'ಮೋಡ ಕವಿದ ವಾತಾವರಣ' ಚಿತ್ರದ ಟ್ರೇಲರ್ ಬಿಡುಗಡೆ ವೇಳೆ ನಿರ್ದೇಶಕರು ಸ್ವಾರಸ್ಯಕರ ಪ್ರಸಂಗವೊಂದನ್ನು ಹಂಚಿಕೊಂಡಿದ್ದಾರೆ. ಅಜ್ಜಿಯೊಬ್ಬರು, ಅವರು ಅಲ್ಲಿ ಇಲ್ಲದಿದ್ದಕ್ಕೆ ಸುನಿ ಅವರಿಗೆ ಹೇಗೆ ಕ್ಲಾಸ್ ತೆಗೆದುಕೊಂಡರು ಎಂಬುದನ್ನು ವಿವರಿಸಿದ್ದಾರೆ.
‘ಮೋಡ ಕವಿದ ವಾತಾವರಣ’ ಸಿನಿಮಾದ ಟ್ರೇಲರ್ ರಿಲೀಸ್ ಕಾರ್ಯಕ್ರಮದಲ್ಲಿ ಸಿಂಪಲ್ ಸುನಿ ಈ ಸ್ವಾರಸ್ಯಕರ ಪ್ರಸಂಗ ವಿವರಿಸಿದ್ದಾರೆ. ನಟಿಯನ್ನು ಹುಡುಕಿಕೊಂಡು ಬಂದ ಅಜ್ಜಿಯೊಬ್ಬರು ತಮಗೆ ಹೇಗೆ ಕ್ಲಾಸ್ ತೆಗೆದುಕೊಂಡರು ಎಂದು ನಿರ್ದೇಶಕರು ಹೇಳಿಕೊಂಡಿದ್ದಾರೆ.
24
ಸ್ಪೆಷಲ್ ಪ್ರೀಮಿಯರ್
‘ಸಿಂಗಾಪುರದಲ್ಲಿ ನಮ್ಮ ಸಿನಿಮಾ ಸ್ಪೆಷಲ್ ಪ್ರೀಮಿಯರ್ ಇತ್ತು. ಅಜ್ಜಿಯೊಬ್ಬರಿಗೆ ಸಾತ್ವಿಕಾ ನಟನೆ ಸಿಕ್ಕಾಪಟ್ಟೆ ಇಷ್ಟವಾಗಿ ಚಿತ್ರ ಮುಗಿದ ಮೇಲೆ ಆಕೆಗಾಗಿ ಹುಡುಕುತ್ತಿದ್ದರು. ಆದರೆ ಫ್ಲೈಟ್ ಟಿಕೆಟ್ ಬುಕ್ ಆದದ್ದು ನನಗೆ, ನಾಯಕ ನಟ ಶೀಲಮ್ ಹಾಗೂ ನಾಯಕಿ ಮೋಕ್ಷಾಗೆ. ಇದನ್ನು ಅಜ್ಜಿಗೆ ಹೇಳಿದೆ. ಅವರು ಅಸಮಾಧಾನದಲ್ಲಿ ನಿನ್ನ ಬದಲು ಅವಳು ಬರಬಹುದಿತ್ತು ಅಂತ ಗೊಣಗಿದರು. ಸಾತ್ವಿಕಾಗೆ ವೀಡಿಯೋ ಕಾಲ್ ಮಾಡಲು ಒತ್ತಾಯಿಸಿದರು. ಆದರೆ ನನ್ನ ಫೋನ್‌ನಲ್ಲಿ ರೋಮಿಂಗ್ ಕಾಲ್ ಇರಲಿಲ್ಲ..’
34
ಪ್ರೇಮಕಥೆಯುಳ್ಳ ಮೋಡ ಕವಿದ ವಾತಾವರಣ
ಪ್ರೇಮಕಥೆ ಇರುವ ಮೋಡ ಕವಿದ ವಾತಾವರಣ ಚಿತ್ರ ಜೂ.26ರಂದು ರಿಲೀಸ್ ಆಗುತ್ತಿದೆ. ಸರೆಗಮಪ ಯೂಟ್ಯೂಬ್‌ನಲ್ಲಿ ಸಿನಿಮಾ ಟ್ರೇಲರ್ ನೋಡಬಹುದು.ರಾಮ್ ಮೂವೀಸ್ ಈ ಸಿನಿಮಾ ನಿರ್ಮಿಸಿದೆ. ಇದು ನನ್ನ ಜೀವನದ ವಿಶೇಷ ಚಿತ್ರ ಎಂದು ಸಿಂಪಲ್ ಸುನಿ ಹೇಳಿಕೊಂಡಿದ್ದಾರೆ.
ಈ ಸಿನಿಮಾದಲ್ಲಿ ನಾಯಕರಾಗಿ ಶೀಲಮ್ ಎಂ ಸ್ವಾಮಿ, ರಿಷಿ, ನಾಯಕಿಯರಾಗಿ ಮೋಕ್ಷಾ ಕುಶಾಲ್, ಸಾತ್ವಿಕ್ ನಟಿಸಿದ್ದಾರೆ. ವಿಭಿನ್ನವಾದ ಹಾಗೂ ಹಿತವಾಗಿರುವ ಪ್ರೇಮ ಕತೆಗಳ ಮೂಲಕ ಗುರುತಿಸಿಕೊಂಡಿರುವ ಸಿಂಪಲ್ ಸುನಿ ಅವರ ಈ ಚಿತ್ರದ ಮೇಲೂ ಪ್ರೇಕ್ಷಕರಿಗೆ ನಿರೀಕ್ಷೆ ಇದೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.