿಯೇಟ್​ ಮಾಡುವವರಿಗೆ ಗುಡುಗಿದ್ದಾರೆ. ಕಾಂಟ್ರವರ್ಸಿ ಮಾಡೋರ ವಿರುದ್ಧ ನಾನು ಯುದ್ಧಕ್ಕೆ ನಿಂತ್ರೆ ಆಗೋದೇ ಬೇರೆ. ಅವರಿಗೆ ಏನಾಗುತ್ತದೆಯೋ ಅದಕ್ಕೆ ಅವರೇ ಜವಾಬ್ದಾರರಾಗುತ್ತಾರೆ ಎಂದು ಕಿಡಿ ಕಾರಿದ್ದಾರೆ.

36
ನರಕ ಅನುಭವಿಸ್ತೀರಿ

kadakk_talks ಚಾನೆಲ್​ಗೆ ನೀಡಿರುವ ಸಂದರ್ಶನದಲ್ಲಿ ನಟಿ, ನಾನು ನನ್ನ ಯುದ್ಧವನ್ನು ಆಯ್ಕೆ ಮಾಡುವಾಗ ತುಂಬಾ ಕೇರ್​ಫುಲ್​ ಆಗಿ ಇರುತ್ತೇನೆ. ಒಂದು ವೇಳೆ ನೀವು ಅದೇ ಯುದ್ಧಭೂಮಿಗೆ ನನ್ನನ್ನು ತಳ್ಳಿದರೆ ನರಕ ಅನುಭವಿಸುತ್ತೀರಿ. ನಾನು ಜಯ ಸಾಧಿಸುತ್ತೇನೆ ಎನ್ನುವುದು ನನಗೆ ಗೊತ್ತು ಎನ್ನುವ ಮೂಲಕ ಕಾಂಟ್ರವರ್ಸಿ ಕ್ರಿಯೇಟ್​ ಮಾಡುವವರಿಗೆ ವಾರ್ನ್​ ಮಾಡಿದ್ದಾರೆ ನಟಿ.

46
ಟೈಂ ಬರುವವರೆಗೂ ವೇಟ್​ ಮಾಡ್ತೇನೆ

ಕಾಂಟ್ರವರ್ಸಿ ಬರ್ತಾನೇ ಇರತ್ತೆ. ಆದರೆ ಸುಮ್​ಸುಮ್​ನೆ ನಾನು ಮಾತನಾಡಲ್ಲ. ಬಂದಿದ್ದೆಲ್ಲವನ್ನೂ ತೆಗೆದುಕೊಳ್​ತಾನೇ ಇರುತ್ತದೆ. ನಾವು ಮಾತನಾಡದೇ ಇದ್ದರೆ, ನಮ್ಮದೇ ತಪ್ಪು ಎಂದುಕೊಂಡರೂ ಪರವಾಗಿಲ್ಲ. ಟೈಂ ಬರುವವರೆಗೆ ವೇಟ್​ ಮಾಡಬೇಕು ಎಂದಿದ್ದಾರೆ ನಟಿ.

56
ಮುಗಿಸಿಯೇ ಮುಗಿಸ್ತೇನೆ

ನಾನು ಯುದ್ಧಭೂಮಿಯಲ್ಲಿ ಇಳೀತಾ ಇದ್ದೀನಿ ಎಂದರೆ ಮುಗಿಸಿಯೇ ಮುಗಿಸ್ತೇನೆ. ನಾನು ಅದರಲ್ಲಿ ವಿನ್​ ಆಗಿಯೇ ಆಗ್ತೇನೆ. ಆದರೆ ಅದರಿಂದ ನಿಮಗೆ ಆಗೋ ತೊಂದರೆ ಇದ್ಯಲ್ಲಾ, ಅದನ್ನು ನೀವು ಸಹಿಸಿಕೊಳ್ಳಲು ಆಗಲ್ಲ, ಇದು ನನ್ನ ಚಾಲೆಂಜ್​ ಎಂದಿದ್ದಾರೆ ನಟಿ.

66
ಒಗ್ಗಟ್ಟಾದ ಮಹಿಳೆಯರು

ಚಿತ್ರರಂಗದಲ್ಲಿ ಮಹಿಳೆಯರಿಗೆ ನಿರಂತರವಾಗಿ ನಡೆಯುತ್ತಿರುವ ಒಂದು ಗಂಭೀರ ಸಮಸ್ಯೆಯನ್ನು ಎದುರಿಸಲು ಒಟ್ಟಾಗಿ ನಿಂತಿದ್ದೇವೆ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮಹಿಳಾ ಕಲಾವಿದರ ವಿಡಿಯೋಗಳು ಮತ್ತು ಫೋಟೊಗಳನ್ನು ಅಸಭ್ಯ ಕೋನಗಳಿಂದ ಚಿತ್ರೀಕರಿಸಿ, ಅವರ ಕಲೆಗಿಂತಲೂ ಅವರ ದೇಹದ ಮೇಲೆ ಅನಾವಶ್ಯಕವಾಗಿ ಜೂಮ್ ಮಾಡಿ ಪ್ರಸಾರ ಮಾಡುವ ಘಟನೆಗಳು ಪದೇ ಪದೆ ನಡೆಯುತ್ತಿವೆ ಎಂದು ಸಪ್ತಮಿಗೌಡ ಕಿಡಿಕಾರಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories