Raghu Dixit flautist Varijashree Venugopal: ಖ್ಯಾತ ಕನ್ನಡ ಗಾಯಕ ಮತ್ತು ಸಂಗೀತ ಸಂಯೋಜಕ ರಘು ದೀಕ್ಷಿತ್, ತಮ್ಮ ಮೊದಲ ಪತ್ನಿ ಮಯೂರಿಯಿಂದ ವಿಚ್ಛೇದನ ಪಡೆದ ನಂತರ ಎರಡನೇ ಬಾರಿಗೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.
ಕನ್ನಡದ ಖ್ಯಾತ ಸಂಗೀತ ಸಂಯೋಜಕ, ಗಾಯಕ ರಘು ದೀಕ್ಷಿತ್ ಎರಡನೇ ಬಾರಿ ವೈವಾಹಿಕ ಬಂಧನಕ್ಕೆ ಒಳಗಾಗುತ್ತಿದ್ದಾರೆ. ಖ್ಯಾತ ಕೊಳಲು ವಾದಕಿ, ಗಾಯಕಿ ವಾರಿಜಶ್ರೀ ವೇಣುಗೋಪಾಲ್ ಜೊತೆ ರಘು ದೀಕ್ಷಿತ್ ಹಸೆಮಣೆ ಏರಲಿದ್ದಾರೆ. ಈ ತಿಂಗಳ ಅಂತ್ಯದಲ್ಲಿ ಇಬ್ಬರ ಮದುವೆ ನಡೆಯಲಿದೆ.
25
ವಾರಿಜಶ್ರೀ
ವಾರಿಜಶ್ರೀ ಅವರು ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶಿತರಾಗಿದ್ದರು. ಬೆಂಗಳೂರು ಮೂಲದ ಚಕ್ರಫೋನಿಕ್ಸ್ ಮ್ಯೂಸಿಕ್ ಬ್ಯಾಂಡ್‌ನಲ್ಲಿ ವಾರಿಜಶ್ರೀ ಗುರುತಿಸಿಕೊಂಡಿದ್ದಾರೆ. ಇನ್ನು ರಘು ದೀಕ್ಷಿತ್ ಬಹುಮುಖ ಕಲಾವಿದರಾಗಿದ್ದು, ಜಾನಪದ ಹಾಡುಗಳಿಗೆ ಟ್ರೆಂಡಿಂಗ್ ಟಚ್ ನೀಡುವ ಮೂಲಕ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ.
35
ಒಂಟಿ ಜೀವನ
ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿರುವ ರಘು ದೀಕ್ಷಿತ್, ನಾನು ಇಡೀ ಜೀವನವನ್ನು ಒಂಟಿಯಾಗಿ ಕಳೆಯಲು ನಿರ್ಧರಿಸಿದ್ದೆ. ಒಂಟಿ ಜೀವನ ಕಳೆಯಲು ಮಾನಸಿಕವಾಗಿಯೂ ನಾನು ಸಿದ್ಧನಾಗಿದ್ದೆ. ಆದ್ರೆ ಮತ್ತೊಮ್ಮೆ ಜೀವನದಲ್ಲಿ ಮದುವೆ ಆಗುತ್ತೇನೆ ಎಂದು ನಿರೀಕ್ಷೆಯೂ ಮಾಡಿರಲಿಲ್ಲ ಎಂದು ಹೇಳಿದ್ದಾರೆ.
ಗಾಢವಾದ ಸ್ನೇಹವೊಂದು ಪ್ರೀತಿಯಾಗಿ ಬದಲಾಯ್ತು. ಜೊತೆಯಾಗಿ ಬಾಳುವಷ್ಟು ಸ್ನೇಹ ಸ್ಟ್ರಾಂಗ್ ಆಯ್ತು. ಇಬ್ಬರ ಆಸಕ್ತಿಗಳು ಒಂದಾಗಿದ್ದು, ಇದು ನಮ್ಮ ಹೊಂದಾಣಿಕೆಗೆ ಕಾರಣವಾಗಿತ್ತು. ವಾರಿಜಶ್ರೀ ಪೋಷಕರು ಸಹ ನಮ್ಮ ಪ್ರೀತಿಯನ್ನು ಒಪ್ಪಿಕೊಂಡು ಆಶೀರ್ವದಿಸಿದ್ದಾರೆ. ಶೀಘ್ರದಲ್ಲಿಯೇ ವಾರಿಜಶ್ರೀ ಜೊತೆಯಲ್ಲಿ ಹೊಸ ಚಾಪ್ಟರ್ ಆರಂಭಿಸುತ್ತಿದ್ದೇನೆ ಎಂದು ರಘು ದೀಕ್ಷಿತ್ ಸಂತೋಷವನ್ನು ಹಂಚಿಕೊಂಡಿದ್ದಾರೆ.