ಈ ಪ್ರಕಾಶ್​ ರಾಜ್​ ಅರೆಸ್ಟ್​ ಆದ್ರೆ, ಆ ಪ್ರಕಾಶ್​ ರಾಜ್​ ಓಡಿ ಬರ್ತಾರೆ; ನಾಲ್ಕು ಮಂದಿ ತಬ್ಬಿಕೊಳ್ತಾರೆ: ಸೂಲಿಬೆಲೆ ವ್ಯಂಗ್ಯ

Published : Jun 23, 2026, 07:33 PM IST

ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಒಂದೇ ಹೆಸರಿನಲ್ಲಿ ನಾಲ್ಕು ವೋಟರ್ ಐಡಿ ಕಾರ್ಡ್‌ಗಳನ್ನು ಹೊಂದಿರುವ ಆರೋಪದ ಮೇಲೆ ಬೆಂಗಳೂರು ನ್ಯಾಯಾಲಯದಿಂದ ಜಾಮೀನು ರಹಿತ ವಾರಂಟ್ ಎದುರಿಸುತ್ತಿದ್ದಾರೆ.  ಈ ಕುರಿತು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ವ್ಯಂಗ್ಯವಾಡಿದ್ದಾರೆ.

PREV
16
ಪ್ರಕಾಶ್​ ರಾಜ್​ ವಿರುದ್ಧ ಇನ್ನೊಂದು ಕೇಸ್​

ಇತ್ತೀಚಿಗಷ್ಟೇ "ಧರ್ಮಸ್ಥಳ' ಕೇಸ್‌ಗೆ ಸಂಬಂಧಪಟ್ಟು ಸುದ್ದಿಯಾಗಿದ್ದ ಬಹುಭಾಷಾ ನಟ ಪ್ರಕಾಶ್ ರಾಜ್, ಇದೀಗ ಮತ್ತೊಂದು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಒಂದೇ ಹೆಸರಿನಲ್ಲಿ ನಾಲ್ಕು ವೋಟರ್ ಐಡಿ ಕಾರ್ಡ್ ಪಡೆದಿರುವ ಆರೋಪದ ಅಡಿಯಲ್ಲಿ, ನಟ ಪ್ರಕಾಶ್​ರಾಜ್ (Prakash Raj) ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿಯಾಗಿದೆ.

26
ನಾಲ್ಕು ಕಡೆ ವೋಟರ್​ ಐಡಿ

ಪ್ರಕಾಶ್ ರಾಜ್ ವಿರುದ್ಧ ದಿಲೀಪ್ ಕುಮಾರ್ ಎಂಬುವರು ಕೇಸ್ ದಾಖಲಿಸಿರುವ ಹಿನ್ನೆಲೆಯಲ್ಲಿ, ಬೆಂಗಳೂರು ಮ್ಯಾಜಿಸ್ಟ್ರೇಟ್ ಕೋರ್ಟ್‌ನಿಂದ ಜಾಮೀನು ರಹಿತ ವಾರಂಟ್ (NBW) ಜಾರಿಯಾಗಿದೆ. ಒಂದೇ ಹೆಸರಿನಲ್ಲಿ ನಾಲ್ಕು ವೋಟರ್ ಐಡಿ ಕಾರ್ಡ್ ಪಡೆದಿದ್ದಾರೆ ಎಂದು ಆರೋಪಿಸಿ ದಿಲೀಪ್​ಕುಮಾರ್ ಕೇಸ್ ದಾಖಲು ಮಾಡಿದ್ದಾರೆ.

36
ಜಾಮೀನು ರಹಿತ ವಾರೆಂಟ್​

ಆ ಬಳಿಕ, 48ನೇ ಎಸಿಜೆಎಂ ಕೋರ್ಟ್‌ನಿಂದ ಪ್ರಕಾಶ್​ ರಾಜ್ ವಿರುದ್ಧ NBW ಜಾರಿ ಹಾಗೂ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಅರೆಸ್ಟ್ ವಾರೆಂಟ್ ನೀಡಲಾಗಿತ್ತು. 2 ಬಾರಿ ಸಮನ್ಸ್​ ಹಾಗೂ 2 ಬಾರಿ NBW ಜಾರಿ ಮಾಡಿದ್ರೂ ಪ್ರಕಾಶ್​ ರಾಜ್ ಹಾಜರಾಗದ ಹಿನ್ನೆಲೆಯಲ್ಲಿ, ಇದೀಗ 3ನೇ ಬಾರಿ ಪ್ರಕಾಶ್ ರಾಜ್ ವಿರುದ್ಧ ಮ್ಯಾಜಿಸ್ಟ್ರೇಟ್ ಕೋರ್ಟ್ ಜಾಮೀನು ರಹಿತ ಅರೆಸ್ಟ್ ವಾರೆಂಟ್ ಜಾರಿಗೊಳಿಸಿದೆ.

46
ಚಕ್ರವರ್ತಿ ಸೂಲಿಬೆಲೆ ವಾಗ್ಮಿ

ಈ ಹಿನ್ನೆಲೆಯಲ್ಲಿ ವಾಗ್ಮಿ ಮತ್ತು ಹೋರಾಟಗಾರ ಚಕ್ರವರ್ತಿ ಸೂಲಿಬೆಲೆ ಅವರು ಪ್ರಕಾಶ್‌ ರಾಜ್‌ ಅವರ ಕಾಲೆಳೆದು ಸೋಷಿಯಲ್​ ಮೀಡಿಯಾದಲ್ಲಿ ಒಂದು ಪೋಸ್ಟ್​ ಹಾಕಿದ್ದು, ಅದೀಗ ಬಾರಿ ವೈರಲ್​ ಆಗಿದೆ.

56
ಅಲ್ಲಿ ಇದ್ದರೆ ಇಲ್ಲಿದ್ದವರು ತಬ್ಬಿಕೊಳ್ತಾರೆ

ಪ್ರಕಾಶ್ ರಾಜ್ ನಾಲ್ಕು ವೋಟರ್ ಐಡಿ ಹೊಂದಿರುವ ಅನ್ಯಾಯದ ವಿರುದ್ಧ ಪ್ರಕಾಶ್ ರಾಜ್ ಹೋರಾಟ ಮಾಡಲಿದ್ದಾರೆ. ಬೆಂಗಳೂರಿನಲ್ಲಿರುವ ಸೆಲೆಬ್ರಿಟಿ ಪ್ರಕಾಶ್ ರಾಜ್ ಗೆ ತಮಿಳುನಾಡಿನ ಪ್ರಕಾಶ್ ರಾಜ್ ಕರೆ ಮಾಡಿ ಹೋರಾಟಕ್ಕೆ ಬಂದರೆ ತಬ್ಬಿಕೊಳ್ಳುವೆ ಎನ್ನುತ್ತಾರೆ. ತೆಲಂಗಾಣದ ಪ್ರಕಾಶ್ ರಾಜ್ ಬೀದಿಗಿಳಿದು ಹೋರಾಟ ಮಾಡಿದರೆ ಕೇರಳದ ಪ್ರಕಾಶ್ ರಾಜ್ ಕೂಡಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

66
ನಾಲ್ಕು ಗುರುತಿನ ಚೀಟಿ

ಪ್ರಕಾಶ್ ರಾಜ್ ಅವರು ಕರ್ನಾಟಕ, ತಮಿಳುನಾಡು, ತೆಲಂಗಾಣ ಸೇರಿದಂತೆ, ಒಟ್ಟು 4 ರಾಜ್ಯಗಳಲ್ಲಿ ಮತದಾರರ ಗುರುತಿನ ಚೀಟಿ ಹೊಂದಿದ್ದಾರೆ ಎನ್ನುವ ಆರೋಪ ಪ್ರಕಾಶ್​ ರಾಜ್​ ಅವರ ಮೇಲೆ ಇರುವ ಹಿನ್ನೆಲೆಯಲ್ಲಿ ಸೂಲಿಬೆಲೆ ಅವರು ಈ ರೀತಿ ವ್ಯಂಗ್ಯವಾಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories