Kantara Chapter 1 ರಲ್ಲಿ‌ ಅಬ್ಬರಿಸಿದ ರಕ್ಷಿತ್ ಶೆಟ್ಟಿ…. ನಟನೆಗೆ ಉಘೇ ಉಘೇ ಎಂದ ಸಿನಿರಸಿಕರು

Published : Oct 14, 2025, 05:27 PM IST

ಕಾಂತಾರ ಮತ್ತು ಕಾಂತಾರ ಚಾಪ್ಟರ್ 1 ರಲ್ಲಿ ತಮ್ಮ ಅಭಿನಯದ ಮೂಲಕವೇ ಅಬ್ಬರಿಸಿದ, ಕನ್ನಡಿಗರ ಎದೆ ಒಂದೇ ಸಲ ನಡುಗುವಂತೆ ಅಭಿನಯಿಸಿದ ಅಭಿನಯ ಚತುರ ರಕ್ಷಿತ್ ರಾಮಚಂದ್ರನ ಶೆಟ್ಟಿಯ ನಟನೆಗೆ ಸಿನಿ ರಸಿಕರು ಮನಸೋತಿದ್ದು, ಸೋಶಿಯಲ್ ಮೀಡಿಯಾ ತುಂಬೆಲ್ಲಾ ಇವರೇ ರಾರಾಜಿಸುತ್ತಿದ್ದಾರೆ.

PREV
19
ಕಾಂತಾರ ಚಾಪ್ಟರ್ 1

ರಿಷಬ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿರುವ ಕಾಂತಾರ ಚಾಪ್ಟರ್ 1 ಸಿನಿಮಾ ಬಿಡುಗಡೆಯಾಗಿ ದೇಶದೆಲ್ಲೆಡೆ ಗಲ್ಲಾಪೆಟ್ಟಿಗೆಯನ್ನು ಕೊಳ್ಳೆ ಹೊಡೆಯುತ್ತಿದೆ. ಈಗಾಗಲೇ 600 ಕೋಟಿ ಗಳಿಸುವ ಮೂಲಕ ಈ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಿತ್ರ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿದೆ.

29
ಕನ್ನಡಕ್ಕೆ ಸಿಕ್ಕರು ಮತ್ತೊಬ್ಬ ರಕ್ಷಿತ್ ಶೆಟ್ಟಿ

ಇದೀಗ ಈ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಮಾಡಿದ ಪಾತ್ರವು ಭಾರಿ ಸದ್ದು ಮಾಡುತ್ತಿದೆ. ಈ ಪಾತ್ರಕ್ಕೆ ರಕ್ಷಿತ್ ಜೀವ ತುಂಬಿದ ರೀತಿಯನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಇವರು ಕನ್ನಡಕ್ಕೆ ಸಿಕ್ಕ ಮತ್ತೊಬ್ಬ ರಕ್ಷಿತ್ ಶೆಟ್ಟಿ ಹೌದು… ಇವರು ರಕ್ಷಿತ್ ರಾಮಚಂದ್ರ ಶೆಟ್ಟಿ.

39
ಯಾರು ಈ ರಕ್ಷಿತ್ ರಾಮಚಂದ್ರ ಶೆಟ್ಟಿ

ರಕ್ಷಿತ್ ರಾಮಚಂದ್ರ ಶೆಟ್ಟಿ ಭದ್ರಾವತಿಯವರು. ವಿದ್ಯಾಭ್ಯಾಸ ಮಾಡಿದ್ದು, ಕುಂದಾಪುರದಲ್ಲಿ. ರೆಸ್ಲರ್ ಹಾಗೂ ಆಥ್ಲೇಟ್ ಆಗಿರುವ ರಕ್ಷಿತ್ ನಟ ಕೂಡ ಹೌದು, ಇವರು ಕಾಂತಾರ ಸಿನಿಮಾ ಮಾತ್ರವಲ್ಲ ಹಲವು ಕನ್ನಡ ಸಿನಿಮಾಗಳಲ್ಲಿ ವಿಲನ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

49
ದರ್ಶನ್ ಸಿನಿಮಾ ಮೂಲಕ ನಟನೆಗೆ ಎಂಟ್ರಿ

ದರ್ಶನ್ ತೂಗುದೀಪ ಅಭಿನಯದ ರಾಬರ್ಟ್ ಸಿನಿಮಾ ಮೂಲಕ ಕನ್ನಡ ಸಿನಿಮಾಕ್ಕೆ ಎಂಟ್ರಿ ಕೊಟ್ಟ ರಕ್ಷಿತ್, ಚಂದನವನದಲ್ಲಿ ನೆಲೆಯೂರುವಂತೆ ಮಾಡಿದ್ದು, ರಿಷಬ್ ಶೆಟ್ಟಿ. ರಕ್ಷಿತ್ ನಟಿಸಿದ ಎರಡನೇ ಸಿನಿಮಾ ರಿಷಬ್ ಶೆಟ್ಟಿಯವರ ಹರಿಕಥೆ ಅಲ್ಲ ಗಿರಿ ಕತೆ. ಇದಲ್ಲದೇ ಸಪ್ತಸಾಗರದಾಚೆ ಎಲ್ಲೋ, ಯುವ, ಕರಾವಳಿ ಸಿನಿಮಾದಲ್ಲೂ ರಕ್ಷಿತ್ ನಟಿಸಿದ್ದಾರೆ.

59
ಕಾಂತಾರ ಸಿನಿಮಾದಲ್ಲಿ ಅಬ್ಬರಿಸಿದ ರಕ್ಷಿತ್

ಕಾಂತಾರ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ರೌಡಿಗಳ ಜೊತೆ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ರಿಷಬ್ ಕೈಯಿಂದ ರಕ್ಷಿತ್ ಕೊಲೆಯಾಗುತ್ತೆ. ಆದರೆ ಕಾಂತಾರ ಚಾಪ್ಟರ್ 1ರಲ್ಲಿ ಬೆರ್ಮೆಯ ಸ್ನೇಹಿತ ಚಿಂಕ್ರನ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದರು ರಕ್ಷಿತ್.

69
ಚಿಂಕ್ರನ ಪಾತ್ರಕ್ಕೆ ಭಾರಿ ಮೆಚ್ಚುಗೆ

ಕಾಂತಾರ ಚಾಪ್ಟರ್ 1ರಲ್ಲಿ ಚಿಂಕ್ರನ ಪಾತ್ರ ತುಂಬಾನೆ ಪವರ್ ಫುಲ್ ಪಾತ್ರವಾಗಿದೆ. ನಾಯಕನ ಜೊತೆಗೆ ಸಿನಿಮಾದ ಮುಕ್ಕಾಲು ಭಾಗದವರೆಗೂ ಕಾಣಿಸಿಕೊಳ್ಳುವ, ಕಾಡುಜನರ ಈ ಪಾತ್ರದಲ್ಲಿ ರಕ್ಷಿತ್ ಜೀವತುಂಬಿ ನಟಿಸಿದ್ದಾರೆ. ಹಾಗಾಗಿಯೇ ಸಿನಿರಸಿಕರು ಈ ಪಾತ್ರವನ್ನು ಮೆಚ್ಚಿಕೊಂಡು ಹೊಗಳಿಕೆಯ ಮಹಾಪೂರವನ್ನೆ ಹರಿಸಿದ್ದಾರೆ. ಸೋಶಿಯಲ್ ಮಿಡಿಯಾದಲ್ಲಂತೂ ಇವರದ್ದೇ ಹವಾ ಹೆಚ್ಚಾಗಿದೆ.

79
ರಿಷಬ್ ಶೆಟ್ಟಿಯನ್ನು ಗುರು ಎಂದ ರಕ್ಷಿತ್ ಶೆಟ್ಟಿ

ತಮ್ಮ ಸಿನಿಮಾ ಪಯಣಕ್ಕೆ ಬೆನ್ನೆಲುಬಾಗಿ ನಿಂತಿರುವ ರಿಷಬ್ ಶೆಟ್ಟಿಯನ್ನು ಗುರುಗಳು ಎಂದೇ ಹೇಳುವ ರಕ್ಷಿತ್, ಹಿಂದೆ ನಿಂತು ಮುಂದೆ ನಡೆಸುವ ನನ್ನ ಗುರು. ಏನು ಹೇಳುವ, ಅವರ ದಾರಿಯಲ್ಲಿ ಸಾಗುವೆ. ಅವರು ಹಾಕಿ ಕೊಟ್ಟ ಮಾರ್ಗದಲ್ಲೇ ನಡೆಯುವೆ ಎಂದು ಗರ್ವದಿಂದ ರಿಷಬ್ ಕುರಿತು ಹೊಗಳುತ್ತಾರೆ.

89
ಚೀಂಕ್ರನ ಪಾತ್ರದ ಕುರಿತು ರಕ್ಷಿತ್ ಶೆಟ್ಟಿ

ಕಾಂತಾರ ಸಿನಿಮಾದಲ್ಲಿ ನಾನು ಇವತ್ತು ಅಭಿನಯ ಮಾಡಿದ್ದೇನೆ ಅಂದರೆ ಅದಕ್ಕೆ ಮೂಲ ಕಾರಣ ರಿಷಬ್ ಅಣ್ಣ. ಭದ್ರಾವತಿಯ ಯಾವುದೋ ಹಳ್ಳಿಯಲ್ಲಿ ಮರೆಯಾಗಬೇಕಾಗಿದ್ದ ನಾನು ಇಂದು ಜನ ಗುರುತಿಸುವ ಮಟ್ಟಕ್ಕೆ ನನ್ನನ್ನ ಎತ್ತರದ ಸ್ಥಾನಕ್ಕೆ ಕಳಿಸಿಕೊಟ್ಟಂತ ನನ್ನ ಅಂತರಂಗದ ದೈವ ನನ್ನ ರಿಷಬ್ ಅಣ್ಣ. ಓದುವ ನಿಮಗೆ ಕೊಂಚ ಜಾಸ್ತಿ ಅನಿಸಬಹುದು, ಇದೇ ಸತ್ಯ.

99
ಥ್ಯಾಂಕ್ಯೂ ಎಂದ ರಕ್ಷಿತ್

ಅಣ್ಣ ಥ್ಯಾಂಕ್ಯೂ ಈ ಪದ ತುಂಬಾ ಸಣ್ಣದು, ನನ್ನ ಮುಂದಿನ ಸಿನಿಮಾದ ಪಯಣ ಪ್ರತಿ ಹೆಜ್ಜೆಯೂ ನೀವು ಹಾಕಿಕೊಟ್ಟ ದಾರಿನೇ. ಹಾಗೂ ಪ್ರಗತಿ ಅಕ್ಕನಿಗೆ ಯಾವತ್ತು ಚಿರಋಣಿ. ಸಿನಿಮಾದ ಬರಹಗಾರರಾದ ಅನಿರುದ್ಧಣ್ಣ, ಶನಿಲ್ ಗುರು ಅಣ್ಣ ನಿಮಗೆ ಎಷ್ಟು ಥ್ಯಾಂಕ್ಸ್ ಹೇಳಿದ್ರು ಕಡಿಮೆ. ಅರವಿಂದ್ ಅಣ್ಣ ನಿಮಗೆ ಏನ್ ಹೇಳಲೀ ಇಷ್ಟು ಚಂದ ಕಾಣಲಿಕ್ಕೆ ನೀವೇ ಕಾರಣ. ಥ್ಯಾಂಕ್ ಯು ಅರವಿಂದ ಅಣ್ಣ. ಫ್ಯಾನ್ ಇಂಡಿಯಾ ಆರ್ ಫ್ಯಾನ್ ವರ್ಲ್ಡ್ ಕಾಂತಾರದಂತಹ ಸಿನಿಮಾದಲ್ಲಿ ನಾನೊಬ್ಬ ನಟನಾಗಿ ಕಾಣುವುದಕ್ಕೆ ಹೊಂಬಾಳೆ ಸಂಸ್ಥೆಗೆ ಅನಂತ ಅನಂತ ಧನ್ಯವಾದಗಳು ಎಂದು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

Read more Photos on
click me!

Recommended Stories