'ಕರಾವಳಿ' ಸಿನಿಮಾ ವಿವಾದಕ್ಕೆ ಸಂಬಂಧಿಸಿದಂತೆ ನಟ ರಾಜ್ ಬಿ. ಶೆಟ್ಟಿ ಕ್ಷಮೆಯಾಚಿಸಿದ್ದಾರೆ. ಕಂಟೆಂಟ್ ಇಲ್ಲದ ಕಾರಣ ವಿವಾದ ಸೃಷ್ಟಿಸಲಾಗುತ್ತಿದೆ ಎಂಬ ಆರೋಪಗಳಿಗೆ ಬೇಸರ ವ್ಯಕ್ತಪಡಿಸಿದ ಅವರು, ಸಿನಿಮಾದ ಪ್ರೀಮಿಯರ್ ಶೋ ಮತ್ತು ಬಿಡುಗಡೆ ದಿನಾಂಕವನ್ನು ಘೋಷಿಸಿದ್ದಾರೆ.
ಕರಾವಳಿ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ನಟ ರಾಜ್ ಬಿ. ಶೆಟ್ಟಿ ಸೋಶಿಯಲ್ ಮೀಡಿಯಾ ಮೂಲಕ ಕೆಲವೊಂದು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಹಾಗೆಯೇ ಕಂಟೆಂಟ್ ಇಲ್ಲದ ಕಾರಣ ವಿವಾದ ಸೃಷ್ಟಿಸಲಾಗಿದೆ ಎಂಬ ಮಾತುಗಳಿಗೆ ರಾಜ್ ಬಿ. ಶೆಟ್ಟಿ ತೀವ್ರ ಬೇಸರವನ್ನು ವ್ಯಕ್ತಪಡಿಸಿದ್ದಾರೆ.
25
ರಾಜ್ ಬಿ.ಶೆಟ್ಟಿ ಸೋಷಿಯಲ್ ಮೀಡಿಯಾ ಲೈವ್‌ನಲ್ಲಿ ರಾಜ್ ಬಿ. ಶೆಟ್ಟಿ ಹೇಳಿದ್ದೇನು?
‘ಚಿತ್ರರಂಗ ಅನ್ನುವುದು ಯಾವತ್ತೂ ಕಲೆಕ್ಟಿವ್ ಆಗಿರುವಂಥಾದ್ದು. ಕಾಂತಾರ, ಕೆಜಿಎಫ್‌ನಂಥಾ ಚಿತ್ರಗಳು ತುಂಬ ಚೆನ್ನಾಗಿ ಹೆಸರು ಮಾಡಿದಾಗ ಹೇಗೆ ನಾವು ಕನ್ನಡ ಚಿತ್ರರಂಗದವರು ಅಂತ ಹೆಮ್ಮೆಯಿಂದ ಹೇಳಿಕೊಂಡು ಓಡಾಡುತ್ತೇವೋ, ಅದೇ ರೀತಿ ಸಣ್ಣ ರೀತಿಯ ವಿವಾದ ಆದಾಗ ಅಷ್ಟೇ ನೋವನ್ನು ಅನುಭವಿಸುತ್ತೇವೆ. ಇಲ್ಲಿ ಯಾರದು ಸರಿ, ಯಾರದು ತಪ್ಪು ಅನ್ನುವುದು ಮುಖ್ಯ ಅಲ್ಲ. ಕನ್ನಡ ಸಿನಿಮಾ ಪ್ರೇಕ್ಷಕರ ಮುಂದೆ ಹೀಗೆಲ್ಲ ಮಾಡುತ್ತಿದ್ದೇವೆ ಅನ್ನುವುದು ಬೇಜಾರು ತರಿಸುವ ಸಂಗತಿ. ಚಿತ್ರರಂಗದವನಾಗಿ ಎಲ್ಲರ ಬಳಿ ಈ ವಿವಾದಕ್ಕೆ ದೊಡ್ಡ ಕ್ಷಮೆ ಕೇಳುತ್ತೇನೆ. ಮುಂದೆ ಈ ಥರ ಆಗದೆ ಒಳ್ಳೆಯ ರೀತಿ ಮುಂದುವರಿಯುವುದಕ್ಕೆ ಪ್ರಯತ್ನಿಸುತ್ತೇನೆ.’
35
ಬೆಂಗಳೂರಿನಲ್ಲಿ ಪ್ರೀಮಿಯರ್ ಶೋ ಆಯೋಜನೆ
ಇತ್ತೀಚೆಗೆ ‘ಕರಾವಳಿ’ ಸಿನಿಮಾಕ್ಕೆ ಸಂಬಂಧಿಸಿ ಆದ ವಿವಾದಕ್ಕೆ ವಿಷಾದ ವ್ಯಕ್ತಪಡಿಸಿದ ಅವರು, ‘ನಮ್ಮ ಕರಾವಳಿ ಸಿನಿಮಾದಲ್ಲಿ ಕಂಟೆಂಟ್ ಇಲ್ಲದ್ದಕ್ಕೆ ಕಾಂಟ್ರವರ್ಸಿ ಮಾಡುತ್ತಿದ್ದಾರೆ ಎಂದು ಅನೇಕರು ಕಾಮೆಂಟ್ ಮಾಡುವುದು ನೋವು ಕೊಡುತ್ತಿದೆ. ನಮ್ಮ ಸಿನಿಮಾದಲ್ಲಿ ಕಂಟೆಂಟ್ ಇದೆಯಾ ಇಲ್ಲವಾ ಅನ್ನುವುದನ್ನು ಪ್ರೇಕ್ಷಕರು ನಿರ್ಧರಿಸಬೇಕು. ನಾಳೆಯಿಂದ ಅಂದರೆ ಜುಲೈ 19ರಿಂದ ಪ್ರೀಮಿಯರ್ ಶೋಗಳು ಆರಂಭವಾಗುತ್ತಿದೆ. ಮೊದಲ ಶೋ ಜು.19ರಂದು ಮಂಗಳೂರಿನಲ್ಲಿ ನಡೆದರೆ ಜು.23ರಂದು ಬೆಂಗಳೂರಿನಲ್ಲಿ ಪ್ರೀಮಿಯರ್ ಶೋ ಆಯೋಜನೆಗೊಂಡಿದೆ’ ಎಂದು ತಿಳಿಸಿದರು.
ಶಿವಮೊಗ್ಗ, ದಾವಣಗೆರೆ, ಮೈಸೂರುಗಳಲ್ಲೂ ಪ್ರೀಮಿಯರ್ ಶೋಗಳು ಏರ್ಪಾಡಾಗಿವೆ. ಜುಲೈ 24ರಂದು ‘ಕರಾವಳಿ’ ಸಿನಿಮಾ ಬಿಡುಗಡೆಯಾಗುತ್ತಿದೆ. ಗುರುದತ್ ಗಾಣಿಗ ನಿರ್ದೇಶನದ ಈ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ಹಾಗೂ ರಾಜ್. ಬಿ. ಶೆಟ್ಟಿ ಪ್ರಮುಖಪಾತ್ರಗಳಲ್ಲಿ ನಟಿಸಿದ್ದಾರೆ.
55
ಪ್ರಜ್ವಲ್ ದೇವರಾಜ್ ಸಂಭಾವನೆ ವಿವಾದ
ನಾಯಕ ಪ್ರಜ್ವಲ್ ದೇವರಾಜ್ ಅವರಿಗೆ ಪೂರ್ಣ ಸಂಭಾವನೆ ನೀಡಲಾಗಿಲ್ಲ, ಅವರ ಪಾತ್ರಕ್ಕೆ ಬೇರೆಯವರ ಬಳಿ ಡಬ್ಬಿಂಗ್ ಮಾಡಿಸಲಾಗಿದೆ ಎಂಬ ಕಾರಣಕ್ಕೆ ಈ ಹಿಂದೆ ವಿವಾದ ಸೃಷ್ಟಿಯಾಗಿತ್ತು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಚರ್ಚೆಯಾಗಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.