Mandya’s Love Was My Greatest Remuneration: ಸ್ಯಾಂಡಲ್‌ವುಡ್‌ನ ಮೋಹಕ ತಾರೆ ರಮ್ಯಾ ತಮ್ಮ ಮೊದಲ ಸಿನಿಮಾ 'ಅಭಿ'ಯ ಸಂಭಾವನೆಯನ್ನು ಬಹಿರಂಗಪಡಿಸಿದ್ದಾರೆ. ಯುವಜನತೆ ಆರ್ಥಿಕವಾಗಿ ಸಬಲರಾಗಲು ಸಲಹೆ ನೀಡಿದ್ದು, ಮಂಡ್ಯದ ಜನತೆ ನೀಡಿದ ಪ್ರೀತಿ ಬಗ್ಗೆ ಭಾವನಾತ್ಮಕವಾಗಿ ನುಡಿದಿದ್ದಾರೆ.
ಸ್ಯಾಂಡಲ್‌ವುಡ್ ಅಂಗಳದ ಮೋಹಕ ತಾರೆ ರಮ್ಯಾ ತಮ್ಮ ಮೊದಲ ಸಿನಿಮಾದ ಸಂಭಾವನೆ ಬಗ್ಗೆ ಮಾತನಾಡಿದ್ದಾರೆ. ಇಂದಿನ ಯುವ ಪೀಳಿಗೆ ಆರ್ಥಿಕವಾಗಿ ಹೇಗೆ ಸಬಲರಾಗಬೇಕು? ಸಿನಿಮಾ ಅಂಗಳದಲ್ಲಿ ಹೇಗೆ ಸರ್ವವೈ ಆಗಬೇಕು? ಸದ್ಯ ತಾವು ಏನು ಮಾಡುತ್ತಿದ್ದೇವೆ ಎಂಬುದರ ಬಗ್ಗೆಯೂ ರಮ್ಯಾ ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ.
25
ಯುವ ಸಮುದಾಯ ಆದಾಯ ಹೆಚ್ಚಿಸಿಕೊಳ್ಳೋದು ಹೇಗೆ?
ಇಂದಿನ ಯುವ ಪೀಳಿಗೆ ಸೋಶಿಯಲ್ ಮೀಡಿಯಾ ಮೂಲಕ ತಮ್ಕ ಆದಾಯದ ಮೂಲಗಳನ್ನು ಕಂಡುಕೊಳ್ಳಬಹುದು. ಅದರಲ್ಲಿ ಇನ್‌ಸ್ಟಾಗ್ರಾಂ ಉತ್ತಮ ಮಾರ್ಗವಾಗಿದೆ. ಈ ಮೂಲಕ ಜನರನ್ನು ಬೇಗ ತಲುಪಬಹುದು ಎಂದು ಸಲಹೆ ನೀಡಿದರು. ಇದೇ ವೇಳೆ ಸದ್ಯ ತಾವು ವಿವಾಹಿತ ಮತ್ತು Menopause ಹಂತದಲ್ಲಿರುವ ಮಹಿಳೆಯರ ಕುರಿತು ಜಾಗೃತಿ ಮೂಡಿಸುವ ಫೌಂಡೇಶನ್‌ನಲ್ಲಿ ಬ್ಯುಸಿಯಾಗಿರೋದಾಗಿ ಹೇಳಿದ್ದಾರೆ.
35
ಅಭಿ ಸಿನಿಮಾಗೆ ಸಿಕ್ಕ ಸಂಭಾವನೆ
ಇದೇ ವೇಳೆ ತಮ್ಮ ಮೊದಲ ಸಿನಿಮಾ 'ಅಭಿ' ಚಿತ್ರದ ಅಭಿನಯಕ್ಕಾಗಿ 1 ಲಕ್ಷ ರೂಪಾಯಿಯ ಚೆಕ್ ಸಿಕ್ಕಿತ್ತು. 20 ರಿಂದ 22 ದಿನ ಶೂಟಿಂಗ್ ಮಾಡಲಾಗಿತ್ತು. ಬಾಕ್ಸ್ ಆಫಿಸ್‌ನಲ್ಲಿ ಗೆಲ್ಲುವ ಸಿನಿಮಾಗಳನ್ನು ಆಯ್ಕೆ ಮಾಡಿಕೊಂಡಾಗ ಮಾತ್ರ ದೀರ್ಘಕಾಲದವರೆಗೆ ಚಿತ್ರರಂಗದಲ್ಲಿ ಉಳಿಯಲು ಸಾಧ್ಯವಾಗುತ್ತದೆ.
ಮೊದಲ ಮತ್ತು ಎರಡನೇ ಸಿನಿಮಾ ಸಂದರ್ಭದಲ್ಲಿಯೇ ಆಯ್ಕೆ ಹಂತಕ್ಕೆ ಹೋಗಬಾರದು. ನಿರ್ಮಾಪಕರು ಮತ್ತು ನಿರ್ದೇಶಕರು ನಿಮಗೆ ಆದ್ಯತೆ ನೀಡಲು ಪ್ರಾರಂಭಿಸಿದಾಗ ಅಥವಾ ನಿಮ್ಮನ್ನು ಆಯ್ಕೆ ಮಾಡಲು ಬಂದಾಗ ಆಗ ನಿಮಗೆ ಪಾತ್ರವೇ ಮುಖ್ಯವಾಗಬೇಕಾಗುತ್ತದೆ. ನನ್ನ ಸಿನಿಮಾಗಳಲ್ಲಿ ಪಾತ್ರವೇ ನನಗೆ ಮುಖ್ಯವಾಗಿತ್ತು ಎಂದು ರಮ್ಯಾ ತಿಳಿಸಿದ್ದಾರೆ.
ನಮ್ಮನ್ನು ಸಾಮಾನ್ಯ ಜನರಿಗಿಂತ ವಿಶೇಷ ಮತ್ತು ಎತ್ತರದ ಸ್ಥಾನದಲ್ಲಿ ನೋಡಲಾಗುತ್ತದೆ. ನಾವು ಎಲ್ಲರಂತೆಯೇ ಕಷ್ಟದಿಂದ ಈ ಹಂತಕ್ಕೆ ಬಂದಿರುತ್ತೇವೆ. ಕೆಲವೊಮ್ಮೆ ನಮ್ಮನ್ನು ತಪ್ಪಾಗಿ ಅರ್ಥೈಸಲಾಗುತ್ತದೆ. ಹಾಗಾಗಿ ನಮ್ಮ ಬಗ್ಗೆ ಸ್ವಲ್ಪ ಸಹಾನುಭೂತಿ ಇರಬೇಕು ಎಂಬುದು ನನ್ನ ಅನಿಸಿಕೆ. ಹೇಗೆ ಕಾಣುತ್ತೀರಿ? ಏನು ಧರಿಸುತ್ತೀರಿ? ತೂಕ ಹೀಗೆ ವಿವಿಧ ವಿಷಯಗಳಲ್ಲಿ ನಮ್ಮನ್ನು ನಿರಂತರವಾಗಿ ಜಡ್ಜ್ ಮಾಡಲಾಗುತ್ತದೆ. ಇದರ ಜೊತೆಗೆ ನಮಗೆ ಜನರು ತುಂಬಾ ಪ್ರೀತಿಯನ್ನು ಸಹ ನೀಡುತ್ತಾರೆ ಅಂತಾರೆ ರಮ್ಯಾ.
55
ಮಂಡ್ಯ ಜನತೆ ಬಗ್ಗೆ ರಮ್ಯಾ ಪ್ರೀತಿ
ಇದೇ ಸಂದರ್ಶನದಲ್ಲಿ ಮಂಡ್ಯ ಜನತೆ ಬಗ್ಗೆಯೂ ಮಾತಾಡಿರೋ ರಮ್ಯಾ, ಚುನಾವಣೆ ಪ್ರಚಾರದ ವೇಳೆ ಬಡವರು ಸಹ ನನಗೆ ಆಶೀರ್ವಾದದ ರೂಪದಲ್ಲಿ 10, 20, 50 ಮತ್ತು 100 ರೂಪಾಯಿ ನೀಡಿದರು. ಆ ದಿನಗಳನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಇದು ನನ್ನ ಜೀವನದಲ್ಲಿ ಸಿಕ್ಕ ಅತ್ಯಂತ ಅಮೂಲ್ಯವಾದ ಉಡುಗೊರೆ ಎಂದು ನಾನು ಭಾವಿಸುತ್ತೇನೆ. ಇದುವೇ ನನ್ನ ಅತಿದೊಡ್ಡ ಸಂಭಾವನೆ ಎಂದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.