ಟೀ ಟೈಂ ಬಿಸ್ಕೆಟ್.. ಲವ್ ಗಾಸಿಪ್‌ ಎಂಡ್ ವೇಳೆ ನೋಡಿ ಸಂಜನಾ ಆನಂದ್ ಮುದ್ದಾದ ಫೋಟೋಸ್..!

Published : Mar 21, 2025, 08:56 PM ISTUpdated : Mar 21, 2025, 09:14 PM IST

ಸೂತ್ರಧಾರಿ ಚಿತ್ರದಲ್ಲಿ ನಟಿ ಸಂಜನಾ ಆನಂದ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಎಕ್ಕ ಹಾಗೂ ರಾಯಲ್ ಸಿನಿಮಾಗಳಲ್ಲಿ ಕೂಡ ನಟಿ ಸಂಜನಾ ಆನಂದ್ ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ. ಆ ಚಿತ್ರಗಳು...

PREV
112
ಟೀ ಟೈಂ ಬಿಸ್ಕೆಟ್.. ಲವ್ ಗಾಸಿಪ್‌ ಎಂಡ್ ವೇಳೆ ನೋಡಿ ಸಂಜನಾ ಆನಂದ್ ಮುದ್ದಾದ ಫೋಟೋಸ್..!

ಈಗಲ್ ಮೀಡಿಯಾ ಕ್ರಿಯೇಷನ್ಸ್ ನವರಸನ್ ನಿರ್ಮಾಣ‌ ಹಾಗು ಕಿರಣ್ ಕುಮಾರ್ ಚೊಚ್ಚಲ ನಿರ್ದೇಶನ, ಚಂದನ್ ಶೆಟ್ಟಿ (Chandan Shetty) ಮೊದಲ ಬಾರಿಗೆ ನಾಯಕನಾಗಿ ನಟಿಸಿರುವ 'ಸೂತ್ರಧಾರಿ' ಚಿತ್ರ ಮೇ 9 ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ. 
 

212

ಈ ಚಿತ್ರದಲ್ಲಿ ನಟಿ ಸಂಜನಾ ಆನಂದ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಎಕ್ಕ ಹಾಗೂ ರಾಯಲ್ ಸಿನಿಮಾಗಳಲ್ಲಿ ಕೂಡ ನಟಿ ಸಂಜನಾ ಆನಂದ್ ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ. ಆ ಚಿತ್ರಗಳೂ ಕೂಡ ಇನ್ನಷ್ಟೇ ಬಿಡುಗಡೆ ಆಗಬೇಕಿದೆ. 
 

312

ಚಂದನ್ ಶೆಟ್ಟಿ ಹಾಗೂ ಸಂಜನಾ ಆನಂದ್ ನಟಿಸಿರುವ ಸೂತ್ರಧಾರಿ ಚಿತ್ರದ 'ಡ್ಯಾಶ್' ಹಾಡು ಇಪ್ಪತ್ತೊಂಬತ್ತು ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ಕಂಡು ಸೂಪರ್ ಹಿಟ್ ಆಗಿದೆ. ಸಂಜನಾ ಆನಂದ್ ಹಾಗೂ ಚಂದನ್ ಶೆಟ್ಟಿ ಜೋಡಿ ಕೆಮೆಸ್ಟ್ರಿಯನ್ನು ಈ ಹಾಡಿನಲ್ಲಿ ಪ್ರೇಕ್ಚಕರು ಮೆಚ್ಚಿದ್ದಾರೆ. 

412

ನಿರ್ಮಾಪಕರಾದ ಚೇತನ್ ಗೌಡ, ಮುನೇಗೌಡ ಹಾಗೂ ರಾಜೇಶ್ ಅವರು 'ಸೂತ್ರಧಾರಿ' ಚಿತ್ರದ ಬಿಡುಗಡೆ ದಿನಾಂಕ ಅನಾವರಣ (09 ಮೇ 2025) ಮಾಡಿ, ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು. 
 

512

ಸುಮಾರು 200 ಚಿತ್ರಗಳನ್ನು ವಿತರಣೆ ಮಾಡಿದ್ದೇನೆ. ಕಳೆದವರ್ಷದಿಂದ ಇಲ್ಲಿಯವರೆಗೆ ವಾರಕ್ಕೆ ಹತ್ತರಂತೆ ಸಿನಿಮಾಗಳು ಬಿಡುಗಡೆಯಾಗುತ್ತಿದೆ. ಹಾಗಾಗಿ ನಾನು ಈ ಸಮಯದಲ್ಲಿ ನನ್ನ ಚಿತ್ರವನ್ನು ಬಿಡುಗಡೆ ಮಾಡಲಿಲ್ಲ‌. 

612

ಈಗ ನಲವತ್ತು ದಿನಗಳ ಮುಂಚೆ ಚಿತ್ರದ ದಿನಾಂಕ ಘೋಷಣೆ ಮಾಡುತ್ತಿದ್ದೇನೆ. ಮೇ 9 ರಂದು ನಮ್ಮ ಚಿತ್ರ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಚಿತ್ರತಂಡದ ಎಲ್ಲರ ಸಹಕಾರದಿಂದ ಚಿತ್ರ ಉತ್ತಮವಾಗಿ ಮೂಡಿಬಂದಿದೆ. 

712

ಇಂದಿನಿಂದ ಚಿತ್ರದ ಪ್ರಚಾರ ಕಾರ್ಯ ಆರಂಭಿಸಿದ್ದೇವೆ. ಈ ಚಿತ್ರದಲ್ಲಿ ನೀವು ಚಂದನ್ ಶೆಟ್ಟಿ ಅವರನ್ನು ವಿಭಿನ್ನ ಪಾತ್ರದಲ್ಲಿ ನೋಡಬಹುದು. ಬಿಡುಗಡೆ ದಿನಾಂಕ ಅನಾವರಣ ಮಾಡಿಕೊಟ್ಟ ನಿರ್ಮಾಪಕರಿಗೆ ಹಾಗೂ ನನ್ನ‌ ತಂಡಕ್ಕೆ ಈ ಸಮಯದಲ್ಲಿ ಧನ್ಯವಾದ ತಿಳಿಸುತ್ತೇನೆ' ಎಂದರು. 
 

812

ನಾಯಕನಾಗಿ ಇದು ಮೊದಲ ಸಿನಿಮಾ‌.‌ ನನ್ನ ಪಾತ್ರ ಬಹಳ ಚೆನ್ನಾಗಿದೆ. ಈ ಚಿತ್ರದಲ್ಲಿ ನಟಿಸಿದ ನಂತರ ನನ್ನ‌ ಜೀವನದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಈಗ ನಾನು ಬಹಳ ದಿನಗಳಿಂದ ಕಾಯುತ್ತಿದ್ದ 'ಸೂತ್ರಧಾರಿ' ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. 

912

ಮೇ 9 ರಂದು ಬಿಡುಗಡೆಯಾಗಲಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಹಾಡುಗಳು ಅಧಿಕ ಮಿಲಿಯನ್ ವೀಕ್ಷಣೆಯಾಗಿ ಟ್ರೆಂಡಿಂಗ್ ನಲ್ಲಿದೆ.  ಎಲ್ಲರ ಸಹಕಾರದಿಂದ ಉತ್ತಮವಾಗಿ ಮೂಡಿಬಂದಿರುವ ಈ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಾಯಕ ಚಂದನ್ ಶೆಟ್ಟಿ.
 

1012

ನಟಿ ಸಂಜನಾ ಆನಂದ್ ಮಾತನಾಡಿ , ನಾನು ಮತ್ತು ಚಂದನ್ ಅಭಿನಯಿಸಿರುವ ಈ ಚಿತ್ರದ 'ಡ್ಯಾಶ್' ಹಾಡು ಇಪ್ಪತ್ತೊಂಭತ್ತಕ್ಕೂ ಅಧಿಕ ಮಿಲಿಯನ್ ವೀಕ್ಷಣೆಯಾಗಿದೆ. ಚಿತ್ರ ಕೂಡ ಇದೇ‌ ರೀತಿ ಯಶಸ್ವಿಯಾಗಲಿದೆ ಎಂದರು.  

1112

ನಿರ್ದೇಶಕ ಕಿರಣ್ ಕುಮಾರ್ ಮಾತನಾಡಿ, ಇದು ನನ್ನ ಮೊದಲ‌ ನಿರ್ದೇಶನದ ಸಿನಿಮಾ. ಚಿತ್ರ ಚೆನ್ನಾಗಿ ‌ಮೂಡಿಬಂದಿದೆ.‌ ನಾನು ಛಾಯಾಗ್ರಾಹಕ ಪಿ.ಕೆ.ಹೆಚ್ ದಾಸ್ ಅವರ ಬಳಿ ಸಹಾಯಕನಾಗಿ ಕೆಲಸ‌ಮಾಡಿದ್ದೆ. ನನ್ನ ಮೊದಲ ನಿರ್ದೇಶನದ ಚೊಚ್ಚಲ ಚಿತ್ರಕ್ಕೆ ಗುರುಗಳೇ ಛಾಯಾಗ್ರಹಣ ಮಾಡಿರುವುದು ನೀಡಿರುವುದು ಖುಷಿಯ ವಿಚಾರ. ಅವಕಾಶ ನೀಡಿದ ನವರಸನ್ ಅವರಿಗೆ ಧನ್ಯವಾದ ಎಂದರು.

1212

ಚಿತ್ರದಲ್ಲಿ ನಟಿಸಿರುವ ಗಣೇಶ್ ನಾರಾಯಣ್, ಪ್ರಶಾಂತ್ ನಟನ, ಮೀರಾಶ್ರೀ, ಸುಶ್ಮಿತಾ, ಪಲ್ಲವಿ ಮುಂತಾದವರು 'ಸೂತ್ರಧಾರಿ' ಚಿತ್ರದ ತಮ್ಮ ಪಾತ್ರಗಳ ಬಗ್ಗೆ ಮಾತನಾಡಿದರು. ಛಾಯಾಗ್ರಾಹಕ ಪಿ.ಕೆ.ಹೆಚ್ ದಾಸ್ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
 

Read more Photos on
click me!

Recommended Stories