ಎಂದೂ ಕಂಡಿರದ ಹೊಸ ಅವತಾರದಲ್ಲಿ ರುಕ್ಕು…. ಸಪ್ತಮಿ ಗೌಡ ಸೇರಿ, ಟಾಕ್ಸಿಕ್ ನಿರ್ದೇಶಕಿಯೂ ಫಿದಾ

Published : Apr 21, 2026, 11:38 AM IST

Rukmini Vasanth: ನಟಿ ರುಕ್ಮಿಣಿ ವಸಂತ್ ಎಂದೂ ಕಾಣಿಸಿಕೊಂಡಿರದ ಹೊಸ ಅವತಾರದಲ್ಲಿ ಫೋಟೊ ಶೂಟ್ ಮಾಡಿಸಿದ್ದು, ನಟಿಯ ಮಾದಕ ನೋಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ನಟಿ ಸಪ್ತಮಿ ಗೌಡ, ಟಾಕ್ಸಿಕ್ ನಿರ್ದೇಶಕಿ ಗೀತೂ ಮೋಹನ್ ದಾಸ್ ಸೇರಿ ಹಲವರು ನಟಿ ಲುಕ್ ಮೆಚ್ಚಿಕೊಂಡಿದ್ದಾರೆ.

PREV
16
ರುಕ್ಮಿಣಿ ವಸಂತ್

ನಟಿ ರುಕ್ಮಿಣಿ ವಸಂತ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ನಟಿ. ತಮ್ಮ ತಿಂಗಳು ಹೇಗಿತ್ತು, ಶೂಟಿಂಗ್ ಸಮಯದಲ್ಲಿ ಏನೇನಾಯ್ತು, ತಮ್ಮ ಟ್ರಾವೆಲ್, ಫೋಟೊ ಶೂಟ್ ಹೀಗೆ ಫೋಟೊಗಳನ್ನು ಶೇರ್ ಮಾಡುತ್ತಿರುತ್ತಾರೆ ರುಕ್ಮಿಣಿ. ಈ ಬಾರಿ ನಟಿ ಹಂಚಿಕೊಂಡಿರುವ ಫೋಟೊ ನೋಡಿ ಸೋಶಿಯಲ್ ಮೀಡಿಯಾದಲ್ಲಿ ಕಿಡಿ ಹತ್ತಿ ಉರಿಯುತ್ತಿದೆ.

26
ಎಂದೂ ಕಂಡಿರದ ರುಕ್ಮಿಣಿ ಲುಕ್

ರುಕ್ಮಿಣಿ ವಸಂತ್ ಹೆಚ್ಚಾಗಿ ತಮ್ಮ ಸಿಂಪಲ್ ಲುಕ್ ನಿಂದಾನೆ ಜನಪ್ರಿಯತೆ ಪಡೆದಿದ್ದಾರೆ. ಆದರೆ ಈ ಬಾರಿ ರುಕ್ಕು ಹಿಂದೆಂದೂ ಕಂಡಿರದ ಹೊಸ ಲುಕ್ ನಲ್ಲಿ ಮನ ಸೆಳೆಯುತ್ತಿದ್ದಾರೆ. ಸದ್ಯಕ್ಕಂತೂ ರುಕ್ಮಿಣಿ ವಸಂತ್ ಲುಕ್ ಗೆ ಇಂಟರ್ನೆಟ್ಟಲ್ಲಿ ಫೈರ್ ಹೊತ್ತಿಕೊಂಡಿದೆ ಎಂದೇ ಹೇಳಬಹುದು. ಕನ್ನಡ ಮಲಯಾಳಂ ಹಾಗೂ ಇನ್ನಿತರ ಚಿತ್ರರಂಗದ ನಟಿಯರು ಸೇರಿ, ಅಭಿಮಾನಿಗಳು ರುಕ್ಮಿಣಿ ಲುಕ್ ಗೆ ಮನಸೋತಿದ್ದಾರೆ.

36
ಮಾದಕ ನೋಟದ ಮೂಲಕ ಸೆಳೆದ ರುಕ್ಮಿಣಿ ವಸಂತ್

ಕಾಂತಾರಾ ಚಾಪ್ಟರ್ 1ರ ಸುಂದರಿ ಕನಕವತಿ, ತಮ್ಮ ಹೊಸ ಪೋಸ್ಟ್ ನಲ್ಲಿ ಗೋಲ್ಡನ್ ಬಣ್ಣದ ಸೀರೆಯಂತಹ ಉಡುಗೆಯನ್ನು ತೊಟ್ಟಿದ್ದಾರೆ. ಬ್ಲೌಸ್ ಇಲ್ಲದೇ ಸೀರೆ ಧರಿಸಿರುವ ಸುಂದರಿ, ಮೂಗಲ್ಲಿ ಮೂಗುತ್ತಿ, ಎರಡು ಕೈ ಬೆರಳುಗಳಲ್ಲಿ ಮೂರು ಮೂರು ಉಂಗುರಗಳು. ಮತ್ತೆರಳು ಬೆರಳುಗಳ ಉಗುರಿನ ಮೇಲೆ ಗೋಲ್ಡನ್ ನೇಲ್ ಎಕ್ಸ್ಟೆನ್ಶನ್ ಧರಿಸಿ, ಕಿವಿಗೆ ಸುಂದರವಾದ ಓಲೆ ಧರಿಸಿ, ಕಣ್ಣಿಗೆ ಕಾಜಲ್ ಧರಿಸಿ ಮಾದಕ ನೋಡವನ್ನು ಬೀರಿದ್ದಾರೆ. ರುಕ್ಮಿಣಿ ವಸಂತ್ ಹೊಸ ಲುಕ್ ನೋಡಿ, ಕಾಮೆಂಟ್ ಸೆಕ್ಷನ್ ಪೂರ್ತಿಯಾಗಿ ಫೈರ್ ಇಮೋಜಿ ತುಂಬಿದೆ.

46
ರುಕ್ಮಿಣಿ ವಸಂತ್ ಲುಕ್ ಗೆ ಟಾಕ್ಸಿಕ್ ನಿರ್ದೇಶಕಿಯೂ ಫಿದಾ

ರುಕ್ಮಿಣಿ ವಸಂತ್ ರಾಕಿಂಗ್ ಸ್ಟಾರ್ ಯಶ್ ಜೊತೆಗೆ ಟಾಕ್ಸಿಕ್ ಸಿನಿಮಾದಲ್ಲಿ ನಟಿಸುತ್ತಿರುವ ವಿಷಯ ಗೊತ್ತೇ ಇದೆ. ಆದರೆ ಅವರ ಪಾತ್ರ ಹೇಗಿರಲಿದೆ ಅನ್ನೋದು ಮಾತ್ರ ಇನ್ನೂ ರಿವೀಲ್ ಆಗಿಲ್ಲ. ಇದೀಗ ರುಕ್ಕು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಫೋಟೊ ನೋಡಿ ಟಾಕ್ಸಿ ನ್ರಿದೇಶಕಿ ಗೀತು ಮೋಹನ್ ದಾಸ್ ಫೈರ್ ಇಮೋಜಿ ಕಾಮೆಂಟ್ ಮಾಡುವ ಮೂಲಕ, ನಟಿಯ ಲುಕ್ ಫೈರ್ ನಂತಿದೆ ಎಂದು ಹೊಗಳಿದ್ದಾರೆ.

56
ನಟ-ನಟಿಯರಿಂದ ಭಾರಿ ಮೆಚ್ಚುಗೆ

ರುಕ್ಕು ಹೊಸ ಮಾದಕ ನೋಟಕ್ಕೆ ಬೆರಗಾಗಿ ಸಾನ್ವಿ ಸುದೀಪ್ ಹಾರ್ಟ್ ಇಮೋಜಿ ಹಾಕಿದ್ರೆ, ಕಾಂತಾರ ಚೆಲುವೆ ಸಪ್ತಮಿ ಗೌಡ ‘I’m obsessed with this, it’s fucking madness ‘ ಎಂದು ಕಾಮೆಂಟ್ ಮಾಡಿದ್ದಾರೆ. ಸಪ್ತಸಾಗರದಾಚೆ ಚೆಲುವೆ ಚೈತ್ರಾ ಆಚಾರ್ ಉಫ್ ಎಂದರೆ, ಮಲಯಾಳಂ ಜನಪ್ರಿಯ ನಿರೂಪಕಿ ಪಾರ್ಲಿ ಮಾನೆ ದಿಸ್ ಈಸ್ ಲವ್ ಫೈರ್ ಎನ್ನುವಂತೆ ಕಾಮೆಂಟ್ ಮಾಡಿದ್ದಾರೆ. ಇನ್ನು ನಿರಂಜನ್ ದೇಶಪಾಂಡೆ, ತನ್ವಿ ಕಾಮತ್, ಶ್ರದ್ಧಾ ಶ್ರೀನಾಥ್ ಸೇರಿ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

66
ರುಕ್ಮಿಣಿ ಅಭಿನಯಿಸಲಿರುವ ಸಿನಿಮಾಗಳು

ಸದ್ಯ ರುಕ್ಮಿಣಿ ವಸಂತ್ ದಕ್ಷಿಣ ಭಾರತದ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಯಶ್ ಜೊತೆ ಟಾಕ್ಸಿಕ್ ಸಿನಿಮಾದಲ್ಲಿ ನಟಿಸಿರುವ ರುಕು, ಜೂ. ಎನ್ ಟಿ ಆರ್ ಜೊತೆ ಸಿನಿಮಾ, ಹೇಮಂತ್ ರಾವ್ ನಿರ್ದೇಶನದ ಮತ್ತೊಂದು ಸಿನಿಮಾದಲ್ಲಿ ರುಕ್ಮಿಣಿ ವಸಂತ್ ಅಭಿನಯಿಸಲಿದ್ದಾರೆ ಎನ್ನಲಾಗುತ್ತಿದೆ. ಶೀಘ್ರದಲ್ಲಿ ಬಾಲಿವುಡ್ ನಲ್ಲೂ ನಟಿಸುವ ಚಾನ್ಸ್ ಸಿಕ್ಕರೂ ಸಿಗಬಹುದು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories