ಚಿಕ್ಕಮಗಳೂರು ಮೂಲದ ದೀಪಕ್ ಮಯೂರ್ ಪಟೇಲ್, ನಟ ಸುದೀಪ್ ವಿರುದ್ಧ ಬೆಂಗಳೂರು ಪೊಲೀಸ್ ಕಮಿಷನರ್ ಕಚೇರಿಗೆ ದೂರು ನೀಡಿದ್ದಾರೆ. 2016ರಲ್ಲಿ ನಡೆದ ಈ ಘಟನೆಗೆ ಸಂಬಂಧಿಸಿದಂತೆ, ಚಿತ್ರೀಕರಣ ತಂಡವು ತೋಟವನ್ನು ಹಾಳುಗೆಡವಿ, ಪರಿಹಾರ ನೀಡದೆ ವಂಚಿಸಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಚಿಕ್ಕಮಗಳೂರು: ಚಲನಚಿತ್ರ ಹಾಗೂ ಧಾರಾವಾಹಿ ಚಿತ್ರೀಕರಣದ ನೆಪದಲ್ಲಿ ಲಕ್ಷಾಂತರ ರೂಪಾಯಿ ನಷ್ಟ ಉಂಟುಮಾಡಿ ಮೋಸ ಮಾಡಿದ್ದಾರೆ ಎಂದು ಆರೋಪಿಸಿ, ಚಿಕ್ಕಮಗಳೂರು ಮೂಲದ ದೀಪಕ್ ಮಯೂರ್ ಪಟೇಲ್ ಅವರು ನಟ ಸುದೀಪ್ ವಿರುದ್ಧ ಬೆಂಗಳೂರು ಪೊಲೀಸ್ ಕಮಿಷನರ್ ಕಚೇರಿಗೆ ದೂರು ಸಲ್ಲಿಸಿದ್ದಾರೆ. ಬಿಗ್‌ಬಾಸ್ ಕನ್ನಡ ಸೀಸನ್ 12 ಯಶಸ್ವಿಯಾಗಿ ಮುಗಿಸಿರುವ ಕಿಚ್ಚನಿಗೆ ಈ ಪ್ರಕರಣ ತಲೆ ನೋವು ತಂದಿಟ್ಟಿದೆ.
28
ದೀಪಕ್ ಮಯೂರ್ ಪಟೇಲ್ ದೂರು
ದೀಪಕ್ ಮಯೂರ್ ಪಟೇಲ್ ಅವರು ನೀಡಿರುವ ದೂರಿನ ಅನ್ವಯ ಚಿಕ್ಕಮಗಳೂರು ತಾಲೂಕಿನ ಬೈಗೂರು ಗ್ರಾಮದ ಸರ್ವೇ ನಂಬರ್ 275ರಲ್ಲಿ ಇರುವ ತಮ್ಮ ಸ್ವಂತ ತೋಟದ ಜಾಗದಲ್ಲಿ ‘ವಾರಸ್ಥಾರ’ ಧಾರಾವಾಹಿಯ ಚಿತ್ರೀಕರಣ ನಡೆಸಲು 2016ರಲ್ಲಿ ಅನುಮತಿ ಕೋರಲಾಗಿತ್ತು. ಸುಮಾರು ಎರಡು ವರ್ಷಗಳ ಕಾಲ ಚಿತ್ರೀಕರಣಕ್ಕೆ ಅವಕಾಶ ನೀಡುವಂತೆ ಕೇಳಿಕೊಂಡಿದ್ದು, ವಾಸ್ತವವಾಗಿ ನಾಲ್ಕು ತಿಂಗಳ ಕಾಲ ಚಿತ್ರೀಕರಣ ನಡೆದಿತ್ತು ಎಂದು ಅವರು ತಿಳಿಸಿದ್ದಾರೆ. ಇದೀಗ ಹಳೆಯ ಪ್ರಕರಣ ಮತ್ತೆ ಮುನ್ನಲೆಗೆ ಬಂದಿದೆ.
38
ಚಿತ್ರೀಕರಣದ ವೇಳೆ ತೋಟಕ್ಕೆ ಭಾರೀ ಹಾನಿ
ದೂರುದಾರರ ಹೇಳಿಕೆಯಂತೆ, ಧಾರಾವಾಹಿಯ ಕಲಾವಿದರು ಹಾಗೂ ತಾಂತ್ರಿಕ ಸಿಬ್ಬಂದಿ ವಾಸಿಸಲು ಶೆಡ್‌ಗಳನ್ನು ನಿರ್ಮಿಸುವ ಸಲುವಾಗಿ ಕಾಫಿ ಗಿಡಗಳು, ಸಿಲ್ವರ್ ಮರಗಳು ಸೇರಿದಂತೆ ಬೆಲೆಬಾಳುವ ಮರಗಳನ್ನು ಕಡಿದು ಹಾಕಲಾಗಿದೆ. ಇದರಿಂದ ತೋಟಕ್ಕೆ ಗಂಭೀರ ಹಾನಿಯಾಗಿದ್ದು, ಒಂದು ಎಕರೆ ಜಾಗ ಸಂಪೂರ್ಣವಾಗಿ ನಾಶವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ನೋಟ್‌ಬ್ಯಾಂಕ್ ಘೋಷಣೆಯ ನಂತರ ಚಿತ್ರೀಕರಣ ತಂಡವು ಬೆಂಗಳೂರು ಕಡೆಗೆ ವಾಪಸ್ ತೆರಳಿದ್ದು, ಬಳಿಕ ತೋಟದ ಜಾಗವನ್ನು ಸರಿಪಡಿಸದೇ ಹಾಗೆಯೇ ಬಿಟ್ಟು ಹೋಗಿದ್ದಾರೆ ಎಂಬ ಆರೋಪವಿದೆ. ತೋಟದ ಹಾನಿ ಸರಿಪಡಿಸಲು ಹಾಗೂ ನಷ್ಟವಾಗಿ ನೀಡಬೇಕಿದ್ದ ಸುಮಾರು 80 ಸಾವಿರ ರೂಪಾಯಿ ಹಣವನ್ನೂ ಪಾವತಿಸಿಲ್ಲ ಎಂದು ದೀಪಕ್ ಮಯೂರ್ ಪಟೇಲ್ ದೂರಿದ್ದಾರೆ.
58
ಪರಿಹಾರ ನೀಡದೇ ನಿರ್ಲಕ್ಷ್ಯ ಆರೋಪ
ಚಿತ್ರೀಕರಣದಿಂದ ತಮಗೆ ಉಂಟಾದ ನಷ್ಟಕ್ಕೆ ಸೂಕ್ತ ಪರಿಹಾರ ನೀಡಿಲ್ಲ ಎಂದು ಆರೋಪಿಸಿರುವ ದೀಪಕ್, ಈ ವಿಷಯದಲ್ಲಿ ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾಗಿದ್ದಾರೆ. 2016ರಿಂದಲೂ ಚಿಕ್ಕಮಗಳೂರು ಎಸ್ಪಿ ಹಾಗೂ ಬೆಂಗಳೂರು ಪೊಲೀಸ್ ಕಮಿಷನರ್ ಅವರಿಗೆ ದೂರು ನೀಡಿದ್ದರೂ ನ್ಯಾಯ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
68
ಕೋರ್ಟ್ ಮೆಟ್ಟಿಲು ಏರಿದ್ದ ಪ್ರಕರಣ
ಈ ಪ್ರಕರಣ ಈ ಹಿಂದೆ ನ್ಯಾಯಾಲಯದ ಮೆಟ್ಟಿಲು ಕೂಡ ಏರಿದ್ದು, ಆದರೂ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಲ್ಲ ಎಂದು ದೂರುದಾರರು ಹೇಳಿದ್ದಾರೆ. ಮತ್ತೆ ಇದೇ ವರ್ಷದ ಜನವರಿ 16ರಂದು ಅವರು ಬೆಂಗಳೂರು ಪೊಲೀಸ್ ಕಮಿಷನರ್ ಕಚೇರಿಗೆ ಹೊಸದಾಗಿ ದೂರು ಸಲ್ಲಿಸಿದ್ದಾರೆ.
ಕೋ-ಪ್ರೊಡ್ಯೂಸರ್ ವಿರುದ್ಧವೂ ಆರೋಪ
ದೂರಿನಲ್ಲಿ ನಟ ಸುದೀಪ್ ಜೊತೆಗೆ ಧಾರಾವಾಹಿಯ ಕೋ-ಪ್ರೊಡ್ಯೂಸರ್‌ಗಳಾದ ಮಹೇಶ್ ಹಾಗೂ ಗಡ್ಡ ವಿಜಿ ಅವರ ಹೆಸರುಗಳನ್ನೂ ಉಲ್ಲೇಖಿಸಲಾಗಿದ್ದು, ಚಿತ್ರೀಕರಣದ ವೇಳೆ ಇವರು ಸ್ಥಳಕ್ಕೆ ಬಂದು ವ್ಯವಸ್ಥೆಗಳನ್ನು ನೋಡಿಕೊಂಡಿದ್ದರು ಎಂದು ಆರೋಪಿಸಲಾಗಿದೆ.
78
ಬೈಗೂರು ಗ್ರಾಮದಲ್ಲಿ ನಡೆದ ಚಿತ್ರೀಕರಣ
ಬೈಗೂರು ಗ್ರಾಮದ ಸರ್ವೇ ನಂಬರ್ 275ರಲ್ಲಿ ಸುಮಾರು ಒಂದು ಎಕರೆ ಜಾಗದಲ್ಲಿ ಧಾರಾವಾಹಿ ಚಿತ್ರೀಕರಣ ನಡೆದಿದ್ದು, ಆ ಜಾಗದಲ್ಲಿದ್ದ ಕಾಫಿ ಗಿಡಗಳನ್ನು ಕಿತ್ತುಹಾಕಿ ನಷ್ಟ ಉಂಟು ಮಾಡಲಾಗಿದೆ ಎಂದು ದೀಪಕ್ ಮಯೂರ್ ಪಟೇಲ್ ಆರೋಪಿಸಿದ್ದಾರೆ. ಈ ಸಂಬಂಧ ನ್ಯಾಯಕ್ಕಾಗಿ ಮತ್ತೊಮ್ಮೆ ಅಧಿಕಾರಿಗಳ ಮೊರೆ ಹೋಗಿರುವ ಅವರು, ತಮಗೆ ಉಂಟಾದ ನಷ್ಟಕ್ಕೆ ತಕ್ಷಣ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ. ಈ ದೂರಿನ ಮೇಲೆ ಬೆಂಗಳೂರು ಪೊಲೀಸ್ ಕಮಿಷನರ್ ಕಚೇರಿ ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಎಂಬುದು ಈಗ ಕುತೂಹಲಕ್ಕೆ ಕಾರಣವಾಗಿದೆ.
88
2020ರಲ್ಲಿ ವಿವಾದಕ್ಕೆ ತೆರೆ
ನಟ ಸುದೀಪ್ ತಮ್ಮ ಕಿಚ್ಚ ಕ್ರಿಯೇಷನ್ ಮೂಲಕ ಈ ಸೀರಿಯಲ್ ತೆಗೆದಿದ್ದರು.'ವಾರಸ್ದಾರ' ಗಡ್ಡ ವಿಜಿ ನಿರ್ದೇಶನದ ಮೂಲಕ ಶುರು ಆಗಿದ್ದ ಧಾರಾವಾಹಿ. ಯಜ್ಞ ಶೆಟ್ಟಿ ಈ ಧಾರಾವಾಹಿಯಲ್ಲಿ ನಾಯಕಿ. 2020ರಲ್ಲಿ ವಿವಾದಗಳ ಕುರಿತು ದಾಖಲಾಗಿದ್ದ ಪ್ರಕರಣಗಳನ್ನು ಕರ್ನಾಟಕ ಹೈಕೋರ್ಟ್ ವಜಾ ಮಾಡಿತ್ತು. ಮನೆಯ ಮಾಲೀಕರಿಗೆ ಬಾಡಿಗೆ ಹಣ ಪಾವತಿಸದೆ ವಂಚಿಸಿದ ಆರೋಪದ ಹಿನ್ನೆಲೆ ಪ್ರಕರಣ ದಾಖಲಾಗಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.