Vineesh Darshan: ಅಪ್ಪನ ಹಾದಿಯಲ್ಲೇ ಪುತ್ರ; ದರ್ಶನ್ ರೀತಿಯಲ್ಲೇ ಇದನ್ನೂ ಕಲಿತ ವಿನೀಶ್..! ಸ್ಟಾರ್ ಆಗ್ತಾರಾ ಸ್ಟಾರ್ ಪುತ್ರ?

Published : Apr 21, 2026, 12:43 PM IST

Actor Darshan Son Vineesh: ನೂಲಿನಂತೆ ಸೀರೆ ತಾಯಿಯಂತೆ ಮಕ್ಕಳು ಅನ್ನೋ ಮಾತು ಎಲ್ಲರಿಗೂ ಗೊತ್ತಿರೋದೇ. ಆದ್ರೆ ದರ್ಶನ್ ಪುತ್ರ ವಿನೀಶ್ ವಿಚಾರದಲ್ಲಿ ಇದು ಕೊಂಚ ಭಿನ್ನ. ಹುಟ್ಟುತ್ತಲ್ಲೇ ಬಂಗಾರದ ಚಮಚ ಬಾಯಿಯಲ್ಲಿ ಇಟ್ಟುಕೊಂಡು ಬೆಳೆದ ದರ್ಶನ್ ಪುತ್ರ, ಥೇಟ್ ಅವರ ಅಪ್ಪನಂತೆಯೇ ಐಶಾರಾಮಿ ಕಾರುಗಳ ಪ್ರಿಯ. 

PREV
15
ಕುದುರೆಗಳನ್ನು ಓಡಿಸೋದ್ರಲ್ಲಿ ವಿನೀಶ್ ನಿಸ್ಸೀಮ

ಪ್ರಾಣಿಗಳ ಜೊತೆ ಸಮಯ ಕಳೆಯೋದು ಕೂಡ ಇಷ್ಟದ ವಿಷಯ. ಅದ್ರಲ್ಲೂ ಕುದುರೆಗಳೆಂದರೆ ಪಂಚಪ್ರಾಣ.

ದರ್ಶನ್ ಜೈಲಿನಲ್ಲಿರೋವಾಗ ಅವರ ಫಾರ್ಮ್ ಹೌಸ್ ಮೆಂಟೈನ್ ಹೇಗೆ ಆಗುತ್ತೆ? ಅವರ ಬಳಿ ಇರೋ ಕುದುರೆಗಳ ಗತಿಯೇನು ಅನ್ನೋದಕ್ಕೂ ಉತ್ತರ ದರ್ಶನ್ ಪುತ್ರನೇ! ಅವರ ಅಪ್ಪನಂತೆಯೇ ವಿನೀಶ್ ಕೂಡ ಕುದುರೆಗಳನ್ನು ಓಡಿಸೋದ್ರಲ್ಲಿ ನಿಸ್ಸೀಮ. ಸಮಯ ಸಿಕ್ಕಾಗ ಕುದುರೆಗಳ ದೇಖರೇಕೆಯಲ್ಲೇ ಸಮಯ ವ್ಯಯಿಸೋದು ಆತನಿಗೆ ಪ್ರಿಯ.

25
ಕುದುರೆ ಸವಾರಿ ಪಾಠ ಮಾಡ್ತಿರೋ ಗೌತಮ್

ದರ್ಶನ್ ಪುತ್ರ ವಿನೀಶ್‌ಗೆ ಚಿಕ್ಕಬಳ್ಳಾಪುರದ ಅನಿಮಲ್ ಲವರ್ ಗೌತಮ್ ಸದ್ಯ ಕುದುರೆ ತರಬೇತಿಯನ್ನು ಕೊಡ್ತಿದ್ದಾರೆ. ಬರೋಬ್ಬರಿ 16 ಕುದುರೆ, 16 ನಾಟಿ ಹಸುಗಳನ್ನು ಸಾಕಿರುವ ಗೌತಮ್, ವಿನೀಶ್‌ಗೂ ಪ್ರಾಣಿಗಳನ್ನು ಹೇಗೆ ನೋಡಿಕೋಳ್ಳಬೇಕು ಅನ್ನೋದನ್ನ ತಿಳಿಸಿ ಕೊಡ್ತಿದ್ದಾರೆ.

35
ಚಿಕ್ಕಬಳ್ಳಾಪುರದಲ್ಲಿ ವಿನೀಶ್‌ ದರ್ಶನ್

ವಿನೀಶ್ ಲಭ್ಯರಿದ್ದಾಗ ತಮ್ಮ ಸಮಯ ನೋಡಿಕೊಂಡು ಕುದರೆ ಓಡಿಸೋದನ್ನ ಗೌತಮ್ ಕಲಿಸಿಕೊಡ್ತಾರೆ. ಚಿಂತಾಮಣಿ ತಾಲೂಕಿನ ನಾರಾಯಣ ಹಳ್ಳಿಯ ಗೌತಮ್ ತೋಟಕ್ಕೆ ಬಂದು ವಿನೀಶ್, ಕುದುರೆ ಓಡಿಸೋದನ್ನ ಕಲಿತಿದ್ದಾರೆ.

45
ಮಗನ ಬಗ್ಗೆ ದರ್ಶನ್‌ ಅಂದು ಹೇಳಿದ್ದೇನು?

ನನ್ನ ಮಗನಿಗೆ ಪ್ರಾಣಿ ಪಕ್ಷಿ ಎಂದರೆ ತುಂಬ ಇಷ್ಟ. ಅವನು ಬೇಸಿಕ್‌ ಕಲಿಯಬೇಕು, ಎಲ್ಲವೂ ಗೊತ್ತಿರಬೇಕು, ಮೊದಲು ಕಷ್ಟಪಡಲಿ ಎಂದು ದರ್ಶನ್‌ ಅವರೇ ಕೆಲ ವರ್ಷಗಳ ಹಿಂದೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

55
ಅಪ್ಪನ ಒಳ್ಳೇ ಗುಣ ಕಲಿತರೆ ಚೆನ್ನ!

ಒಟ್ಟಿನಲ್ಲಿ ಅಪ್ಪನ ಉತ್ತಮ ಗುಣಗಳನ್ನಷ್ಟೇ ಅಳವಡಿಕೊಂಡರೆ ವಿನೀಶ್ ಕೂಡ ದೊಡ್ಡ ಸ್ಟಾರ್ ಆಗ್ತಾರೆ ಅಂತ ಅವರ ಅಭಿಮಾನಿಗಳು ಭರವಸೆ ವ್ಯಕ್ತಪಡಿಸುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories