ಡಿಪ್ರೆಶನ್ ಅಂದ್ರೆನೇ ಗೊತ್ತಿರಲಿಲ್ಲ, ಅಮ್ಮ ಆಸ್ತಿ ಕೊಟ್ಟಿಲ್ಲ ಆದರೆ ಇದನ್ನು ಹೇಳಿಕೊಟ್ಟಿದ್ದಾರೆ...:ನಿರಂಜನ್ ದೇಶಪಾಂಡೆ
ಖಿನ್ನತೆ ನಿಜಕ್ಕೂ ಸತ್ಯವೇ? ನಿರಂಜನ್ ದೇಶಪಾಂಡೆ ಹೇಳಿದ್ದು ಸತ್ಯ ಅಂತಿದ್ದಾರೆ 90 ದಶಕದ ಮಕ್ಕಳೂ......
ಖಿನ್ನತೆ ನಿಜಕ್ಕೂ ಸತ್ಯವೇ? ನಿರಂಜನ್ ದೇಶಪಾಂಡೆ ಹೇಳಿದ್ದು ಸತ್ಯ ಅಂತಿದ್ದಾರೆ 90 ದಶಕದ ಮಕ್ಕಳೂ......
ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕ, ಬಿಗ್ ಬಾಸ್ ಸ್ಪರ್ಧಿ ಹಾಗೂ ನಟ ನಿರಂಜನ್ ದೇಶಪಾಂಡೆ ಖಿನ್ನತೆ ಅಂದ್ರೆ ಏನು? ಎಂದು ರ್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದಾರೆ.
ಈಗಿನ ಕಾಲದಲ್ಲಿ ಮಕ್ಕಳನ್ನು ಸೂಕ್ಷ್ಮವಾಗಿ ಬೆಳೆಸುತ್ತಿದ್ದಾರೆ ಅದಿಕ್ಕೆ ಮಾತಿಗೆ ಮುಂಚ ಡಿಪ್ರೆಶನ್ ಅಂತಿದ್ದಾರೆ. ಡಿಪ್ರೆಶನ್ ಅನ್ನೋ ಪದವನ್ನು ಅರ್ಥ ಮಾಡಿಕೊಳ್ಳುವಷ್ಟರಲ್ಲಿ ನನಗೆ ಡಿಗ್ರಿ ಆಗಿತ್ತು.
ನನ್ನ ಸ್ನೇಹಿತೆಯ ಸ್ನೇಹಿತೆಯ ಸಹೋದರಿ ಆತ್ಮಹತ್ಯೆ ಮಾಡಿಕೊಂಡಾಗ ಡಿಪ್ರೆಶನ್ ಅಂತ ಗೊತ್ತಾಗತ್ತು. ಆಗ ಡಿಪ್ರೆಶನ್ ಅಂದ್ರು....ಬಹುಷ ಇದೇನೋ ಮಾತ್ರ ಇರ್ಬೇಕು ಅಂದುಕೊಂಡೆ.
ತಡವಾಗಿ ಅರ್ಥವಾಗಿದ್ದು ಅದು ಮಾನಸಿಕ ಖಿನ್ನತೆ ಎಂದು. ಖಿನ್ನತೆ ಅಂದ್ರೆ ಏನೂ ಅಂತನೂ ಗೊತ್ತರಲಿಲ್ಲ. ಈಗ 7ನೇ ಕ್ಲಾಸ್ ಮಕ್ಕಳಿಗೆ ಡಿಪ್ರೆಶನ್ ಇದೆ. ನಮಗೆ ಕಷ್ಟ ಸುಖ ಹೇಳಕೊಡುವವರು ಇದ್ರು... ಮಕ್ಕಳಿಗೆ ಆಸ್ತಿ ಕೊಡಬೇಡಿ ಈ ವಿಚಾರದಲ್ಲಿ ಧೈರ್ಯ ಕೊಡಿ.
ನನ್ನ ತಾಯಿಗೆ ಸದಾ ಋಣಿಯಾಗಿರುತ್ತೀನಿ, ಆಸ್ತಿ ಕೊಟ್ಟಿಲ್ಲ ಆದರೆ ಜೀವನ ಕಟ್ಟಿಕೊಳ್ಳುವುದು ಸಮಾಜದಲ್ಲಿ ಒಳ್ಳ ಹೆಸರು ಮಾಡುವುದು ಹೇಳಿಕೊಟ್ಟಿದ್ದಾರೆ.
ನನ್ನೊಟ್ಟಿಗೆ ಯಾರಾದರೂ ನಕ್ಕರೆ ಅಯ್ಯೋ ನಿನ್ನ ಜೊತೆ ಚೆನ್ನಾಗಿ ನಕ್ಕಿದ್ದೀನಿ ಬಹುಷ ಅಳುತ್ತೀನಿ ಅನಿಸುತ್ತದೆ. ಯಾರು ಈ ಲಾಜಿಕ್‌ಗಳನ್ನು ಹೇಳಿದ್ದು.