ರಾಧಿಕಾ ಪಂಡಿತ್'ಗೆ 2016ರ ವರ್ಷ ತುಂಬಾನೆ ಸ್ಪೆಷಲ್‌ ಆಗಿತ್ತಂತೆ... ಯಾಕೆ ನೋಡಿ

Published : Jan 19, 2026, 10:00 PM IST

Radhika Pandit: ಎಲ್ಲೆಡೆ 2016ರ ಟ್ರೆಂಡ್ ಜೋರಾಗಿ ನಡೆಯುತ್ತಿದೆ. ಎಲ್ಲರೂ ತಮ್ಮ ಹತ್ತು ವರ್ಷ ಹಿಂದಿನ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ನಟಿ ರಾಧಿಕಾ ಪಂಡಿತ್ ಕೂಡ 2016ರಲ್ಲಿ ತಮ್ಮ ಜೀವನದಲ್ಲಿ ಏನೆಲ್ಲಾ ಆಯ್ತು ಅನ್ನೋದನ್ನು ಹಂಚಿಕೊಂಡಿದ್ದಾರೆ. 2016 ಮೈಲುಗಲ್ಲು ವರ್ಷ,

PREV
19
ರಾಧಿಕಾ ಪಂಡಿತ್

ಇದೀಗ ದೇಶದಲ್ಲಿ 2016 ಟ್ರೆಂಡ್ ಜೋರಾಗಿಯೇ ನಡೆಯುತ್ತಿದೆ. ಈ ಟ್ರೆಂಡ್ ನಲ್ಲಿ ರಾಧಿಕಾ ಪಂಡಿತ್ ಕೂಡ ತಮ್ಮ 2016ರ ಮಧುರ ನೆನಪುಗಳನ್ನು ಹಂಚಿಕೊಂಡಿದ್ದಾರೆ. 2016 ಅವರಿಗೆ ಎಷ್ಟು ದೊಡ್ಡ ಮೈಲುಗಲ್ಲಾಗಿತ್ತು ಅನ್ನೋದನ್ನು ತಿಳಿಸಿದ್ದಾರೆ. ಇಲ್ಲಿದೆ ನೋಡಿ ರಾಧಿಕಾ ಪಂಡಿತ್ ಅವರ 2016ರ ಜರ್ನಿ.

29
2016 ಮೈಲುಗಲ್ಲು ವರ್ಷ

2016 : ನಿಜಕ್ಕೂ ನನ್ನ ಜೀವನದ ಮರೆಯಲಾಗದ ವರ್ಷಗಳಲ್ಲಿ ಒಂದು - ಮೈಲಿಗಲ್ಲುಗಳು, ಪ್ರೀತಿ ಮತ್ತು ಕೃತಜ್ಞತೆಯಿಂದ ತುಂಬಿದಂತಹ ವರ್ಷ ಎಂದು ಬರೆದುಕೊಂಡಿದ್ದಾರೆ. ಈ ವರ್ಷ ಯಶ್ ಜೊತೆಗೆ ಸಂತೂ ಸ್ಟ್ರೈಟ್ ಫಾರ್ವರ್ಡ್, ಗಣೇಶ್ ಜೊತೆ ಜೂಮ್, ಪುನೀತ್ ರಾಜಕುಮಾರ್ ದೊಡ್ಮನೆ ಹುಡುಗ ಸಿನಿಮಾದಲ್ಲಿ ನಟಿಸಿದ್ದರು. ಇವು ಹೃದಯಕ್ಕೆ ಹತ್ತಿರವಾದ ಕಥೆಗಳು ಎಂದು ಸಹ ಹೇಳಿದ್ದಾರೆ.

39
ಅಭಿಮಾನಿಗಳ ಪ್ರೀತಿ

ಈ ವರ್ಷ ರಾಧಿಕಾ ಪಂಡಿತ್ ಅವರು ಮೂರು ಬ್ಯಾಕ್ ಟು ಬ್ಯಾಕ್ ಬ್ಲಾಕ್ ಬಸ್ಟರ್ ಸಿನಿಮಾ ನೀಡುವ ಮೂಲಕ ಸ್ಟಾರ್ ನಟಿಯಾಗಿದ್ದರಿಂದ ಅವರ ಹುಟ್ಟುಹಬ್ಬವನ್ನು ಸಹ ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸಿದ್ದರು. ನಟಿ ಅಭಿಮಾನಿಗಳ ಜೊತೆಗೆ ಕೇಕ್ ಕತ್ತರಿಸಿ ಸಂಭ್ರಮಿಸಿದ ಫೋಟೊಗಳನ್ನು ಶೇರ್ ಮಾಡಿದ್ದಾರೆ.

49
ಅರಸಿ ಬಂದ ಪ್ರಶಸ್ತಿಗಳು

ಈ ವರ್ಷ ಮನ್ನಣೆ ಮತ್ತು ಅಂತ್ಯವಿಲ್ಲದ ಪ್ರಶಸ್ತಿ, ಸನ್ಮಾನಗಳಿಂದ ಗೌರವಿಸಲ್ಪಟ್ಟಿದ್ದೇನೆ ಎನ್ನುತ್ತಾ ನಟಿ, 2016 ರಲ್ಲಿ ಪಡೆದುಕೊಂಡಂತಹ ಪ್ರಶಸ್ತಿಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

59
ತೆರೆಮರೆಯ ಫೋಟೊಗಳು

ತೆರೆಮರೆಯ ನಗು ಮತ್ತು ನೆನಪುಗಳನ್ನು ಸಹ ರಾಧಿಕಾ ಹಂಚಿಕೊಂಡಿದ್ದಾರೆ. ಇದರಲ್ಲಿ ಪುನೀತ್ ರಾಜ್ ಕುಮಾರ್, ಗಣೇಶ್, ಯಶ್ ಜೊತೆಗಿನ ಸಿನಿಮಾ ಶೂಟಿಂಗ್ ಫೋಟೊಗಳು ಸೇರಿವೆ.

69
ನಿಶ್ಚಿತಾರ್ಥ-ಮದುವೆ

ನಿಶ್ಚಿತಾರ್ಥದಿಂದ ಮದುವೆಯವರೆಗೆ.. ಸುಂದರವಾದ ಜೀವನ ಪ್ರಯಾಣದ ಆರಂಭ ಎಂದು ಬರೆದುಕೊಂಡಿರುವ ರಾಧಿಕಾ ಪಂಡಿತ್ ನಿಶ್ಚಿತಾರ್ಥ ಮತ್ತು ಮದುವೆಯ ಸುಂದರ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

79
ಪ್ರೀತಿಯಿಂದ ಮದುವೆವರೆಗೂ

2007ರಲ್ಲಿ ನಂದಗೋಕುಲ ಧಾರಾವಾಹಿಯಲ್ಲಿ ಶುರುವಾದ ಇವರಿಬ್ಬರ ಪರಿಚಯ, ಜೊತೆಯಾಗಿ ಸಿನಿಮಾ ಮಾಡಿದ ಬಳಿಕ ಪ್ರೀತಿಯಲ್ಲಿ ಬಿದ್ದರು. ಹಲವು ವರ್ಷಗಳ ಕಾಲ ತಮ್ಮ ಪ್ರೀತಿಯನ್ನು ಪ್ರೈವೆಟ್ ಆಗಿಟ್ಟಿದ್ದರು. 2016ರ ಆಗಸ್ಟ್ ನಲ್ಲಿ ನಿಶ್ಚಿತಾರ್ಥ, ಡಿಸೆಂಬರ್ ನಲ್ಲಿ ಈ ಜೋಡಿ ಮದುವೆಯಾಗಿತ್ತು. ಈ ಜೋಡಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.

89
ಟ್ರಾವೆಲ್ ಫೋಟೊಗಳು

ಪ್ರಯಾಣ: ಯಶ್ ಜೊತೆ ಜಗತ್ತನ್ನು ಎಕ್ಸ್ ಪ್ಲೋರ್ ಮಾಡುವುದು ಮತ್ತು ಜೀವಮಾನದ ನೆನಪುಗಳನ್ನು ಸಂಗ್ರಹಿಸುವುದು ಎನ್ನುತ್ತಾ, ಯಶ್ ಜೊತೆ ದೇಶ-ವಿದೇಶ ಸುತ್ತಿದಂತಹ ಫೋಟೊಗಳನ್ನು ರಾಧಿಕಾ ಹಂಚಿಕೊಂಡಿದ್ದಾರೆ.

99
ನಂಬರ್ 1 ನಟಿ

2016 ರ ವರ್ಷ ರಾಧಿಕಾ ಪಂಡಿತ್ ಪಾಲಿಗೆ ಅತ್ಯಂತ ಸ್ಪೆಷಲ್ ವರ್ಷ ಯಾಕಾಗಿತ್ತು ಅಂದ್ರೆ, ಈ ವರ್ಷದ ಅಂತ್ಯದಲ್ಲಿ ರಾಧಿಕಾ 'ವರ್ಷದ ನಟಿ'ಯಾಗಿ ಗುರುತಿಸಿಕೊಂಡು, ಚಂದನವನದ ನಂಬರ್ 1 ನಟಿಯಾಗಿ ಮಿಂಚಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories