‘ಟಾಸ್’ ಸಿನಿಮಾದ ಟ್ರೇಲರ್ ಅನ್ನು ಗೋಲ್ಡನ್ ಸ್ಟಾರ್ ಗಣೇಶ್ ಬಿಡುಗಡೆ ಮಾಡಿದ್ದಾರೆ. ಹೊಸ ರೀತಿಯ ಕಥೆಗಳು ಹಾಗೂ ಹೊಸ ಪ್ರತಿಭೆಗಳನ್ನು ಬೆಂಬಲಿಸುವ ಉದ್ದೇಶದಿಂದ ತಮ್ಮ ಬ್ಯಾನರ್‌ನಿಂದ ‘ಟಾಸ್’ ಸಿನಿಮಾವನ್ನು ಪ್ರೆಸೆಂಟ್ ಮಾಡುತ್ತಿರುವುದಾಗಿ ಗಣೇಶ್ ಹೇಳಿದ್ದಾರೆ.
ಅರ್ಜುನ್ ದೇವ್ ನಟನೆ, ನಿರ್ದೇಶನದ ‘ಟಾಸ್’ ಚಿತ್ರದ ಟ್ರೇಲರ್ ಅನ್ನು ಗೋಲ್ಡನ್ ಸ್ಟಾರ್ ಗಣೇಶ್ ಬಿಡುಗಡೆ ಮಾಡಿದ್ದಾರೆ. ಈ ಕಾರ್ಯಕ್ರಮಕ್ಕೆ ಬಂದಿದ್ದ ಗಣೇಶ್ ಮಾತನಾಡಿ, ನಾನು ಸಿನಿಮಾ ಪ್ರೇಮಿ, ಸಿನಿಮಾ ಉತ್ಸಾಹಿ.
25
ಮಂಗಳೂರಿನ ಹೆಮ್ಮೆ
ಹೊಸ ರೀತಿಯ ಕತೆಗಳನ್ನು ಬೆಂಬಲಿಸಬೇಕು, ಹೊಸ ತಂಡಗಳು ಚಿತ್ರರಂಗಕ್ಕೆ ಬರಬೇಕು ಎನ್ನುವ ಕಾರಣಕ್ಕೆ ಈ ಚಿತ್ರವನ್ನು ನಮ್ಮ ಬ್ಯಾನರ್‌ನಿಂದ ಪ್ರೆಸೆಂಟ್ ಮಾಡುತ್ತಿದ್ದೇನೆ. ಈ ಚಿತ್ರದ ನಿರ್ದೇಶಕ ಹಾಗೂ ನಾಯಕ ಅರ್ಜುನ್ ದೇವ್ ಮಂಗಳೂರಿನ ಹೆಮ್ಮೆ.
35
ಸಿನಿಮಾ ಮಾಡುತ್ತೇನೆ
ಕೋಸ್ಟಲ್‌ವುಡ್‌ನ ಸೂಪರ್‌ಸ್ಟಾರ್ ಕೂಡ. ಮುಂದಿನ ದಿನಗಳಲ್ಲಿ ಒಂದೊಳ್ಳೆಯ ಕಥೆ ಸಿದ್ಧವಾದರೆ ನಾನು ಈ ಪ್ರತಿಭಾವಂತ ನಟ ಅರ್ಜುನ್ ದೇವ್ ಜೊತೆಗೆ ಸಿನಿಮಾ ಮಾಡುತ್ತೇನೆ ಎಂದರು.
ಅರ್ಜುನ್ ದೇವ್, ನನ್ನ ಹಾಗೂ ನನ್ನ ತಂದೆ ದೇವದಾಸ್ ಕಾಪಿಕಾಡ್ ಅವರ ಮೇಲಿನ ಪ್ರೀತಿ, ಗೌರವಕ್ಕೆ ನಟ ಗಣೇಶ್, ನಿರ್ಮಾಪಕಿ ಶಿಲ್ಪಾ ಗಣೇಶ್ ಬೆಂಬಲವಾಗಿ ನಿಂತಿದ್ದಾರೆ ಎಂದರು.
55
ಸೆ.18ಕ್ಕೆ ಸಿನಿಮಾ ಬಿಡುಗಡೆ
ಇನ್ನು ಸೆ.18ಕ್ಕೆ ಕನ್ನಡ ಹಾಗೂ ತುಳು ಭಾಷೆಯಲ್ಲಿ ‘ಟಾಸ್’ ಸಿನಿಮಾ ಬಿಡುಗಡೆ ಆಗುತ್ತಿದೆ. ಸುತೇಜ್ ಶೆಟ್ಟಿ, ಕೃತಿ ಶೆಟ್ಟಿ, ಗರುಡಾರಾಮ್, ಬಾಲಾಜಿ ಮನೋಹರ್ ನಟಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.