ನಟಿ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ದಂಪತಿ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಸೆಪ್ಟೆಂಬರ್‌ನಲ್ಲಿ ಹೊಸ ಅತಿಥಿಯ ಆಗಮನವಾಗಲಿದ್ದು, ಈ ಸಂತಸದ ಸುದ್ದಿಯನ್ನು ಪ್ಯಾರಿಸ್ನಿಂದ ಫೋಟೋ ಹಂಚಿಕೊಳ್ಳುವ ಮೂಲಕ ತಿಳಿಸಿದ್ದಾರೆ.
ನಟ, ಕೋರಿಯೋಗ್ರಾಫರ್ ಭುವನ್ ಪೊನ್ನಣ್ಣ ಜೊತೆ 2003ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ನಟಿ ಹರ್ಷಿಕಾ ಪೂಣಚ್ಚ ಈಗ ಎರಡನೆಯ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ತುಂಬು ಗರ್ಭಿಣಿಯಾಗಿರುವ ಅವರು ಫೋಟೋ ಶೇರ್ ಮಾಡಿಕೊಂಡಿದ್ದಾರೆ. 2004ರ ಅಕ್ಟೋಬರ್ನಲ್ಲಿ ಮೊದಲ ಮಗಳು ಮಗುವಿಗೆ ತ್ರಿದೇವಿಗೆ ಜನ್ಮ ನೀಡಿದ್ದ ನಟಿ ಇದೀಗ ಇನ್ನೊಂದು ಮಗುವನ್ನು ಬರಮಾಡಿಕೊಳ್ಳಲಿದ್ದಾರೆ. ಅಂದಹಾಗೆ ಹರ್ಷಿಕಾ ಮತ್ತು ಭುವನ್ ಪೊನ್ನಣ್ಣ ಅನೇಕ ವರ್ಷಗಳಿಂದ ಸ್ನೇಹಿತರಾಗಿದ್ದವರು, 2023ರ ಆಗಸ್ಟ್ 24ರಂದು ವಿರಾಜಪೇಟೆಯ ಅಮ್ಮತ್ತಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.
27
ಮಗಳ ಜೊತೆ ಪೋಸ್
ಮೊದಲ ಮಗಳ ಜೊತೆ ಪ್ಯಾರಿಸ್ ಐಫಿಲ್ ಟವರ್ ಎದುರು ನಿಂತು ಹರ್ಷಿಕಾ ಹಾಗೂ ಭುವನ್ ಫೋಟೋ ಹಂಚಿಕೊಂಡಿದ್ದಾರೆ. ‘ಈ ಸೆಪ್ಟೆಂಬರ್‌ನಲ್ಲಿ ನಮ್ಮ ತಾರಾಗಣಕ್ಕೆ ಹೊಸ ಪುಟ್ಟ ತಾರೆ ಸೇರ್ಪಡೆಯಾಗಲಿದೆ ಎಂದು ಘೋಷಿಸಲು ನಮಗೆ ತುಂಬಾ ಸಂತೋಷವಾಗಿದೆ. ನಮ್ಮ ಮನಸ್ಸು ತುಂಬಿವೆ ಮತ್ತು ಸ್ಕ್ರಿಪ್ಟ್ ಪರಿಪೂರ್ಣವಾಗಿ ಕಾಣುತ್ತದೆ. ಧನ್ಯವಾದಗಳು’ ಎಂದು ಶೀರ್ಷಿಕೆ ನೀಡಲಾಗಿದೆ.
37
ದಂಪತಿ ಲವ್ ಸ್ಟೋರಿ
ತಮ್ಮ ಮತ್ತು ಭುವನ್ ಪೊನ್ನಣ್ಣ ಅವರ ಕುತೂಹಲದ ಲವ್ ಸ್ಟೋರಿಯನ್ನು ಸಂದರ್ಶನವೊಂದರಲ್ಲಿ ನಟಿ ತೆರೆದಿಟ್ಟಿದ್ದರು. ಭುವನ್ ಅವರನ್ನು ಮೊದಲ ಬಾರಿಗೆ ಅರಿಯದೇ ಅಂಕಲ್ ಎಂದ ಕುತೂಹಲದ ವಿಷಯವನ್ನು ಹೇಳಿದ್ದ ನಟಿ, ಆ ತಪ್ಪಿಗೆ ಏನಾಯ್ತು ಎಂಬುದನ್ನೂ ತಿಳಿಸಿದ್ದರು. ಭುವನ್ ಅವರನ್ನು ಮೊದಲ ಬಾರಿಗೆ ಮೀಟ್ ಆದಾಗ ಏನು ಅನ್ನಿಸ್ತು ಎನ್ನುವ ಪ್ರಶ್ನೆಗೆ ಹರ್ಷಿಕಾ ಅವರು, ಜೋರಾಗಿ ನಗುತ್ತಾ ಮೊದಲ ಬಾರಿಗೆ ಭುವನ್ ಅವರನ್ನು ಭೇಟಿಯಾಗಿದ್ದು ತುಂಬಾ ತುಂಬಾ ಫನ್ನಿಯಾಗಿದೆ ಎಂದರು.
ಅದರ ಬಗ್ಗೆ ವಿವರಿಸಿದ ನಟಿ, 'ನನ್ನ ಅಂಕಲ್ ಕಾಲ್ ಮಾಡಿ ಒಂದು ಫ್ಯಾಷನ್ ಷೋ ಮಾಡ್ತಾ ಇದ್ದೇವೆ. ಇಂಟರ್ನ್ಯಾಷನಲ್ ಫ್ಯಾಷನ್ ಕೋರಿಯೋಗ್ರಾಫರ್ ಒಬ್ಬರು ನಿಮಗೆ ಕೋರಿಯೋಗ್ರಾಪ್ ಮಾಡ್ತಾರೆ. ಅವರು ಕೂಡ ಕೊಡವನೇ ಅಂತ ಹೇಳಿದ್ರು. ನಾನು ಓಕೆ ಅಂದೆ. ನನ್ನ 60 ವರ್ಷದ ಅಂಕಲ್ ಫೋನ್ ಮಾಡಿ, ಒಬ್ಬರು ಇಂಟರ್ನ್ಯಾಷನಲ್ ಲೆವೆಲ್ ಕೋರಿಯೋಗ್ರಾಫರ್ ಫೋನ್ ಮಾಡ್ತಾರೆ ಎಂದಾಗ ಎಲ್ಲರಿಗೂ ಏನು ಅನಿಸತ್ತಪ್ಪ, ಅವರು ಕೂಡ ಒಬ್ಬರು ಅಂಕಲ್ಲೇ ಇರ್ಬೋದು ಎಂದು.
57
ಫೋನ್ ಕಾಲ್
ಆಮೇಲೆ ಅಲ್ಲಿಂದ ಕಾಲ್ ಬಂತು, ಹರ್ಷಿಕಾ ಪೂಣಚ್ಚ ಅವ್ರು ಮಾತಾಡೋದಾ ಕೇಳಿದ್ರು. ನಾನು ಹೌದು ಅಂಕಲ್ ಹೇಳಿ ಅಂದೆ. ಆಗ ಅತ್ತ ಕಡೆಯ ವಾಯ್ಸ್ ಪಾಸ್ ಆಗೋಯ್ತು. ಆದರೆ ನನಗೆ ಅರ್ಥ ಆಗ್ಲಿಲ್ಲ. ನಾನೇ ಕಂಟಿನ್ಯೂ ಮಾಡಿ, ನೀವು ಕಾಲ್ ಮಾಡ್ತೀರಿ ಅಂತ ಜಯಾ ಅಂಕಲ್ ಹೇಳಿದ್ರು ನನಗೆ. ಅಂಕಲ್ ನೀವು ಹೇಳಿದ್ದಲ್ಲಿ ನಾನು ಬರ್ತೇನೆ ಎಂದೆ' ಎನ್ನುತ್ತಲೇ ಆ ದಿನ ನಡೆದ ಘಟನೆಯನ್ನು ನಟಿ ಮೆಲುಕು ಹಾಕಿದ್ದಾರೆ.
67
ಶಾಕ್ ಆಗಿದ್ದ ನಟಿ
ಅವರು ಆಗ ಓಕೆ ಓಕೆ, ರಿಹರ್ಸಲ್ಗೆ ಬನ್ನಿ. ಕೊಡವ ಸಮಾಜದಲ್ಲಿ. ನಾನು ವೇಟ್ ಮಾಡ್ತೇನೆ ಎಂದು ಹೇಳಿ ಫೋನ್ ಇಟ್ಟರು. ನಾನು ಅಲ್ಲಿ ಹೋದಾಗ, ಆ ಕಡೆಯಿಂದ ಮಾಡೆಲ್ ರೀತಿಯಲ್ಲಿ ಒಬ್ಬ ಸುಂದರ ಬರ್ತಾ ಇದ್ರು. ನಾನೇನೋ ಇವ್ರು ಮಾಡೆಲ್ ಇರ್ಬೇಕು ಅಂದುಕೊಂಡು ಸುಮ್ಮನಾದೆ. ಆಮೇಲೆ ಅವ್ರೇ ಬಂದು ಹಲೋ ನಾನು ಭುವನ್ ಪೊನ್ನಣ್ಣ ಎಂದು ಹೇಳಿದಾಗ ಶಾಕ್ ಆಗೋಯ್ತು. ಏಕೆಂದ್ರೆ ನನ್ನ ಅಂಕಲ್ ಅವರ ಹೆಸರು ಹೇಳಿದ್ರು. ಇವ್ರನ್ನೇ ನಾನು ಅಂಕಲ್ ಎಂದು ಕರೆದುಬಿಟ್ನಾ ಎಂದು ಕಂಗಾಲಾಗಿ ಹೋಗಿ ಏನು ಹೇಳಬೇಕು ಎಂದೇ ತಿಳಿಯಲಿಲ್ಲ ಎಂದು ಮೊದಲ ಬಾರಿ ಭುವನ್ ಅವರನ್ನು ಮೀಟ್ ಆಗಿರೋ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
77
ಸೇಡು ತೀರಿಸಿಕೊಂಡಿದ್ದ "ಅಂಕಲ್"
ನಾನು ಅಂಕಲ್ ಎಂದು ಕರೆದ ರಿವೇಂಜ್ ತೀರಿಸಿಕೊಳ್ಳಲು 22 ಸಲ ನನ್ನನ್ನು ನಡೆಸಿದರು. ಅದೇ ಮೊದಲು ನಾನು ನನ್ನ ಗಂಡನನ್ನು ಮೀಟ್ ಆಗಿದ್ದು ಎಂದಿದ್ದಾರೆ ಹರ್ಷಿಕಾ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.