ಕಾಂತಾರ ಚಾಪ್ಟರ್ 1 ರಿಲೀಸ್ ಆದ ಬಳಿಕ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಚಿಂದಿ ಮಾಡುತ್ತಿದ್ದರೆ, ಸೋಶಿಯಲ್ ಮೀಡಿಯಾ ಪೂರ್ತಿಯಾಗಿ ರುಕ್ಮಿಣಿ ವಸಂತ್ ತುಂಬಿ ಹೋಗಿದ್ದಾರೆ. ಎಲ್ಲಿ ನೋಡಿದ್ರೂ, ಯಾವ ಪೇಜ್ ತೆರೆದ್ರೂ ಅಲ್ಲಿ ರುಕ್ಮಿಣಿ ತಮ್ಮ ನಗು, ಅಂದ, ಚಂದದಿಂದ ಗಮನ ಸೆಳೆಯುತ್ತಿದ್ದಾರೆ.
ಸದ್ಯ ದೇಶದೆಲ್ಲೆಡೆ ಸದ್ದು ಮಾಡುತ್ತಾ, ನ್ಯಾಷನಲ್ ಕ್ರಶ್ ಆಗಿ ಅಪ್ ಡೇಟ್ ಆಗಿರುವ ಚೆಲುವೆ ಎಂದರೆ ಅದು ರುಕ್ಮಿಣಿ ವಸಂತ್. ತಮ್ಮ ಸ್ನಿಗ್ಧ ಸೌಂದರ್ಯದ ಮೂಲಕವೇ ದೇಶದೆಲ್ಲೆಡೆಯಲ್ಲೂ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ ಈ ಚೆಲುವೆ.
27
ಕಾಂತಾರ ಚಾಪ್ಟರ್ 1
ರಿಷಬ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿರುವ ಕಾಂತಾರ ಚಾಪ್ಟರ್ 1 ಬಿಡುಗಡೆಯಾಗಿ ಬಾಕ್ಸ್ ಆಫೀಸ್ ಚಿಂದಿ ಮಾಡುತ್ತಿದ್ದರೆ, ಇನ್ನೊಂದು ಕಡೆ ಸಿನಿಮಾ ನಟಿ ರುಕ್ಮಿಣಿ ವಸಂತ್ ತಮ್ಮ ಸಿನಿಮಾದಲ್ಲಿನ ತಮ್ಮ ನಟನೆ, ಸೌಂದರ್ಯದಿಂದ ಗಮನ ಸೆಳೆಯುತ್ತಿದ್ದಾರೆ.
37
ಕನಕವತಿಯಾಗಿ ಗಮನ ಸೆಳೆದ ನಟಿ
ಕಾಂತಾರ ಸಿನಿಮಾದಲ್ಲಿ ರುಕ್ಮಿಣಿ ವಸಂತ್ ಯುವರಾಣಿ ಕನಕವತಿ ಪಾತ್ರದಲ್ಲಿ ಸಿನಿಮಾದ ಮೊದಲಾರ್ಧದಲ್ಲಿ ನಾಯಕಿಯಾಕಿ, ಉಳಿದಾರ್ಧದಲ್ಲಿ ವಿಲನ್ ಆಗಿ ಅದ್ಭುತವಾಗಿ ನಟಿಸಿದ್ದಾರೆ. ಸಿನಿಮಾದ ಪ್ರಮುಖ ಹೈಲೈಟ್ ಕೂಡ ಇವರೇ .
ಈಗಾಗಲೇ ಕನ್ನಡ ತಮಿಳು, ತೆಲುಗು ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿರುವ ರುಕ್ಮಿಣಿ ವಸಂತ್ ಇದೀಗ್ ಕಾಂತಾರ ಸಿನಿಮಾ ಮೂಲಕ ನ್ಯಾಷನಲ್ ಕ್ರಶ್ ಆಗಿ ಬದಲಾಗಿದ್ದಾರೆ. ಸೋಶಿಯಲ್ ಮೀಡಿಯಾ ತೆರೆದರೆ ಸಾಕು ಪೂರ್ತಿಯಾಗಿ ರುಕ್ಮಿಣಿ ವಸಂತ್ ತುಂಬಿಕೊಂಡಿದ್ದಾರೆ.
57
ಹೊಸ ಫೋಟೊ ನೋಡಿ ಕಳೆದುಹೋದ ಫ್ಯಾನ್ಸ್
ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ರುಕ್ಮಿಣಿ ವಸಂತ್ ಇದೀಗ ಆಫ್ ವೈಟ್ ಬಣ್ಣದ ಸುಂದರವಾದ ಸೀರೆಯುಟ್ಟು ಫೋಟೊ ಶೂಟ್ ಮಾಡಿಸಿದ್ದು, ಚೆಲುವೆಯ ಅಂದಕ್ಕೆ ಅಭಿಮಾನಿಗಳು ಸೋತಿದ್ದಾರೆ ಅಂತಾನೆ ಹೇಳಬಹುದು.
67
ಡಿಜಿಟಲ್ ಅರೆಸ್ಟ್ ಮಾಡಿಸಿದ್ರಾ ಸುಂದರಿ
ಅಭಿಮಾನಿಗಳ ಕಾಮೆಂಟ್ ನೋಡಿದ್ರೆ ಅದೆಷ್ಟು ಯುವಕರು ರುಕ್ಮಿಣಿ ವಸಂತ್ ಸೌಂದರ್ಯಕ್ಕೆ ಮನ ಸೋತಿದ್ದಾರೆ ಅನ್ನೋದು ತಿಳಿಯುತ್ತೆ. ಸೋಶಿಯಲ್ ಮೀಡಿಯಾ ಫೋಟೊಗಳನ್ನು ನೋಡಿ ಒಬ್ಬರು ಕಾಮೆಂಟ್ ಮಾಡಿ ರುಕ್ಕು ನೀನು ಸೌಂದರ್ಯದಿಂದಲೇ ನಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡಿಸಿದ್ದಿ ಎಂದಿದ್ದಾರೆ.
77
ಕಣ್ಣೋಟದಲ್ಲೇ ಹೃದಯಕ್ಕೆ ಚೂರಿ
ಇನ್ನಷ್ಟು ಜನ ಅಭಿಮಾನಿಗಳು ನಿಮಗೆ ಎಐನೇ ಬೇಕಾಗಿಲ್ಲ, ಅಷ್ಟೊಂದು ಸುಂದರವಾಗಿದ್ದೀರಿ, ನಿಮ್ಮ ಕಣ್ಣೋಟ, ನಗುವಿನಿಂದಲೇ ನಮ್ಮ ಹೃದಯಕ್ಕೆ ಚೂರಿ ಹಾಕುತ್ತಿದ್ದೀರಿ, ಸುಂದರಿ, ಗೊಂಬೆ, ಕನಸಿನಂತಹ ಹುಡುಗಿ, ಎಂಥಾ ಚೆಂದ, ಸಾಂಪ್ರಾದಾಯಿಕ ಉಡುಗೆಯಲ್ಲಿ ರುಕ್ಮಿಣಿ ಅಪ್ಪಟ ದೇವತೆ ಎಂದು ಕಾಮೆಂಟ್ ಮಾಡಿದ್ದಾರೆ.