ತಾಯಿಯಾಗುತ್ತಿರುವ ಖುಷಿಯಲ್ಲಿ 'ಲವ್ ಮಾಕ್ಟೇಲ್ 2' ಸುಶ್ಮಿತಾ; ಮರಿ 'ಜಂಕಿ'ಗೆ ಕಾಯ್ತಿದ್ದಾರೆ ಫ್ಯಾನ್ಸ್!

ಸಾಮಾಜಿಕ ಜಾಲತಾಣದಲ್ಲಿ ಖುಷಿ ವಿಚಾರ ಹಂಚಿಕೊಂಡ ಸುಶ್ಮಿಕಾ. ಜಂಕಿ ಮರಿ ನೋಡಲು ಕಾಯುತ್ತಿದ್ದಾರೆ ಫ್ಯಾನ್ಸ್.

Love mocktail 2 sushmitha gowda reveals pregnancy with different concept of shoot vcs

ಲವ್ ಮಾಕ್ಟೇಲ್ 2 (love mocktail 2) ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಸೋಷಿಯಲ್ ಮೀಡಿಯಾ ಸ್ಟಾರ್ ಸುಶ್ಮಿತಾ ಗೌಡ.

ಲವ್ ಮಾಕ್ಟೇಲ್ 2 ಚಿತ್ರದಲ್ಲಿ ಜಂಕಿ ಪಾತ್ರದಲ್ಲಿ ಸುಶ್ಮಿತಾ ಕಾಣಿಸಿಕೊಂಡಿದ್ದಾರೆ. ಈಗ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ ಇರುವ ವಿಚಾರವನ್ನು ಹಂಚಿಕೊಂಡಿದ್ದಾರೆ.


ಪತಿ ಅಶ್ವಿನ್ ಜೊತೆ ಯಕ್ಷಗಾನ ಕಾನ್ಸೆಪ್ಟ್‌ನೊಂದಿಗೆ ಪ್ರೆಗ್ನೆನ್ಸಿ ಅನೌನ್ಸ್ ಮಾಡಿದ್ದಾರೆ.ಇಲ್ಲಿ ಸುಶ್ಮಿಕಾ ಸೀರೆಯಲ್ಲಿ ಕಾಣಿಸಿಕೊಂಡಿದ್ದು ಅಶ್ವಿನಿ ರೇಶ್ಮೆ ಶಲ್ಯೆ ಪಂಚೆಯಲ್ಲಿದ್ದಾರೆ.

2022ರಲ್ಲಿ ಅಶ್ವಿನ್ ಮತ್ತು ಸುಶ್ಮಿತಾ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇಬ್ಬರು ವಿದೇಶದಲ್ಲಿ ಕೆಲವು ವರ್ಷ ನೆಲೆಸಿದ್ದರು. ಬೆಂಗಳೂರು ಮತ್ತು ಫಾರಿನ್‌ ಅಂತ ಓಡಾಡುತ್ತಿರುತ್ತಾರೆ.

ಲವ್‌ ಮಾಕ್ಟೇಲ್ 2 ನಂತರ ಹಲವು ಸಿನಿಮಾ ಪ್ರಾಜೆಕ್ಟ್‌ಗಳು ಬಂದಿದೆ. ಆದರೆ ಸೋಷಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಷನ್‌ನಲ್ಲಿ ಬ್ಯುಸಿಯಾಗಿದ್ದು, ಅಲ್ಲೇ ಜನಪ್ರಿಯತೆ ಪಡೆದುಕೊಂಡರು.

ಸುಷ್ಮಿತಾ ಗೌಡ ಪಕ್ಕಾ ಮಂಡ್ಯದ ಹುಡುಗಿ.ಐಟಿ ಕಂಪನಿಯಿಂದ ಹೊರ ಹಾಕಿದ ಕಾರಣ ತಮ್ಮದೇ ಕೂದಲು ಎಣ್ಣೆ ಬ್ರ್ಯಾಂಡ್ ತೆರೆದರು. ಆನಂತರ ಮುಖಕ್ಕೆ ಹಚ್ಚುವ ಕ್ರೀಮ್‌ ಮತ್ತು ಮೂಗುಬೊಟ್ಟು ಅಂಗಡಿ ತೆರೆದಿದ್ದಾರೆ.

Latest Videos

vuukle one pixel image
click me!