ಜೀ ಕನ್ನಡದ 'ಕರ್ಣ' ಸೀರಿಯಲ್ ಮೂಲಕ TRP ಕಿಂಗ್ ಎನಿಸಿರುವ ನಟ ಕಿರಣ್ ರಾಜ್, ತಮ್ಮ ಪಾತ್ರದ ಬದಲಾವಣೆ ಬಗ್ಗೆ ಮಾತನಾಡಿದ್ದಾರೆ. ತಮಗೆ ಒಳ್ಳೆಯವನ ಪಾತ್ರ ಇಷ್ಟವಿಲ್ಲ, ಈಗಿನ ರೆಬಲ್ ಪಾತ್ರವೇ ನಿಜವಾದದ್ದು ಎಂದಿರುವ ಅವರು, ತಮ್ಮ ಹೊಸ 'ಶೇರ್' ಸಿನಿಮಾದ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದಾರೆ.
ಕಿರಣ್ ರಾಜ್ ಎಂದರೆ ಬಹಳಷ್ಟು ಮಂದಿಗೆ ತಿಳಿಯದೇ ಹೋಗಬಹುದು. ಆದರೆ ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಕರ್ಣ ಸೀರಿಯಲ್ (Karna Serial) ಕರ್ಣ ಎಂದರೆ ಸಾಕು, ಅಗತ್ಯಕ್ಕಿಂತ ಹೆಚ್ಚು ಒಳ್ಳೆಯವನಾಗಿರುವ ನಾಯಕ ಕಣ್ಮುಂದೆ ಬರುತ್ತಾರೆ. ಈ ಹ್ಯಾಂಡ್ಸಮ್ ಯುವಕನೇ ಕಿರಣ್ ರಾಜ್ (Kiran Raj). TRP King ಎಂದೇ ಫೇಮಸ್ ಆಗಿದ್ದಾರೆ ಕಿರಣ್ ರಾಜ್.
26
ಹೊಟ್ಟೆಕಿಚ್ಚಿನ ಕರ್ಣ
ಈ ಹಿಂದೆ ಕನ್ನಡತಿ ಮೂಲಕ ಫೇಮಸ್ ಆಗಿದ್ದ ನಟ ಕಿರಣ್ ರಾಜ್, ಇದೀಗ ಕರ್ಣ ಸೀರಿಯಲ್ನಲ್ಲಿ ಹೊಟ್ಟೆಕಿಚ್ಚಿನ ಕೋಳಿಮೊಟ್ಟೆಯಾಗಿದ್ದಾರೆ. ಇದಕ್ಕೆ ಕಾರಣ, ತಾನು ಇಷ್ಟಪಟ್ಟಿರೋ ನಿಧಿಯ ಬಗ್ಗೆ ಮನೆಯಲ್ಲಿ ಹೇಳಲಾಗದೇ, ಇದೀಗ ಅವಳನ್ನು ನೋಡಲು ಹ್ಯಾಂಡಸಮ್ ಅರ್ಜುನ್ನನ್ನು ನೋಡಿ ಉರಿ ತಡೆದುಕೊಳ್ಳಲು ಆಗ್ತಿಲ್ಲ. ಅರ್ಜುನ್ ಎಂಟ್ರಿಯಿಂದ ಇದೀಗ ಸೀರಿಯಲ್ ರೋಚಕ ತಿರುವು ಪಡೆದುಕೊಂಡಿದೆ.
36
ಶೇರ್ ಚಿತ್ರದಲ್ಲಿ ಕಿರಣ್ ರಾಜ್
ಇದರ ನಡುವೆಯೇ, ಕಿರಣ್ ರಾಜ್ ಹೀರೋ ಆಗಿ ನಟಿಸಿರುವ ಚಿತ್ರ 'ಶೇರ್'. ಪ್ರಸಿದ್ಧ್ ನಿರ್ದೇಶನದಲ್ಲಿ ಮೂಡಿಬಂದಿರುವ 'ಶೇರ್' ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು ಮೇ 15ಕ್ಕೆ ಚಿತ್ರ ಬಿಡುಗಡೆಯಾಗಲಿದೆ. ಗ್ರೇಸ್ ರಾಜ್ ಪ್ರೊಡಕ್ಷನ್ ಲಾಂಛನದಲ್ಲಿ ಡಾ ಸುದರ್ಶನ್ ಸುಂದರರಾಜ್ 'ಶೇರ್' ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ. ಕಿರಣ್ ರಾಜ್ ಜೊತೆ ಸುರೇಖಾ, ಕ್ರಿಶ್, ತನಿಷಾ ಕುಪ್ಪಂಡ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಇದರ ಬಗ್ಗೆ ಮಾಧ್ಯಮವೊಂದರಲ್ಲಿ ಮಾತನಾಡಿರುವ ನಟ, ಸಿನಿಮಾ ಸ್ಟೋರಿ ಬಗ್ಗೆ ಹೇಳುತ್ತಲೇ ಕರ್ಣ ಸೀರಿಯಲ್ ಬಗ್ಗೆ ಕೇಳಿದ ಪ್ರಶ್ನೆಗೂ ಉತ್ತರಿಸಿದರು. ನನಗೆ ರಿಯಲ್ ಆಗಿ ಈ ರೊಮಾನ್ಸ್, ಹೆಲ್ಪ್ಲೆಸ್ನೆಸ್, ಅಗತ್ಯಕ್ಕಿಂತ ತೀರಾ ಒಳ್ಳೆಯವನಾಗಿರೋದು ಎಲ್ಲಾ ಇಷ್ಟನೇ ಇಲ್ಲ. ತುಂಬಾ ಒಳ್ಳೆಯವರನಾದ್ರೆ ಈ ಜಗತ್ತು ಬಿಡಲ್ಲ. ಆದರೂ ಈ ಸೀರಿಯಲ್ನಲ್ಲಿ ಈ ಪಾತ್ರ ಮಾಡಬೇಕಾಯಿತು ಎಂದಿದ್ದಾರೆ.
56
ರೆಬಲ್ ಕರ್ಣ
ಈಗ ಕರ್ಣ ರೆಬಲ್ ಆಗಿದ್ದಾನೆ. ಅದು ನನ್ನ ನಿಜವಾದ ಲೈಫ್ ಕ್ಯಾರೆಕ್ಟರ್. ಇಂಥ ಪಾತ್ರ ನನಗೆ ಇಷ್ಟ. ಆದ್ದರಿಂದ ತುಂಬಾ ಖುಷಿ ಪಡುತ್ತಿದ್ದೇನೆ. ಕೊನೆಗೂ ನನ್ನ ಅಸಲಿ ಕ್ಯಾರೆಕ್ಟರ್ ಮಾಡುವ ಅವಕಾಶ ಈಗ ಬಂದಿದೆ ಎಂದರು. ನಿಧಿ ಮತ್ತು ಕರ್ಣ ಯಾವಾಗ ಒಂದಾಗ್ತಾರೆ, ಒಂದಾಗ್ತಾರೋ, ಇಲ್ಲವೋ ಎಂದು ಕೇಳಿದ ಪ್ರಶ್ನೆಗೆ ನಟ, ಎಲ್ಲವನ್ನೂ ತೋರಿಸಿಬಿಟ್ಟರೆ ಒಂದೈವತ್ತು ಎಪಿಸೋಡ್ನಲ್ಲಿ ಇಡೀ ಸ್ಟೋರಿ ಮುಗಿದು ಹೋಗುತ್ತದೆ. ಅದಕ್ಕಾಗಿ ಹೀಗೆ ಎಳೆಯಬೇಕಾಗುತ್ತದೆ ಎನ್ನುವ ಜಾಣ್ಮೆಯ ಉತ್ತರ ನೋಡಿ ಸ್ಟೋರಿ ಬಿಟ್ಟುಕೊಡಲಿಲ್ಲ.
66
ಶೇರ್ (Sher) ಚಿತ್ರದ ಕುರಿತು
ಇನ್ನು ಶೇರ್ ಚಿತ್ರದ ಬಗ್ಗೆ ಹೇಳುವುದಾದರೆ, ಇದರಲ್ಲಿ ಕಿರಣ್ ರಾಜ್ ಅವರು ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡತಿ ಸೀರಿಯಲ್ ನಡೆಯುವ ವೇಳೆ ಇದರ ಶೂಟಿಂಗ್ ನಡೆದಿತ್ತು. ನಿರ್ದೇಶಕರು ಹೇಳಿದಂತೆ ಕೇಳಿದ್ದೇನೆ. ಚಿತ್ರಕ್ಕೆ ಜನರು ಪ್ರೀತಿ ಕೊಡುತ್ತಾರೆ ಎಂಬ ಭರವಸೆ ಇದೆ. ಇದೊಂದು ನಾರ್ಮಲ್ ಕಥೆಯಾದರೂ, ಸಾಕಷ್ಟು ಕುತೂಹಲಕರ ಅಂಶಗಳು ಚಿತ್ರದಲ್ಲಿವೆ. ಅನಾಥ ಮಕ್ಕಳ ಜೀವನದಲ್ಲಿ ಏನೇನೆಲ್ಲಾ ಆಗುತ್ತದೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ ಎಂದಿದ್ದಾರೆ. ಚಿತ್ರ ಮೇ 15 ರಂದು ಬಿಡುಗಡೆಯಾಗಲಿದೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.