‘ಹೆತ್ತವರಿಗೆ ಹೆಗ್ಗಣ ಮುದ್ದು’ ಎಂಬ ಗಾದೆಯಿಂದ ಸ್ಫೂರ್ತಿ ಪಡೆದ ‘ಹೆಗ್ಗಣ ಮುದ್ದು’ ಟ್ರೇಲರ್ ಬಿಡುಗಡೆಯಾಗಿದೆ. ಪೂರ್ಣ ಮೈಸೂರು-ಅದಿತಿ ಸಾಗರ್ ಜೋಡಿಯ ಈ ಕೌಟುಂಬಿಕ ಡ್ರಾಮಾ ಮತ್ತು ಥ್ರಿಲ್ಲರ್ ಸಿನಿಮಾ ಸೆ.25ಕ್ಕೆ ರಿಲೀಸ್.
ನಟ ರಾಕ್ಷಸ ಡಾಲಿ ಧನಂಜಯ ಅವರ ಡಾಲಿ ಪಿಚ್ಚರ್ಸ್ ಸಂಸ್ಥೆ ನಿರ್ಮಿಸಿರುವ ಬಹುನಿರೀಕ್ಷಿತ ಕನ್ನಡ ಚಿತ್ರ 'ಹೆಗ್ಗಣ ಮುದ್ದು' ಚಿತ್ರದ ಟ್ರೇಲರ್ ಸೋಮವಾರ (ಸೆ.15) ಬಿಡುಗಡೆಯಾಗಿದೆ. ಸೆಪ್ಟೆಂಬರ್ 25ರಂದು 'ಹೆಗ್ಗಣ ಮುದ್ದು' ಸಿನಿಮಾ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
25
ದಂಪತಿ ಸಂಬಂಧಗಳ ಸುತ್ತ ಕಥಾಹಂದರ
'ಹೆತ್ತವರಿಗೆ ಹೆಗ್ಗಣ ಮುದ್ದು' ಎಂಬ ಜನಪ್ರಿಯ ಗಾದೆಮಾತಿನ ಆಧಾರದ ಮೇಲೆ ಈ ಚಿತ್ರಕ್ಕೆ 'ಹೆಗ್ಗಣ ಮುದ್ದು' ಎಂದು ಶೀರ್ಷಿಕೆ ಇಡಲಾಗಿದೆ. ಇದು ಹೊಸದಾಗಿ ಮದುವೆ ಆದ ದಂಪತಿ ಸಂಬಂಧಗಳ ಸುತ್ತ ಹೆಣೆಯಲಾದ ಕೌಟುಂಬಿಕ ಡ್ರಾಮಾ ಮತ್ತು ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರವಾಗಿದೆ.
35
ಪೂರ್ಣ ಮೈಸೂರು ಚಿತ್ರದ ನಾಯಕ
ಈ ಚಿತ್ರದ ಮೂಲಕ ನವ ಪ್ರತಿಭೆ ಅವಿನಾಶ್ ಬಲೆಕ್ಕಳ ನಿರ್ದೇಶಕರಾಗಿ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಚಿತ್ರದಲ್ಲಿ ಪೂರ್ಣ ಮೈಸೂರು (ಪೂರ್ಣಚಂದ್ರ ಮೈಸೂರು) ನಾಯಕನಾಗಿ ಅಭಿನಯಿಸಿದ್ದಾರೆ. ಇವರಿಗೆ ನಾಯಕಿಯಾಗಿ ಖ್ಯಾತ ನಟ ಹಾಗೂ ಕಲಾ ನಿರ್ದೇಶಕ ಅರುಣ್ ಸಾಗರ್ ಅವರ ಪುತ್ರಿ ಅದಿತಿ ಸಾಗರ್ ಕಾಣಿಸಿಕೊಂಡಿದ್ದಾರೆ.
ಈ ಹಿಂದೆ 'ವೇದ' ಚಿತ್ರದಲ್ಲಿ ಕನಕ ಪಾತ್ರದ ಮೂಲಕ ಗಮನ ಸೆಳೆದಿದ್ದ ಅದಿತಿ, ಕೆಜಿಎಫ್ ಚಾಪ್ಟರ್ 2 ಸೇರಿದಂತೆ ಹಲವು ಚಿತ್ರಗಳಲ್ಲಿ ಹಿನ್ನೆಲೆ ಗಾಯಕಿಯಾಗಿ ಪ್ರಶಸ್ತಿ ಪಡೆದಿದ್ದಾರೆ. 'ಹೆಗ್ಗಣ ಮುದ್ದು' ಮೂಲಕ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಾಯಕಿಯಾಗಿ ಮಿಂಚಲಿದ್ದಾರೆ.
55
'ಹೆಗ್ಗಣ ಮುದ್ದು' ಫನ್ ಎಂಟರ್ಟೈನ್ಮೆಂಟ್
ಇನ್ನು 'ಹೆಗ್ಗಣ ಮುದ್ದು' ಟ್ರೇಲರ್ ಫನ್ ಎಂಟರ್ಟೈನ್ಮೆಂಟ್ ಆಗಿದ್ದು ಪ್ರೇಕ್ಷಕರಿಂದ ಮೆಚ್ಚುಗೆ ಪಡೆಯುತ್ತಿದೆ. ಚಿತ್ರಕ್ಕೆ ಕಾರ್ತಿಕ್ ಚೆನ್ನೂಜಿ ರಾವ್ ಮತ್ತು ರೋಣದ ಬಕ್ಕೆಶ್ ಸಂಗೀತ ಸಂಯೋಜನೆ, ನಚಿಕೇತ್ ಬಲೆಕ್ಕಳ ಛಾಯಾಗ್ರಹಣವಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.