ಮಗನಿಗೋಸ್ಕರ ಎಂಬ್ರಾಯ್ಡರಿ ಫ್ಯಾಕ್ಟರಿ ಮಾಡಿ, 6 ಕೋಟಿ ರೂ. ನಷ್ಟ ಕಂಡ ನಟ ರಮೇಶ್‌ ಭಟ್! ಅಂಥದ್ದೇನಾಯ್ತು?

Published : Apr 03, 2026, 05:45 PM IST

Actor Ramesh Bhat: ಯಜಮಾನ ಧಾರಾವಾಹಿ ಮೂಲಕ ಇತ್ತೀಚೆಗೆ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದ, ಖ್ಯಾತ ಸಿನಿಮಾ ನಟ ರಮೇಶ್‌ ಭಟ್‌ ಅವರು ಆಂಬ್ರಾಯಡರಿ ಫ್ಯಾಕ್ಟರಿ ಕಟ್ಟಿದ್ದು, ಆರು ಕೋಟಿ ರೂಪಾಯಿ ಕಳೆದುಕೊಂಡ ಕಥೆಯನ್ನು Beyond Limits ಯುಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು. 

PREV
14
ಮಾಡಿದ ಕೆಲಸ ಹಿಟ್‌

ನಟ ಶಂಕರ್‌ ನಾಗ್‌ ಜೊತೆಯೇ ರಮೇಶ್‌ ಭಟ್‌ ಅವರು ಹೆಚ್ಚು ಸಿನಿಮಾ, ನಾಟಕಗಳನ್ನು ಮಾಡಿದ್ದರು. ಈ ಜೋಡಿ ಒಟ್ಟಿಗೆ ಹನ್ನೆರಡು ವರ್ಷಗಳ ಕಾಲ ಕೆಲಸ ಮಾಡಿತ್ತು. ಶಂಕರ್‌ ನಾಗ್‌ ಹಾಗೂ ರಮೇಶ್‌ ಭಟ್‌ ಜೊತೆಯಾಗಿ ಮಾಡಿದ ಕೆಲಸ ಎಲ್ಲವೂ ಹಿಟ್‌ ಆಗುತ್ತಿತ್ತು. ಹೀಗಾಗಿ ಅವರಿಗೆ ಬೇರೆ ಡೈರೆಕ್ಟರ್‌ಗಳ ಸಂಪರ್ಕ ಕೂಡ ಇರಲಿಲ್ಲ. ಶಂಕರ್‌ ನಾಗ್‌ ಅವರು ಆಗಲೇ ಗಾರ್ಮೆಂಟ್‌ ಇಂಡಸ್ಟ್ರಿ ಆರಂಭಿಸಿದ್ದರು.

24
ಅರುಂಧತಿ ನಾಗ್‌ ಬಳಿ ಸಲಹೆ ಕೇಳಿದೆ

ನನಗೆ ಚಿಪ್ಸ್‌ ಫ್ಯಾಕ್ಟರಿ ಮಾಡಬೇಕು ಎಂಬ ಯೋಚನೆ ಇತ್ತು. ಮೋಹನ್‌ ಲಾಲ್‌ ಪತ್ನಿ ಶಂಕರ್‌ ನಾಗ್‌ ಅವರ ಪತ್ನಿ ಅರುಂಧತಿ ನಾಗ್‌ ಸ್ನೇಹ ಇತ್ತು. ಹೀಗಾಗಿ ಶಂಕರ್‌ ಅವರು ಪಾರ್ಟ್ನರ್‌ ಆಗಿದ್ದರು. ಶಂಕರ್‌ ಹೋದ್ಮೇಲೆ ನಾನು ಅರುಂಧತಿ ಬಳಿ, ಮುಂದೆ ಏನು ಮಾಡೋದು ಎಂದು ಸಲಹೆ ಕೇಳಿದೆ ಎಂದಿದ್ದಾರೆ ರಮೇಶ್‌ ಭಟ್.‌

34
ಆಂಬ್ರಾಯಡರಿ ಫ್ಯಾಕ್ಟರಿ ಆರಂಭ

ಆಗ ಅರುಂಧತಿ ಅವರು ಗಾರ್ಮೆಂಟ್‌ ಇಂಡಸ್ಟ್ರಿ ಶುರು ಮಾಡು, ನಾನೇ ವರ್ಷಕ್ಕೆ 6-7 ಲಕ್ಷ ರೂಪಾಯಿ ಕೊಡ್ತಿದ್ದೇನೆ, ಡಿಮ್ಯಾಂಡ್‌ ಇದೆ ಎಂದಿದ್ದರು. ಹೀಗಾಗಿ ನಾನು ಮಗನಿಗೋಸ್ಕರ ಆಂಬ್ರಾಯಡರಿ ಫ್ಯಾಕ್ಟರಿ ಆರಂಭಿಸಿದೆ, ಅಂದು 150 ಕೆಲಸಗಾರರಿದ್ದರು. ಕೊರೊನಾ ವೈರಸ್‌ ವೇಳೆ ತುಂಬ ನಷ್ಟ ಆಯ್ತು, ನಾನು ಕೂಡ ವಯಸ್ಸಾಯ್ತು ಎಂದು ಆಗ ಸಿನಿಮಾ ಕೆಲಸ ಮಾಡಿರಲಿಲ್ಲ ಎಂದಿದ್ದಾರೆ ರಮೇಶ್‌ ಭಟ್.

44
ಮೂರು ಮಶಿನ್‌ ಇದೆ

ನಮ್ಮ ಫ್ಯಾಕ್ಟರಿ ಮೇಲೆ ಸಾಲ ಇತ್ತು, ಕೊರೊನಾದಲ್ಲಿ ನಷ್ಟ ಆಯ್ತು, ಎಲ್ಲ ಕೆಲಸಗಾರರನ್ನು ಕಳಿಸಿಕೊಟ್ಟೆವು. ಒಟ್ಟೂ ಆರು ಕೋಟಿ ರೂಪಾಯಿ ನಷ್ಟ ಆಯ್ತು. ಜೀವಮಾನದಲ್ಲಿ ನಾನು ಸಂಪಾದನೆ ಮಾಡಿದ ಹಣವೆಲ್ಲ ಅಲ್ಲಲ್ಲಿ ಇತ್ತು, ಅದೆಲ್ಲವೂ ಕರಗಿ ಹೋಯ್ತು. ಈಗ ಮತ್ತೆ ಧಾರಾವಾಹಿ ಮಾಡುತ್ತಿದ್ದೇನೆ. ಈಗ ಮೂರು ಮಶಿನ್‌ ಇದೆ, ಅದನ್ನೇ ಮಗ ನೋಡಿಕೊಳ್ತಿದ್ದಾನೆ, ಸದ್ಯ ಸಾಲ ಎಲ್ಲ ತೀರಿದೆ ಎಂದು ರಮೇಶ್‌ ಭಟ್‌ ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories