PHOTOS: 'ನನ್ನ ಹೆಂಡ್ತಿ ಕಿರಿಕ್‌ ಮಾಡ್ತಾ ಇದ್ರೆ ಮುದ್ದು ರಾಕ್ಷಸಿ ಅಂತಾನೇ ಕರಿತೀನಿ'; ನಟ ದರ್ಶನ್‌ ತೂಗುದೀಪ

ನಟ ದರ್ಶನ್‌ ಕುಟುಂಬಕ್ಕೂ, ಆನೆಗೂ ಒಂದು ಸುಂದರವಾದ ನಂಟಿದೆ ಎಂದು ಹೇಳಬಹುದು. ದರ್ಶನ್‌, ಪತ್ನಿ ವಿಜಯಲಕ್ಷ್ಮೀ, ಮಗ ವಿನೀಶ್‌ ಜೊತೆಗೆ ಆನೆಯ ಜೊತೆಗೆ ಫೋಟೋ ತೆಗೆಸಿಕೊಂಡಿದ್ದಾರೆ. ಈ ಫೋಟೋಗಳನ್ನು ವಿಜಯಲಕ್ಷ್ಮೀ ಅವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

actor darshan thoogudeepa wife vijayalakshmi shares photos with elephant

ನಟ ದರ್ಶನ್‌ ತೂಗುದೀಪ ಅವರು ಪತ್ನಿ ವಿಜಯಲಕ್ಷ್ಮೀ, ಮಗ ವಿನೀಶ್‌ ಅವರು ಆಗಾಗ ಟ್ರಾವೆಲ್‌ ಮಾಡುತ್ತಿರುತ್ತಾರೆ, ಇನ್ನು ವನ್ಯಪ್ರಾಣಿಗಳನ್ನು ಕಂಡರೆ ಇವರಿಗೆ ತುಂಬ ಇಷ್ಟ. ಈಗ ಆನೆ ಜೊತೆಗೆ ಫೋಟೋ ತೆಗೆಸಿಕೊಂಡಿರುವ ಫೋಟೋ ಇದಾಗಿದೆ. 

actor darshan thoogudeepa wife vijayalakshmi shares photos with elephant

ನಟ ದರ್ಶನ್‌ ಅವರು ಪತ್ನಿಯನ್ನು ʼಮುದ್ದು ರಾಕ್ಷಸಿʼ ಅಂತ ಕರೆಯುತ್ತಾರಂತೆ. ಈ ಬಗ್ಗೆ ದರ್ಶನ್‌ ಅವರೇ ವಿಡಿಯೋ ಬೈಟ್‌ನಲ್ಲಿ ಹೇಳಿಕೊಂಡಿದ್ದಾರೆ. ಈ ಮಾತು ಈಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ. 
 


ನಟ ದರ್ಶನ್‌ ಅವರು ಸದ್ಯ ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಡೆ ಬಂದಿದ್ದಾರೆ. ʼದಿ ಡೆವಿಲ್‌ʼ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ನಟ ದರ್ಶನ್‌ ಅವರು ನಟ ಧನ್ವೀರ್‌ ಅಭಿನಯದ ʼವಾಮನʼ ಸಿನಿಮಾ ಟ್ರೇಲರ್‌ ರಿಲೀಸ್‌ ಮಾಡಿದ್ದರು. 
 

ʼವಾಮನʼ ಸಿನಿಮಾ ಟ್ರೇಲರ್‌ ರಿಲೀಸ್‌ ಮಾಡುವಾಗ ಅವರು ʼಮುದ್ದು ರಾಕ್ಷಸಿಯೇʼ ಎನ್ನುವ ಹಾಡಿನ ಬಗ್ಗೆ ಹೇಳಿದ್ದಾರೆ. ಈ ಹಾಡು ದರ್ಶನ್‌ಗೆ ತುಂಬ ಇಷ್ಟ ಆಗಿದೆಯಂತೆ. ಎಲ್ಲಿಂದ ಈ ಪದ ಸಿಗ್ತು? ಎಷ್ಟು ಚೆನ್ನಾಗಿದೆ ಈ ಹಾಡು ಎಂದು ದರ್ಶನ್‌ ಅವರು ಹೊಗಳಿದ್ದಾರೆ.

ನಟ ದರ್ಶನ್‌ ಅವರು “ನನ್ನ ಹೆಂಡ್ತಿ ಮನೆಯಲ್ಲಿ ಆಗಾಗ ಕಯ್ಯ ಕಯ್ಯ ಅಂತ ಹೇಳುತ್ತಿರುತ್ತಾಳೆ. ಆಗ ನಾನು ಮುದ್ದು ರಾಕ್ಷಸಿ ಅಂತ ಕರೆದು ಕಾಡಸ್ತೀನಿ” ಅಂತ ದರ್ಶನ್‌ ಹೇಳಿದ್ದಾರೆ.
 

ನಟ ದರ್ಶನ್‌ ಅವರು ʼವಾಮನʼ ಸಿನಿಮಾ ಟ್ರೇಲರ್‌ ಲಾಂಚ್‌ಗೆ ಬರುತ್ತಾರೆ ಎಂದು ಹೇಳಲಾಗಿತ್ತು. ಆದರೆ ಅವರು ಬಂದಿರಲಿಲ್ಲ. ಹೀಗಾಗಿ ಅವರು ಧನ್ವೀರ್‌ ಸಿನಿಮಾ ಟ್ರೇಲರ್‌ ನೋಡಿ ಶುಭಾಶಯ ಕೋರಿದ್ದಾರೆ. 
 

ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ನಟ ದರ್ಶನ್‌ ಅವರು ಮಗ ವಿನೀಶ್‌, ಸಹೋದರ ದಿನಕರ್‌ ತೂಗುದೀಪ ಜೊತೆಗೆ ಕಾಣಿಸಿಕೊಂಡಿದ್ದು ಹೀಗೆ. 

ಮಗ ವಿನೀಶ್‌ ಕಂಡರೆ ದರ್ಶನ್‌ಗೆ ತುಂಬ ಇಷ್ಟ. ಇನ್ನು ದರ್ಶನ್‌ ಅವರಂತೆ ವಿನೀಶ್‌ ಕೂಡ ಪ್ರಾಣಿ ಪ್ರಿಯ. ಚಿಕ್ಕ ವಯಸ್ಸಿನಿಂದಲೂ ವಿನೀಶ್‌ ಪ್ರಾಣಿಗಳ ಜೊತೆ ಆಟ ಆಡುತ್ತಿದ್ದಾರಂತೆ. 

ವಿಜಯಲಕ್ಷ್ಮೀ ಅವರು ಆಗಾಗ ವಿನೀಶ್‌ ಜೊತೆಗಿನ ಫೋಟೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ವಿನೀಶ್‌ ಈ ವರ್ಷ ಕಾಲೇಜಿಗೆ ಎಂಟ್ರಿ ಕೊಡಲಿದ್ದಾರೆ. 

ವಿನೀಶ್‌ ಅವರು ಈಗಾಗಲೇ ʼಯಜಮಾನʼ ಸಿನಿಮಾದಲ್ಲಿ ನಟಿಸಿದ್ದರು. ವಿನೀಶ್‌ ಅವರು ಯಾವಾಗ ಹೀರೋ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಾರೆ ಎಂದು ಕಾದು ನೋಡಬೇಕಾಗಿದೆ.

Latest Videos

vuukle one pixel image
click me!