Aarathi: ಯಾವ ಸಮಯದಲ್ಲಿ ಹೇಗಿರಬೇಕೋ ಹಾಗಿದ್ದಾರೆ ಆರತಿ, ಅದ್ರಲ್ಲಿ ತಪ್ಪೇನು? ನೆಟ್ಟಿಗರ ಪ್ರಶ್ನೆಗೆ ಅಲ್ಲಲ್ಲೇ ಸಿಕ್ತು ಉತ್ತರ!

Published : Jan 18, 2026, 12:17 PM IST

ಸಾಧನೆ ಮಾಡುವ ವಯಸ್ಸಲ್ಲಿ ಸಾಧನೆ ಮಾಡಿದ್ದಾರೆ. ಪ್ರೇಮ-ಕಾಮ-ಮದುವೆ-ಮಗು ಎಲವನ್ನೂ ನೋಡಿ ಸೂಪರ್ ಸ್ಟಾರ್ ಆಗಿ ಮಿಂಚಿ ಬಳಿಕ ವಿದೇಶದಲ್ಲಿ ಹೋಗಿ ಸೆಟಲ್ ಆಗಿದ್ದಾರೆ. ಆದರೆ, ತಾಯ್ನಾಡನ್ನು, ದೇಶಪ್ರೇಮವನ್ನು ಮರೆತಿಲ್ಲ.  ಇಂಥ ಲೈಫ್ ಸೂಪರ್ ಅಂತಿದಾರೆ ನೆಟ್ಟಿಗರು..!

PREV
16

ಇಂದು ಸೋಷಿಯಲ್ ಮೀಡಿಯಾ ಎಂದರೆ ಭಾರೀ ಪವರ್‌ಫುಲ್.. ಕಾರಣ, ಅದರಲ್ಲಿ ಯಾರು ಬೇಕಾದರೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಬಹುದು. ಅದಕ್ಕೆ ಏನಾದ್ರೂ ಬೆಲೆ ಇದೆಯೇ ಎಂಬುದು ಬೇರೆ ಪ್ರಶ್ನೆ. ಸೋಷಿಯಲ್ ಮೀಡಿಯಾ ಒಪಿನಿಯನ್ ಕಲೆಕ್ಟಿವ್‌ಆದಾಗ, ಅದಕ್ಕೊಂದು ಬೆಲೆ ಬರಬಹುದು ಕೂಡ. ಆದರೆ, ಎಲ್ಲರ ಬಗ್ಗೆಯೂ ಎಲ್ಲದರ ಬಗ್ಗೆಯೂ ಸೋಷಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ಹರಿದಾಡುವುದು ಪ್ಲಸ್ ಹಾಗೂ ಮೈನಸ್ ಎರಡೂ ಹೌದು.

26

ಈಗ್ಯಾಕೆ ಈ ವಿಷಯ ಎಂದರೆ, ನಟಿ ಆರತಿ (Aarathi) ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಹಲವರು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಲೆ ಇರುತ್ತಾರೆ. ಅದರಲ್ಲಿ ಹಲವರು ನಟಿ ಆರತಿ ಅವರನ್ನು ಹೊಗಳಿ, ಮೆಚ್ಚಿಯೇ ಮಾಡತನ್ನಾಡುತ್ತಾರೆ. ಅದಕ್ಕೆ ಅವರು ಸೂಕ್ತ ಕಾರಣವನ್ನೂ ಕೊಟ್ಟು ಮಾತನ್ನಾಡುತ್ತಾರೆ.

36

ಹಲವರು ಹೇಳುವ ಪ್ರಕಾರ, ನಟಿ ಆರತಿಯವರು ಯಾವಾಗ ಹೇಗೆ ಇರಬೇಕೋ ಹಾಗೇ ಇದ್ದಾರೆ. ಅವರು ಯೌವ್ವನದಲ್ಲಿ ಸಿನಿಮಾ ನಟನೆ, ಪ್ರೇಮ, ಕಾಮ, ಮದುವೆ ಎಲ್ಲವನ್ನೂ ಅನುಭವಿಸಿದ್ದಾರೆ. ಸಂಸಾರದಲ್ಲಿ ಸರಿಗಮ ಅಸಾಧ್ಯವಾದಾಗ ಡಿವೋರ್ಸ್ ಕೊಟ್ಟು ದೂರ ಹೋಗಿದ್ದಾರೆ. ಮತ್ತೆ ಹೊಂದಾಣಿಕೆಯಾಗುತ್ತಾ ನೋಡೋನ ಎಂದು ಪ್ರಯತ್ನಪಡುತ್ತಲೇ ಮತ್ತೊಂದು, ಇನ್ನೊಂದು ಮದುವೆ ಆಗಿದ್ದಾರೆ.

46

ಸಾಧನೆ ಮಾಡುವ ವಯಸ್ಸಲ್ಲಿ ಸಾಧನೆ ಮಾಡಿದ್ದಾರೆ. ಪ್ರೇಮ-ಕಾಮ-ಮದುವೆ-ಮಗು ಎಲವನ್ನೂ ನೋಡಿ ಸೂಪರ್ ಸ್ಟಾರ್ ಆಗಿ ಮಿಂಚಿ ಬಳಿಕ ವಿದೇಶದಲ್ಲಿ ಹೋಗಿ ಸೆಟಲ್ ಆಗಿದ್ದಾರೆ. ಆದರೆ, ತಾಯ್ನಾಡನ್ನು, ದೇಶಪ್ರೇಮವನ್ನು ಮರೆತಿಲ್ಲ.

56

ಅಮೆರಿಕಾದಲ್ಲಿ ಕುಟುಂಬದ ಜೊತೆ ಇದ್ದರೂ ಆಗಾಗ ಭಾರತಕ್ಕೆ, ಕರ್ನಾಟಕದ ಕೋಲಾರದ ಒಂದು ಗ್ರಾಮಕ್ಕೆ ಅವರು ಬರುತ್ತಲೇ ಇರುತ್ತಾರೆ. ಕಾರಣ, ಅಲ್ಲಿ ಅವರು ಹಲವು ಹಳ್ಳಿಗಳನ್ನು ದತ್ತು ತೆಗೆದುಕೊಂಡಿದ್ದಾರೆ. ಆ ಕಾರಣಕ್ಕೆ ಅವರು ಕನ್ನಡನಾಡಿಗೆ ಬಂದರೂ ಕೂಡ ತಾವಾಯ್ತು, ತಮ್ಮ ಕೆಲಸವಾಯ್ತು ಎಂದು ಇದ್ದು ಕೆಲಸ ಮುಗಿಸಿಕೊಂಡು ಮತ್ತೆ ಅಮೆರಿಕಾಕ್ಕೆ ಹಾರಿ ಹೋಗುತ್ತಾರೆ.

66

ಅವರು ಬಂದರೆ, ಹೋದರೆ ಯಾವುದೇ ಪ್ರಚಾರವಿಲ್ಲ. ಕಾರಣ, ಅವರಿಗೀಗ ಪ್ರಚಾರದ ಅಗತ್ಯವೇ ಇಲ್ಲವಂತೆ. 'ಸಮಾಜದಿಂದ ಅಂದು ಎಲ್ಲವನ್ನೂ ಪಡೆದಿದ್ದೇನೆ. ಇಂದು ಅದೇ ಸಮಾಜಕ್ಕೆ ನನ್ನಿಂದಾದ ಸಹಾಯ ಮಾಡುತ್ತೇನೆ' ಎಂದು ಸಿಕ್ಕವರ ಬಳಿ ಹೇಳಿಕೊಳ್ಳುತ್ತಾರಂತೆ ನಟಿ ಆರತಿ. ಹೌದು, ಅವರ ಜೀವನ ಅವರಿಷ್ಟ, ಅವರಿಗೆ ಇಷ್ಟವಾಗುವಂತೆ ಬದುಕುವುದರಲ್ಲಿ ತಪ್ಪೇನಿದೆ ಎಂದು ಸೋಷಿಯಲ್ ಮಿಡಿಯಾದಲ್ಲಿ ಹಲವರು ನಟಿ ಆರತಿ ಪರ ಬ್ಯಾಟ್ ಮಾಡುತ್ತಾರೆ. ನೀವೇನಂತೀರಿ?

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories