ಡಾಲಿ ಧನಂಜಯ ಅವರಿಗೆ ಒಳ್ಳೆಯದಾಗಬೇಕು: ಹೀಗ್ಯಾಕಂದ್ರು ನಟ ಧ್ರುವ ಸರ್ಜಾ
ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎನ್ನುವಂತೆ ನಟ ಧನಂಜಯ ಅವರು ಚಿತ್ರರಂಗದಲ್ಲಿ ದುಡಿದ ಹಣವನ್ನು ಚಿತ್ರರಂಗದಲ್ಲಿಯೇ ಹೂಡುತ್ತಿದ್ದಾರೆ. ಅವರಿಗೆ ಒಳ್ಳೆಯದಾಗಬೇಕು. ಹೀಗೆ ಹೇಳಿದ್ದು ಧ್ರುವ ಸರ್ಜಾ.
ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎನ್ನುವಂತೆ ನಟ ಧನಂಜಯ ಅವರು ಚಿತ್ರರಂಗದಲ್ಲಿ ದುಡಿದ ಹಣವನ್ನು ಚಿತ್ರರಂಗದಲ್ಲಿಯೇ ಹೂಡುತ್ತಿದ್ದಾರೆ. ಅವರಿಗೆ ಒಳ್ಳೆಯದಾಗಬೇಕು. ಹೀಗೆ ಹೇಳಿದ್ದು ಧ್ರುವ ಸರ್ಜಾ.
ನಾಗಭೂಷಣ್ ನಟನೆಯ ಎಲ್ಲಾ ಸಿನಿಮಾಗಳನ್ನು ನೋಡಿದ್ದೇನೆ. 'ಹನಿಮೂನ್' ಸಿಕ್ಕಾಪಟ್ಟೆ ಚೆನ್ನಾಗಿದೆ. ಯಾವಾಗ 'ಹನಿಮೂನ್ 2' ಎಂದು ಕೇಳುತ್ತಲೇ ಇರುತ್ತೇನೆ. ಈಗ 'ವಿದ್ಯಾಪತಿ' ಟ್ರೇಲರ್ ನೋಡಿದ್ದೇನೆ.
ಮನರಂಜನೆ ಪಕ್ಕಾ ಇರುತ್ತದೆ ಎನ್ನುವ ಭರವಸೆ ಇದೆ. ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎನ್ನುವಂತೆ ನಟ ಧನಂಜಯ ಅವರು ಚಿತ್ರರಂಗದಲ್ಲಿ ದುಡಿದ ಹಣವನ್ನು ಚಿತ್ರರಂಗದಲ್ಲಿಯೇ ಹೂಡುತ್ತಿದ್ದಾರೆ. ಅವರಿಗೆ ಒಳ್ಳೆಯದಾಗಬೇಕು'.
ಹೀಗೆ ಹೇಳಿದ್ದು ಧ್ರುವ ಸರ್ಜಾ. 'ಇಕ್ಕಟ್', 'ಟಗರು ಪಲ್ಯ' ಚಿತ್ರಗಳ ನಾಯಕ ನಟ ನಾಗಭೂಷಣ್ ನಟನೆಯ 'ವಿದ್ಯಾಪತಿ' ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಅವರು ಮಾತನಾಡಿದರು. ಇಶಾಂ ಹಾಗೂ ಹಸೀಂ ಖಾನ್ ನಿರ್ದೇಶನದ ಈ ಚಿತ್ರವನ್ನು ಡಾಲಿ ಧನಂಜಯ ನಿರ್ಮಿಸಿದ್ದಾರೆ.
ಮಲೈಕಾ ವಸುಪಾಲ್ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರದಲ್ಲಿ ನಟ ಡಾಲಿ ಧನಂಜಯ ಅನಕೊಂಡಾ ಎಂಬ ವಿಶಿಷ್ಟ ಕ್ಯಾಮಿಯೋ ಪಾತ್ರದಲ್ಲಿ ನಟಿಸಿದ್ದಾರೆ. ಧನಂಜಯ, 'ಇದು ಫ್ಯಾಮಿಲಿ ನೋಡುವ ಸಿನಿಮಾ. ನೀವು ನೋಡಿ ಗೆಲ್ಲಿಸಿದರೆ ಮತ್ತೊಂದಿಷ್ಟು ಒಳ್ಳೆಯ ಕನಸಿನ ಚಿತ್ರಗಳಿಗೆ ಅನುಕೂಲ ಆಗುತ್ತದೆ' ಎಂದರು.
ನಾಗಭೂಷಣ್, 'ನಾನು ಹೀರೋ ಆಗಬೇಕು ಎಂದು ಚಿತ್ರರಂಗಕ್ಕೆ ಬಂದವನಲ್ಲ. ಒಳ್ಳೆಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದಕ್ಕೆ ಬಂದೆ. ಹೀರೋ ಪಾತ್ರ ನನ್ನ ಜೀವನದಲ್ಲಿ ಸಿಕ್ಕ ಬೋನಸ್.
ನೀವು ಡಾಲಿ ಪಿಕ್ಚರ್ಸ್ ಬಿಟ್ಟು ಬೇರೆ ಕಡೆ ಸಿನಿಮಾ ಮಾಡೋಲ್ವಾ ಎಂದು ಕೆಲವರು ಕೇಳುತ್ತಾರೆ. ಆದರೆ ನನ್ನ ಮೇಲೆ ಐದಾರು ಕೋಟಿ ಇನ್ವೆಸ್ಟ್ ಮಾಡುತ್ತೇವೆ ಎಂದು ಯಾರೂ ಹೇಳಿಲ್ಲ. ಆದರೆ ನನ್ನ ಗೆಳೆಯ ಧನಂಜಯ ಮಾಡಿದ್ದಾನೆ' ಎಂದರು.